भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

ಱಕ್ಕಟ

ವ್ಯರ್ಥವಾದ (ಪೊಸಮಲ್ಲಿಗೆಗಳ ತಿಳಕಪ್ರಸರದ ಕಂಪಿಂಗೆ ಬಸನಿಗಂ ನೀನೆಂದಾ ದೆಸೆಯನಣಂ ನೋಡಲ್ಸಂಕಿಸುವೆನಗೆ ಮದಾಳಿ ಱಕ್ಕಟಂ ಪಲ್ಮೊರೆವಾ: ಮಲ್ಲಿನಾಪು, ೩. ೩೩)

ಱಕ್ಕಟಂ

ವ್ಯರ್ಥವಾಗಿ (ಮರುಳಾಗಿ ಕೆಮ್ಮನೀತನ ನರಿಯಂ ಕಾಣ್ಬಂತೆ ಕಂಡು ಱಕ್ಕಟ ಮುನಿಸಿಂ ಹರಿಯಿಸುವೆನೆಂದು ಪಾಪದ ಭರದಿಂ ನರಕಕ್ಕೆ ಜಗೞ್ದನೆನ್ನಾತ್ಮೇಶಂ: ಧರ್ಮಾಮೃ, ೧೦. ೧೪೫)

ಱಚ್ಚೆ

ಕೆಸರು (ತಿರಿದುಂಡು ಕಚ್ಚುಟಮನುಟ್ಟು ಱಚ್ಚೆಯೊಳ್ಪಟ್ಟು ಮುಟ್ಟುಗೆಟು ಉಬ್ಬೆಗಂ ಉಬ್ಬರಿಸಿ ನಮೆದುದದನದಂ ಮಱೆದಿರೆ: ಸುಕುಮಾಚ, ೪. ೩೦)

ಱಂಡೆ

ವಿಧವೆ (ವ್ಯಾಸಮುನೀಶಂ ಪೇಸದೆ ಱಂಡೆಗೆ ಗರ್ಭಮನೆ ಮಾಡೆ: ಸಮಯಪ, ೧೦. ೧೫೪)

ಱೞ

ೞ ಎಂಬ ಅಕ್ಷರ (ಅತಿಪೀಡನದಿಂ ರೇಫಾಶ್ರಿತಮಾದ ಱಕಾರಮುಂ ಸಮಂತು ಡಕಾರಾಶ್ರಿತಮಾದ ಱೞನುಂ ಅಂಗೀಕೃತಪದಲತ್ವಕ್ಕೆ ಸಮನೆ ಸಲ್ಲದ ಕುಳನುಂ: ಶಬ್ದಮದ, ೨೮)

ಱಾಟಣ

ಬಾವಿಯಿಂದ ನೀರೆತ್ತುವ ಗಾಲಿ (ಅತತ್ವದೊಳ್ ನಿಲಿಸದ ಭಾವಂ ಅೞಸದ ಪುದ್ಗಳಂ ಇಲ್ಲೆನೆ ಕರ್ಮಬಂಧದಿಂ ಬಲವರುತಿರ್ಪ ಱಾಟಣದ ಗುಂಡಿಗೆಯಂತಿರೆ: ಸುಕುಮಾಚ, ೫. ೩೨)

ಱಾಟಳ

ಱಾಟಣ (ಮಲಜಯವಾರಿಯಿಂ ಕುಳಿರ್ವ ಬಾವಿಗಳಲ್ಲಿ ಮೃಣಾಳದಂಡಮಂಡಲಿಗಳ ದಂಡತೋರಣಕದಿಂ .. .. ಸಮೆದಾಡುವ ಱಾಟಳಂಗಳಂ: ಕಾದಂಬ, ೭. ೨೧)

ಱುಂಜೆ

ಒಂದು ಚರ್ಮವಾದ್ಯ (ಪೊಯ್ವ ಎಕ್ಕವದ್ದಳೆಯ ದನಿಯುಂ ಉದ್ದುವ ಱುಂಜೆಯು ರವಮುಂ .. .. ನೆರಪೆ .. .. ನರಕಮಥನಂ ಬರ್ಪಂ: ನೇಮಿನಾಪು, ೮. ೭೫ ವ)

ಱುಂಜೆವಾರಿಸು

ಱುಂಜೆಯನ್ನು ಬಾರಿಸಿದಂತೆ ಹೊಡೆ (ಅವಂದಿರ್ .. .. ಆ ಮುನಿಯ ತಲೆಯನಂಜದೆ ಱೆಂಚೆವಾರಿಸಿ ಪೋಪುದುಂ: ಕರ್ಣನೇಮಿ, ೧೪. ೭೦ ವ)

ಱೆಂಚೆ

ಅಂಬಾರಿ (ಸಿಂಧುರದೊಳ್ ಱೆಂಚೆಯುಮಂ ಮಲಂಗಿ ಜಿನನಾಥಂಗಿಕ್ಕಿದರ್ ಚಾರುಚಾಮರಮಂ ನಿಂದು ಸತನ್ಕುಮಾರನುಂ ಅತರ್ಕ್ಯೋತ್ಸಾಹಿ ಮಾಹೇಂದ್ರನುಂ: ಅನಂತಪು, ೫. ೩೫)

