भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Energy

ಶಕ್ತಿ.
ಕೆಲಸಮಾಡಲು ಒಂದು ವಸ್ತು ಹೊಂದಿರುವ ಯೋಗ್ಯತೆಯನ್ನು, ಶಕ್ತಿ ಎಂದು ಕರೆಯುತ್ತಾರೆ.

Ectodynamo Morphic Soils

ವಾಯುಗುಣ ಪ್ರತಿಬಿಂಬ ಮಣ್ಣುಗಳು.
ಮಣ್ಣು ನಿರ್ಮಾಣಕಾರಕಾಂಶಗಳ ಪ್ರಭಾವವನ್ನು ಮೂಲತಃ ಪ್ರತಿಬಿಂಬಿಸುವ ಮಣ್ಣು.

Endodynamo Morphic Soils

ಖನಿಜಗುಣ ಮಣ್ಣುಗಳು.
ಮೂಲಶಿಲೆಗಳ ಪ್ರಭಾವವನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರತಿಬಿಂಬಿಸುವ ಮಣ್ಣು.

Endothermic Reaction

ಶಾಖಗ್ರಾಹಿ ಪ್ರತಿಕ್ರಿಯೆ.
ಶಾಖವನ್ನು ಹೀರಿಕೊಳ್ಳುವ ರಾಸಾಯನಿಕ ಪ್ರತಿಕ್ರಿಯೆ.

Enzyme

ಕಿಣ್ವ.
ಜೈವಿಕ ರಾಸಾಯನಿಕ ಕ್ರಿಯೆಗಳ ವೇಗವನ್ನು ವರ್ಧಿಸುವ ಸಾಮರ್ಥ್ಯವುಳ್ಳ, ಸಾವಯವ ವಸ್ತು.

Erosion

ಕೊಚ್ಚಣೆ; ಸವಕಳಿ.
ಹರಿಯುವ ನೀರಿನ ಅಥವಾ ಬಿರುಸಾದ ಗಾಳಿಯ ಪ್ರಭಾವದಿಂದಾಗಿ, ಭೂಮಿಯ ಮೇಲ್ಮಣ್ಣು ತೊಳೆದು ಹೋಗುವಿಕೆ.

Essential Elements

ಅವಶ್ಯಕ ಮೂಲವಸ್ತುಗಳು.
ಸಸ್ಯಗಳ ಸಹಜವಾದ ಬೆಳವಣಿಗೆಗೆ ಮತ್ತು ವಂಶಾಭಿವೃದ್ಧಿಗೆ ಅವಶ್ಯಕವೆಂದು ಪರಿಗಣಿಸಲಾಗಿರುವ ಮೂಲವಸ್ತುಗಳು.

Evaporation

ಆವಿಯಾಗುವಿಕೆ.
ದ್ರವವು ಆವಿಯ ರೂಪಕ್ಕೆ ಬದಲಾಯಿಸುವಿಕೆ.

Exchangable Potassium

ವಿನಿಮಯ ಪೊಟ್ಯಾಸಿಯಂ.
ಮಣ್ಣಿನ ವಿನಿಯಮ ಸಂಕೀರ್ಣದಲ್ಲಿ, ಅದಲುಬದಲು ಕ್ರಿಯೆಗೊಳಗಾಗಬಲ್ಲ ಪೊಟ್ಯಾಸಿಯಂ ಅಂಶ.

Exchangable Sodium Percentage

ಶೇಕಡ ವಿನಿಮಯ ಸೋಡಿಯಂ.
ಮಣ್ಣಿನಲ್ಲಿ ಜರಗುವ ವಿನಿಮಯ ಸಂಕೀರ್ಣದ ಫಲವಾಗಿ ಕಂಡುಬರುವ, ಶೇಕಡ ವಿನಿಮಯ ಸೋಡಿಯಂ.

Exothermic Reacton

ಶಾಖೋತ್ಪತ್ತಿ ಪ್ರತಿಕ್ರಿಯೆ.
ಶಾಖವನ್ನು ಹೊರಗೆಡುಹುವ ರಾಸಾಯನಿಕ ಪ್ರತಿಕ್ರಿಯೆ.

Search Dictionaries

Loading Results

Follow Us :   
  Download Bharatavani App
  Bharatavani Windows App