भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

True Density

ನೈಜ ಸಾಂದ್ರತೆ.
ರಂಧ್ರದ ಆವರಣವನ್ನು ಬಿಟ್ಟು ಮಣ್ಣಿನ ಘನವಸ್ತುಗಳಿಂದ ಕೂಡಿರುವ ಏಕಮಾನ ಗಾತ್ರದ ತೂಕ.

True Solution

ನೈಜ ದ್ರಾವಣ.
ಹೆಚ್ಚು ಅಭಿಸರಣ ಒತ್ತಡ ಮತ್ತು ಪಾರದರ್ಶಕ, ಹಾಗೂ ಕವಚಗಳ ಮೂಲಕ ಹಾದು ಹೋಗುವ ಒಂದು ಗಾತ್ರದ ಕಣಗಳಿಂದ ತುಂಬಿರುವ ದ್ರಾವಣ.

Tundra Soils

ಟುಂಡ್ರಾ ಮಣ್ಣುಗಳು.
ಇವು ಜೋನಲ್ ಗುಂಪಿಗೆ ಸೇರಿದ ಮಣ್ಣುಗಳು. ಮೇಲ್ಮಣ್ಣು ಅಧಿಕ ಸಾವಯವಾಂಶದಿಂದ ಕೂಡಿದ್ದು ಕಪ್ಪು ಅಥವಾ ಕಂದುಬಣ್ಣದ್ದಾಗಿರುತ್ತದೆ. ಇವು ಧ್ರುವ ಪ್ರದೇಶದ ಶೀತಕಟಿಬಂಧದ ಮಣ್ಣುಗಳು.

Tyndall’s Effect

ಟಿಂಡಾಲ್ ನ ಪರಿಣಾಮ.
ಒಂದು ಕಿರಣ ಪುಂಜ, ಅಸ್ಫಟಿಕ ಕಣಗಳ ವ್ಯವಸ್ಥೆಯನ್ನು ಹಾದು ಹೋದಾಗ, ಕಿರಣ ಪುಂಜದ ಒಂದು ಭಾಗ ನೇರವಾಗಿ ಸಂಚರಿಸಿ ಮತ್ತೊಂದು ಭಾಗ ನಮನವಾಗುತ್ತದೆ. ಇದಕ್ಕೆ ಟಿಂಡಾಲ್ ಪರಿಣಾಮ ಎಂದು ಹೆಸರು.

Typical Profile

ಲಾಕ್ಷಣಿಕ ಪ್ರೊಫೈಲ್.
ಒಂದು ಮಣ್ಣಿನ ಲಕ್ಷಣಗಳನ್ನು ಎತ್ತಿತೋರಿಸುವ, ಉಪಯೋಗಿಸಬಹುದಾದಂತಹ ಪ್ರೊಫೈಲ್. ಇದು ಒಂದು ಮಣ್ಣಿನ ಶ್ರೇಣಿಯಲ್ಲಿರುವ ವಿಶಿಷ್ಟ ಗುಣಗಳನ್ನೆಲ್ಲಾ ಪ್ರತಿಬಿಂಬಿಸುತ್ತದೆ.

Unsaturated Soil

ಅಸಂತೃಪ್ತ ಮಣ್ಣು.
ಮಣ್ಣಿನ ವಿನಿಮಯ ಸಂಕೀರ್ಣದಲ್ಲಿ ಜಲಜನಕ ಒಂದುಗೂಡಿದಾಗ ಮಣ್ಣು ಅಸಂತೃಪ್ತವಾಗಿದೆ ಎಂದು ಹೇಳುತ್ತಾರೆ. ಈ ಸ್ಥಿತಿಯಲ್ಲಿ ಮಣ್ಣಿನ ಪಿ. ಎಚ್. ಆಮ್ಲಗತಿಯನ್ನು ತಾಳುತ್ತದೆ.

Upper Plastic Limit

ನಮ್ಯತೆಯ ಮೇಲ್ಮಟ್ಟದ ಮಿತಿ ; ಮೇಲ್ಮಟ್ಟದ ಆಕೃತಿ ರೂಪಣೆಯ ಮಿತಿ.
ಪ್ರಯೋಗಿಸಿದ ಒತ್ತಡದಲ್ಲಿ ಮಣ್ಣು ಸರಾಗವಾಗಿ ಹರಡಿಕೊಳ್ಳವ ಮಣ್ಣಿನ ತೇವಾಂಶ.

Urea

ಯೂರಿಯಾ.
ಇದು ಕಾರ್ಬನಿಕ್ ಆಮ್ಲದ ಸಂಯೋಜಿತ ಆಮೈಡ್, ಈ ಸಾವಯವ ಸಾರಜನಕ ರಾಸಾಯನಿಕ ಗೊಬ್ಬರದಲ್ಲಿ ಶೇಕಡ 44-46 ರಷ್ಟು ಸಾರಜನಕವಿರುತ್ತದೆ.

Valency

ಸಂಯೋಗಸಾಮರ್ಥ್ಯ.
ಒಂದು ಮೂಲವಸ್ತುವಿನ ಪರಮಾಣು ಮತ್ತೊಂದು ಮೂಲವಸ್ತುವಿನ ಪರಮಾಣುವಿನೊಂದಿಗೆ ಸಂಯೋಗವಾಗಲು ಹೊಂದಿರುವ ಸಾಮರ್ಥ್ಯ.

