भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234Next >

ಡಂಕೆ

ಸರಳು, ಸಲಾಕೆ (ಬೇಗಂ ಮಂಡೆಯನಿರ್ಪೋೞಾಗಿರೆ ಕರ್ಬುನದ ಡಂಕೆಯಿಂ ಪೊಯ್ವುದುಂ: ಧರ್ಮಾಮೃ, ೭. ೬೩)

ಡಕ್ಕೆ

ಒಂದು ವಾದ್ಯ (ತನ್ನ ತೊಡಂಕದು ಎಯ್ದೆ ನೂರ್ಮಡಿ ಮನದೊಳ್ ಪಳಂಚಲೆಯೆ ಡಕ್ಕೆಯೊಳ್ ಅೞ್ಜಜವಾಗೆ ಆಡಿದಳ್: ಪಂಪಭಾ, ೪. ೯೦)

ಡಕ್ಕೆವಾಜಿಸು

ಡಕ್ಕೆಯನ್ನು ಹೊಡೆ (ಆಡುವ ಡಕ್ಕೆವಾಜಿಸುವ ನೋಡುವ ಸಂಗಡಮೊಪ್ಪೆ: ಸೂಕ್ತಿಸುಧಾ, ೪. ೧೪೯); [ಎದೆ] ಡವಡವ ಹೊಡೆದುಕೊ (ನೋಡುವರೆರ್ದೆ ಡಕ್ಕೆವಾಜಿಸುತ್ತಿರ್ಪಿನೆಗಂ: ಆಚವರ್ಧ, ೨. ೨೨)

ಡಕ್ಕೆವಾಯ್

[ಎದೆ] ಡಕ್ಕೆಯಂತೆ ಡವಡವ ಹೊಡೆದುಕೊ (ಕಣ್ಗೆಟ್ಟು ಕೋಟಳೆಗೊಂಡು ಅಳ್ಳೆರ್ದೆ ಡಕ್ಕೆವಾಯ್ದು ಸತಿ ನಿಂದು ಔತ್ಸುಕ್ಯಮಂ ತಾಳ್ದಿದಳ್: ಅನಂತಪು, ೧೧. ೫೬)

ಡಕ್ಕೆವಾಱು

ಡವಡವಗುಟ್ಟು (ಲವಧೃತಿಯಿಲ್ಲದೆ ಒರ್ಮೆಯುಂ ಅರಾತಿಭಯಕ್ಕೆ ಬಿಗುರ್ತು ಡಕ್ಕೆವಾಱುವ ನೃಪಯೂಧವಕ್ಷದೊಳಿರಲ್ಕೆ ಅಣಂ ಒಲ್ಲದೆ .. .. ಅತುಳಲಕ್ಷ್ಮಿ: ಶಾಂತೀಶ್ವಪು, ೪. ೭೯)

ಡಂಗ

ಸುಂಕವಸೂಲಿಗಾಗಿರುವ ಕಾವಲು ಕಟ್ಟೆ (ಪೊಂಗುವ ಮಲೆಪರ ಮಲೆಗಳ ಡಂಗಂಗಳ್ ಮಲೆವ ಮಂಡಲಂಗಳ್ ಪ್ರತ್ಯಂತಗಳ್ ಎನಲ್ ಒಳವೆ ಪಾಂಡವರಂ ಗೆಡೆಗೊಳೆ ನಿನಗೆ ಕುರುಕುಳಾಂಬರಭಾನೂ: ಪಂಪಭಾ, ೯. ೩೯)

ಡಂಗುರಂಬೊಯ್ಲು

ಡಂಗುರ ಸಾರಿಸು (ಕುಮಾರನನೆತ್ತಿದಂಗೆ ಬೇಡಿತ್ತಂ ಕುಡುವೆನೆಂದು ಡಂಗುರಂಬೊಯ್ಸಲೊಡಂ: ಪಂಚತಂತ್ರ, ೧೮೫ ವ)

ಡಂಗೆ

ದೊಣ್ಣೆ, ಕೋಲು (ಕಬ್ಬುನದ ದಬ್ಬಣಂUಳಂ ದಬ್ಬುಕದ ಡಂಗೆಗಳಿಂ ಬೆರಲ್ಗಳೊಳಡಂಗೆ ಬೆಟ್ಟುವುದುಂ ಪಲ್ಗಳಂ ನುರ್ಗ್ಗುಗಟ್ಟುವುದುಂ: ಸುಕುಮಾಚ, ೧೧. ೪೭ ವ)

ಡಗೆ

ಮೋಸ (ಬೀೞ್ವ ಏೞ್ವ ಸುೞವ ಸುತ್ತುವ ಡಗೆಯಂ ತರಹರಿಪ ಸಾರ್ವ ಪಾರ್ವ ಅಬ್ಬರಿಪ ಎಸಕಂ ಮೀಱ ಕಾದಿದರ್ ಕಡುಗಲಿಗಳ್: ಶಬರಶಂ, ೪. ೭೬)

