भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Terrace

ಜಗತಿಭೂಮಿ ; ಅಟ್ಟಳಿಗೆಭೂಮಿ; ತಟ್ಟೆ ಭೂಮಿ.
ಇಳಿಜಾರು ಭೂಮಿಗೆ ಅಡ್ಡಲಾಗಿ ನಿರ್ಮಿಸಲ್ಪಟ್ಟ ಬದು ಅಥವಾ ಕಟ್ಟೆ. ಇದು ಭೂಮಿಯ ಮೇಲೆ ಹರಿಯುವ ನೀರಿನ ವೇಗಕ್ಕೆ ತಡೆಯಾಗಿ, ಮೇಲ್ಮಣ್ಣು ಕೊಚ್ಚುವುದು ತಪ್ಪುತ್ತದೆ. ಇದರಿಂದಾಗಿ, ತೇವ ಮತ್ತು ಮಣ್ಣಿನ ರಕ್ಷಣೆ ಸಾಧ್ಯವಾಗುತ್ತದೆ.

Texture

ಸ್ವರೂಪ.
ವಿವಿಧ ಗಾತ್ರದ ಮಣ್ಣಿನ ಕಣಗಳ ಪ್ರಮಾಣವನ್ನು ಸೂಚಿಸುವ ಶಬ್ಧ.

Thermodynamic Law

ಉಷ್ಣಗತಿ ನಿಯಮ.
ಬೇರೆ ಬೇರೆ ಶಕ್ತಿಯನ್ನು ಉಷ್ಣವಾಗಿ ಪರಿವರ್ತಿಸಿದಾಗ ಅಥವಾ ಉಷ್ಣವನ್ನು ಬೇರೆ ರೀತಿಯ ಶಕ್ತಿಯನ್ನಾಗಿ ಪರಿವರ್ತಿಸಿದಾಗ, ಉಷ್ಣ ಮತ್ತು ಶಕ್ತಿಯ ಪರಿಮಾಣ ಒಂದು ಗೊತ್ತಾದ ಪ್ರಮಾಣದಲ್ಲಿರುತ್ತದೆ.

Thermophyllic Bacteria

ಉಷ್ಣಪ್ರಿಯ ಬ್ಯಾಕ್ಟೀರಿಯಾ.
ಹೆಚ್ಚು ಉಷ್ಣವಿರುವಲ್ಲಿ ಅಂದರೆ 50°c ಗಿಂತ ಹೆಚ್ಚು ಶಾಖದಲ್ಲಿ ಅಧಿಕವಾಗಿ ವೃದ್ಧಿಯಾಗುವ ಬ್ಯಾಕ್ಟೀರಿಯಾ.

Tilth

ಮಣ್ಣಿನ ಹದ; ಉತ್ತು.
ಮಣ್ಣಿನ ಈ ಭೌತಿಕ ಸ್ಥಿತಿ, ಸಾಮಾನ್ಯವಾಗಿ, ಸಸ್ಯಗಳ ಬೆಳವಣಿಗೆಗೆ ಸಹಾಯಕವಾಗುತ್ತದೆ.

Tile Drain

ಹೆಂಚು ಬಸಿಗಾಲುವೆ.
ಜೌಗು ಭೂಮಿಗಳಿಂದ ನೀರು ತೆಗೆಯಲು ಇಳಿಜಾರಿಗೆ ಅಭಿಮುಖವಾಗಿ ಸೂಕ್ತ ಆಳದಲ್ಲಿ ಮಣ್ಣಿನಲ್ಲಿ ಇಡುವ ಹೆಂಚಿನ ಕಾಲುವೆ.

Titration

ಗಾತ್ರ ಮಾಪನ.
ಒಂದು ದ್ರಾವಣದ ತೀಕ್ಷ್ಣತೆಯನ್ನಾಗಲೀ, ದ್ರಾವಣದಲ್ಲಿನ ವಸ್ತುವಿನ ಪ್ರಮಾಣವನ್ನಾಗಲಿ, ಮತ್ತೊಂದು ಗೊತ್ತಾದ ನಿಖರ ಗಾತ್ರ ಪ್ರಮಾಣದ ದ್ರಾವಣದೊಡನೆ ಸಂಪೂರ್ಣ ಪ್ರತಿಕ್ರಿಯೆಗೊಳಿಸಿ, ಕಂಡುಹಿಡಿಯುವ ವಿಧಾನ.

