भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Fallowing

ಬೀಳು ಬಿಡುವಿಕೆ.
ಬೆಳೆ ತೆಗೆಯಲು ಉಪಯೋಗಿಸುವ ಭೂಮಿಯನ್ನು ಕೆಲವು ಕಾಲ ಯಾವ ಬೆಳೆಯನ್ನೂ ತೆಗೆಯದೆ ಪಾಳು ಬಿಡುವುದು. ಈ ಪದ್ಧತಿಯಿಂದ ಭೂಮಿಯ ಫಲವತ್ತತೆಯನ್ನು ವೃದ್ಧಿಗೊಳಿಸಬಹುದು.

Feld spar

ಫೆಲ್ ಸ್ಪಾರ್; ಕ್ಷೇತ್ರಖನಿಜ.
ಇವುಗಳು ಸೋಡಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಬೇರಿಯುಗಳ ನಿರ್ಜಲ ಅಲ್ಯೂಮಿನಿಯಂ ಸಿಲಿಕೇಟುಗಳು.

Fermentation

ಹುಳಿಹಿಡಿಯುವುದು; ಕಳಿಯುವಿಕೆ.
ಬ್ಯಾಕ್ಟೀರಿಯಾ ಮತ್ತು ಪಾಚಿಗಳ ದೇಹವರ್ಧನ ಕ್ರಿಯೆಯಿಂದುಂಟಾಗುವ ವಿಶಿಷ್ಟ ಉತ್ಕರ್ಷಣ ವಿಧಾನ.

Fertilizer

ರಾಸಾಯನಿಕ ಗೊಬ್ಬರ.
ಸಸ್ಯಗಳ ಬೆಳವಣಿಗೆಗೆ ಅವಶ್ಯವಾದ ಯಾವುದಾದರೊಂದು ಪೋಷಕಾಂಶವನ್ನು ಒದಗಿಸುವ ಈ ಪದಾರ್ಥಗಳು, ಸಾಮಾನ್ಯವಾಗಿ ನಿರಿಂದ್ರಿಯ ಸ್ಥಿತಿಯಲ್ಲಿರುತ್ತವೆ.

Fertilizer, Complete

ಸಂಪೂರ್ಣ ರಾಸಾಯನಿಕ ಗೊಬ್ಬರ.
ಸಸ್ಯಗಳ ಬೆಳವಣಿಗೆಗೆ ಅವಶ್ಯಕವಾದಂತಹ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗಳನ್ನೊಳಗೊಂಡ ರಾಸಾಯನಿಕ ಗೊಬ್ಬರ.

Fertilizer, Incomplete

ಅಪೂರ್ಣ ರಾಸಾಯನಿಕ ಗೊಬ್ಬರ.
ಸಸ್ಯಗಳ ಬೆಳವಣಿಗೆಗೆ ಅವಶ್ಯಕವಾದಂತಹ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗಳಲ್ಲಿ, ಯಾವುದಾದರೊಂದು ಅಥವಾ ಎರಡು ಪೊಷಕಗಳನ್ನು ಒದಗಿಸುವ ರಾಸಾಯನಿಕ ಗೊಬ್ಬರ.

Fertilizer Grade

ರಾಸಾಯನಿಕ ಗೊಬ್ಬರದ ದರ್ಜೆ.
ರಾಸಾಯನಿಕ ಗೊಬ್ಬರದಲ್ಲಿರುವ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗಳ ಶೇಕಡಾ ಪ್ರಮಾಣವನ್ನು ಸೂಚಿಸುವ ವರ್ಗೀಕರಣ.

Fertilizer Placement

ರಾಸಾಯನಿಕ ಗೊಬ್ಬರ ಹಾಕುವಿಕೆ.
ಸಸ್ಯಗಳ ಬೇರಿನ ಆವರಣಕ್ಕೆ ರಾಸಾಯನಿಕ ಗೊಬ್ಬರಗಳನ್ನು ಹಾಕುವ ವಿಧಾನ.

Field Capacity

ಜಮೀನಿನ ಜಲಧಾರಣ ಸಾಮರ್ಥ್ಯ.
ಮಳೆಯಿಂದ ಇಲ್ಲವೆ ನೀರಾವರಿಯಿಂದ ಭೂಮಿ ಸಂಪೂರ್ಣ ನೆನೆದ ಮೇಲೆ, ನೀರಿನ ಕೆಳಮುಖ ಚಲನೆ ನಿಂತ ನಂತರ ಮಣ್ಣಿನಲ್ಲಿ ಉಳಿಯುವ ತೇವಾಂಶ. ಈ ತೇವಾಂಶವನ್ನು ಮಣ್ಣಿನ ಶೇಕಡಾ ರೂಪವಾಗಿ ನಮೂದಿಸುತ್ತಾರೆ.

Filler

ಭರ್ತಿ ಪದಾರ್ಥ.
ರಾಸಾಯನಿಕ ಗೊಬ್ಬರದ ಮಿಶ್ರಣವನ್ನು ಒಂದು ಗೊತ್ತಾದ ತೂಕಕ್ಕೆ ತರಲು ಬೆರೆಸುವ ಗೊಬ್ಬರದಲ್ಲಿನ, ಜಡ ಅಥವಾ ನಿಷ್ಕ್ರಿಯ ವಸ್ತು.

