भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಯುಗಳ

ಜೋಡಿ (ಸುರುಚಿರ ಮಧುಕರಕಿಶೋರ ಯುಗ್ಮಮದೆಂಬಂತಿರೆ ಕರ್ಣಂಗಳೊಳ್ ಎಸೆದುವು .. .. ಕುಂಡಲಯುಗಳಂ: ತ್ರಿಷಷ್ಟಿಪು, ೧೮. ೪೪)

ಯುಗಾಂತ

ಯುಗದ ಕೊನೆ, ಪ್ರಳಯ (ಲಯಸಮಯಮ ಸಮಸಂಸಪ್ತಿ ಯುಗಾಂತಂ ವಿಳಯಂ ಅಂತಕಾಲಂ ಕಲ್ಪಕ್ಷಯಂ ಉಪಸಂಸೃತಿ ಸಗಾತ್ಯಯಂ ಮಹಾಪ್ರಳಯಂ ಎಂಬುದದು ಸಂವರ್ತಂ: ಅಭಿಧಾವ, ೧. ೨. ೧೭)

ಯುಗಾಂತವಾತ

ಪ್ರಳಯಕಾಲದ ಗಾಳಿ (ಅಂತು ಯುಗಾಂತ ವಾತಾಹತಿಕುಲಗಿರಿಯೆ ನೆಲೆಯಿಂ ತಳರ್ವಂತೆ ತಳರ್ದು ಧ್ವಾಂಕ್ಷಧ್ವಜಂ: ಪಂಪಭಾ, ೧೨. ೧೩೬ ವ)

ಯುಗಾದಿ

[ಯುಗ+ಆದಿ] ಕಾಲಘಟ್ಟದ ಆರಂಭ (ಈ ಯುಗಾದಿಯೊಳ್ ಆದಿದಾನತೀರ್ಥ ಪ್ರವರ್ತನೈಕಪುಣ್ಯ ಭಾಜನನೈ ನೀಂ: ಆದಿಪು, ೦. ೧೩ ವ)

ಯುಗಾವಸಾನ

ಯುಗಾಂತ (ಯುಗಾವಸಾನ ಮಹಾಂಭೋಧಿ ವೇಲಾಕಲ್ಲೋಲವಿಲಾಸಮುಲ್ಲಾಸಪ್ರತಿಭಾಸಮುಮಂ ಕಿೞ್ಪಡಿಸಿದ ವಿದ್ಯಾಧರರಾಜನ: ಶಾಂತಿಪು, ೪. ೬೬ ವ)

ಯುಗ್ಮ

ಜೋಡಿ, ದಂಪತಿ (ಸುರುಚಿರ ಮಧುಕರಕಿಶೋರಯುಗ್ಮಮದೆಂಬಂತಿರೆ ಕರ್ಣಂಗಳೊಳ್ ಎಸೆದುವು .. .. ಕುಂಡಲಯುಗಳಂ: ತ್ರಿಷಷ್ಟಿಪು, ೧೮. ೪೪)

ಯುದ್ಧಮಲ್ಲ

ಪಂಪನು ಹೇಳುವ ಚಾಳುಕ್ಯವಂಶದ ಮೊದಲ ರಾಜ (ಶ್ರೀಮಚ್ಚಳುಕ್ಯವಂಶ ವ್ಯೋಮಾಮೃತಕಿರಣನೆನಿಪ ಕಾಂತಿಯನೊಳಕೊಂಡೀ ಮಹಿಯೊಳಾತ್ಮ ವಂಶಶಿಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗೞ್ದಂ: ಪಂಪಭಾ, ೧. ೧೫)

ಯುದ್ಧಸನ್ನದ್ಧ

ಯುದ್ಧಮಾಡಲು ಸಿದ್ಧನಾದವನು (ಚಕ್ರವರ್ತಿ ಯುದ್ಧಸನ್ನದ್ಧನಾಗಿ ಸಮಸ್ತಸಾಮಗ್ರೀಸಹಿತಂ ಶಿಬಿರದಿಂ ಪೊಱಮಟ್ಟು: ಶಾಂತಿಪು, ೫. ೫೦ ವ)

ಯುಯು

ಕುದುರೆ, ಅಶ್ವಮೇಧದ ಕುದುರೆ (ಯುಯುವೆಂಬುದು ಅಶ್ವಮೇಧದ ಹಯಮುಂ ಸಾಮಾನ್ಯ ಹಯಮುಂ ಅಕ್ಕುಂ: ಅಭಿಧಾವ, ೩. ೧. ೧೩೧)

