भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಡವು

ಬಡವಾಗಿರುವುದು, ಕೃಶವಾಗಿರುವುದು (ದೇವ, ನಿಮ್ಮ ಕೋಪಮುಂ ಪ್ರತಾಪಮುಂ ಎಮ್ಮಂದಿಗರಪ್ಪ ಬಡವುಗಳ್ಗಲ್ಲದೆ ಪೆಱರ್ಗಿಲ್ಲ: ಪಂಚತಂತ್ರ, ೧೪೫ ವ)

ಬಡಹ

ಜಡಿಮಳೆ (ಪೋದುದು ಆಗಳಂತೆಡೆವಿಡಿದಿರ್ದ ಶಕ್ರಧನುವಾ ಬಡಹಂ ಬರೆ ಮೇಘ ಕಾಲದೊಳ್: ಕುಸುಮಾಕಾ, ೬. ೩೪)

ಬಂಡಳಿಸು

ಮಾತಾಡು (ಅರಗಿಳಿವಿಂಡು ಬಂಡಳಿಪ ಸಾರಿಕೆ ಚಾವಳಿಪುನ್ಮದದಾಳಿ ಗಾವರಿಸುವ ಸೋಗೆ ಕೇಗುವ .. .. ಬನಮೊಪ್ಪಿದುದು: ಪುಷ್ಪದಂಪು, ೧೪. ೨೩)

ಬಂಡಾಡು

[ಬಂಡು+ಆಡು] ಮಕರಂದ ಹೊಮ್ಮು (ಬಂಡಾಡೆ ಮೇಲೆ ಮಧುಕರಮಂಡಳಿಗಳ್ ಬಿಟ್ಟು ಮಿಳಿರ್ವ ಮಡದಿಯ ಮುಡಿ ಮಾರ್ಕೊಂಡುದು ಕಾರ್ಮುಗಿಲಡಿಯೊಳ್ ತಾಂಡವಮಂ ಮೆಱೆವ ಸೋಗೆನವಿಲ ಬೆಡಂಗಂ: ಆಚವರ್ಧ, ೫. ೫೫)

ಬಂಡಾರ

{ಭಂಡಾರ] ರಾಜನ ಬೊಕ್ಕಸ (ಎಲ್ಲಮಂ ಬಂಡಾರಂ ಪೊಕ್ಕವೆಂದುಂ ಪೊಱಮಡವೆಂದುಂ ಜಡಿದು ಬಗ್ಗಿಸಿಕೊಂಡುಣೆ: ವಡ್ಡಾರಾ, ೨೨, ೭)

ಬಂಡಿ

ಗಾಡಿ ಬಂಡಿಗಳೊರ್ಳ ಪೞಯಂ ಧಾನ್ಯಮಂ ತೀವಿಕೊಂಡು ಪೊೞಲ್ಗೆ ಮಾಱಲೆಂದು ಪೋಪನ್ನೆಗಂ: ವಡ್ಡಾರಾ, ಪು. ೭೬, ಸಾ. ೧೦)

ಬಡಿ

ಗದೆ (ಬಡಿಗೊಳೆ ಬಿದು ಬಿಬ್ಬರಬಿರಿದು ಒಡನುಗೆ ಪೊಸಮುತ್ತು ಕೋಡನೂಱ ಮದೇಭಂ ಕೆಡೆದುವು: ಪಂಪಭಾ, ೧೦. ೧೦೩); ಬಡಿಗೆ, ದೊಣ್ಣೆ (ಬಡಿ ಕೊಳೆ ಕಾಯುಂ ಪಣ್ಣುಂ ಪಱದು ಉದಿರ್ವ ಮಾೞ್ಕೆಯಿಂ ಕಿಱವಿರಿಯರ್ ಮಡಿವರಂ ಅನುಕ್ರಮದಿಂ ಸಾವೊಡರಿಸುವುದಲ್ತೆ ಕದಳೀಘಾತಂ: ಪಂಪರಾ, ೧. ೮೩); ಏಟು ಕೊಡು (ಬಡಿ ತಾಡನೇ: ಶಬ್ದಮದ, ಧಾ ೩೩೨)

ಬಡಿಗಂಡನಿಲ್ಲ ಪಾಲನೆ ಕಂಡಂ

[ಬಡಿ+ಕಂಡನಿಲ್ಲ] ಬಡಿಗೆಯನ್ನು ಕಾಣಲಿಲ್ಲ ಹಾಲನ್ನು ಮಾತ್ರ ಕಂಡ ಎಂಬ ಗಾದೆ, ಮುಂದಿನ ಅಪಾಯವನ್ನು ಅರಿಯದೆ ಇಂದಿನ ತಾತ್ಕಾಲಿಕ ಲಾಭಕ್ಕೆ ಮರುಳಾದ ಎಂಬರ್ಥ (ಜೂದಿನ ಗೆಲ್ಲದೊಳಾದೀ ಮೇದಿನಿಯಂ ಕಂಡು ಕಜ್ಜಮಂ ಕಾಣದೆ ದುಜ್ಜೋದನಂ ಅದೇನದೇಂ ಮರುಳಾದನೊ ಬಡಿಗಂಡನಿಲ್ಲ ಪಾಲನೆ ಕಂಡಂ: ಪಂಪಭಾ, ೭. ೧೯)

