भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567892324Next >

ರಂಕು

ಮಚ್ಚೆಗಳಿರುವ ಜಿಂಕೆ (ಪರಿಣತ ರಂಕು ರೋಮತತಿ ಪಾಂಡುರಂ ಅಂದು ಶಶಾಂಕಮಂಡಲಂ: ಕಾದಂಬ, ೧. ೧೧೪)

ರಕ್ಕಸಪಾರ್ವ

ಬ್ರಹ್ಮರಾಕ್ಷಸ (ಪಿಶಾಚಾನಿವಹಮನಡಗುಣಿಮೆಂದು ನವವೇದಮಂ ಪೇೞ್ವರಲ್ಲಿರಕ್ಕಸಪಾರ್ವರ್: ಗದಾಯು, ೪. ೪೦)

ರಕ್ಕಸವಡೆ

[ರಕ್ಕಸ + ಪಡೆ] ರಾಕ್ಷಸ ಸೈನ್ಯ (ಮೂಱುಂ ಯೋಜನದಳವಿಯ ಸಭಾಮಂಟಪಮನೊಂದು ಲಕ್ಕ ರಕ್ಕಸವಡೆಯಿಂ ಪೊತ್ತು ತರಿ: ಪಂಪಭಾ, ೬. ೨ ವ)

ರಕ್ಕಸಿ

ರಾಕ್ಷಸಿ (ರಕ್ಕಸಿಯರ ಕಂಡು ಕುಂಬಳದ ಮಾರ್ೞಕೆವೊಲಾಗಿರೆ ಮಾಡದಿರ್ಪಿರೇ: ಪಂಪಭಾ, ೯. ೪೮)

ರಕ್ಕಸಿಯರ ಕಂಡ ಕುಂಬಳ

ರಾಕ್ಷಸಿಯರ ದೃಷ್ಟಿ ಬಿದ್ದ ಕುಂಬಳ, ಹೊರಗೆ ಸರಿಯಾಗಿ ಕಾಣಿಸಿದರೂ ರಾಕ್ಷಸಿಯ ದೃಷ್ಟಿ ಬಿದ್ದು ತಿರುಳು ಕೊಳೆತಿರುವ ಹಾಗೆ (ಪೊಱಗಣ್ಗೆ ಸಯ್ದರೆನೆ ತಾವೊಳಗಂ ತವೆ ತೋಡಿ ತಿಂದು ರಕ್ಕಸಿಯರ ಕಂಡ ಕುಂಬಳದವೊಲಾಗಿರೆ: ಪಂಪಭಾ, ೯. ೪೮)

ರಕ್ಕೆ

[ರಕ್ಷೆ] ಭಯನಿವಾರಣೆಯ ಯಂತ್ರ (ವಿಭೂತಿಗೊಂಡು .. .. ರಾಜ್ಯದ ವಿಭೂತಿಗೆ ನೆಟ್ಟನೆ ರಕ್ಕೆಗಟ್ಟುವಂತಿರೆ ಫಣೆಯಲ್ಲಿ ಪೂಸಿ: ತ್ರಿಷಷ್ಟಿಪು, ೧೭. ೧೭೯)

ರಕ್ಕೆವಣಿ

[ರಕ್ಷಾಮಣಿ] ಕ್ಷೇಮಕ್ಕಾಗಿ ಕಟ್ಟುವ ಮಣಿ (ರಂಜಿಪ ನೂಲ ರಕ್ಕೆವಣಿಗಳ್ ಚೆಲ್ವಾಗೆ .. .. ವಕ್ತ್ರೆಂದುವಂ ಅಂಜನಾಂಕಿತಮಂ ನಾನಿನ್ನೆಂದು ಪೇೞ್ ಕಾಣ್ಬೆನೋ: ಕಾದಂಬ. ೨. ೫೬)