Fish Guano

ಮೀನು ಗೊಬ್ಬರ.
ಮೀನು ಅಥವಾ ಮೀನಿನ ಕಚ್ಚಾವಸ್ತುಗಳನ್ನು ಒಣಗಿಸಿ ಪುಡಿ ಮಾಡುವುದರಿಂದ ಅಥವಾ ಸಂಸ್ಕರಿಸುವುದರಿಂದ ದೊರೆಯುವ ಮೀನು ಗೊಬ್ಬರ.

Flocculation

ತುಂತುಕರಣ; ಒಟ್ಟಾಗುವಿಕೆ.
ತೇಲಾಡುವ ಸ್ಥಿತಿಯಲ್ಲಿರುವ ಅಸ್ಫಟಿಕ ಕಣಗಳು ಒಟ್ಟುಗೂಡಿ ತುಂತುಗಳಾಗುವಿಕೆ.

Force

ಬಲ.
ನಿಶ್ಚಿತವಾಗಿರುವ ಅಥವಾ ಸಮವೇಗದಿಂದ ಚಲಿಸುತ್ತಿರುವ ವಸ್ತುವಿನ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವ ಬಾಹ್ಯ ಪ್ರೇರಣೆಗೆ, ಬಲವೆಂದು ಹೆಸರು.

Formulae

ಸೂತ್ರಗಳು.
ಸಂಯುಕ್ತ ವಸ್ತುಗಳನ್ನು ಸಂಕ್ಷಿಪ್ತ ರೀತಿಯಲ್ಲಿ ಸೂಚಿಸುವ ರೀತಿಗೆ, ಸೂತ್ರಗಳೆಂದು ಹೆಸರು.

Foliated Rock

ಹಾಳೆ (ಪದರ) ಶಿಲೆ.
ಅವರೆ ಕಾಳಿನಾಕಾರದ ಖನಿಜದ ಹರಳುಗಳಿಂದ ಕೂಡಿದ ಪದರ ಶಿಲೆ.

Forms of Soil Consistancy

ಮಣ್ಣು ಸ್ಥಿರತೆಯ ಆಕಾರಗಳು.
ಅಂಟು, ಮೇಣ, ಮೃದು, ಮತ್ತು ಗಟ್ಟಿ ಎಂಬ ಮಣ್ಣು ಸ್ಥಾಯಿತ್ವದ ನಾಲ್ಕು ಆಕಾರಗಳನ್ನು ಗುರುತಿಸಬಹುದು.

Fossils

ಪಳೆಯುಳಿಕೆ.
ಶಿಲೆಯಲ್ಲಿ ದೊರಕುವ ಜೀವಾವಶೇಷಗಳು. ಇವು, ಸಾಮಾನ್ಯವಾಗಿ ಜಲಶಿಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

Formula for Fertilizer Mixing

ರಾಸಾಯನಿಕ ಗೊಬ್ಬರ ಬೆರೆಸುವ ಸೂತ್ರ.
ನಿರ್ದಿಷ್ಟ ಸಸ್ಯ ಪೋಷಕಗಳನ್ನುಳ್ಳ ರಾಸಾಯನಿಕ ಗೊಬ್ಬರದ ಮಿಶ್ರಣವನ್ನು ತಯಾರಿಸಲು ಉಪಯೋಗಿಸಬೇಕಾದ ವಸ್ತುಗಳ ಪ್ರಮಾಣವನ್ನು ನಿರ್ಧರಿಸಲು ಸಹಾಯಕವಾಗುವ ಸೂತ್ರ. ಇದರಲ್ಲಿ : X = (A x B) ➗ C
X = ಉಪಯೋಗಿಸಬೇಕಾದ ಬೆರಕೆ ವಸ್ತು (ಪೌಂಡುಗಳಲ್ಲಿ).
A = ಬೇಕಾದ ರಾಸಾಯನಿಕ ಗೊಬ್ಬರದ ಮಿಶ್ರಣ (ಪೌಂಡುಗಳು).
B = ಮಿಶ್ರಣದಲ್ಲಿರಬೇಕಾದ ಪ್ರಧಾನ ಪೋಷಕಗಳ (N. P. K) ಶೇಕಡ ಪ್ರ ಮಾಣ.
C = ಬೆರಕೆ ವಸ್ತುವಿನಲ್ಲಿರುವ ಪ್ರಧಾನ ಪೋಷಕಗಳ ಶೇಕಡ ಪ್ರಮಾಣ.

Freezing Point

ಹೆಪ್ಪುಗಟ್ಟುವ ಬಿಂದು.
ಘನ ಮತ್ತು ದ್ರವಗಳೆರಡೂ ಒಟ್ಟಿಗೆ ಇರುವ ವಸ್ತುವಿನ ಉಷ್ಣತೆ.

Friability of soil

ಮಣ್ಣು ಹುಡಿಯಾಗುವಿಕೆ.
ಮಣ್ಣಿನ ಹೆಂಟೆಗಳು ಕದಡಿ ಹುಡಿಯಾಗುವ ಗುಣ. ಮಣ್ಣು ಹುಡಿಯಾಗುವ ತೇವಾಂಶ ಉಳುಮೆಗೆ ಒಳ್ಳೆಯ ಹದ.

Search Dictionaries

Loading Results

Follow Us :   
  Download Bharatavani App
  Bharatavani Windows App