भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

ಟಂಕ

; ಕುದುರೆ ಲಾಳ; ಕಲ್ಲು ಕೆತ್ತುವ ಚಾಣ, ಉಳಿ (ಆಕರ್ಣಾಕೃಷ್ಟ ಉತ್ಸೃಷ್ಟನಿಜವಿಕೀರ್ಣ ಟಂಕಂಗಳಿಂದಂ: ಆದಿಪು, ೧೪. ೧೦೩ ವ); ಕಲ್ಲು ಕೆತ್ತುವ ಚಾಣ, ಉಳಿ (ಆಕರ್ಣಾಕೃಷ್ಟ ಉತ್ಸೃಷ್ಟ ನಿಜ ವಿಕೀರ್ಣಟಂಕಂಗಳಿಂದಂ ತತ್ಪತಾಕಿನೀಕುಂಜರ ಶಿರಶ್ಶಿಳಾ ಪಟ್ಟಕಂಗಳಂ ಇರ್ಬಗಿಮಾಡಲ್ಪಡದೆಯುಂ: ಆದಿಪು, ೧೪. ೧೦೩ ವ); ಬೆಟ್ಟದ ಇಳಿಜಾರು (ಮಾದ್ಯತ್ ಗಜಗಂಡಕಷಣಪ್ರೋದ್ಭೇದದಿಂ ಸಾರ್ದು ಬಂದು ಇದಿರೊಳ್ ಕೂಡುವುದಿಲ್ಲಿ ಚಂದನರಸಂ ಕೆಂಬೊನ್ನ ಟಂಕಂಗಳೊಳ್: ಪಂಪಭಾ, ೪. ೨೨)

ಟಂಕಾರ

ಬಿಲ್ಲಿನ ಠೇಂಕಾರ (ಬಿಲ್ಲನೇಱಸಿ ಟಂಕಾರವಗುರ್ವುವಡೆಯೆ ಜೇವೊಡೆದು: ಪಂಪರಾ, ೯. ೫೭)

ಟಕಾರಿ

ತೋರಣ ಸಾರಮಂ ಕಿಱುಮಿಡಿಗೆತ್ತು ಸಾರಿಕೆ ಟಕಾರಿಯ ಮಾಣಿಕವಟ್ಟೆಯಂ ಪಿಕಂನಿಱದಳಿರ್ಗೆತ್ತು ಲಂಬಣದ ಮುತ್ತುಗಳಂ ಮೞೆಗೆತ್ತು ಚಾತಕಂ: ಅನಂತಪು, ೬. ೪೩)

ಟಂಕಾಹತಿ

ಚಾಣದ ಪೆಟ್ಟು (ಕರಿಸೇನಾಕರಲೂನವೈರಿ ವನದುರ್ಗವ್ರಾತನಶ್ವಾವಳೀಖುರ ಟಂಕಾಹತಿ ಪಾತಿತಾರಿಗಿರದುರ್ಗವ್ರಾತಂ: ಚಂದ್ರಪ್ರಪು, ೪. ೨೭)

ಟಂಕಿತ

ಮುದ್ರಿಸಿದ (ಅನೇಕ ಮಣಿ ಕೂಟಕೋಟಿ ವಿಟಂಕ ಟಂಕಿತ ವಿಯತ್ತಳಂಗಳುಂ: ಪುಷ್ಪದಂಪು, ೨. ೭೫ ವ)

ಟಂಕೃತಿ

ಟಂಕಾರ ಅಅತಿಮೃದುಪುಷ್ಪಚಾಪದಳಿನೀಗುಣ ಟಂಕೃತಿರಾವಂ ಆಗಮಾಮೃತ ಪರಿಪೂರ್ಣಕರ್ಣಯುಗನಂ ಸಲೆ ಕೇಳಿಸದೆ: ಚಂದ್ರಪ್ರಪು, ೧. ೨೬)

ಟಂಕೋತ್ಕೀರ್ಣ

ಚಾಣದಿಂದ ಕೆತ್ತಿದುದು (ಅಪ್ರತಿಹತದಿಗ್ವಿಜಯಪ್ರಶಸ್ತಿಯಂ ಟಂಕೋತ್ಕೀರ್ಣಂ ಮಾಡಿ: ಆದಿಪು, ೧೪. ೫೯ ವ)

ಟಕ್ಕ

ಠಕ್ಕ, ಮೋಸಗಾರ (ನೀನಿಂದೆನ್ನ ಮನೆಗೆ ಬಾರದಂದು ನಿನ್ನ ಕೆಳೆ ಟಕ್ಕರ ಕೆಳೆಯಂತಕ್ಕುಮಲ್ಲದೆ ತಕ್ಕರ ಕೆಳೆಯಂತೊಪ್ಪಲಱಯದು: ಪಂಚತಂತ್ರ, ೧೯೬ ವ)

ಟಕ್ಕನಿಕ್ಕು

ಎಚ್ಚರ ತಪ್ಪಿಸುವ ಮದ್ದನ್ನಿಡು (ಅವರ ಕಪಟವೃತ್ತಿಯನಱಯದೆ ಉಂಡು ಸೊಕ್ಕಿ ಮೆಯ್ಯಱಯದೆ ಟಕ್ಕನಿಕ್ಕಿದಂತು ಕೆಡೆದು ನಿರೆಗೆಯ್ದುದುಂ: ಧರ್ಮಾಮೃ: ೧೧. ೮೭ ವ)