ರಕ್ಕೆವೊಟ್ಟು

ದೃಷ್ಟಿಬೊಟ್ಟು (ಲೋಕಲೋಚನಪರಿಪಾತದೋಷ ಕಾರಣದಿಂದ ಅವಳಿಟ್ಟ ರಕ್ಕೆವೊಟ್ಟೆನೆ ನಸುಗರ್ಪು ಕಣ್ಗೊಳಿಸಿದತ್ತು ಕುಚಚೂಚುಕಂಗಳೊಳ್: ಶಾಂತೀಶ್ವಪು, ೪. ೨೬)

ರಕ್ತ

ಕೆಂಪು ಬಣ್ಣ (ಅರುಣಂ ಶೋಣಂ ಕೋಕನದ ರುಚಿ ರಕ್ತಂ ದು ಲೋಹಿತಂ ಸಂಧ್ಯಾಭಂ: ಅಭಿಧಾವ, ೨. ೧. ೬೪); ನೆತ್ತರು (ಕ್ಷತಜಂ ರುದಿರಂ ಅಸೃಕ್ ಲೋಹಿತಂ ಅಸ್ರಂ ಶೋಣಿತಾಖ್ಯಮೆಂಬುದು ರಕ್ತಂ: ಅಭಿಧಾವ, ೧. ೧೨. ೨೭); ಅನುರಾಗವುಳ್ಳವನು (ಕೆಂಪೇಱೆ ನೈಜಾಂಶುರಕ್ತಂ ಣಗಣಂ ತತ್ಸೀಕರಂಬೊಲ್ ಮೆಱೆಯೆ: ರಾಜಶೇವಿ, ೬. ೨೮)

ರಕ್ತಕಂಠೀಜನ

ಇನಿದನಿಯ ಸ್ತ್ರೀಯರು (ಗೀತಾರಾವದಿಂದಂ ನೆಱೆಯೆ ನೆಱಗೊಳಲ್ ರಕ್ತಕಂಠೀಜನಂ ಬಂದಿರೆ ವಂದಿವ್ರಾತಮೆತ್ತಂ ಬಗೆಗೊಳಲಿರೆ ಚೆಲ್ವಾದುದಾಸ್ಥಾನರಂಗಂ: ಆದಿಪು, ೨. ೩)

ರಕ್ತಕಂಠೀಜನ

ಇನಿದನಿಯ ಸ್ತ್ರೀಯರು (ಗೀತಾರಾವದಿಂದಂ ನೆಱೆಯೆ ನೆಱಗೊಳಲ್ ರಕ್ತಕಂಠೀಜನಂ ಬಂದಿರೆ ವಂದಿವ್ರಾತಮೆತ್ತಂ ಬಗೆಗೊಳಲಿರೆ ಚೆಲ್ವಾದುದಾಸ್ಥಾನರಂಗಂ: ಆದಿಪು, ೨. ೩)

ರಕ್ತತುಳುಂಕು

ಕೋಪದಿಂದ ಕೆಂಪಾಗು (ಉಮ್ಮನೆ ಬೆಮರುತ್ತುಂ ಇರ್ದ ದುಶ್ಶಾಸನನುಮಂ ಕಣ್ಕೆತ್ತಿ ಕಿಱುನಗುವ ಕೂರದರ ಮೊಗಮುಮಂ ತಮ್ಮಣ್ಣನ ಬಿನ್ನನಾದ ಮೊಗಮುಮಂ ಕಂಡು: ಪಂಪಭಾ, ೭. ೫ ವ)

ರಕ್ತತೆ

ಕೆಂಬಣ್ಣ (ತುಂಬಿದ ರಕ್ತತೆಯಿಂ ನಿಜಬಿಂಬಂ ವಾರುಣಿಯನೊಸೆದು ಸೇವಿಸೆ ನಾಣ್ಗೆಟ್ಟಂಬೋಲ್ ತೇಜಂ ಮಸುಳ್ವಿನಂ ಅಂಬರಮಂ ಬಿಸುಟಂ ಆಗಳಂಬುಜಮಿತ್ರಂ: ಪಂಪಭಾ, ೩. ೨೩)

