भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಚ್ಚಾರವ

ಪುಂಗಿಯ ನಾದ (ಮಾಗಧಾಮರಂ ವಿನಮಿತಸರ್ವಾಂಗಂ ಚಚ್ಚಾರವಕೆ ಭುಜಂಗನ ಕೊರಲಂತೆ ಬಾಗಿದಂ: ಆದಿಪು, ೧೨. ೧೧೧)

ಚಟಾಚ್ಛಾಟನ

ಜುಟ್ಟಿನ ಮಿಡಿತ (ನಿಶಿತ ಅಸಿಪತ್ರಪತಿತ ಪ್ರಚಂಡ ಸುಭಟ ಮಸ್ತಕೋಚ್ಚಳಿತ ಚಟಾಚ್ಛಾಟನ ದುರ್ನಿರೀಕ್ಷ್ಯ: ಪಂಪಭಾ, ೧೩. ೫೧ ವ)

ಚಟಾರಿಸು

ವಂಚಿಸು (ದಾನಕ್ಕೆ ಕೊಟ್ಟುದಂ ನೆರೆ ತಾನಿಕ್ಕದೆ ಋಷಿಯರಂ ಚಟಾರಿಸಿ ಬಯ್ತು .. .. ಪೆಂಡಿರಸುಗತಿಗಿಳಿವರ್: ಸಮಯಪ, ೫. ೧೦೧)

ಚಟುಳ

ಚಂಚಲ; ಚುರುಕುತನ (ಚಟುಳಚಳತ್ ಮೀನೋಏನಪ್ರತಾನಂ ಶುಂಭತ್ ಗಂಭೀರಮಂ ರಂಜಿಸಿದುದು: ರಾಜಶೇವಿ, ೧. ೯೦)

ಚಟುಳತೆ

ಚುರುಕುತನ (ನಡೆಯೆ ಚಟುಳತೆಗೆ ಕಣೆಯಂ ಸಡಿಲ್ದೊಡೆ ಅದಂ ಎಡದ ಕೆಯ್ಯೊಳ್ ಓಸರಿಸುತ್ತುಂ ನಡೆದು ಗವಾಕ್ಷಂಬರಂ ಓಗಡಿಸದೆ ನವವರನಂ ಅಬಲೆ ನೋಡಿದಳೊರ್ವಳ್: ಶಾಂತಿಪು, ೬. ೯)

ಚಟುಳಿತ

ಚಲಿಸುವ (ಘಟೆಯ ದೞದ ಉಲಿವು ಲಯಘನಘಟೆಗಳ ಮೊೞಗೆನಿಸೆ ಪೊಟ್ಟಗೆ ಒಡೆದತ್ತು ರಟತ್ ಪಟು ಪಟಹ ಶಂಖ ಭೇರಿಯ ಚಟುಳಿತದಿಂದ ಅತಳಪಟಂ ಅಂಬರಪಟಳಂ: ಪಂಪಭಾ, ೧೦. ೬೭)

ಚಟೂಕ್ತಿ

ಪ್ರಿಯವಾದ ಮಾತು (ಖಚರರಾಜಪುತ್ರಿಯಂ .. .. ಚಟೂಕ್ತಿಯಿಂ ಮೆಚ್ಚಿಸುತ್ತುಂ: ಆಚವರ್ಧ, ೬. ೯ ವ)

ಚಟೂರಿಸು

ಎದುರಿಗೇ ಹೊಗಳು (ಮಾನ್ಯರ್ ಎಲ್ಲ ತೆಱದಿಂದ ಪೊಕ್ಕು ನಿನ್ನಂ ಚಟೂರಿಸದಂತಾಗಿರೆ .. .. ಆತ್ಮವಂತಂ ಎನಿಸು: ಕಾದಂಬ, ೩. ೧೦೪)

ಚಟ್ಟ

[ಛಾತ್ರ] ಶಿಷ್ಯ (ನಿನ್ನಂ ಅನಾಕುಳಂ ಎನ್ನ ಚಟ್ಟರಿಂ ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆವೊತ್ತೆನೇ: ಪಂಪಭಾ, ೨. ೫೦)

ಚಟ್ಟಿಱ

(ಚಟ್ಟಿಱದು ಘಟಮನರ್ಚಿಸಿ ನೆಟ್ಟನೆ ಪೊಸ ಪೂಗಳಿಂದಮನಿತುಮಂ: ಕುಸುಮಾಕಾ, ೧೧. ೧೫೮)