Total Cat – ion Exchange Capacity

ಒಟ್ಟು ಧನ ಅಯಾನ್ ವಿನಿಮಯ ಸಾಮರ್ಥ್ಯ.
ಏಕ ಸಂಯೋಗ ಸಾಮರ್ಥ್ಯವುಳ್ಳ ತಟಸ್ಥ ದ್ರಾವಣದಿಂದ ಒಂದು ಮಣ್ಣು ಹೀರಿಕೊಳ್ಳಬಹುದಾದಂತಹ ಧನ ಅಯಾನ್ ಗಳ ಮೊತ್ತ.

Transported Soil

ಸಾಗುಮಣ್ಣು.
ನೀರು, ಗಾಳಿ ಮುಂತಾದವುಗಳಿಂದ ಕೊಚ್ಚಿ ಬಂದು ಶೇಖರವಾದ ವಸ್ತುಗಳಿಂದುಂಟಾದ ಮಣ್ಣು.

True Density

ನೈಜ ಸಾಂದ್ರತೆ.
ರಂಧ್ರದ ಆವರಣವನ್ನು ಬಿಟ್ಟು ಮಣ್ಣಿನ ಘನವಸ್ತುಗಳಿಂದ ಕೂಡಿರುವ ಏಕಮಾನ ಗಾತ್ರದ ತೂಕ.

True Solution

ನೈಜ ದ್ರಾವಣ.
ಹೆಚ್ಚು ಅಭಿಸರಣ ಒತ್ತಡ ಮತ್ತು ಪಾರದರ್ಶಕ, ಹಾಗೂ ಕವಚಗಳ ಮೂಲಕ ಹಾದು ಹೋಗುವ ಒಂದು ಗಾತ್ರದ ಕಣಗಳಿಂದ ತುಂಬಿರುವ ದ್ರಾವಣ.

Tundra Soils

ಟುಂಡ್ರಾ ಮಣ್ಣುಗಳು.
ಇವು ಜೋನಲ್ ಗುಂಪಿಗೆ ಸೇರಿದ ಮಣ್ಣುಗಳು. ಮೇಲ್ಮಣ್ಣು ಅಧಿಕ ಸಾವಯವಾಂಶದಿಂದ ಕೂಡಿದ್ದು ಕಪ್ಪು ಅಥವಾ ಕಂದುಬಣ್ಣದ್ದಾಗಿರುತ್ತದೆ. ಇವು ಧ್ರುವ ಪ್ರದೇಶದ ಶೀತಕಟಿಬಂಧದ ಮಣ್ಣುಗಳು.

Tyndall’s Effect

ಟಿಂಡಾಲ್ ನ ಪರಿಣಾಮ.
ಒಂದು ಕಿರಣ ಪುಂಜ, ಅಸ್ಫಟಿಕ ಕಣಗಳ ವ್ಯವಸ್ಥೆಯನ್ನು ಹಾದು ಹೋದಾಗ, ಕಿರಣ ಪುಂಜದ ಒಂದು ಭಾಗ ನೇರವಾಗಿ ಸಂಚರಿಸಿ ಮತ್ತೊಂದು ಭಾಗ ನಮನವಾಗುತ್ತದೆ. ಇದಕ್ಕೆ ಟಿಂಡಾಲ್ ಪರಿಣಾಮ ಎಂದು ಹೆಸರು.

Typical Profile

ಲಾಕ್ಷಣಿಕ ಪ್ರೊಫೈಲ್.
ಒಂದು ಮಣ್ಣಿನ ಲಕ್ಷಣಗಳನ್ನು ಎತ್ತಿತೋರಿಸುವ, ಉಪಯೋಗಿಸಬಹುದಾದಂತಹ ಪ್ರೊಫೈಲ್. ಇದು ಒಂದು ಮಣ್ಣಿನ ಶ್ರೇಣಿಯಲ್ಲಿರುವ ವಿಶಿಷ್ಟ ಗುಣಗಳನ್ನೆಲ್ಲಾ ಪ್ರತಿಬಿಂಬಿಸುತ್ತದೆ.

Search Dictionaries

Loading Results

Follow Us :   
  Download Bharatavani App
  Bharatavani Windows App