भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Oceanic Climate

ಸಾಗರ ವಾಯುಗುಣ.
ಉಷ್ಣತೆ ಅತಿ ಹೆಚ್ಚು ಅಥವಾ ಅತಿ ಕಡಿಮೆ ಆಗದ ಸಮುದ್ರ ತೀರದ ವಾಯುಗುಣ.

Ohm

ಓಮ್.
ವಿದ್ಯುತ್ ನಿರೋಧಕ ಶಕ್ತಿಯನ್ನು ಅಳೆಯುವ ಏಕಮಾನ.

Ohm’s Law

ಓಮ್ ನ ನಿಯಮ.
ಪ್ರವಾಹ ಮಾರ್ಗದಲ್ಲಿ ಚಲಿಸುತ್ತಿರುವ ವಿದ್ಯುತ್ ಶಕ್ತಿಯು ಪ್ರಯೋಗಿಸಿದ ವಿದ್ಯುದ್ವಾಹಕ ಬಲಕ್ಕೆ ಸರಳ ಪ್ರಮಾಣದಲ್ಲಿರುತ್ತದೆ.
E = IR
E = ಮೇಲ್ಮೈ.
I = ಆಂಪಿಯರನಲ್ಲಿ ಕರೆಂಟ್.
R = ನಿರೋಧ (ಓಮ್ ನಲ್ಲಿ).

One Atmosphere

ಒಂದು ವಾಯುಭಾರ.
ಶೂನ್ಯ ಡಿಗ್ರಿ ಸೆಂ. ಉಷ್ಣತೆಯಲ್ಲಿ ಆದರ್ಶಪ್ರಾಯ ವಾಯುಮಂಡಲದ ಒತ್ತಡವು 76 ಸೆಂಟಿಮೀಟರ್ ಪಾದರಸ ಎಂದು ನಾವು ಹೇಳುವಾಗ, ವಾಯು ಮಂಡಲದ ಒತ್ತಡವು 76 ಸೆಂಟಿಮೀಟರ್ ಅಥವಾ 760 ಮಿಲಿಮೀಟರ್ ಎತ್ತರದ ಪಾದರಸದ ಕಾಂಡವು ಹಾಕುವ ಒತ್ತಡದಷ್ಟೇ ಇರುತ್ತದೆ. ಈ ಒತ್ತಡವನ್ನು ಏಕಮಾನವಾಗಿ ಪರಿಗಣಿಸಲಾಗಿದೆ.

Open Formula Guarantee

ಸೂತ್ರದ ಬಹಿರಂಗ ನಿಖರತೆ.
ರಾಸಾಯನಿಕ ಗೊಬ್ಬರದ ವಿಶ್ಲೇಷಣೆಯನ್ನು ಕೊಡುವುದೇ ಅಲ್ಲದೆ, ಅದರಲ್ಲಿರುವ ಇತರ ಘಟಕಗಳ ರಚನೆ, ಘಟಕದ ಮೊತ್ತ ಮುಂತಾದ ವಿವರಗಳ ನಿಖರತೆಯನ್ನು ನೀಡುವ ಸೂತ್ರ.

Order of Terms in Fertilizers

ರಾಸಾಯನಿಕ ಗೊಬ್ಬರ ಪೋಷಕಗಳ ಕ್ರಮ.
ರಾಸಾಯನಿಕ ಗೊಬ್ಬರಗಳಲ್ಲಿರುವ ಪೋಷಕಗಳನ್ನು ಹೆಸರಿಸುವ ಕ್ರಮ ಈ ರೀತಿ ಇದೆ :
(1) ಸಾರಜನಕ; (2) ರಂಜಕ ಮತ್ತು (3) ಪೊಟ್ಯಾಷ್.

Organic Phosphorus

ಸಾವಯವ ರಂಜಕ.
ಸಾವಯವ ರಂಜಕಗಳನ್ನುಳ್ಳ ರಂಜಕ ಸಂಯುಕ್ತ ಪದಾರ್ಥಗಳು. ಉದಾಹರಣೆ : ಪಾಸ್ಫಾರಿಕ್ ಆಮ್ಲ.

Organic Soils

ಸಾವಯವ ಮಣ್ಣುಗಳು.
ಮಣ್ಣಿನ ಗುಣಧರ್ಮಗಳನ್ನು ಚೆನ್ನಾಗಿ ವ್ಯಕ್ತಗೊಳಿಸಲು ಶಕ್ಯವಾಗುವಂತೆ ಈ ಮಣ್ಣಿನಲ್ಲಿ ಸಾಕಷ್ಟು ಸಾವಯವ ಪದಾರ್ಥಗಳಿರುತ್ತವೆ.

Organic Matter

ಸಾವಯವ ವಸ್ತು ; ಸೇಂದ್ರಿಯ ವಸ್ತು.
ಸಸ್ಯ ಮತ್ತು ಪ್ರಾಣಿ ಉಳಿಕೆ ವಸ್ತುಗಳು ಮಣ್ಣಿನಲ್ಲಿ ಸೂಕ್ಷ್ಮ ಜೀವಿಗಳ ಕ್ರಿಯೆಯಿಂದ ವಿಘಟನೆಯಾಗಿ, ಮೇಲೆ ಮಣ್ಣಿನ ಅಂಗವಾಗಿ ಉಳಿಯುವ ಅಸ್ಫಟಿಕ ರೂಪದ ಸಾವಯವ ವಸ್ತು.

