भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Lacustrine Soil

ಸರೋವರಮಣ್ಣು; ಸರೋಮೃತ್ತಿಕಾ.
ಸರೋವರ ಮತ್ತು ಹೊಂಡದ ಮಣ್ಣಿನಿಂದ ಶೇಖರವಾಗಿರುವ ಮಣ್ಣು.

Lactometer

ಕ್ಷೀರಮಾಪಕ; ಕ್ಷೀರಗುರುತ್ವ ಮಾಪಕ.
ಹಾಲನ್ನು ಪರೀಕ್ಷಿಸುವ ವಿಶಿಷ್ಟ ಉದ್ದೇಶಕ್ಕಾಗಿಯೇ ಉಪಯೋಗಿಸುವ ಸಾಪೇಕ್ಷ ಸಾಂದ್ರತೆ ಮಾಪಕ.

Lambert’s Law

ಲ್ಯಾಂಬರ್ಟನ ನಿಯಮ.
ಒಂದು ವಸ್ತುವಿನಿಂದ ಹೀರಲ್ಪಟ್ಟ ಏಕವರ್ಣ ಬೆಳಕಿನ ಪರಿಮಾಣ ಬಿದ್ದ ಬೆಳಕಿನ ತೀವ್ರತೆಗೆ ಸರಳ ಪ್ರಮಾಣದಲ್ಲಿರುತ್ತದೆ.

Land Classification

ಭೂವರ್ಗೀಕರಣ.
ಭೂ ಹಿಡುವಳಿಗಳನ್ನು ಬೇರೆ ಬೇರೆ ಉಪಯೋಗಕ್ಕಾಗಿ ಅದರ ಸಾಮರ್ಥ್ಯಗಳನುಸಾರ ವಿಂಗಡಿಸುವ ವ್ಯವಸ್ಥೆ.

Land Capability

ಭೂಸಾಮರ್ಥ್ಯ.
ಇದು ಭೂಮಿಯ ಬಳಕೆಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಭೂಸಾಮರ್ಥ್ಯವನ್ನು ಆಧಾರವಾಗಿಟ್ಟುಕೊಂಡು, ಭೂಮಿಯನ್ನು ಒಂದು ನಿರ್ದಿಷ್ಟ ಉಪಯೋಗಕ್ಕೆ ಬೆಳಸಿಕೊಳ್ಳುವುದು ಕೃಷಿಯಲ್ಲಿ ಒಂದು ಮುಖ್ಯವಾದ ಪದ್ಧತಿ.

Land Reclamation

ಭೂಪುನರುತ್ಥಾನ.
ಭೂಮಿಯ ಗುಣ ಮತ್ತು ಸ್ವಭಾವವನ್ನು ಬದಲಿಸಿ ಅದನ್ನು ತೀವ್ರ ಬಳಕೆಗೆ ತರಲು ಅನುಸರಿಸುವ ಕ್ರಮ.

Latent Heat of Fusion

ದ್ರವ ಗುಪ್ತೋಷ್ಣ.
ಒಂದು ಘನ ವಸ್ತುವನ್ನು ತನ್ನ ಹೆಪ್ಪುಗಟ್ಟುವ ಬಿಂದುವಿನಲ್ಲಿ ದ್ರವವಾಗಿ ಪರಿವರ್ತಿಸಲು ಏಕಮಾನ ದ್ರವ್ಯ ಪರಿಮಾಣಕ್ಕೆ ಪ್ರಯೋಗಿಸಬೇಕಾಗದ ಉಷ್ಣತೆ.

Latent Heat of Vapourisation

ಬಾಷ್ಪಗುಪ್ತೋಷ್ಣ; ಆವಿಯಾಗುವ ಗುಪ್ತೋಷ್ಣ.
ಒಂದು ಘನ ವಸ್ತುವನ್ನು ತನ್ನ ಕುದಿಯುವ ಬಿಂದುವಿನಲ್ಲಿ ಆವಿಯನ್ನಾಗಿ ಮಾಡಲು ಏಕಮಾನ ದ್ರವ್ಯ ಪರಿಮಾಣಕ್ಕೆ ಪ್ರಯೋಗಿಸಬೇಕಾದ ಉಷ್ಣತೆ.

Lava

ಶಿಲಾರಸ.
ಭೂಮಿಯೊಳಗಿನ ತೆರವಿನಿಂದ ಮೇಲ್ಮೈಗೆ ಉಕ್ಕಿ ಬರುವ ಶಿಲೆಯ ಬಿಸಿ ದ್ರವ.

