भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಹೋಮಾನಲ

ಹೋಮದ ಬೆಂಕಿ (ನಿಟ್ಟಿಸೆ ಹೋಮಾನಲನೊಳ್ ಪುಟ್ಟಿದ ನಿನಗಕ್ಕ ಪರಕೆಯಾವುದೊ: ಪಂಪಭಾ, ೩. ೪೮)

ಹೋಯಜಬಾಪ್

ಹೋ ಅಜ ಬಾಪ್, ಆಶ್ಚರ್ಯಮೆಚ್ಚಿಕೆಗಳ ಉದ್ಗಾರಗಳು ಮೊಸಳೆ (ಛಾಯಾಲಕ್ಷ್ಯಮನೊಡ್ಡಿಯುಂ ಆಯದ ನೀರೊಳಗೆ ತನ್ನನಡಸಿದ ನೆಗೞಂ ಬಾಯೞವಿನಂ ಇಸಿಸಿಯುಂ ಅರೆ ಹೋಯಜ ಬಾಪ್ಪೆಂದು ಹರಿಗನಂ ಗುರು ಪೊಗೞೆ ಪಂಪಭಾ, ೨. ೬೦)

ಹೋಸವ್ರತ

ರಾತ್ರಿ ಊಟಮಾಡದಿರುವುದು (ಪನ್ನೆರಡು ತೆಱದ ವ್ರತಂಗಳಂ ಹೋಸವ್ರತಂಬೆರಸು ನಡೆಯಿಪುದು: ಧರ್ಮಪ, ೧೦. ೬೨ ವ)

ಹ್ರದ

ಮಡು (ಹ್ರದಮೆಂಬುದು ಅಗಾಧತರ ಜಲಾಶಯಮಕ್ಕುಂ: ಅಭಿಧಾವ, ೧. ೪. ೧೧)

ಹ್ರದಿನಿ

ನದಿ (ಆ ಮಂಜೂಷೆಯುಮಂ ಮಹಾಹ್ರದಿನಿಯೊಳ್ ಪೋಪಲ್ಲಿ: ಕರ್ಣನೇಮಿ, ೩. ೪೧)

ಹ್ರಸ್ವ

ಕಿರಿದಾದ, ನೀಳವಲ್ಲದ (ಅನುಪೂರ್ವ ಧನುರಾಕರವಂಶನುಂ ಋಜುಪರಿಪೂರ್ಣಹ್ರಸ್ವಗ್ರೀವನುಂ ಮಹಾವ್ಯೂಢೋರಸ್ಕನುಂ: ಆದಿಪು, ೧೨. ೫೬ ವ)

ಹ್ರಾದಿನಿ

ಮಿಂಚು, ಸಿಡಿಲು (ಹ್ರಾದಿನಿ ಮಿಂಚುಂ ಸಿಡಿಲುಂ: ಅಭಿಧಾವ, ೩. ೧. ೨೨)

ಹ್ರೀ

ಲಜ್ಜೆ (ಹ್ರೀ ತ್ರಪಾಹ್ವಯಂ ವ್ರೀಡೆ ಲಜ್ಜೆಯೆನೆ ಮಂದಾಕ್ಷಂ: ಅಭಿಧಾವ, ೨. ೨. ೧೯); [ಜೈನ] ಒಬ್ಬ ದೇವತೆ (ಶ್ರೀ ಹ್ರೀ ಧೃತಿ ಕೀರ್ತಿ ಬುದ್ಧಿ ಲಕ್ಷ್ಮಿಗಳೆಂಬ ಅಱುವರುಮಂ ಆತ್ಮೀಯ ಗುಣಗಣಮಣಿವಿಭೂಷಣಂಗಳಿಂ ಜಿನಜನನಿಯಂ ಅಲಂಕರಿಸಲುಂ .. .. ಸೌಧರ್ಮೇಂದ್ರಂ ಬೆಸಸುವುದುಂ: ಆದಿಪು, ೭. ೩ ವ)

ಹ್ರೀಣ

ಲಜ್ಜೆಗೊಂಡ (ಹ್ರೀಣಂ ಹ್ರೀತಂ ವಿಲಜ್ಜಿತಂ ತಾನಕ್ಕುಂ: ಅಭಿಧಾವ, ೨. ೧. ೪೩)

ಳತಾಂಗಿ

ಕೋಮಲೆ (ಕಳಮಕ್ಷೇತ್ರದುಪಾಂತನಂದನದೊಳ್ ಅನಂದದಿಂ ಪಕ್ಕಿಸೋವ ಳತಾಂಗೀಜನದೊಂದು ಮೆಲ್ಲುಪುದುಂ ಕೇಳ್ದಂತದಿಂ ತದ್ವನಾಂತ ಳತಾನೀಕದಿಂ ಉಣ್ಮುತಿರ್ಪ ಕಳಕಂಠಧ್ವಾನಸಂತನಾಂ: ಜಗನ್ನಾವಿ, ೨. ೬)

