भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚೋದ್ಯಂಬಡು

ಸೋಜಿಗಗೊಳ್ಳು (ಮುನಿಗಣೇಶ್ವರರೊಡನೆ ದಾಳಿವೂಗೊಯ್ವೊಡನೆ ವರ್ಪ ಗೋಳಾಂಗೂಳಂಗಳುಮಂ ನೋಡಿ ತಪೋವನದ ತಪೋಧನರ ತಪಃಪ್ರಭಾವಕ್ಕೆ ಚೋದ್ಯಂಬಟ್ಟು: ಪಂಪಭಾ, ೧. ೧೧೫ ವ)

ಚೋದ್ಯಾವಹ

ಆಶ್ಚರ್ಯಕರವಾದ (ಜಗಕ್ಕತಿ ಚೋದ್ಯಾವಹಮಾಗೆ ಪೆಂಪುವಡೆದತ್ತಂತಾತ್ಮಜನ್ಮೋತ್ಸವಂ: ಆದಿಪು, ೭. ೩೭)

ಚೋರ

ಕಳ್ಳ (ಕುಪಿತ ಅನೇಕಪ ದಂದಶೂಕ ದವ ದೈತ್ಯ ಅರಾತಿ ಚೋರ ಅಂಧಕಾರ ಪತದ್ವಜ ವಿಷ ಅಭಿಚಾರಿಕ ಜರಾತಂಕಾದಿ ಭೇದಂಗಳಪ್ಪ: ಆದಿಪು. ೧೬. ೯)

ಚೋಹ

ವೇಷ (ಪೆಱರ ಬೞಸಂದು ತನ್ನಂ ಮಱೆವಂ ಕವಿಯಲ್ಲಂ ಆಟಕಾಱರ ಚೋಹಂ: ಮಲ್ಲಿನಾಪು, ೧. ೩೨)

ಚೌಕ

ಚತುಷ್ಕೋನಾಕಾರ (ಉಗುರಿಂದಂಟಿ ಬೆಱಂತಿಯನಂಜನಮದಕ್ಕುಂ ಚೌಕಮಂ ಕೀಱುತಂ ತೆಗೆದೆಚ್ಛಾದಿಸೆ ಕೇಳ ನೀಳಪಟಮಕ್ಕುಂ: ಗಿರಿಜಾಕ, ೪. ೭೬)

ಚೌಕಂಡ

[ಚತುಷ್ಕಂಡ] ಮನೆಯ ಚೌಕಾಕಾರದ ತೊಟ್ಟಿ (ಪಳುಕಿನ ಚೌಕಂಡಂಗಳ ಕೆೞಗಣ ಚೆಂಬೊನ್ನ ಮತ್ತವಾರಣದೊಳ್ ಕಣ್ಗೊಳಿಸಿದುದು ಅನೇಕ ದೇಶಂಗಳ ರಾಜತನೂಜರೋಳಿಯಿಂದಿರ್ಕೆಲದೊಳ್: ಪಂಪರಾ, ೩. ೩೭)

ಚೌಕಸತ್ತಿಗೆ

ಚೌಕಾಕಾರದ ಕೊಡೆ(ಸೀಗುರಿಯ ಚೌಕಸತ್ತಿಗೆಯ ಮುತ್ತಿನ ಝಲ್ಲರಿಯ ಮೊತ್ತಮಂ ತುಱುಗಲಾಗಿ ಪಿಡಿಯಿಸಿಯುಂ: ಚಂದ್ರಪ್ರಪು, ೧೨. ೮೩ ವ)

ಚೌಕಿಗೆ

ಮನೆಯ ಅಂಗಳ, ತೊಟ್ಟಿ (ಸೊಂಪಾದ ಪಾದರಿಯ ಚೌಕಿಗೆಗಳೊಳಂ ಬಿಟ್ಟ ಬೀಡಂ ಬರೆದಂತೆ ಕಂಡರಿಸಿದಂತೆ ಕಣ್ಗೆಸೆದಿರ್ದುದು: ಕಬ್ಬಿಗಕಾ, ೧೮೪ ವ)

ಚೌತ

[ಚತುರಸ] ನಿಶ್ಚಿತ (ಮಧುಪಂಗಳ್ ತಮ್ಮೞ್ಕಮೆಯೆ ಚೌತಮಾಗಿರೆ ನೀೞ್ಕರಿಸಿದುವು ಉಂತೆ ಚಂಪಕಕ್ಕೆಱಗದುವೇ: ಆದಿಪು, ೧೧. ೧೧೯); ಕಪ್ಪ, ಕಾಣಿಕೆ (ಅಳಿಗಂತೆನಸುಂ ಚೌತಮನೊದವಿಪುದೆನಿಸುವ ಸಂಪಗೆಯ ಕಂಪು ಪೊಂಪುೞ ಬನದೊಳ್: ಪಾರ್ಶ್ವನಾಪು, ೯. ೧೨)

ಚೌತೆಱ

ನಾಲ್ಕು ರೀತಿ (ಭಾವದೊಳ್ ಪದುಳಮಾಗಿರೆ ಚೌತೆಱನರ್ಥವೃತ್ತಿಯೊಳ್: ಪುಷ್ದಂಪು, ೧. ೩೯)

ಚೌದಂತ

ಚೌಜಂತ, ಐರಾವತ (ಎರಡು ರದನದ ಬೞ ಸಂದುರುಜಳಫೇನವಳಕ್ಷಂ ಕರಮೆಸೆದುದುದು ಒಂದು ದಂತಿ ಚೌದಂತದವೋಲ್: ಶಬರಶಂ, ೩. ೪೪)

