भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಡ್ಡಿಸು

ಬಡಿಸು, ಊಟಕ್ಕೆ ನೀಡು (ಮಗಮಗಿಪ ಮಣಿಸರವಳಿಗೆಯ ಪಾಯಸಮಂ ಅಸದಳಂ ಬಡ್ಡಿಸಿದರ್: ಶಾಂತೀಶ್ವಪು, ೧೫. ೫೭)

ಬಣಗು

ಕ್ಷುದ್ರ (ಪಣಮಿಲ್ಲದೆ ಅಟಮಟಿಸುವ ಬಣಗುಗಳಂ ನೆವವನಿಟ್ಟು ಬಿಟ್ಟು: ಉದ್ಭಟಕಾ, ೧೦. ೬೬)

ಬಣಂಬೆ

ಬಣಬೆ, ಮೆದೆ (ನೆತ್ತರ ತೊಱೆಯುಂ ನೇಣದ ಪಳ್ಳಂಗಳುಂ ಪೆಣದ ಬಣಂಬೆಗಳುಂ ಕೋೞದುಳ ಕೋರ್ೞಕೆಸಱುಂ ಅಗುರ್ವುವಡೆಯೆ: ಪಂಪರಾ, ೧೩. ೫೪ ವ)

ಬಣ್ಣ

ರಂಗು (ಶುಭಲಕ್ಷಣಾಂಕಿತಮಾಗಿ ಕೆಂದಾವರೆಯ ಬಣ್ಣದಂತಪ್ಪ ತಳಮುಮಂ ಕಂಡು: ವಡ್ಡಾರಾ, ಪು, ೧೪೮, ಸಾ. ೧೮); ಸೀರೆ (ಪಳಂಚಿದ ಬಣ್ಣಂಗಳುಂ ಎಸೆಯೆ ಸೊಗಯಿಸುವ ನಿಜವಧೂಜನಂ ಬೆರಸು: ಪಂಪಭಾ, ೫. ೬೬ ವ); ವರ್ಣಚಿತ್ರ (ಅಂತೋಲಗಂಗೊಟ್ಟು ಕುಳ್ಳಿರ್ದ ಭಿತ್ತಿಯೊಳ್ ಅಂದಂಬಡೆವಂತು ಬಚ್ಚಿಸಿದ ಬಣ್ಣಂಗಳಂ ಬೇಱೆವೇಱೆ ನೋಡಿ ಮೆಡಚ್ಚುತಿರ್ಪಾಗಳ್: ಕಬ್ಬಿಗಕಾ, ೬೬ ವ); ವಸ್ತ್ರ (ದೆಯ್ವದ ಜನ್ನಿಗೆಯುಮಂ ಆ ದೆಯ್ವದ ಬಣ್ಣಮುಮಂ .. .. ಕಳ್ಳರ್ ಕೊಂಡೊಯ್ವಲ್ಲಿ ಕಾಯಲಾಱದ ದೆಯ್ವಂಗಳ್: ಸಮಯಪ, ೯. ೧೦೫)

ಬಣ್ಣವಣ್ಣಿಗೆ

ನಾನಾ ಬಣ್ಣಗಳಿಂದ ಕೂಡಿದುದು (ಚೆಂಬೊನ್ನ ಪರಿಯಣದ ಬಳಸಿ ಬಣ್ಣವಣ್ಣಿಗೆಗಳೊಳಾದ ಉಪದಂಶಂಗಳ್ ತುಱುಗಿದವು ಪತ್ರಶಾಕಂಗಳ್ ಇಷ್ಟತುಷ್ಟಿಕರಂಗಳ್; ಸುಕುಮಾಚ, ೧೧. ೨೯); ಬಣ್ಣ ಹಚ್ಚುವುದು (ಬಣ್ಣದ ಕಣದ ಬಣ್ಣವಣ್ಣಿಗೆಯ ಜವಳಿಗಳನೆ ಮೊಗಂ ನೋಡದೆ ಸೂಸಿದಾಗರ್ಳ: ಆದಿಪು, ೪. ೩೪ ವ)

ಬಣ್ಣವಳಿ

[ಬಣ್ಣ+ಅಳಿ] ಕಳೆಗುಂದು (ಪಣ್ಣ ಬಾಯಿನಮಂ ಬಣ್ಣವಳಿಯದೆ ಕೊಟ್ಟು ಚೂತವಲ್ಲಭನೆಂಬ ಪೆಸರಿಟ್ಟು: ಗಿರಿಜಾಕ, ೨. ೭೧ ವ)

ಬಣ್ಣವಾಸಿಗ

ಬಣ್ಣದ ಹೂಗಳ ಬಾಸಿಗ, ಮಾಲೆ (ನಮೇರುಮಂದಾರಪಾರಿಜಾತದ ಬಣ್ಣವಾಸಿಗಂಗಳುಂ: ಆದಿಪು, ೨. ೬೭ ವ)

ಬಣ್ಣವುರ

[ವರ್ಣಪೂರ] ಬಣ್ಣದ ರಂಗೋಲಿ, ಬಣ್ಣಬಣ್ಣದ ಬಟ್ಟೆ (ಬಣ್ಣವುರಂ ತೀವಿದಂತೆ ಬೆಡಂಗುವಡೆದ ಬಣ್ಣವಣ್ಣಿಗೆಯ ನೀರ್ವೂಗಳ ರಜಂಗಳುಮಂ: ಕಾದಂಬ, ೯. ೧೧ ವ)