ಬಡಿಗೆ

ಕೋಲು, ದೊಣ್ಣೆ (ಬಡಿವ ಬಡಿಗೆಗಳೆ ಕೋಳೊಳ್ ತೊಡೆಯದು ಸಲೆ ಪೊಟ್ಟಿಗೊಡೆದು ಕಡಿವಡೆದೆತ್ತಂ: ಸುಕುಮಾಚ, ೫. ೧೫)

ಬಡಿಗೆಕಾಱ

ದಂಡಧಾರಿ (ಮುಂತಣ ಮಾವಂತರ ಪಿಂತಣ ಬಡಿಗೆಕಾಱರ ನಡುವಣ ವೀರ ಜೋದರ .. .. ಕೋಳಾಹಳದಬ್ಬರದುಬ್ಬರಮಾಗೆ: ಗಿರಿಜಾಕ, ೬. ೫೫ ವ)

ಬಡಿಗೊಳ್

ಪೆಟ್ಟು ತಿನ್ನು (ಬಡಿಗೊಂಡು ಮಸಗಿ ಬೈತ್ರಮನೊಡೆವ ಮಹಾಮಕರದಂತೆ ಕರಿಘಟೆಗಳಂ ಆರ್ದುಡಿಯೆ ಬಡಿದು: ಪಂಪಭಾ, ೧೨ ೭೮)

ಬಡಿಗೋಲ್

ಹೊಡೆಯಲು ಬಳಸುವ ಕೋಲು (ಪೇಱನ ಮೇಲೆ ಪಾಸಱೆ ಏಱನ ಮೇಲೆ ಬಡಿಗೋಲ್ ಕೊಲೆಯ ಮೇಲೆ ಕವರ್ತೆಯೆಂಬಂತೆ: ಧರ್ಮಾಮೃ, ೧. ೧೬೨ ವ)

ಬಡಿತಂಗಾಸು

ಬಡಿಯಲು ಹದವಾಗಿ ಕಾಯಿಸು (ಬಾೞೆವಾೞೆ ತಿದಿಯುಗಿವರುಂ ಮಿಡುಮಿಡುಕೆ ಬಡಿತಂಗಾಸುವರುಂ: ಆದಿಪು, ೫. ೮೫ ವ)

ಬಡಿವೆಱು

ಏಟು ತಿನ್ನು (ಊರ ಸೀರೆಗಗಸಂ ಬಡಿವೆತ್ತನೆನಿಪ್ಪ ಜನರ ನಾೞ್ನುಡಿ ನಿನಗೆ: ಜಗನ್ನಾವಿ, ೬. ೭)

ಬಡಿಸು

ಊಟಕ್ಕಿಡು (ನೆಟ್ಟನೆ ತಾಂ ಸವಿಯೊಳೊಂದಿರೆ ಭೋಜನಮನಟ್ಟು ಬಡಿಸು ನಾಮಱಯದೆನಸುಂ ಸವಿಯಂ: ಕವಿರಾಮಾ, ೨. ೧೫೭)

ಬಡಿಹ

ಪೆಟ್ಟು (ಮಕ್ಕಳಂತೆ ಅೞಲ್ವೆಯೊಳಂ ನೀರ್ ಮುಟ್ಟಿದ ಕೆಂಡದಂತೆ ಉಪಶಮದೊಳಂ .. .. ನೆರೆದಿರ್ಪುದುಂ: ಧರ್ಮಾಮೃ, ೫. ೮೩ ವ)

ಬಂಡು

ಹೂವಿನ ಮಕರಂದ (ಓಗರವೂಗಳ ಬಂಡಂ ಎಯ್ದೆ ಪೀರುತ್ತ ಒಡವಂದುವು ಇಂದ್ರವನದಿಂ ಮಱದುಂಬಿಗಳ್; ಪಂಪಭಾ, ೧೧. ೮೧)

ಬಂಡುಣ್

ಮಕರಂದ ಹೀರು (ಕೂಡುತಿರ್ಪ ರಥಾಂಗಂ ನಲಿದಾಡಿ ನರ್ತಿಪ ನವಿಲ್ ಬಂಡುಂಬ ಪೆಣ್ದುಂಬಿ: ಸುಕುಮಾಚ, ೧. ೭೩)

ಬಂಡುವೋಗು

ಲಜ್ಜೆಗೊಳ್ಳು (ತಪದಿಂದಂ ಗುಣದಿಂದಂ ಪುರದೊಳ್ ಪಲವು ದಿವಸಂ ಮೆಚ್ಚಾಗಿರ್ದಲ್ಲಿಯೆ ಬಂಡುವೋದೈ: ಧರ್ಮಾಮೃ, ೬. ೮೨ ವ)

ಬಡ್ಡಿಗೊಳ್

ಬಡ್ಡಿಯನ್ನು ಪಡೆ (ಕಾವೇರಿಯ ಕಾಲನಾ ತಿಗುಳನೇಂ ಕಡಗೊಂಡನೊ ಬಡ್ಡಿಗೊಂಡನೋ: ಶಬ್ದಮದ, ೧೭೮, ಪ್ರ ೩)

Search Dictionaries

Loading Results

Follow Us :   
  Download Bharatavani App
  Bharatavani Windows App