ರಕ್ತಪಂಕರುಹ

ಕೆಂದಾವರೆಯ ಕೊಳ (ರಕ್ತಪಂಕರುಹದೊಳಿರ್ಪ ಸದ್ವರಟೆಯಂತೆ .. .. ತತ್ ಕಮಲಾಕ್ಷಿಯೊಪ್ಪಿದಳ್: ಉದ್ಭಟಕಾ, ೫. ೫೬)

ರಕ್ತಮೋಕ್ಷ

ರಕ್ತದ ಬಿಡುತೆ (ವೃಕೋದರನಿಂ ಆ ರಣರಂಗದೊಳಾದ ದುಷ್ಟದುಶ್ಶಾಸನ ರಕ್ತಮೋಕ್ಷದೊಳೆ ದೋಷವಿಮೋಕ್ಷಂ ಅದೇಕೆ ಕೊಂಡಪೈ: ಪಂಪಭಾ, ೧೩. ೬೮)

ರಕ್ತರುಚಿ

ಕೆಂಪು ಕಾಂತಿ (ಇತ್ತ ವಂದ ಸಂಧ್ಯಾಸಮಯಾತ್ತ ರಕ್ತರುಚಿ ಪಿಂಗೆ: ಪಂಪಭಾ, ೩. ೮೧)

ರಕ್ತಾಂಭೋಜ

[ರಕ್ತ+ಅಂಭೋಜ] ಕೆಂದಾವರೆ (ಯೋಗಾಭ್ಯಾಸದೊಳ್ ಅರೆಮುಗುಳ್ದ ರಕ್ತಾಂಭೋಜದಳ ವಿಳಾಸ ಉಪಹಾಸಿಗಳಪ್ಪ ಕಣ್ಗಳಂ ಒತ್ತಂಬದಿಂ ತೆಱೆದು: ಪಂಪಭಾ, ೧೩. ೬೩ ವ)

ರಕ್ತಾಶೋಕ

ಕೆಂಪು ಅಶೋಕವೃಕ್ಷ (ಆ ಕಾಂತೆಯ ಮೃದುಪದತಳ ಕೋಕನದಂ ತನ್ನ ರುಚಿಯಿಂ ಒದವಿಸೆ ರಾಗೋದ್ರೇಕಂ ಅದೆಂತು ರಕ್ತಾಶೋಕದ ತಳಿರೊಳ್ ವಿರಾಗಮಂ ಪುಟ್ಟಿಸುಗುಂ: ಮಲ್ಲಿನಾಪು, ೩. ೪೨);

ರಕ್ಷಾಮಣಿ

ಕಾಪಾಡುವ ವ್ಯಕ್ತಿ (ಶ್ರೀಜೈನಧರ್ಮೋನ್ನತಿಯ ಮಹಿಮೆಯಂ ಭಕ್ತಿಯಂ ಕಾವ ರಕ್ಷಾಮಣಿಯುಂ .. .. ಶ್ರೀ ದಾನಚಿಂತಾಮಣಿಯೆ: ಅಜಿತಪು, ೧೨. ೧೪)

ರಕ್ಷಾಮರಿ

[ರಕ್ಷಾ+ಅಮರಿ] ರಕ್ಷಿಸುವ ದೇವತೆ (ಎಳೆಮಿಂಚುಂ ಸಿಡಿಲುಂ ಬಂದೆಳಸಿದ ಘನಮಾಳೆ ರಂಜಿಪಂಜಿಪ ತೆಱನಂಲಳಿತಮಂ ರಕ್ಷಾಮರಿಯರಂ ತಳೆದರ್ ಭುಷಣದ ಬಾಳ ಪೊಳೆಪುಗಳಿಂದಂ: ಪುಷ್ಪದಂಪು, ೯. ೬೯)
< previous1234567892324Next >

Search Dictionaries

Loading Results

Follow Us :   
  Download Bharatavani App
  Bharatavani Windows App