भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Compressibility

ಕುಗ್ಗುವಿಕೆ.
ಒಂದು ವಸ್ತುವಿನ ಮೇಲೆ ಪ್ರಯೋಗಿಸಿದ ಒತ್ತಡದ ಪ್ರಭಾವದಿಂದಾಗಿ, ಆ ವಸ್ತುವಿನ ಗಾತ್ರ ಕಡಿಮೆಯಾಗುವ ಗುಣ.

Complete Fertilizer

ಸಂಪೂರ್ಣ ರಾಸಾಯನಿಕ ಗೊಬ್ಬರ; ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಂಶಗಳನ್ನೊಳಗೊಂಡ ರಾಸಾಯನಿಕ ಸಂಯುಕ್ತವಸ್ತು.

Concretionary Rock

ಶಂಖಶಿಲೆ ; ಮೂರ್ತ ಬಂಡೆ.
ಅವ್ಯವಸ್ಥಿತ ದುಂಡು ವಸ್ತುವಿನಂತೆ ಕಾಣುವ, ಶಿಥಿಲವಾದಂತೆ ಈರುಳ್ಳಿಯ ಹಾಗೆ ಹೊರ ಪದರಗಳನ್ನು ಬಿಟ್ಟು ಕೊಡುವ ಶಿಲೆ.

Concretions

ಖನಿಜ ಹರಳುಗಳ ; ಶೇಖರಿತ ಗೋಲ್ ಖನಿಜಗಳು.
ಖನಿಜ ಒತ್ತರವಾಗುವಿಕೆಯಿಂದ ಉಂಟಾಗುವ, ಲೋಹದ ಗುಂಪಾದ ಗುಡ್ಡೆಗಳು.

Condensed Milk

ಮಂದೈಸಿದ ಹಾಲು; ಘನೀಕೃತ ಹಾಲು.
ಹಾಲನ್ನು ಕುದಿಸಿ, ನೀರಿನ ಅಂಶವನ್ನು ತೀವ್ರವಾಗಿ ಕುಗ್ಗಿಸಿದ ಹಾಲು.

Conditioner

ಸ್ಥಿತಿಕಾರಕ.
ನೀರನ್ನು ಹೀರಿಕೊಂಡು ರಾಸಾಯನಿಕ ಗೊಬ್ಬರದ ಮಿಶ್ರಣಗಳು ಹೆಪ್ಪುಗಟ್ಟುವುದನ್ನು ತಡೆಹಿಡಿಯಲು ಉಪಯೋಗಿಸುವ ವಸ್ತು.

Consitancy

ಸ್ಥಾಯಿತ್ವ ; ಸ್ಥಿರತೆ.
ಆಕಾರ ಬದಲಾವಣೆಯಾಗುವುದಕ್ಕೆ ಒಂದು ವಸ್ತು ತೋರುವ ನಿರೋಧಕ ಶಕ್ತಿ.

Continental Climate

ಭೂಖಂಡದ ವಾಯುಗುಣ.
ಸಮುದ್ರಕ್ಕೆ ಸಾಮೀಪ್ಯತೆ ಅಥವಾ ಇತರ ಪ್ರಭಾವಗಳಿಗೆ ಒಳಗಾಗದೆ, ಉಷ್ಣತೆ ಹೆಚ್ಚು ವ್ಯತ್ಯಾಸವಿರುವ ವಿಶಾಲವಾದ ಭೂಪ್ರದೇಶದಲ್ಲಿ ಕಂಡುಬರುವ ವಾಯುಗುಣ.

Controlled Grazing

ನಿಯಂತ್ರಿತ ಮೇಯಿಸುವಿಕೆ.
ಹುಲ್ಲುಗಾವಲಿನಲ್ಲಿ ವಿಂಗಡಿಸಿದ ಕಣಗಳನ್ನು ಒಂದು ಗೊತ್ತಾದ ತೀವ್ರತೆಯಲ್ಲಿ ಹುಲ್ಲುನೆಲ ಸಮನಾಗದಂತೆ ಜಾನುವಾರು ಮೇಯಿಸುವಿಕೆ.

Contour Cultivation

ಸಮಪಾತಳಿಸಾಗುವಳಿ.
ಇಳಿಜಾರಿಗೆ ಅಡ್ಡಲಾಗಿ ಉಳುಮೆ, ಪೈರುನಾಟಿ, ನೀರುಹಾಯಿಸುವಿಕೆ ಮುಂತಾದ ಸಾಗುವಳಿ ಕ್ರಮಗಳು.

Contour Bund

ಸಮಪಾತಳಿಒಡ್ಡು.

Co-ordination Number

ಸಂಘಟನಾಸಂಖ್ಯೆ.
ಒಂದು ಹರಳ ಆಕೃತಿಯಲ್ಲಿ, ಪ್ರತಿಯೊಂದು ಧನ ಅಯಾನ್ ಗಳನ್ನು ಸುತ್ತಿಕೊಂಡಿರುವ ಋಣ ಅಯಾನ್ ಗಳ ಸಂಖ್ಯೆಗೆ ಸಂಘಟನಾ ಸಂಖ್ಯೆ ಎಂದು ಹೆಸರು. ಇದು, ಧನ ಮತ್ತು ಋಣ ಅಯಾನ್ ಗಳ ತ್ರಿಜ್ಯದ ಅನುಪಾತವನ್ನು ಅವಲಂಬಿಸಿರುತ್ತದೆ.