ಱೆಂಚೆಯ

ಆನೆಕುದುರೆಗಳ ಪಕ್ಕರಕ್ಕೆ (ಹಮ್ಮಿದ ಗುಳದ ಹೂಡಿದ ಱೆಂಚೆಯದ .. .. ನಿಂದ ಗಜಘಟಾಪಟಲದೊಳಂ: ಗಿರಿಜಾಕ, ೬. ೫೫ ವ)

ಱೆಪ್ಪು

ಏಟುಕೊಡು (ಱೆಪ್ಪು ಪ್ರಹರಣೇ: ಶಬ್ದಮದ, ಧಾ ೪೭೦)

ಱೊಂಕಿಡು

ಗುಟುರು ಹಾಕು (ಅದಿರದಿದಿರಾಂತು ಱೊಂಕಿಟ್ಟೊದರುತ್ತುಂ ಬರ್ಪ ಕಾಡ ಕೋಣನ ಗೋಣಂ ಮದಯುತನೊರ್ವಂ ತಱದಿಕ್ಕಿದಂ: ಶಬಶಂವಿ, ೩. ೫೬)

ಱೊಪ್ಪ

ಪ್ರಾಣಿಗಳನ್ನು ಕೂಡಿಹಾಕುವ ಜಾಗ (ಪೆಬುಳಿ ಱೊಪ್ಪವನೊತ್ತುಗೊಂಡವಲ್ಲಲ್ಲಿ ಮೃಗಂಗಳುಂ ಮಿಡುಕುಗೆಟ್ಟಿರುತಿರ್ದುದು ಕೂಡೆ ಬೇಂಟೆಯೊಳ್: ಸೂಕ್ತಿಸುಧಾ, ೩. ೧೧೭); ಗಲಭೆ (ಕೆಲವು ಪದಂಗಳ್ ನಿತ್ಯದಿಂ ದ್ವಿತ್ವಂಗಳಪ್ಪುವವರ್ಕೆ ಪ್ರಯೋಗಂ: ಱೊಪ್ಪಂ {=ಗಲಭೆ]: ಶಬ್ದಮದ, ೪೬ ವೃತ್ತಿ ೪೫)

ಱೊಪ್ಪಂಗೊಳ್

ನೆಲೆ ಬೇಡು (ಬಸಿಱ ಕುತ್ತದಂತೆ ನಮೆಯಿಸುವುದು ಪಂದಿಯಂತೆ ಱೊಪ್ಪಂಗೊಳಿಸುವುದು ಕೃಷ್ಣಪಕ್ಷದಂತೆ ಶುಭಮನೊಲ್ಲದು: ಧರ್ಮಾಮೃ, ೪. ೧೦೬ ವ)

ಱೊಪ್ಪು

ಗರ್ಜಿಸು (ಮಲೆವ ಮರಲ್ವ ಱೊಪ್ಪುವ ಮಲಂಗುವ ಪೊಂಗುವ ತಳ್ತು ಪಾಯ್ವ .. .. ಸೂಕರನಾಟಮದು ಏನಳುಂಬಮೋ: ಶಬರಶಂ, ೪. ೧೨)

ಱೊಬ್ಬು

ಚೂರು, ಹಳುಕು (ಯಕ್ಷಕರ್ದಮದ ಸಾರವಣೆಯಿಂ ಬಿಡುಮುತ್ತಿನ ರಂಗವಲಿಯಿಂ ಸುರತರುಕುಸುಮದ ಪೂವಲಿಯಿಂ ಱೊಬ್ಬಿನ ಸೊಡರ್ಗುಡಿಯಿಂ: ಅಜಿತಪು, ೩. ೧೧ ವ)

ಱೋಡಗತನಂಗೆಯ್

ಗೇಲಿ ಮಾಡು (ಅದಂ ಕ್ರಕಚಂ ಕಂಡು ಏಂ ಗಡ ಭಾವಾ! ನೀನಿದೇಂ ನಿಂದಲ್ಲಿ ಱೋಡಗತನಂಗೆಯ್ದಾಡುತಿರ್ಪೆ: ಪಂಚತಂತ್ರ, ೪೦೪ ವ)

ಱೋಡಾಡಿಸು

ಗೇಲಿಮಾಡು (ಸಿಂಹಮಂ ನಾಯ್ ಕೆಣಕಿತೆಂಬ ಶರಭನನೆರಲೆ ಱೋಡಾಡಿಸಿತೆಂಬ ಮಾತಿನಂತೆ: ಧರ್ಮಾಮೃ, ೧೩. ೭೬ ವ)

ಱೋಡಾಡು

ಹೀಯಾಳಿಸು, ಗೇಲಿ ಮಾಡು (ನಿಮ್ಮಡಿಯಂ ಏಕಪ್ರಕಾರದಿಂ ಱೋಡಾಡಿ ಬಯ್ಯುತ ಎನ್ನಂ ಬರಲೀಯದೆ ಕಾಡುತ್ತಿರ್ದ ಕಾರಣದಿಂ ಇನ್ನೆಗಂ ತಡೆದೆಂ: ಪಂಚತಂತ್ರ, ೧೪೬ ವ)
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App