ಚೌಪಳಿಕೆ

ಮಂಟಪ (ಕೈಗೆಯ್ದು ಮಹಾವಿಭೂತಿಗಳಿಂ ಬಂದು ತಂತಮ್ಮ ಚೌಪಳಿಕೆಗಳ ಮೇಲೆ ಲೀಲೆಯಿಂದಿರ್ದರ್: ಹರಿವಂಶ, ೨. ೩೦ ವ)

ಚೌಪಳಿಗೆ

ಮಂಟಪ (ಚೌಪಳಿಗೆಯನೇಱದರ್ ಮುಗಿಲನೇಱುವ ಖೇಚರರಾಜರಂದದಿಂ: ನೇಮಿನಾಪು, ೮. ೬೫); ಹಜಾರ (ಗಟ್ಟಿಸಿ ಸೆಂದುರದೊಳ್ ನೆಲಗಟ್ಟಿಸಿ ಚೆಂಬೊನ್ನ ನೆಲೆಯ ಚೌಪಳಿಗೆಗಳೊಳ್ ಕಟ್ಟಿಸಿ ಪೞಯಿಗೆಗಳಂ ಅಳವಟ್ಟಿರೆ ಬಿಯಂ ಅಲ್ಲಿ ಮೊೞಗೆ ಪಲವುಂ ಪಱೆಗಳ್: ಪಂಪಭಾ, ೨. ೬೬)

ಚೌರಿಗೆ

ಚೌಕಿಯ ಮನೆ (ಮುಂದೊಂದೆಡೆಯೊಳ್ ಒರ್ವಂ ಚೌರಿಗೆಯಂ ಪೊಕ್ಕು ಗಣಿಕೆಯಂ ಬಿಡದೆ ಪೊಱಮಡದಿರ್ಪುದಂ ಕಂಡು: ತ್ರಿಷಷ್ಟಿಪು, ೨೪. ೧೮೮ ವ)

ಚೌಲ

ಚೂಡಾಕರ್ಮ (ವಸುಮತಿವೆಸರ್ ಅನ್ವರ್ಥಂ ವಸುಧೆಗೆನಲ್ ಕಱೆದು ಮೞೆಯಂ ದಾನವ್ಯಸನಿ ದಶರಥನದೇಂ ಪೊಸಯಿಸಿದನೊ ಚೌಲೋಪನಯನ ಮಹಿಮೋತ್ಸವಮಂ: ಪಂಪರಾ, ೩. ೧೪೨)

ಚೌವಟ

ನಾಲ್ಕು ಬೀದಿಗಳು ಸೇರುವ ಚೌಕ (ಕರಂ ಚಲದಿಂ ಚೌವಟದೊಳ್ ಪಾಯ್ದು ಅಲಂಘ್ಯಬಲಂ ಅಲ್ಲಿ ಉಗುೞ್ದು ಬಂದಂ ಮದನಂ: ಹರಿವಂಶ, ೯. ೩೮)

ಚೌವಟಮಲ್ಲ

ಮಹಾ ಪರಾಕ್ರಮಿ, ನಾಲ್ಕು ದಿಕ್ಕುಗಳಲ್ಲಿಯೂ ಯುದ್ಧಮಾಡಬಲ್ಲ ವೀರ (ತಲ್ಲಣದಿಂ ಪೆಱದೆಗೆವ ಬಿದಿವೆಡಂಗನೆಂಬ ಬಿಂಜಮಾಣಿಕನೆಂಬ ಹರಿರಾಯನೆಂಬ ತೋರಹತ್ತನೆಂಬ ಚೌವಟಮಲ್ಲನೆಂಬ ಮುಱವ ರಕ್ಕಸನೆಂಬ ರಾಯದೞಸೂಱೆಕಾರನೆಂಬ ತನ್ನೊಡ್ಡಿನ ಪೇರಾನೆಗಳಂ ಕಂಡು: ಕಬ್ಬಿಗಕಾ, ೨೨೩ ವ)

ಚೌವಟ್ಟ

ನಾಲ್ಕು ಬೀದಿಗಳ ಚೌಕ (ನಗರಾಭ್ಯಂತರ ದೇವತಾಭವನದೊಳ್ ಚೌವಟ್ಟದೊಳ್ ಬೀದಿವೀದಿಗಳೊಳ್ .. .. ನೀತಿಗೆಟ್ಟಾಡುವರ್: ಸುಕುಮಾಚ, ೨. ೭)

ಚೌವಂದದ ದೞ

ನಾಲ್ಕು ವಿಧದ ಸೈನ್ಯ (ಸುಗ್ಗಿಯುಂ ಆ ತೆಂಗಾಳಿಯುಂ ಇರ್ವರುಂ ಸಜ್ಜುವಂ ಪಡೆದು ಚೌವಂದದ ದೞಕಂ ಸೆಲವಿತ್ತು ಒಡಗೊಂಡು ಬರೆ: ಕಬ್ಬಿಗಕಾ, ೧೫೩ ವ)

ಚೌವಳಿಗೆ

ಮಂಟಪ (ಕಡೆಯ ಚೌವಳಿಗೆಯೊಳಿರ್ದ ರಾಜಂ ಒರ್ವ ರಾಜಕುಮಾರನ ಮುಂದೆ ಬಾಜಿಸುವ ಪಱೆಯವರಲ್ಲಿಗೆ ವಂದು: ಹರಿವಂಶ, ೫. ೧೨ ವ)

Search Dictionaries

Loading Results

Follow Us :   
  Download Bharatavani App
  Bharatavani Windows App