Co-valency

ಸಹಸಂಯೋಗಸಾಮರ್ಥ್ಯ.
ರಾಸಾಯನಿಕ ಸಂಯೋಜನೆಯಲ್ಲಿ, ಒಂದಕ್ಕೊಂದು ಸೇರುವ ಎರಡು ಪರಮಾಣುಗಳು, ತಮ್ಮ ತಮ್ಮಲ್ಲಿಯೇ ಋಣಾಂಶಗಳನ್ನು ಹಂಚಿಕೊಳ್ಳುವಾಗ ಉಂಟಾಗುವ ಬಂಧನ ಸಾಮರ್ಥ್ಯ.

Cover Crop

ಹೊದಿಕೆಬೆಳೆ.
ಹೆಚ್ಚು ಮಳೆಗಾಲದಲ್ಲಿ ಅಥವಾ ತೀವ್ರ ಬೇಸಿಗೆಯಲ್ಲಿ ಮಣ್ಣು, ಮಳೆ ಅಥವಾ ಬಿಸಿಲಿನ ಹೊಡೆತಕ್ಕೆ ಸಿಕ್ಕಿ ದುಷ್ಪರಿಣಾಮ ಉಂಟಾಗದಂತೆ ಕಾಪಾಡಲು, ಬೆಳೆಸಿರುವ ಹೊದಿಕೆ ಬೆಳೆ.

Coral

ಹವಳ.
ಇದು, ಸಮುದ್ರ ಜೀವಿಗಳ ಅಸ್ಥಿಪಂಜರದ ಉಳಿಕೆ. ಇದರಲ್ಲಿ, ಕ್ಯಾಲ್ಸಿಯಂ ಕಾರ್ಬೊನೇಟ್ ಹೇರಳವಾಗಿ ದೊರೆಯುತ್ತದೆ.

Continuity State

ಅವ್ಯಾಹತ ಸ್ಥಿತಿ.
ನಿರ್ದಿಷ್ಟ ಒತ್ತಡ ಮತ್ತು ಉಷ್ಣತೆಗಳಲ್ಲಿ ಕೆಲವು ದ್ರವಗಳು ಒಂದಾಗುವಿಕೆ ಅಥವಾ ಅನಿಲಗಳು ದ್ರವಗಳಾಗುವಿಕೆಯ ಕಾಲವನ್ನು ಕಂಡು ಹಿಡಿಯಬಹುದು. ಈ ಘಟನೆಗೆ ಅವ್ಯಾಹತ ಸ್ಥಿತಿ ಎಂದು ಹೆಸರು.

Critical Moisture Point

ಸಂದಿಗ್ಧ ತೇವ ಬಿಂದು.
ಒಂದು ಸಸ್ಯ, ತನ್ನ ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿರುವ ಸಮಯದಲ್ಲಿ ಅಥವಾ ಬಾಡುತ್ತಿರುವಾಗ, ಆ ಸಸ್ಯದ ಬೇರುಗಳ ಪ್ರಭಾವಯುತ ಆವರಣದಲ್ಲಿರುವ ಶೇಕಡ ನೀರಿನ ಪ್ರಮಾಣ.

Critical Point

ಸಂದಿಗ್ಧ ಬಿಂದು.
ದ್ರವ ಮತ್ತು ಅನಿಲಗಳ ಇರುವಿಕೆಯನ್ನು ಗುರುತಿಸಲು ಸಾಧ್ಯವಿಲ್ಲದಿರುವಂತಹ ಸ್ಥಿತಿಯ, ಒತ್ತಡ ಮತ್ತು ಉಷ್ಣತೆ.

Critical Pressure

ಸಂದಿಗ್ಧ ಒತ್ತಡ.
ಸಂತೃಪ್ತ ಬಾಷ್ಪಶೀಲವಸ್ತು ಸಂದಿಗ್ಧ ಉಷ್ಣತೆಯಲ್ಲಿ ದ್ರವವಾಗಲು ಬೇಕಾಗುವ ಒತ್ತಡ.

Critical Temperature

ಸಂದಿಗ್ಧ ಉಷ್ಣತೆ.
ಈ ಉಷ್ಣತೆಯನ್ನು ಮೀರಿ, ಯಾವುದೇ ಒಂದು ಅನಿಲವನ್ನು ಹೆಚ್ಚು ಒತ್ತಡಕ್ಕೊಳಪಡಿಸುವುದರಿಂದ ಆ ಅನಿಲ ದ್ರವವಾಗಿ ಪರಿವರ್ತನೆಗೊಳ್ಳಲಾರದು.

Search Dictionaries

Loading Results

Follow Us :   
  Download Bharatavani App
  Bharatavani Windows App