ಚಟ್ಟು

ಮಲ್ಲಯುದ್ಧದಲ್ಲಿ ಒಂದು ವರಸೆ (ಪಾಸಗೆವನ್ನಿಮುಟ್ಟಿ ಚಟ್ಟು ಸಿರಣವಟ್ಟಿ ಬಾಹುದಣೆ ಖಮ್ಮರಿ .. .. ಜೆಟ್ಟಿಗನ ನಚ್ಚಿನ ಬಿನ್ನಣಮೊಪ್ಪೆ ಕಾದಿದರ್: ಚಂದ್ರಪ್ರಪಪು, ೫. ೭೮)

ಚಂಡ

ಬಲಿಷ್ಠವಾದ (ಚಂಡವಿರೋಧಿಸಾಧನ ತಮಸ್ತಮಮೋಡೆ: ಪಂಪಭಾ, ೧. ೩)

ಚಂಡಕರ

ಉರಿವ ಕಿರಣ[ಉಳ್ಳವನು] ಸೂರ್ಯ (ಶ್ರೀದಯಿತಂ ಎಮಗೆ ಮಾೞ್ಕೆ ಶುಭೋದಯಮಂ ದುಶ್ವರಿತ್ರತಮ ಚಂಡಕರಂ: ಸಮಯಪ, ೧೪. ೧)

ಚಂಡಣೆಗುಡು

ನಾಟ್ಯದ ಒಂದು ಭಂಗಿ (ಜತಿಯಂ ನಡೆಯಿಪುದು ಕಿತ್ತು ಚಂಡಣೆಗುಡುವುದು ನಚ್ಚಣಿಯರಾಟಮೇನಚ್ಚರಿಯೋ: ಚಂದ್ರಪ್ರಪು, ೧೫. ೭೫)

ಚಂಡಮರೀಚಿ

ಸೂರ್ಯ (ಚಂಡಮರೀಚಿಗೆ ಅಸ್ತಮಯಮಿಲ್ಲದುದು ಪಂದೆಡೆ ನಿಮ್ಮ ಕೇಳ್ದುದುಂ ಕಂಡುದುಂ ಉಳ್ಳೊಡೆ ಇಂ ಬೆಸಸಿಂ ಆಂ ಇರದೆ ಅಲ್ಲಿಗೆ ಪೋಪೆವು: ಪಂಪಭಾ, ೪. ೪೮)

ಚಂಡಮಾರಿ

ಒಬ್ಬಳು ಕ್ಷುದ್ರ ದೇವತೆ (ಪಾಪಕಳಾಪಂಡಿತೆ ಚಂಡಮಾರಿ ದೇವತೆಯಿರ್ಪಳ್: ಯಶೋಧಚ, ೧. ೩೪)

ಚಂಡರುಚಿ

ಸೂರ್ಯ (ತಚ್ಛಶಿ ಪಲವು ಯೋನಿಯೊಳ್ ನಿಂದು ಅಶಾಂತಮತಿ ಚಂಡರುಚಿ ನಿಶಾಚರನಾದಂ: ಚಂದ್ರಪ್ರಪು, ೫. ೮೮)

ಚಂಡರೋಚಿ

ಪ್ರಖರ ಕಿರಣಗಳುಳ್ಳವನು, ಸೂರ್ಯ (ಪತ್ತಿ ಶಸ್ತ್ರ ದ್ಯುತಿಪರಿಕg ಸಾಂದ್ರೀಭವಚ್ಚಂಡರೋಚಿಃಕಿರಣೌಘಂ: ಆದಿಪು, ೪. ೨೪)

ಚಂಡವಿಕ್ರಮ

ಭಯ ಹುಟ್ಟಿಸುವ ಪರಾಕ್ರಮವುಳ್ಳವನು (ಮೇಳಿಸುತುಂ ಚಂಡವಿಕ್ರಮಾಡಂಬರಂ .. .. ಸಾರ್ತಂದು: ಪುಷ್ಪದಂಪು, ೫. ೫೮)

ಚಂಡವೇಗ

ಬಹಳ ವೇಗ (ಆ ಕಾಂತೆ .. .. ಬಾಳಮತ್ತಪರಮುಮಂ ಕೊಂಡು ಚಂಡವೇಗದಿನೆಯ್ದಿ: ಕರ್ಣನೇಮಿ, ೪. ೬ ವ)

Search Dictionaries

Loading Results

Follow Us :   
  Download Bharatavani App
  Bharatavani Windows App