भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456789116117Next >

ಸ ಸರ್ವಜಗತಾಂ ಗುರುರ್ಗಿರಿಸುತಾಪತಿಃ ಪಾತು ನಃ

ಸಮಸ್ತ ಜಗತ್ತಿಗೂ ಒಡೆಯನೂ ಗುರುವೂ ಪಾರ್ವತೀಪತಿಯೂ ಶಿವನೂ ಆದ ಅವನು ನಮ್ಮನ್ನು ಕಾಪಾಡಲಿ (ಪಂಪಭಾ, ೪. ೨೭)

ಸಂಕಟ

ಇಕ್ಕಟ್ಟಾದ, ದುರ್ಗಮವಾದ (ಜಾನುಭಂಜನೀ ಶೂಲಪ್ರಕರ ಪರಿವೃತಂಗಳುಂ ಕೂಪಕೂಟಾವಪಾತ ಲೋಹಕಂಟಕಸಂಕಟಂಗಳುಂ .. .. ಅಪ್ಪ ದುರ್ಗಂಗಳೊಳ್: ಆದಿಪು, ೧೩. ೫೭ ವ); ವ್ಯಥೆ (ನಲ್ಲರಗಲ್ಕೆಗೆ ಕಣ್ಣ ನೀರ್ಗಳಮ ಮಿಡಿವ ಬಹುಪ್ರಕಾಸಂಕಟಮೊಪ್ಪಿದುದಾ ಪ್ರಯಾಣದೊಳ್: ಆದಿಪು, ೪. ೫೭); ತೊಂದರೆ (ಒರ್ವರಂ ಒರ್ವರ್ ಎಚ್ಚು ನಿಜಪೀಠಾಂಭೋಜದಿಂ ಬ್ರಹ್ಮನುಚ್ಚಳಿಪನ್ನಂ ಪಿರಿದೊಂದು ಸಂಕಟಮನೀ ತ್ರೈಲೋಕ್ಯದೊಳ್ ಮಾಡಿದರ್: ಪಂಪಭಾ, ೧. ೭೯)

ಸಂಕಡಿ

ಇಕ್ಕಟ್ಟು; ದುಃಖ; ರಿಕಾಪು (ಪತಿಗಲ್ಲದೆ ಪೆಱರ್ಗೆಡೆಗುಡದ ತೆಱದೆ ನಡೆವಿಡಿದ ಬೆನ್ನ ಸಂಕಡಿ: ಕುಸುಮಾಕಾ, ೮. ೫೩); ಗೊಂಚಲು (ಚಂದನದ ವಂದನಮಾಲೆಗಳಿಂ ಗೊಜ್ಜೆಯ ಸಂಕಡಿಗಳಿಂ: ಕುಸುಮಾಕಾ, ೧೨. ೧೫೭ ವ)

ಸಂಕಡಿಗೊಳ್

ದುಃಖಪಡು (ಮಾನಹಾನಿಯಿಂದಾದ ಬರ್ದುಂಕದೇವುದೆನುತುಂ ಸಲೆ ಸಂಕಡಿಗೊಂಡರಾ ನೃಪರ್: ಶಾಂತೀಶ್ವಪು, ೭. ೧೩೧)

ಸಂಕಂಪಿತ

ಚಂಚಲವಾದ, ನಡುಗುವ (ಶಂಕಂಪಿತಂ ಮಿದಿಱೊಳ್ ಮಧ್ಯಮಂ ಮಂದ್ರಮೆಂಬೀ ಪಾಂಗಿಂ .. .. ಪ್ರೌಢೇ ಪಾಡುತ್ತುಮಿರ್ದಳ್: ಲೀಲಾವತಿ, ೨. ೩೦)

ಸಂಕರ

ಮನೆಯ ಕಸ (ಸಂಕರಾಖ್ಯಮದು ಮನೆಯ ಕಸಂ: ಅಭಿಧಾವ, ೧. ೧೦. ೨೧)

ಸಂಕರ್ಷಣ

ಬಲರಾಮ (ಹರಿಯುಂ ಸಂಕರ್ಷಣನುಂ ಪರಮಾನಂದಪರರ್: ಕರ್ಣನೇಮಿ, ೬. ೧೩೪)