Osmotic Pressure

ಅಭಿಸರಣ ಒತ್ತಡ.
ಒಂದು ಅಪೂರ್ಣ ವ್ಯಾಪ್ಯ ಪೊರೆಯಿಂದ ಒಂದು ದ್ರಾವಣವು ದ್ರಾವಕದಿಂದ ಬೇರ್ಪಡಿಸಲ್ಪಟ್ಟಾಗ, ದ್ರಾವಕ, ದ್ರಾವಣದೊಳಕ್ಕೆ ವ್ಯಾಪಿಸದಂತೆ ತಡೆದು, ವ್ಯವಸ್ಥೆಯಲ್ಲಿ ಸಮತೋಲನವನ್ನೇರ್ಪಡಿಸಲು ದ್ರಾವಣ ಮತ್ತು ದ್ರಾವಕಗಳು ತೋರುವ ಒತ್ತಡ.

Oven-dry Soil

ಓವೆನ್ ನಲ್ಲಿ ಒಣಗಿಸಿದ ಮಣ್ಣು.
105 ರಿಂದ 110°C ಉಷ್ಣತೆಯಲ್ಲಿ ಗೂಡು ಒಲೆಯಲ್ಲಿ ಒಣಗಿದ ಮಣ್ಣು.

Oxidation

ಉತ್ಕರ್ಷಣ.
ಆಮ್ಲಜನಕದೊಡನೆ ಸಂಯೋಗ ಹೊಂದುವ ಎಲ್ಲ ರಾಸಾಯನಿಕ ಕ್ರಿಯೆಗಳನ್ನು ಸಾಮಾನ್ಯವಾಗಿ ಉತ್ಕರ್ಷಣ ಕ್ರಿಯೆಗಳೆಂದು ಕರೆಯುತ್ತಾರೆ. ಉತ್ಕರ್ಷಣ ಕ್ರಿಯೆಯಲ್ಲಿ ಈ ಕೆಳಗಿನ ಯಾವುದಾದರೊಂದು ಬದಲಾವಣೆಯನ್ನು ಅವಲೋಕಿಸಬಹುದು :
(1) ಆಮ್ಲಜನಕ ಅಥವಾ ಬೇರೆ ಯಾವುದೇ ಋಣ ವಿದ್ಯುತ್ ಮೂಲ ವಸ್ತುವಿನ ಪರಮಾಣು ಇಲ್ಲವೇ ಮೂಲಗಳ ಸಂಯೋಗ ಅಥವಾ ಅವುಗಳ ಪ್ರಮಾಣದಲ್ಲಿ ಹೆಚ್ಚಳ.
(2) ಜಲಜನಕ ಅಥವಾ ಬೇರೆ ಯಾವುದೇ ಧನ ವಿದ್ಯುತ್ ಮೂಲ ವಸ್ತುವಿನ ಪರಮಾಣುಗಳ ಇಲ್ಲವೇ ಮೂಲಗಳ ವಿಸರ್ಜನೆ.

Oxidizing Agent

ಉತ್ಕರ್ಷಣಕಾರಿ.
ಒಂದು ಗ್ರಾಂ ಅಣುತೂಕದಷ್ಟು ಋಣಾಂಶಗಳನ್ನು ಹೊಂದಿರುವ ಉತ್ಕರ್ಷಣಕಾರಿ.

Oxidation – reduction Pair

ಉತ್ಕರ್ಷಣ ಅಪಕರ್ಷಣ ಜೋಡಿ.
ಒಂದಕ್ಕೊಂದು ಹೆಣೆದುಕೊಂಡಿರುವ ಉತ್ಕರ್ಷಣಕಾರಿ ಮತ್ತು ಅಪಕರ್ಷಣಕಾರಿಗಳು ಎಲ್ಲ ಋಣಾಂಶ ಕ್ರಿಯೆಗಳಲ್ಲಿಯೂ ಕಂಡುಬರುತ್ತವೆ.

Oxide

ಆಕ್ಸೈಡ್.
ಆಮ್ಲಜನಕದೊಡನೆ ವಿವಿಧ ಮೂಲವಸ್ತುಗಳಿಂದಾದ ದ್ವಿಸಂಯುಕ್ತಗಳಿಗೆ ಆಕ್ಸೈಡ್ ಗಳೆನ್ನುವರು.

Oxide of Lime

ಸುಣ್ಣದ ಆಕ್ಸೈಡ್.
ಕಾರ್ಬೊನೇಟ್ ಉರಿಯುವಾಗ, ಕಾರ್ಬೊನಿಕ್ ಆಮ್ಲ ಬಿಡುಗಡೆ ಹೊಂದಿ, ಉಂಟಾಗುವ ಸುಣ್ಣ. ಮಾರುಕಟ್ಟೆಯಲ್ಲಿ ಇದನ್ನು ಸುಟ್ಟ ಸುಣ್ಣ ಎಂದು ಕರೆಯುತ್ತಾರೆ.

Search Dictionaries

Loading Results

Follow Us :   
  Download Bharatavani App
  Bharatavani Windows App