ಳತಾನೀಕ

ಲತಾನೀಕ, ಬಳ್ಳಿಗಳ ಗುಂಪು (ಕಳಮಕ್ಷೇತ್ರದುಪಾಂತನಂದನದೊಳ್ ಅನಂದದಿಂ ಪಕ್ಕಿಸೋವ ಳತಾಂಗೀಜನದೊಂದು ಮೆಲ್ಲುಪುದುಂ ಕೇಳ್ದಂತದಿಂ ತದ್ವನಾಂತ ಳತಾನೀಕದಿಂ ಉಣ್ಮುತಿರ್ಪ ಕಳಕಂಠಧ್ವಾನಸಂತನಾಂ: ಜಗನ್ನಾವಿ, ೨. ೬)

ಳೀಳಾ

ವಿಲಾಸ (ಹೇಳಾ ವಿಳಾಸ ವಿಭ್ರಮ ಳೀಳಾ ಬಿಬ್ಬೋಕ ಲಲಿತಹಾವಾಖ್ಯಂಗಳ್:: ಅಭಿಧಾವ, ೧. ೧೩. ೨೨)

ಱಂಡೆ

ವಿಧವೆ (ವ್ಯಾಸಮುನೀಶಂ ಪೇಸದೆ ಱಂಡೆಗೆ ಗರ್ಭಮನೆ ಮಾಡೆ: ಸಮಯಪ, ೧೦. ೧೫೪)

ಱಚ್ಚೆ

ಕೆಸರು (ತಿರಿದುಂಡು ಕಚ್ಚುಟಮನುಟ್ಟು ಱಚ್ಚೆಯೊಳ್ಪಟ್ಟು ಮುಟ್ಟುಗೆಟು ಉಬ್ಬೆಗಂ ಉಬ್ಬರಿಸಿ ನಮೆದುದದನದಂ ಮಱೆದಿರೆ: ಸುಕುಮಾಚ, ೪. ೩೦)

ಱೞ

ೞ ಎಂಬ ಅಕ್ಷರ (ಅತಿಪೀಡನದಿಂ ರೇಫಾಶ್ರಿತಮಾದ ಱಕಾರಮುಂ ಸಮಂತು ಡಕಾರಾಶ್ರಿತಮಾದ ಱೞನುಂ ಅಂಗೀಕೃತಪದಲತ್ವಕ್ಕೆ ಸಮನೆ ಸಲ್ಲದ ಕುಳನುಂ: ಶಬ್ದಮದ, ೨೮)

ಱಾಟಣ

ಬಾವಿಯಿಂದ ನೀರೆತ್ತುವ ಗಾಲಿ (ಅತತ್ವದೊಳ್ ನಿಲಿಸದ ಭಾವಂ ಅೞಸದ ಪುದ್ಗಳಂ ಇಲ್ಲೆನೆ ಕರ್ಮಬಂಧದಿಂ ಬಲವರುತಿರ್ಪ ಱಾಟಣದ ಗುಂಡಿಗೆಯಂತಿರೆ: ಸುಕುಮಾಚ, ೫. ೩೨)

ಱಾಟಳ

ಱಾಟಣ (ಮಲಜಯವಾರಿಯಿಂ ಕುಳಿರ್ವ ಬಾವಿಗಳಲ್ಲಿ ಮೃಣಾಳದಂಡಮಂಡಲಿಗಳ ದಂಡತೋರಣಕದಿಂ .. .. ಸಮೆದಾಡುವ ಱಾಟಳಂಗಳಂ: ಕಾದಂಬ, ೭. ೨೧)

ಱಕ್ಕಟ

ವ್ಯರ್ಥವಾದ (ಪೊಸಮಲ್ಲಿಗೆಗಳ ತಿಳಕಪ್ರಸರದ ಕಂಪಿಂಗೆ ಬಸನಿಗಂ ನೀನೆಂದಾ ದೆಸೆಯನಣಂ ನೋಡಲ್ಸಂಕಿಸುವೆನಗೆ ಮದಾಳಿ ಱಕ್ಕಟಂ ಪಲ್ಮೊರೆವಾ: ಮಲ್ಲಿನಾಪು, ೩. ೩೩)

ಱಕ್ಕಟಂ

ವ್ಯರ್ಥವಾಗಿ (ಮರುಳಾಗಿ ಕೆಮ್ಮನೀತನ ನರಿಯಂ ಕಾಣ್ಬಂತೆ ಕಂಡು ಱಕ್ಕಟ ಮುನಿಸಿಂ ಹರಿಯಿಸುವೆನೆಂದು ಪಾಪದ ಭರದಿಂ ನರಕಕ್ಕೆ ಜಗೞ್ದನೆನ್ನಾತ್ಮೇಶಂ: ಧರ್ಮಾಮೃ, ೧೦. ೧೪೫)

ಱುಂಜೆ

ಒಂದು ಚರ್ಮವಾದ್ಯ (ಪೊಯ್ವ ಎಕ್ಕವದ್ದಳೆಯ ದನಿಯುಂ ಉದ್ದುವ ಱುಂಜೆಯು ರವಮುಂ .. .. ನೆರಪೆ .. .. ನರಕಮಥನಂ ಬರ್ಪಂ: ನೇಮಿನಾಪು, ೮. ೭೫ ವ)

Search Dictionaries

Loading Results

Follow Us :   
  Download Bharatavani App
  Bharatavani Windows App