ಡಂಗೆಗೊಳ್

ಹಟಹಿಡಿ (ಪರಮಾರ್ಥಮಪ್ಪುದಂ ಮಚ್ಚರಿಸದೆ ಕೋಪಿಸದೆ ಡಂಗೆಗೊಳ್ಳದೆ: ಧರ್ಮಾಮೃ, ೧. ೧೩೭); ಬಡಿಗೆಯನ್ನು ತೆಗೆದುಕೊ (ಡಂಗೆಗೊಂಡು ಬಡಿಯಲ್ ಚಲದಿಂದೆನಸುಂ ದುರಾಗ್ರಹಂ ಚಿತ್ತದೊಳಾಗೆ: ಕಾವ್ಯಾವಲೋ, ೪೫೧)

ಡಂಗೆಯಂಗೊಳ್

ಬಡಿಗೆಯನ್ನು ತೆಗೆದುಕೊ (ಡಂಗೆಯಂಗೊಂಡು ಕೆಂಗಲ್ಮಸಗಿ ಪರಿವ ಮರುಳ್ಗಲಿಗಳುಂ: ಲೀಲಾವತಿ, ೫. ೧೧೪ ವ)

ಡಂಬ

ತೋರಿಕೆ, ಮೋಸ (ಸತ್ತನೆ ಮತ್ತೆ ಪುಟ್ಟುವಂ ಗಡ ಪುಸಿ ಕಾಣ ಡಂಬವಿದು ಖೇಚರ ನೀನಿದನೆಂತು ನಂಬಿದೋ: ಆದಿಪು, ೨. ೮)

ಡಂಬಕ

ಮೋಸಗಾರ (ತಮತಮಗೆ ಡಂಬಕರ್ ಬಲ್ಲೆವೆಂದು ಛಿದ್ರಿಸಲೆ ವಾಜವಶ್ಯವಯಸ್ತಂಭಮಂ: ಸಮಯಪ, ೧೨. ೪೦)

ಡಂಬನ

ಮೋಸ, ವಂಚನೆ (ಅನಂಗವಿಕಾರಂ ಉಬ್ಬೆಗಂ ಕಲುಷತೆ ಡಂಬನಂ ಕುಟಿಲವೃತ್ತಿ ಅಸೂಯೆ .. .. ದುರ್ಜನ ಗುಣಂಗಳೆ ನಲ್ಮೆಗೆ ಕೆಡ ತಪ್ಪುದು: ಅನುಭವ, ೮೬)

ಡಂಬರ

ಚೆಲುವು (ಚಿತ್ತಜನ ಡಂಬರಮಂ ತಳೆದು ಆ ಕುಮಾರಕಂಗೆ ಅಳಿಕುಳ ಕುಂತಳಂ ಪೊಳೆಯೆ: ಕರ್ಣನೇಮಿ, ೩. ೧೮೧)

ಡಂಬಲ

ಹುಚ್ಚಾಟ (ತರುಣಿ ಪೋಗದಿರೆನುತುಂ ಬೆಂಬತ್ತಿ ನಡೆದು ಕಾಣದೆ ಡಂಬಲನಂ ನೋಡಿ ಮುಗ್ದೆ ನಗಿಸಿದಳಾಗಳ್: ಗಿರಿಜಾಕ, ೪. ೨೯)

ಡಂಬಿಸು

ಮೋಸಮಾಡು (ಚಿತ್ರಕಥೆಗಳಂ ಪಟದೊಳ್ ತೋಱ ಪೇೞ್ದು ಲೋಗರಂ ಡಂಬಿಸಿ ಮಾಱುಗೊಳ್ವ ಬತ್ತಮಂ ಕಳ್ವೊಂ: ವಡ್ಡಾರಾ, ಪು ೧೪, ಸಾ ೧೯)

ಡಂಭತನ

ಸೋಗು (ಗೋವನಂ ಪಿಡಿದು ಸುರತಕ್ರೀಡೆಯಾಡುವುದಂ ನಾರಾಯಣಭಟ್ಟಂ ಕಂಡಾ ಪಾಣ್ಬೆಯ ಡಂಭತನಕ್ಕೆ ಬೆಱಗಾಗಿ: ಪಂಚತಂತ್ರ, ೩೨೩ ವ)

ಡಮರುಗ

ಒಂದು ಚರ್ಮವಾದ್ಯ (ಮಕಾರಕ್ಕೆ ವತ್ವಂ: ಡಮರುಕಂಡವರುಗಂ: ಶಬ್ದಮದ, ೨೭೭ ಪ್ರ)

ಡವಕೆ

ಪೀಕದಾನಿ, ಕಾಳಾಂಜಿ (ನೂಱೆಂಟುಂ ಕರಣಮುಮಂ ಅವಳ ಡವಕೆಯ ಪರಿಚಾರಿಕೆಯಱಗುಂ ಆಕೆಗವು ತೊಡರ್ವೆಡೆಯೇ: ಆದಿಪು, ೯. ೨೯); ಡಮರುಗ ಎಂಬ ಒಂದು ವಾದ್ಯ (ಪಿರಿದುಮೆರ್ದೆ ಡವಕೆ ವಾಜಿಸುತಿರೆ ಭಂಗಂಬೆತ್ತು ಹಾರಲತೆ ಘನಕುಚದೊಳ್ ಕರವಿಕ್ಷೇಪದೆ ನರ್ತಿಸೆ ನರೇಂದ್ರನಂದನನನೊಲ್ದು ನೋಡಿದಳೊರ್ವಳ್: ಕಾದಂಬ, ೩. ೨೮)
< previous1234Next >

Search Dictionaries

Loading Results

Follow Us :   
  Download Bharatavani App
  Bharatavani Windows App