ಸಕಲ

ಸಮಗ್ರ (ದೋಷಂಗಳಿಂತು ಮಿಗೆ ಸಂಶ್ಲೇಷದೊಳಾದಂದು ಸಕಲವಿದ್ವತ್‌ಸಭೆಯೊಳ್ ದೂಷಿಸುಗುಂ ಕೃತಿವಧುವಂ: ಕವಿರಾಮಾ, ೧. ೧೦೦)

ಸಕಲಂಕತೆ

ಕಲೆಗಳನ್ನು ಹೊಂದಿರುವುದು, ದೋಷಪೂರ್ಣತೆ (ಸಕಲಂಕತೆ ಚಂದ್ರಮನೊಳ್ ವಿಕಲಧ್ವನಿ ವಿಹಗದಲ್ಲಿ ಭಂಗಂ ನದಿಯೊಳ್ .. .. ಅಲ್ಲದಿಲ್ಲಾ ನಾಡೊಳ್: ಗಿರಿಜಾಕ, ೨. ೬)

ಸಕಲಕಲಾಧರ

ಹದಿನಾರು ಕಳೆಗಳುಳ್ಳವನು, ಹುಣ್ಣಿಮೆ ಚಂದ್ರ (ಸಕಲಕಲಾಧರನಂ ರಾಹು ಕೊಳ್ವ ತೆಱದಿಂ ವಿಷಾತಿಭೀಕರದಂಷ್ಟ್ರಾನಿಕರಂ ಕೊಂಡುದು ನರಪಾಲಕಸುತನಂ: ಪಂಚತಂತ್ರ, ೧೮೫)

ಸಕಲಕಲಾಧರೆ

ಎಲ್ಲ ಕಲೆಗಳನ್ನು ಬಲ್ಲವಳು (ಸಕಲಕಲಾಧರೆ ಮಣಿದೀಪಿಕೆಯಿಂ ಬೆಳಗಿದಪೆಂ ಅಮಲನಿಜಗೃಹಮಂ: ಲೀಲಾವತಿ, ೭. ೪೩)

ಸಕಲಜ್ಞ

ಸರ್ವಜ್ಞ (ಸಕಲಜ್ಞರ್ ತಿಳಿವಂತು ಪೇೞೆ ತಳೆದಂ ಸೀತೇಂದ್ರನುತ್ಸಾಹಮಂ: ಪಂಪರಾ, ೧೬. ೭೪)

ಸಕಲರ್ತು

ಎಲ್ಲ ಋತುಗಳು, ಸರ್ವಋತು (ಇದು ಸಮವಸರಣ ಸಂಸಂಗದಿನಲ್ಲದೊಡೆ ಅಮಲಬೋಧ ಮುನಿಜನ ಸಾಮರ್ಥ್ಯದಿನಕ್ಕುಮಲ್ಲದೆ ಅಂದಾಗದು ಸಕಲರ್ತು ಪ್ರಭಿನ್ನಗುಣಸಮವಾಯಂ: ಚಂದ್ರಪ್ರಪು, ೨. ೭೯)

ಸಕಲವ್ಯಾಪಿನಿ

ಎಲ್ಲೆಡೆ ಹಬ್ಬಿರುವ (ಸಕಲವ್ಯಾಪಿನಿಯುಂ ಭವ್ಯಕಮಲನಿಕರಪ್ರಮೋದಾಯಿನಿಯುಂ ತಿಗ್ಮಕರಂ ಪ್ರಭೆಯಂತಳೆವಂತಕಳಂಕಂ ಶ್ರೀಧರಾಖ್ಯೆಯಂ ಮುನಿ ತಳೆದಂ: ಚಂದ್ರಪ್ರಪು, ೨. ೮೪) ಸಕಳಕಳಾಧರ ಎಲ್ಲ ಕಲೆಗಳನ್ನುಳ್ಳ, ಪೌರ್ಣಮಿಯ ಚಂದ್ರ (ಪಲಂಬರ್ ರಾಜಕುಮಾರರ ನಡುವೆ ತಾರಾಗಣಂಗಳ ನಡುವಣ ಸಕಳಕಳಾಧರನಂತೆ ಶಸ್ತ್ರಕಲಾಧರನಾಗಿ: ಪಂಪಭಾ, ೨. ೫೯ ವ)

