भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567897475Next >

ವಂಕ

ವಕ್ರ (ಕಲಿಗಳ ಕಾಪಿನ ವಂಕದ ಪುಲಿಮೊಗದತಿ ಲಸಿತ ವಾಕವಾಟಂಗಳ: ತ್ರಿಷಷ್ಟಿಪು, ೧೭. ೨೧)

ವಂಕದರ

ಕೋಟೆಯ ಪಕ್ಕದ ಚಿಕ್ಕ ಬಾಗಿಲು, ವಕ್ರದ್ವಾರ (ಕೋಟೆಗಾವಗಂ ಕೆಡಪುವ ಗಗ್ಗೆ ವಂಕದರದಿಂ ಪೊಱಮಟ್ಟುೞವ ಆಳ್ಗಂ: ಚಂದ್ರಪ್ರಪು, ೫. ೧೦೬)

ವಂಕದಾರ

ಕೋಟೆಯ ಪಕ್ಕದ ಚಿಕ್ಕ ಬಾಗಿಲು (ಆ ಕುಮಾರನ ಲಕ್ಷ್ಮೀಮಂದಿರಕ್ಕೆ ವಂದು ವಂಕದಾರದೊಳ್ ನಿಂದು: ಸುಕುಮಾಚ, ೧೦. ೧೧೭ ವ)

ವಕಾರತ್ರಯ

ವೈದಿಕರ ದೇವಕಾರ್ಯ, ಪಿತೃಕಾರ್ಯ ಮತ್ತು ಮಾನುಷಕಾರ್ಯಗಳಲ್ಲಿ ಕ್ರಮವಾಗಿ ಬಳಸುವ ಸ್ವಾಹಾಕಾರ, ಸ್ವಧಾಕಾರ ಮತ್ತು ವಷಟ್ಕಾರಗಳಲ್ಲಿನ ಮೂರು ವಕಾರಗಳು (ಕ್ರಿಯೆಯಿಂ ನೆಗೞ್ದ ವಕಾರತ್ರಯಮಂ ನೆಱೆ ಬಲ್ಲೆನೆಂಬ .. .. ಮಾಯಾವಿಯ ಮಾತಂ ನಂಬಲಾಗದು: ಸಮಯಪ, ೧೨. ೩೪)

ವಂಕಿ

ಚಂದ್ರಾಯುಧ (ಪಾಶದ ಅಂಕುಶದ ವಂಕಿಯ ಲೌಡಿಯ ಜವದಾಡೆಯ .. .. ಮೆಱೆದು ನೆರೆದ ಪದಾತಿವ್ಯೂಹದಿಂ: ರಾಜಶೇವಿ, ೬. ೧೧ ವ)

ವಕುಳ

ನಾಗಕೇಸರ, ಪಗಡೆ ಗಿಡ (ಮತ್ತೊರ್ವಳ್ ವಕುಳ ಲುಕುಳಾಸವವದನಪರಿಮಳೆ: ಆದಿಪು, ೧೧. ೧೨೩ ವ)

ವಕ್ಖಾಣಿಸು

[ವ್ಯಾಖ್ಯಾನಿಸು] ವಿವರಿಸು (ಮಾಯಾತಪಸ್ವಿ ಜೋಯಿಸಮಂ ವಕ್ಖಾಣಿಸಿಂ ಎಂದು ಕಯ್ಗಳಂ ಮುಗಿದು ಮುಂದೆ ಕುಳ್ಳಿರ್ಪುದುಂ: ಸುಕುಮಾಚ, ೩. ೩೫ ವ)

ವಕ್ತ್ರ

ಬಾಯಿ, ಮುಖ (ಪವನಜನ ಆಸ್ಯಮಲ್ತಿದು ಅವನ ಆನನಮಪ್ಪೊಡೆ ಮಟ್ಟಮಿರ್ದು ನೋಡುವುದೆ ಮದೀಯವಕ್ತ್ರಮನೆ ಕೆಮ್ಮನೆ: ಗದಾಯು, ೯. ೩೩)

ವಕ್ತ್ರಪದ್ಮ

ಮುಖಕಮಲ (ಅರಸಿಯ ವಕ್ತ್ರಪದ್ಮಮಿದೇಕೆಯೊ ಮಾಗಿಯ ಪದ್ಮದಂದದಿಂ ಕೊರಗಿದುದು: ನೇಮಿನಾಪು, ೧. ೧೧೪)

ವಕ್ತ್ರಮಂಡನ

ಮುಖಾಲಂಕಾರ (ಜಲಲವಮಂಜರಿಯಂ ಉಟುಮಾಡಿದುವು ದಿಶಾಲಲನೆಯರ ವಕ್ತ್ರಮಂಡನ ವಿಲಾಸದೊಳ್ ನೆಗೞ್ವ ಕರ್ಣಪೂರಶ್ರೀಯಂ: ಆದಿಪು, ೭. ೯೫)

ವಕ್ರ

ತಡೆ (ಜವನಾಣೆಗಂ ಆಜ್ಞೆಗಂ ಉಂಟೆ ವಕ್ರಂ ಆ ಖಳನ ತುೞವುಮಂ ಸೋಂಕುಮಂ ಆರವಧರಿಪರ್: ಆದಿಪು, ೪. ೬೭); ಅಡ್ಡಿ, ತೊಂದರೆ (ಚಕ್ರದೊಳೇಂ ಮತ್ತೇಜಶ್ಚಕ್ರಮೆ ಮುಂದಕ್ಕೆ ದಂಡರತ್ನಂಬರಂ ಆರ್ ವಕ್ರಮೆನಗೆ ಅಖಿಳ ಧರಣೀಚಕ್ರದೊಳ್: ಆದಿಪು, ೧೨. ೭೨)