Vesicular Rock

ವೆಸಿಕುಲಾರ್ ಶಿಲೆ; ನಾಳಯುಕ್ತ ಶಿಲೆ.
ಶಿಲೆಯ ಮಡ್ಡಿ ಇನ್ನೂ ಕುದಿಯುವ ಸ್ಥಿತಿಯಲ್ಲಿದ್ದಾಗ ಅನಿಲ ಹಿಗ್ಗುವುದರಿಂದ ಹಲವು ಅಗ್ನಿಶಿಲೆಗಳಲ್ಲಿ ಕೋಶಾಕಾರದ ಸ್ಥಳವುಂಟಾಗುತ್ತದೆ. ಈ ಸ್ಥಿತಿಯನ್ನು ತೋರುವ ಶಿಲೆಗೆ ವೆಸಿಕುಲಾರ್ ಶಿಲೆ ಎಂದು ಹೆಸರು.

Vieth’s Ratio

ವಿಥ್ ನ ಅನುಪಾತ.
ವಿಥ್ ರವರು ಹಾಲಿನಲ್ಲಿ 13 : 9 : 2 ಪ್ರಮಾಣದಲ್ಲಿ ಲ್ಯಾಕ್ಟೋಸ್, ಪ್ರೋಟೀನ್ ಮತ್ತು ಬೂದಿಯಿರುತ್ತದೆ ಎಂದು ಕಂಡುಹಿಡಿದರು.

Vitamin

ಅನ್ನಾಂಗ; ವಿಟಮಿನ್.
ಆಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡುಬರುವ ಒಂದು ಉಪಯುಕ್ತ ಸಾವಯವ ವಸ್ತು.

Vitamer

ವಿಟಮರ್
ರಾಸಾಯನಿಕವಾಗಿ ರಚನೆಯಲ್ಲಿ ವ್ಯತ್ಯಾಸವಿದ್ದರೂ ಅನ್ನಾಂಗಗಳ ಗುಣಲಕ್ಷಣಗಳನ್ನು ಹೊಂದಿದ್ದು ಪ್ರಕೃತಿಯಲ್ಲಿ ದೊರೆಯುವ ಅಥವಾ ಸಂಯೋಜಿತ ವಸ್ತು.

Voids Ratio

ಶೂನ್ಯ ಅನುಪಾತ.
ಒಂದು ಮೊತ್ತದ ಮಣ್ಣಿನಲ್ಲಿಯ ಶೂನ್ಯದ ಸಂಪೂರ್ಣ ಗಾತ್ರವು ಘನಗಳ ಸಂಪೂರ್ಣ ಗಾತ್ರಕ್ಕೆ ಅನುಪಾತವಾಗಿರುತ್ತದೆ.
C = [S (1+W) Sm] ➗ Sm
ಇದರಲ್ಲಿ :
C = ಶೂನ್ಯ ಅನುಪಾತ.
S = ಮಣ್ಣಿನ ಸಂಪೂರ್ಣ ಸಾಪೇಕ್ಷ ಗುರುತ್ವ.
Sm = ಸ್ಪಷ್ಟ ಸಾಪೇಕ್ಷ ಗುರುತ್ವ.
W = ಒಣ ತೂಕದ ಭಾಗವಾಗಿ ಸೂಚಿಸಿದ ಶೇಕಡ

Volcano

ಅಗ್ನಿ ಪರ್ವತ; ಜ್ವಾಲಾಮುಖಿ.
ಕರಗಿದ ಅಗ್ನಿಶಿಲೆ ಮತ್ತು ಹೊಗೆಯನ್ನು ಹೊರದೂಡುವ ಭೂಮಿಯ ಮೇಲ್ಭಾಗ.

Water Requirement

ಜಲಾವಶ್ಯಪ್ರಮಾಣ.
ಒಂದು ಸಸ್ಯದಿಂದ ಎಲೆ, ಕಾಂಡಗಳ ಮೂಲಕ ವಿಸರ್ಜನೆ ಹೊಂದುವ ನೀರಿನ ಮೊತ್ತಕ್ಕೆ ಆ ಸಸ್ಯದಲ್ಲಿ ಉತ್ಪತ್ತಿಯಾಗುವ ಒಣ ವಸ್ತುವಿನ ಪ್ರಮಾಣ.

Water Table

ಅಂತರ್ಜಲಮಟ್ಟ.
ಭೂಮಿಯಲ್ಲಿನ ಅಂತರ್ಜಲ ಮಟ್ಟದ ಮೇಲ್ಭಾಗ. ಇದು ನೀರಿನ ಒತ್ತಡ ಮತ್ತು ವಾಯುವಿನ ಒತ್ತಡಕ್ಕೆ ಸಮನಾಗಿರುವ ಒಂದು ಪಥ.

Weathering

ಹವೆಕ್ರಿಯೆ.
ಮಳೆಯಿಂದ ಒದ್ದೆಯಾಗಿ, ಬಿಸಿಲಿನಿಂದ ಒಣಗಿ ಮತ್ತು ಗಾಳಿಯ ಆಕ್ರಮಣಕ್ಕೆ, ತುತ್ತಾಗಿ ಒಂದು ವಸ್ತು ಭೌತಿಕ ಹಾಗೂ ರಾಸಾಯನಿಕವಾಗಿ ಒಡೆದು ಶಿಥಿಲವಾಗುವಿಕೆ.

White Alkali Soil

ಬಿಳಿ ಕ್ಷಾರಮಣ್ಣು.
ಕ್ಲೋರೈಡ್ ಮತ್ತು ಸಲ್ಫೇಟ್ ಗಳಿಂದ ಕೂಡಿರುವ ಕ್ಷಾರಮಣ್ಣು.

Weak Acid

ದುರ್ಬಲ ಆಮ್ಲ.
ವಿಯೋಗ ಸ್ಥಿರ ಕಡಿಮೆ ಇರುವ ಆಮ್ಲ.

Search Dictionaries

Loading Results

Follow Us :   
  Download Bharatavani App
  Bharatavani Windows App