ಬಣ್ಣಸರ

ಬಣ್ಣಬಣ್ಣದ ಮಣಿಗಳ ಸರ (ಬಣ್ಣಸರಂಗೊಂಡಂತಿರೆ ಬಣ್ಣಸರಂ ಸೊಗಯಿಸಿದುದು ಏನವಳ್ ಪರಿಣತೆಯೋ: ಆದಿಪು, ೯. ೩೧)

ಬಣ್ಣಸರಂಗೊಳ್

ಬಣ್ಣಬಣ್ಣದ ಸರವನ್ನು ತೆಗೆದುಕೊ (ಬಣ್ಣಸರಂಗೊಂಡಂತಿರೆ ಬಣ್ಣಸರಂ ಸೊಗಯಿಸಿದುದು ಏನವಳ್ ಪರಿಣತೆಯೋ: ಆದಿಪು, ೯. ೩೧)

ಬಣ್ಣಸರಂಗೋ

ಬಣ್ಣ ಬಣ್ಣದ ಮಣಿಗಳನ್ನು ಪೋಣಿಸು (ಜೈನರಲ್ಲದರ್ ಬಣ್ಣಬಣ್ಣಸರಂಗೋದಂತೆ ಧರ್ಮಶಾಸ್ತ್ರಂ ಪೇೞ್ವರ್: ಸಮಯಪ, ೧೪. ೧೩೩)

ಬಣ್ಣಿಗೆಗಯ್ದು

ವಿವಿಧಾಯುಧ (ಓರೋರ್ವರಂ ಬಣ್ಣಿಗೆಗಯ್ದುವಂ ಪಿಡಿದು ನಾರಕರೋವದೆ ಕುತ್ತಿ ಕೊಯ್ದೊಡಂ: ಪಾರ್ಶ್ವನಾಪು, ೬. ೯೩)

ಬತ್ತ

ನೆಲ್ಲು (ಅಗ್ಗದ ಬತ್ತದ ಪೆವರ್ವೆಳಸಿಂದೆ .. .. ದೊರೆವೆತ್ತುದು ವೆಂಗಿಮಂಡಲಂ: ಅಜಿತಪು, ೧. ೨೨)

ಬತ್ತಂಗುಟ್ಟು

ಹೊಟ್ಟು ತೆಗೆಯಲು ಬತ್ತ ಕುಟ್ಟು (ಬತ್ತಂಗುಟ್ಟುವಂತೆ .. .. ದರ್ಶನಮುಂ ನಿಶ್ಶಂಕೆಯುಂ ಎಂಬೆರಡುಮಂ ಲೇಢಸು ಮಾಡುವುದು: ಧರ್ಮಾಮೃ, ೨. ೨ ವ)

ಬತ್ತಲೆಗ

ದಿಗಂಬರ ಸನ್ಯಾಸಿ (ತಲೆವಱದುಟ್ಟುದಿಕ್ಕಿ ಸುರಲೋಕಸುಖಂಗಳನುಣ್ಬೆವೆಂಬ ಬತ್ತಲೆಗರ ಮಾತುಗೇಳದಿರು: ಆದಿಪು, ೨. ೯)

ಬತ್ತಿ

[ವರ್ತಿ] ದೀಪದ ಉರಿಯುವ ಹತ್ತಿಯ ಎಳೆ (ಸೊಡರೊಳ್ ಬತ್ತಿಯುಂ ಎಣ್ಣೆಯುಂ ಒಡನೞದವೊಲ್ ಆಯುವುಂ ಶರೀರಮುಂ ಅಮಳಂ: ಶಾಂತಿಪು, ೯. ೧೧೮)

ಬತ್ತುಗೆ

ಬತ್ತುವಿಕೆ, ಒಣಗುವಿಕೆ (ಸುರಿವ ಬಾಷ್ಪಜಳಂ ಕರುಣಾರ್ದ್ರಹಾರವಂ ಬಳೆಯಿಸೆ ಬಾಯಿ ಬತ್ತುಗೆನಿಂತೆರ್ದೆಗೆಟ್ಟೞುತುಂ .. .. ಬಿೞ್ದಳಂದಜಿತಸೇನೆ: ಚಂದ್ರಪ್ರಪು, ೫. ೧೧)

ಬತ್ತುಂಬಯ

ಹಾಲು ಬತ್ತಿಹೋದ ಹಸು (ಬಕಾರಕ್ಕೆ: ಬತ್ತುಂಬಯಂ ಒತ್ತುಂಬಳ್ಳಿ ಅಟ್ಟುಂಬರಿ: ಶಬ್ದಮದ, ೧೮೧, ಪ್ರ ೪)

ಬಂದ

[?ವರ್] ಚಿಗುರಿದ (ಮೃದುಮಧುರಸ್ವನಂ ನೆಗೞೆ ಬಂದ ಎಳಮಾವಿನೊಳಿರ್ದು ಕೂಡೆ ಪಾಡಿದುದು ಮದಾಳಿಮಾಲೆ: ಪಂಪಭಾ, ೧೪. ೧೨); ಫಲಬಿಟ್ಟ (ಮಧುಮಾಸದ ಗೋಸನೆ ತುಂಬಿಯಿಂಚರಂ ಬಂದ ಎಳಮಾವಿನೇೞ್ಗೆ: ಕಾದಂಸಂ, ೭. ೧೪)

ಬಂದ ಕರ್ಬು

ಬಲಿತ ಕಬ್ಬು (ಕಾಯ್ತು ಕರೆವಂತಿರ್ದತ್ತು ಚೆಂದೆಂಗು ಸಾರಲೆವಂತಿರ್ದುದು ಬಂದ ಮಾವು: ಆದಿಪು, ೧೧. ೬೮)

Search Dictionaries

Loading Results

Follow Us :   
  Download Bharatavani App
  Bharatavani Windows App