भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Valency

ಸಂಯೋಗಸಾಮರ್ಥ್ಯ.
ಒಂದು ಮೂಲವಸ್ತುವಿನ ಪರಮಾಣು ಮತ್ತೊಂದು ಮೂಲವಸ್ತುವಿನ ಪರಮಾಣುವಿನೊಂದಿಗೆ ಸಂಯೋಗವಾಗಲು ಹೊಂದಿರುವ ಸಾಮರ್ಥ್ಯ.

Vesicular Rock

ವೆಸಿಕುಲಾರ್ ಶಿಲೆ; ನಾಳಯುಕ್ತ ಶಿಲೆ.
ಶಿಲೆಯ ಮಡ್ಡಿ ಇನ್ನೂ ಕುದಿಯುವ ಸ್ಥಿತಿಯಲ್ಲಿದ್ದಾಗ ಅನಿಲ ಹಿಗ್ಗುವುದರಿಂದ ಹಲವು ಅಗ್ನಿಶಿಲೆಗಳಲ್ಲಿ ಕೋಶಾಕಾರದ ಸ್ಥಳವುಂಟಾಗುತ್ತದೆ. ಈ ಸ್ಥಿತಿಯನ್ನು ತೋರುವ ಶಿಲೆಗೆ ವೆಸಿಕುಲಾರ್ ಶಿಲೆ ಎಂದು ಹೆಸರು.

Vieth’s Ratio

ವಿಥ್ ನ ಅನುಪಾತ.
ವಿಥ್ ರವರು ಹಾಲಿನಲ್ಲಿ 13 : 9 : 2 ಪ್ರಮಾಣದಲ್ಲಿ ಲ್ಯಾಕ್ಟೋಸ್, ಪ್ರೋಟೀನ್ ಮತ್ತು ಬೂದಿಯಿರುತ್ತದೆ ಎಂದು ಕಂಡುಹಿಡಿದರು.

Vitamin

ಅನ್ನಾಂಗ; ವಿಟಮಿನ್.
ಆಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡುಬರುವ ಒಂದು ಉಪಯುಕ್ತ ಸಾವಯವ ವಸ್ತು.

Vitamer

ವಿಟಮರ್
ರಾಸಾಯನಿಕವಾಗಿ ರಚನೆಯಲ್ಲಿ ವ್ಯತ್ಯಾಸವಿದ್ದರೂ ಅನ್ನಾಂಗಗಳ ಗುಣಲಕ್ಷಣಗಳನ್ನು ಹೊಂದಿದ್ದು ಪ್ರಕೃತಿಯಲ್ಲಿ ದೊರೆಯುವ ಅಥವಾ ಸಂಯೋಜಿತ ವಸ್ತು.

Voids Ratio

ಶೂನ್ಯ ಅನುಪಾತ.
ಒಂದು ಮೊತ್ತದ ಮಣ್ಣಿನಲ್ಲಿಯ ಶೂನ್ಯದ ಸಂಪೂರ್ಣ ಗಾತ್ರವು ಘನಗಳ ಸಂಪೂರ್ಣ ಗಾತ್ರಕ್ಕೆ ಅನುಪಾತವಾಗಿರುತ್ತದೆ.
C = [S (1+W) Sm] ➗ Sm
ಇದರಲ್ಲಿ :
C = ಶೂನ್ಯ ಅನುಪಾತ.
S = ಮಣ್ಣಿನ ಸಂಪೂರ್ಣ ಸಾಪೇಕ್ಷ ಗುರುತ್ವ.
Sm = ಸ್ಪಷ್ಟ ಸಾಪೇಕ್ಷ ಗುರುತ್ವ.
W = ಒಣ ತೂಕದ ಭಾಗವಾಗಿ ಸೂಚಿಸಿದ ಶೇಕಡ

Volcano

ಅಗ್ನಿ ಪರ್ವತ; ಜ್ವಾಲಾಮುಖಿ.
ಕರಗಿದ ಅಗ್ನಿಶಿಲೆ ಮತ್ತು ಹೊಗೆಯನ್ನು ಹೊರದೂಡುವ ಭೂಮಿಯ ಮೇಲ್ಭಾಗ.

Search Dictionaries

Loading Results

Follow Us :   
  Download Bharatavani App
  Bharatavani Windows App