भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Alkaline Soil

ಕ್ಷಾರೀಯ ಮಣ್ಣು.
ಕ್ಷಾರ ಪ್ರತಿಕ್ರಿಯೆಯುಳ್ಳ ಅಂದರೆ 7 ಕ್ಕಿಂತ ಹೆಚ್ಚು pH ಆಮ್ಲಸೂಚಿಯುಳ್ಳ (ಆಮ್ಲಾಂಶ) ಮಣ್ಣು.

Alkalinization

ಕ್ಷಾರೀಕರಣ:
ಅಯಾನ್ ವಿನಿಮಯದಿಂದಾಗಿ, ಮಣ್ಣಿನ ವಿನಿಮಯ ಸಂಕೀರ್ಣದಲ್ಲಿ ಸೋಡಿಯಂ ಅಂಶ ಹೆಚ್ಚಾಗುವಿಕೆ.

Alkaloid

ಆಲ್ಕಲಾಯಿಡ್, ಕ್ಷಾರ ಸಾರಜನಕ ವಸ್ತು.
ಸಾರಜನಕವನ್ನು ಹೊಂದಿರುವ ಸಾವಯವ ರಾಸಾಯನಿಕ ಸಂಯುಕ್ತ ವಸ್ತು.

Alkali Forming Fertilizer

ಕ್ಷಾರಕಾರಕ ರಾಸಾಯನಿಕ ಗೊಬ್ಬರ.
ಮಣ್ಣಿನಲ್ಲಿ ಕ್ಷಾರದ ಉಳಿಕೆಯನ್ನು ಬಿಡುವ ರಾಸಾಯನಿಕ ಗೊಬ್ಬರ.

Alluvial Soil

ಮೆಕ್ಕಲು ಮಣ್ಣು.
ನೀರಿನಿಂದ ಸಾಗಿಸಲ್ಪಟ್ಟು, ಅಸ್ತಿತ್ವಕ್ಕೆ ಬಂದ ಮಣ್ಣು.

Alluvium

ಮೆಕ್ಕಲು.
ಹರಿಯುವ ನೀರಿನಿಂದ ಕೊಚ್ಚಿಬಂದು ಶೇಖರವಾಗಿರುವ ನವಿರು ಮರಳು, ಜೇಡಿ, ಗೋಡು ಮುಂತಾದ ಮೃದು ಮಣ್ಣು ಸಂಗ್ರಹಣೆ.

Alpha Particle

ಆಲ್ಫಾ ಮೊದಲಕ್ಷರ ಕಣಗಳು.
ಹೀಲಿಯಂ ಮೂಲವಸ್ತುವಿನ ಕಣಗಳು.

Amide

ಅಮೈಡ್ .
ಅಮೋನಿಯದಿಂದ ಸಂಯೋಜಿತವಾದ ಒಂದು ವರ್ಗದ ಸಾವಯವ ಸಂಯುಕ್ತ ವಸ್ತು.

Amphoteric Electrolyte

ಆಮ್ಲಕ್ಷಾರ ವಿದ್ಯುದ್ವಿಶ್ಲೇಷ್ಯ.
ಆಮ್ಲ ಮತ್ತು ಕ್ಷಾರ ಎರಡೂ ಗುಣಗಳನ್ನು ಪ್ರದರ್ಶಿಸುವ ವಿದ್ಯುದ್ವಿಶ್ಲೇಷ್ಯ.

Amplitude

ಕಂಪನ ವಿಸ್ತಾರ.
ತರಂಗ ಚಲನೆಯಲ್ಲಿ ಒಂದು ಕಣ ಅಧಿಕವಾಗಿ ಸ್ಧಾನ ಪಲ್ಲಟವಾಗುವಿಕೆ.

Ammonia

ಅಮೋನಿಯ.
ಒಂದು ಸಾರಜನಕದ ಪರಮಾಣು ಮೂರು ಜಲಜನಕದ ಪರಮಾಣುಗಳೊಂದಿಗೆ ಕೂಡಿರುವ ವರ್ಣರಹಿತ ಅನಿಲ.

Ammonification

ಅಮೋನೀಕರಣ,
ಸಾವಯವ ಸಾರಜನಕ ಸಂಯುಕ್ತ ವಸ್ತುಗಳ ವಿಘಟನೆಯಿಂದ ಅಮೋನಿಯ ಉತ್ಪತ್ತಿಯಾಗುವಿಕೆ.
R – NH₂ + NOH → NH₂ + R – OH + ಶಕ್ತಿ.