Law of Conservation of Matter

ವಸ್ತು ನಿತ್ಯತ್ವ ನಿಯಮ.
ರಾಸಾಯನಿಕ ಬದಲಾವಣೆ ನಡೆದಾಗ ವಸ್ತುವು ಸೃಷ್ಟಿಯೂ ಆಗುವುದಿಲ್ಲ, ಲಯವೂ ಆಗುವುದಿಲ್ಲ. ಸಂಯುಕ್ತ ವಸ್ತುವಿನ ತೂಕವು ಅದರ ಘಟಕಗಳಾದ ಮೂಲ ವಸ್ತುಗಳ ತೂಕಕ್ಕೆ ಸಮ.

Law of Conservation of Energy

ಶಕ್ತಿ ಸಂರಕ್ಷಣಾ ನಿಯಮ.
ಶಕ್ತಿಯನ್ನು ಉತ್ಪತ್ತಿ ಅಥವಾ ನಾಶಮಾಡುವುದು ಸಾಧ್ಯವಿಲ್ಲ. ಆದರೆ ಶಕ್ತಿಯನ್ನು ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಬದಲಾಯಿಸಬಹುದು.

Law of Definite Proportion

ನಿಯತ ಪ್ರಮಾಣ ನಿಯಮ.
ಪ್ರತಿಯೊಂದು ಸಂಯುಕ್ತ ವಸ್ತುವೂ ಕೆಲವು ನಿರ್ದಿಷ್ಟ ಮೂಲವಸ್ತುಗಳನ್ನು ಒಂದು ನಿಯತ ಪ್ರಮಾಣದಲ್ಲಿ ಯಾವಾಗಲೂ ಒಳಗೊಂಡಿರುತ್ತದೆ. ತತ್ಫಲವಾಗಿ ಒಂದು ನಿರ್ದಿಷ್ಟ ಸಂಯುಕ್ತ ವಸ್ತು ಒಂದು ನಿರ್ದಿಷ್ಟ ರಚನೆಯನ್ನು ಹೊಂದಿರುತ್ತದೆ.

Law of Diminishing Returns

ಲಾಭ (ಉತ್ಪತ್ತಿ) ಕುಗ್ಗುವ ನಿಯಮ; ಪ್ರತಿಫಲ ಕುಗ್ಗುವ ನಿಯಮ.
ಈ ನಿಯಮವನ್ನು ಕೃಷಿ ಕ್ಷೇತ್ರದಲ್ಲಿ ಕೆಳಗಿನಂತೆ ವ್ಯಾಖ್ಯಾನ ಮಾಡಬಹುದು. ಭೂಮಿಗೆ ಹಾಕುವ ರಾಸಾಯನಿಕ ಗೊಬ್ಬರದ ಪ್ರತಿಯೊಂದು ಹೆಚ್ಚಳಕ್ಕೂ ಬರಬಹುದಾದ ಲಾಭ ಕಡಿಮೆಯಾಗುತ್ತಾ ಹೋಗುತ್ತದೆ.

Law of Equivalents

ಸಮಬಲಗಳ ನಿಯಮ; ಸಮತಾನಿಯಮ.
ಮೂಲ ವಸ್ತುಗಳು ತಮ್ಮ ಸಮಬಲಗಳ ಪ್ರಮಾಣಾನುಸಾರವಾಗಿ ಒಂದರೊಡನೊಂದು ಬೆರೆಯುತ್ತವೆ.

Law of Mass Action

ದ್ರವ್ಯಕ್ರಿಯಾನಿಯಮ.
ರಾಸಾಯನಿಕ ಕ್ರಿಯೆಯ ವೇಗ, ಕ್ರಿಯೆಯಲ್ಲಿ ಭಾಗವಹಿಸುವ ಘಟಕಗಳ ಅಣು ಸಾಂದ್ರತೆಯನ್ನವಲಂಬಿಸಿರುತ್ತದೆ.