ಟಕ್ಕವಿದ್ಯೆ

ಮೋಸದ ವಿದ್ಯೆ (ಟಕ್ಕವಿದ್ಯೆಯೊಳ್ ತೊಡರದು ಕೂಡೆ ಪುಂಜಿಸಿದ ವಾಙ್ಮಯರತ್ನಚಯಂ ಜಿನೇಶನಾ: ಸಮಯಪ, ೨. ೨೧)

ಟಕ್ಕು

ಠಕ್ಕು, ಮೋಸ (ತದೆದುಂ ಒದೆದುಂ ಅಂತಕವದನಾಂತರದೊಳ್ ತೂಂತದೆ ಟಕ್ಕಿಂ ಪೊರೆದವೊಲ್ ಇಂತೇಕೆ ನಿಂದಂ: ಆಚವರ್ಧ, ೨. ೫೨)

ಟಕ್ಕುವಗೆ

[ಟಕ್ಕು+ಬಗೆ] ಮೋಸದ ಬುದ್ಧಿ (ಆ ಲಾಕ್ಷಾಗೃಹದಾಹಮೊಂದೆ ವಿಷಸಂಯುಕ್ತಾನ್ನಂ ಅಂತೊಂದೆ ಪಾಂಚಾಲೀನಿಗ್ರಹಂ ಒಂದೆ ಟಕ್ಕುವಗೆಯಿಂ ಗೆಲ್ದಿರ್ದ ಜೂದೊಂದೆ: ಪಂಪಭಾ, ೯. ೨೨)

ಟಡಂ ತಟಿ

ದಡಿ: ಶಬ್ದಮದ, ೨೬೯ ಪ್ರ); ಅನುರೂಪ (ಆಮೋದ ಮುದಿತ ಮಧುಕರ ದಾಮಕದೊಳ್ ನೀಲರತ್ನ ದಾಮಂ ಮಲ್ಲೀದಾಮಕದೊಳ್ ಮುಕ್ತಾಫಳದಾಮಂ ತಡವಾದುವೊಡನೆ ಮಣಿಮಂಡಲದೊಳ್: ಪಂಪರಾ, ೫. ೧೧೫); ಆಧಾರ (ತಡದಿಂ ಕಿತ್ತು ಅಡಿಯಡಂಬುದಡಿಗಿಡೆ ಪೊಕ್ಕು .. .. ಪೊಯ್ದರ್: ಗದಾಯು, ೮. ೧೬)

ಟಮಾಳ

ಮೋಸ (ದುರ್ವಿಮಂತ್ರಮಂ ಪರೆಪ ಟಮಾಳಮಂ ಪಿರಿದಂ ಓದಿದೊಡೆ ಅಪ್ಪ ಪದಾರ್ಥಮಾವುದೋ: ಪಂಪಭಾ, ೧೩. ೬೬)

ಟಾಠಡಾಢಣ

ಟವರ್ಗದ ಅಕ್ಷರಗಳು; ಅವುಗಳಂತೆ ನಿಶ್ಚಿತ, ನಿಷ್ಠುರ (ಮೇಣ್ ಎನ್ನ ನುಡಿ ಟಾಠಡಾಢಣಂ ಎನ್ನಂ ಬೆಸಸುವುದು ರಾಜಸೂಯಂ ಬೇಳಲ್: ಪಂಪಭಾ, ೬. ೨೬)

ಟಿಟ್ಟಿಭ

ಒಂದು ಹಕ್ಕಿ (ಸಮುದ್ರದ ತೀತೈಕಪ್ರದೇಶದೊಳ್ ಮಧುರಾಲಾಪೆಯುಂ ಚಂಡಪರಾಕ್ರಮಂ ಎಂಬ ಟಿಟ್ಟಿಭಮಿಥುನಂ ಸುಖದಿನಿರ್ದು: ಪಂಚತಂತ್ರ, ೨೧೪ ವ)

ಟೀಕು

ವ್ಯಾಖ್ಯಾನ (ಲೋಕಕ್ಕಿದು ಅರ್ಥಶಾಸ್ತ್ರದ ಟೀಕೆನಿಸಿದ ತನ್ನ ನುಡಿ ಮನಂಗೊಳಿಸೆ: ಪಂಪಭಾ, ೯. ೧೪)

ಟೆಕ್ಕೆಯ

ಧ್ವಜ (ನನೆಯೆಸಳಂದಮಾದ ಗುೞಮುಂ ಪೊಳೆಯುತ್ತಿರೆ ನೀಳ್ಪುವೆತ್ತ ಪೂವಿನ ಪೊಸ ಟೆಕ್ಕೆಯಂ ಮಿಳಿರೆ ಪಕ್ಕದ ಕೋಗಿಲೆಯೆಂಬ ಗಂಟೆಗಳ್ ದನಿಗುಡೆ: ಕಬ್ಬಿಗಕಾ, ೧೬೫)

ಟೆಂಟಣಿಸು

ವಿರೋಧಿಸು (ತಾಂ ಟೆಂಟಣಿಸದೆ ಬಲ್ವಿಡಿದಂ ಮೀಂಟುಂಜವ್ವನಿಗನಾ ನುಡಿಗಳಂ ಮನದೊಳ್: ಉದ್ಭಟಕಾ, ೧೧. ೪೪)

ಟೆಂಠಣಿಸು

ದ್ವೇಷಿಸು (ಸೆಣಸಲ್ ಮಾರ್ಮಲೆಯಲ್ ಬೆಸಕ್ಕೆ ಬೆಸೆಯಲ್ ದಂಡೋಪನತ್ಯಕ್ಕೆ ಟೆಂಠಣಿಸಲ್; ಶಾಂತಿಪು, ೯. ೧೮೫)
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App