Ammonium Chloride

ಅಮೋನಿಯಂ ಕ್ಲೋರೈಡ್;
ಅಮೋನಿಯ ಮತ್ತು ಹೈಡ್ರೋಕ್ಲೊರಿಕ್ ಆಮ್ಲಗಳ ಸಂಯೋಗದಿಂದುಂಟಾಗಿ, ಶೇಕಡ 26 ರಷ್ಟು ಸಾರಜನಕವನ್ನುಳ್ಳ ರಸಾಯನ ಗೊಬ್ಬರ.

Ammonium Nitrate

ಅಮೋನಿಯಂ ನೈಟ್ರೇಟ್.
ಅಮೋನಿಯಂ ಮತ್ತು ನೈಟ್ರಿಕ್ ಆಮ್ಲಗಳ ಸಂಯೋಗದಿಂದುಂಟಾದ ರಸಾಯನ ಗೊಬ್ಬರ. ಅದರಲ್ಲಿ ಶೇಕಡ 33-35 ರಷ್ಟು ಸಾರಜನಕವಿರುತ್ತದೆ.

Ammonium Phosphate

ಅಮೋನಿಯಂ ಫಾಸ್ಫೇಟ್.
ರಂಜಕಾಮ್ಲವನ್ನು ಅಮೋನಿಯದೊಂದಿಗೆ ಸಂಸ್ಕರಿಸಿದಾಗ ದೊರೆಯುವ ರಸಾಯನ ಗೊಬ್ಬರ.

Ammonium Sulphate

ಅಮೋನಿಯಂ ಸಲ್ಫೇಟ್.
ಅಮೋನಿಯ ಮತ್ತು ಸಲ್ಫ್ಯೂರಿಕ್ ಆಮ್ಲಗಳ ಸಂಯೋಗದಿಂದುಂಟಾದ ರಸಾಯನ ಗೊಬ್ಬರ. ಇದರಲ್ಲಿ ಶೇಕಡ 21 ರಷ್ಟು ಸಾರಜನಕವಿರುತ್ತದೆ.

Ammonium Sulphate Nitrate

ಅಮೋನಿಯಂ ಸಲ್ಫೇಟ್ ನೈಟ್ರೇಟ್.
ಇದು ಶೇಕಡ 26 ರಷ್ಟು ಸಾರಜನಕವನ್ನು ಹೊಂದಿರುತ್ತದೆ. ಅದರಲ್ಲಿ 20 ಅಮೋನಿಯ ಮತ್ತು 6 ನೈಟ್ರೇಟ್ ರೂಪದ ಸಾರಜನಕವಿರುತ್ತದೆ. ಇದನ್ನು ರಸಾಯನ ಗೊಬ್ಬರವಾಗಿ ಉಪಯೋಗಿಸುವರು.

Amphoteric Oxides

ಆಮ್ಲಕ್ಷಾರ ಆಕ್ಸೈಡ್ ಗಳು.
ಆಮ್ಲದಂತೆಯೂ ಹಾಗೂ ಪ್ರತ್ಯಾಮ್ಲದಂತೆಯೂ, ಕ್ರಿಯೆಯಲ್ಲಿ ತೊಡಗುವ ಆಕ್ಸೈಡ್ ಗಳು.
ಉದಾಹರಣೆ : ZnO, SnO, Al₂O₃.

Anhydrous Ammonia

ಅನಾರ್ದ್ರ ಅಮೋನಿಯ.
ಇದು, ಅಧಿಕ ಒತ್ತಡದಿಂದ, ಸಂಕುಚಿತಗೊಳಿಸಿದ ಅಮೋನಿಯ ಅನಿಲ. ಇದರಲ್ಲಿ ಶೇಕಡ 82 ರಷ್ಟು ಸಾರಜನಕ ಇರುತ್ತದೆ. ಇದು ಇತ್ತೀಚೆಗೆ ರಸಾಯನ ಗೊಬ್ಬರವಾಗಿ ಬಳಸಲ್ಪಡುತ್ತಿದೆ.

Anode

ಧನ ವಿದ್ಯುತ್ ಧ್ರುವ.
ವಿದ್ಯುತ್, ವಿದ್ಯುದ್ವಿಭಜನೀಯವನ್ನು ಪ್ರವೇಶಿಸುವ ಧ್ರುವ.

Search Dictionaries

Loading Results

Follow Us :   
  Download Bharatavani App
  Bharatavani Windows App