Law of Multiple Proportion

ಅಪವರ್ತ್ಯ ಪ್ರಮಾಣ ನಿಯಮ.
ಎರಡು ಮೂಲವಸ್ತುಗಳು ಬೇರೆ ಬೇರೆ ಪ್ರಮಾಣದಲ್ಲಿ ಸಂಯೋಜನೆಯಾಗಿ
ಬೇರೆ ಬೇರೆ ಸಂಯುಕ್ತಗಳಾದಾಗ, ಈ ಬೇರೆ ಬೇರೆ ಸಂಯುಕ್ತವಸ್ತುಗಳಲ್ಲಿ, ಒಂದು ಮೂಲವಸ್ತುವಿನ ತೂಕವನ್ನು ಒಂದೇ ಸಮನಾಗಿ ತೆಗೆದುಕೊಂಡರೆ, ಆಗ ಆ ಬೇರೆ ಬೇರೆ ಸಂಯುಕ್ತವಸ್ತುಗಳಲ್ಲಿರುವ ಇನ್ನೊಂದು ಮೂಲವಸ್ತುವಿನ ತೂಕಗಳ ಅನುಪಾತ ಸರಳಾನುಪಾತವಾಗಿರುತ್ತದೆ.

Law of Osmotic Pressure

ಅಭಿಸರಣ ಒತ್ತಡ ನಿಯಮ.
1. ಸ್ಥಿರ ಉಷ್ಣತೆಯಲ್ಲಿ ಅಭಿಸರಣ ಒತ್ತಡ, ದ್ರಾವಣದ ಪ್ರಬಲತೆಗೆ ಸರಳ ಪ್ರಮಾಣ, ಅಥವಾ ಘನ ಅಳತೆಗೆ ವಿರುದ್ಧ ಪ್ರಮಾಣದಲ್ಲಿರುತ್ತದೆ.
2. ಸ್ಥಿರ ಪ್ರಬಲತೆಯಲ್ಲಿ ಒಂದು ದ್ರಾವಣದ ಅಭಿಸರಣ ಒತ್ತಡವು ಅದರ ಉಷ್ಣತೆಗನುಗುಣವಾಗಿ ನೇರವಾಗಿ ಬದಲಾಗುತ್ತದೆ.
3. ಸಮಾನ ಅಣುಪ್ರಮಾಣದ ಬೇರೆ ಬೇರೆ ವಿಲೀನಕ ವಸ್ತುಗಳು ಸಮ ಪ್ರಮಾಣದ ದ್ರಾವಣಗಳಲ್ಲಿ ಸಮನಾದ ಅಭಿಸರಣ ಒತ್ತಡವನ್ನುಂಟುಮಾಡುತ್ತದೆ.

Law of Reciprocal Proportion

ಪರಸ್ಪರ ಪ್ರಮಾಣ ನಿಯಮ; ಸಮಾನ ತೂಕ ನಿಯಮ.
ಒಂದು ಗೊತ್ತಾದ ಮೂಲವಸ್ತುವಿನ, ಒಂದು ನಿರ್ದಿಷ್ಟ ತೂಕದೊಂದಿಗೆ, ಸಂಯೋಜಿಸುವ ಎರಡು ಅಥವಾ ಹೆಚ್ಚಿನ ಮೂಲವಸ್ತುಗಳ ತೂಕಗಳು (ಅಥವಾ ಅವುಗಳ ಅಪವರ್ತ್ಯಗಳು) ಅವುಗಳು ಪರಸ್ಪರ ಸಂಯೋಜಿಸುವ ತೂಕಗಳ ಅನುಪಾತವೂ ಆಗಿರುತ್ತದೆ.

Law of Reflection

ಪ್ರತಿಫಲನದ ನಿಯಮ.
ಬೆಳಕು ಪ್ರವೇಶಿಸುವ ಕೋನ ಮತ್ತು ಪ್ರತಿಫಲಿಸುವ ಕೋನ ಸಮಾನಾಗಿರುತ್ತವೆ.

Law of Inverse Squares

ವಿಲೋಮ ವರ್ಗ ನಿಯಮ.
ವಿಶ್ವದಲ್ಲಿ ಪ್ರತಿಯೊಂದು ವಸ್ತುವೂ ಉಳಿದ ಪ್ರತಿಯೊಂದು ವಸ್ತುವನ್ನೂ ಆಕರ್ಷಿಸುತ್ತದೆ. ಈ ಆಕರ್ಷಕ ಬಲವು ಎರಡು ವಸ್ತುಗಳ ಜಡತ್ವಗಳ ಗುಣಲಬ್ಧಕ್ಕೆ ಸರಳಾನುಪಾತವಾಗಿಯೂ ಮತ್ತು ಅವೆರಡರ ಮಧ್ಯ ಇರುವ ದೂರದ ವರ್ಗಕ್ಕೆ ವಿಲೋಮಾನುಪಾತವಾಗಿಯೂ ಇರುತ್ತದೆ.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App