ಯುವ

ಕಿರುವರೆಯದ (ರಾಜಹಂಸಂ ಪೊಱಗಾದ ಯುವ ರಾಜಹಂಸಪ್ರಕಾರದಿಂದಂ ಬಂದು: ಶಾಂತಿಪು, ೧. ೯೩ ವ); ತರುಣ (ನವವಯಸಂ ಯುವಂ: ಆಭಿಧಾವ, ೧. ೧೧ ೨೭)

ಯುವತಿ

ತರುಣಿ (ಒಪ್ಪುವ ಪತಿಯ ಹಾನಿವೃದ್ಧಿಯೆ ಯುವತಿಯರೊಳಮಕ್ಕುಮೆಂಬುದದು ತಕ್ಕುದೆ ದಲ್: ಪಾರ್ಶ್ವನಾಪು, ೮. ೧೦೮)

ಯುವರಾಜ

ರಾಜನ ಬಳಿಕ ಪಟ್ಟಕ್ಕೆ ಬರುವವನು (ಯುವರಾಜಕಂಠಿಕೆವೊಲಾಯ್ತು ಎಡೆಗೊಟ್ಟು ನಿಂದ ಷಟ್ಪದಗುಣಮುಂ ಪ್ರಸೂನಭರಮುಂ ಮಕರಂದ ಗುಣಾಭಿಶೋಭಿತಂ: ಅಜಿತಪು, ೬. ೩೫)

ಯುವಾಧಿಪ

ಯುವರಾಜ (ಬಿಲ್ಲ ಬಿನ್ನಣಮನಾ ರಣದೊಳ್ ಮೆಱೆದಂ ಯುವಾಧಿಪಂ: ಚಂದ್ರಪ್ರಪು, ೬. ೩೬)

ಯುವಾನ

ಯುವಕ (ಬಂದಂ ಅದೊರ್ವಂ ಒಂದು ಬಿಲ್ವಿಡಿದು ಯುವಾನಂ ಅಲ್ಲಿಗೆ: ನೇಮಿನಾಪು, ೬. ೫೦)

ಯುಷ್ಮತ್

ನಿಮ್ಮ (ಚಟ್ಟನಾಗಲ್ ನಿನಗೆ ಬಗೆದೆ ಯುಷ್ಮತ್ ವಿಷ್ವದ್ಧ್ವಂಸನೆಂ ಕಂಸನೆಂ: ನೇಮಿನಾಪು, ೬. ೫೧)

ಯೂಥ

ಗುಂಪು, ಹಿಂಡು (ತನ್ನಳಿಯನನೆಯ್ದೆ ಪಾಲಿಸುಗೆ ಬಂದಿದನೀಗಳನಾಥಯೂಥಮಂ: ಆದಿಪು, ೪. ೮೪)

ಯೂಥಪತಿ

ಗುಂಪಿನ ನಾಯಕ (ಪಿಱದು ಪೊೞ್ತಂ ವನಪ್ರಚಾರದೊಳ್ ಅಲಸಿದ ನದೀಚರನಪ್ಪ ಯೂಥಪತಿಯಂತೆ ವನವಿಹಾರದೊಳ್ ಅಲಸಿ ಬಂದು ಕಾವಣಂ ಪುಗೆ: ಶಾಂತಿಪು, ೮. ೨೩ ವ)

ಯೂಥಿಕಾ[ಕೆ]

ಕಾಡಮಲ್ಲಿಗೆ (ಮತ್ತಂ ಜತಿ ಯೂಥಿಕಾ ಮಲ್ಲಿಕಾ ಮಾಲತೀ ಲತಾಮಂಟಪಂಗಳೊಳ್ ನೆರೆದು: ರಾಜಶೇವಿ, ೨. ೭೬ ವ)

ಯೂಧ

ಯೂಥ (ಆತಪತ್ರಪಾಂಡುರಮಯಂ ಅಂತರಿಕ್ಷಂ ಇಭಯೂಧಮಯಂ ದೆಸೆ: ಕಾದಂಸಂ, ೨, ೫೯)

ಯೂಧಪತಿ

ಸಲಗ (ಕಳಭಂ ವನಪಥಮಂ ಯೂಧಪತಿಗೆ ತೋರ್ಪಂತಕ್ಕುಂ: ಆದಿಪು, ೮. ೧೨

Search Dictionaries

Loading Results

Follow Us :   
  Download Bharatavani App
  Bharatavani Windows App