ಸಂಕಲೆ

ಬೇಡಿ (ಮನ್ನಣೆಯ ಮಾವಂತರುಮಂ ಆರೆಕಾಱರುಮಂ ಮೀಱ ಗೆಂಟಱೊಳ್ ನಿಂದು ನೋಡುವ ನುಡಿಗೆ ಗಿಱ್ಱನೆಯ್ದುವ ಸೊರ್ಕಾನೆಗಳ ಕಾಲ ಸಂಕಲೆಯ ಗೋಸದೊಳಂ: ಕಬ್ಬಿಗಕಾ, ೩೭ ವ)

ಸಂಕಲ್ಪ

ಕಲ್ಪಿಸಿಕೊಂಡ, ಕಲ್ಪನೆಯ (ಎಂದು ತನ್ನೊಳೆ ಬಗೆದು ಸಂಕಲ್ಪಸಮಾಗಮಸುಖಮನನುಭವಿಸಿ: ಆದಿಪು, ೪. ೧೪ ವ); ವಿದ್ಯೆ [ಶರಕಲ್ಪ] (ಶರಸಂಧಾನ ಆಕರ್ಷಣ ಹರಣಾದಿ ವಿಶೇಷವಿವಿಧಸಂಕಲ್ಪಕಳಾಪರಿಣತಿಯಂ ಮೆಱೆದುದು: ಪಂಪಭಾ, ೧೨. ೧೮೬)

ಸಂಕಲ್ಪನವಧೆ

ಮಾನಸಿಕ ಕೊಲೆ, ಹಿಂಸೆ (ಭಾಪು ಸಂಕಲ್ಪನವಧೆಗೆ ಇನಿತಾಯ್ತು ದಿಟದಿಂ ಏನೇನಾಗರ್: ಯಶೋಧಚ, ೪. ೬೨)

ಸಂಕಲ್ಪಹಿಂಸೆ

ಹಿಂಸೆಗೆ ಮಾನಸಿಕ ಒಪ್ಪಿಗೆ (ಸಂಕಲ್ಪಹಿಂಸೆಯೊಂದಱೊಳಾಂ ಕಂಡೆಂ ಭವದ ದುಃಮುಂಡೆಂ: ಯಶೋಧಚ, ೪. ೭೦)

ಸಕಳಕಳಾಧರ

ಎಲ್ಲ ಕಲೆಗಳನ್ನುಳ್ಳ, ಪೌರ್ಣಮಿಯ ಚಂದ್ರ (ಪಲಂಬರ್ ರಾಜಕುಮಾರರ ನಡುವೆ ತಾರಾಗಣಂಗಳ ನಡುವಣ ಸಕಳಕಳಾಧರನಂತೆ ಶಸ್ತ್ರಕಲಾಧರನಾಗಿ: ಪಂಪಭಾ, ೨. ೫೯ ವ)

ಸಕಳಕ್ಷಮಾಪತಿತ್ವ

ಭೂಮಿಯೆಲ್ಲಕ್ಕೂ ಒಡೆತನ, ಚಕ್ರವರ್ತಿತ್ವ (ಮತ್ಸರ ಮಹೋರಗಕ್ಕಂ ಆಗ್ರಹಮಹಾಗ್ರಹಕ್ಕಂ ಕೋಪಮಮದಾನೇಕಪಕ್ಕಂ ಪಕ್ಕಾಗೆ ತನ್ನನೊಪ್ಪಿಸುವುದು ಮತಿವಂತಂಗೆ ಪುರುಷಾರ್ಥಮಲ್ತು ಸಕಳಕ್ಷಮಾತಿತ್ವಮೆ ಸಕಳಕ್ಷಮಾಪತಿತ್ವಮಂ ಮಾಡುಗುಂ: ಶಾಂತಿಪು, ೩. ೭೨ ವ)
< previous123456789116117Next >

Search Dictionaries

Loading Results

Follow Us :   
  Download Bharatavani App
  Bharatavani Windows App