ವಕ್ರಗತಿ

ಅಂಕುಡೊಂಕು ಚಲನೆ, ಕೆಟ್ಟ ನಡತೆ (ವಕ್ರಗತಿ ಫಣಿಯೊಳ್ .. .. ಪದವಿರ್ಪುದಲ್ಲದಿಲ್ಲಾ ನಾಡೊಳ್: ಕುಉಸುಮಾಕಾ, ೨. ೩೮)

ವಕ್ರಗ್ರೀವ

ಬಾಗಿದ ಕೊರಳುಳ್ಳವನು, ಒಂಟೆ (ಅಪಸ್ಮಾರಗ್ರಹಗೃಹೀತರಂತೆ ವಕ್ರಗ್ರೀವರಾಗಿಯುಂ, ಉಗ್ರಗ್ರಹಂ ಸೋಂಕಿದಂತೆ ಮರುಳಾಗಿಯುಂ ನೆಱುಗಿವುಡರಂತೆ ಕಿವುಂಡಗೇಳ್ದುಂ: ಪಂಚತಂತ್ರ, ೭೦ ವ)

ವಕ್ರಭಣಿತಿ

ವ್ಯಂಗ್ಯವಾದ ಮಾತು (ಮುಳಿವ ತಿಳಿವೆಡೆಯುಣ ಮೇಣೊಳಗಾಗಳ್ ವಕ್ರಭಣಿತಿಗಳ್ಗೆ ಅವನಿಪತೀ: ಕಾದಂಬ, ೬. ೯೧)

ವಕ್ರಾಕ್ಷ

ಕಾಗೆ (ವಕ್ರಾಕ್ಷನಿಂತೆಂದಂ: ನೀನೆಂದಂತೆ ನಾಂ ಕಾಕಕುಲಪ್ರಸೂತನಾಗಿಯುಂ ಅಜ್ಞಾನಕರ್ಮದೊಳ್ ನಡೆವನಲ್ಲಂ: ಪಂಚತಂತ್ರ, ೪೨೭ ವ)

ವಕ್ರಿ

ಶತ್ರು (ವಕ್ರಿಗಳೆಲ್ಲಂ ಮಡಿದುದು ಇನ್ನಾವ ಭಯಮಿಲ್ಲಂ ಸಮಾಧಾನದಿಂ ಬಿಜಯಂಗೆಯ್ವುದು: ತ್ರಿಷಷ್ಟಿಪು, ೧೧. ೪೮ ವ)

ವಕ್ರಿಮ

ಬಳಸು, ಸುತ್ತು (ವಕ್ರಿಮಂ ಸುಚರಿತದೊಳ್ ವಿಚಾರಿಸುವೊಡಿಲ್ಲ ಅಳಕಾಳಿಯೊಳಲ್ಲದೆ ಎಲ್ಲಿಯುಂ: ಚಂದ್ರಪ್ರಪು, ೧೧. ೧೦೯); ಬಳಸಾದ, (ಆ ದಿವ್ಯವಚನ ವಕ್ರಿಮಕ್ರಮಮೆ ತಮಗನುಗ್ರಹಪಕ್ಷಮಾಗೆ ಕೃಷ್ಣನಂ ಪರಮಾತ್ಮಸ್ವರೂಪನೆಂದರಿದು: ಜಗನ್ನಾವಿ, ೪. ೧೧೦ ವ)

ವಕ್ರಿಸು

ವಕ್ರಿಸು

ವಕ್ರಿಸು

ವಕ್ರಿಸು. ಅಡ್ಡಿಮಾಡು (ಅದಿನ್ನೆನಗೆ ತಪ್ಪುದು ತನ್ಮುನಿಶಾಪದಿಂದಂ ಇನ್ನಾರುಮಿದರ್ಕೆ ವಕ್ರಿಸದಿರಿಂ ವನವಾಸದೊಳಿರ್ಪೆಂ: ಪಂಪಭಾ, ೧. ೧೧೪); ವಕ್ರವಾಗು, ಬೇರೆಯಾಗು (ನಿಮ್ಮೀ ಕ್ರಮಕಮಲಕ್ಕೆ ಎಱಗದೆ ವಕ್ರಿಸಿ ಭೂಚಕ್ರದೊಳಗೆ ಬಾೞ್ವರುಂ ಒಳರೇ: ಪಂಪಭಾ, ೧೧. ೩೦); ಪ್ರತಿಭಟಿಸು, ಎದುರಿಸು (ವೈರಿನರಾಧಿಪಸೈನ್ಯವಾರ್ಧಿಯಂ ಪೊಸೆದೊಡೆ ಪುಟ್ಟಿದೀ ನಿನಗೆ ವಕ್ರಿಸಲೆನ್ನಂ ಅದೆಂತು ತೀರ್ಗುಮೋ: ಪಂಪಭಾ, ೧೩. ೧೦೧)

ವಕ್ರೋಕ್ತಿ

ಸುಂದರವಾದ ಮಾತು, ಆಲಂಕಾರಿಕ ಮಾತು (ಎಂದೆಂದು ಓರೊರ್ವರ್ ಆಕೆಯ ರೂಪಂ ವಕ್ರೋಕ್ತಿಯೊಳೆ ಪೊಗೞ್ದು: ಪಂಪಭಾ, ೩. ೪೬ ವ)
< previous1234567897475Next >

Search Dictionaries

Loading Results

Follow Us :   
  Download Bharatavani App
  Bharatavani Windows App