भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಕ್ರರತ್ನ

[ಜೈನ] ಚಕ್ರವರ್ತಿಯಾಗುವವನ ಆಯುಧಾಗಾರದಲ್ಲಿ ಹುಟ್ಟುವ ಚಕ್ರಾಯುಧ (ನೆಲನಾಕಾಶಂ ದಿಶಾಮಂಡಲಮೆನಿತನಿತುಂ .. .. ಪರ್ವುವುದನಿದುವೆ ಪೇೞ್ದಪುದೆಂಬಂತೆ .. .. ಬೆಳಗಿದುದು ದಿಶಾಚಕ್ರಮಂ ಚಕ್ರರತ್ನಂ: ಆದಿಪು, ೧೧. ೨)

ಚಕ್ರಲಾಭ

[ಜೈನ] ಐವತ್ತಮೂರು ಗರ್ಭಾನ್ವಯಕ್ರಿಯೆಗಳಲ್ಲಿ ಒಂದು; ಚಕ್ರರತ್ನವು ದೊರೆಯುವುದು (ಗೃಹತ್ಯಾಗ ದೀಕ್ಷಾಜಿನರೂಪ ಮೌನಾಧ್ಯಯನ .. .. ಯೌವರಾಜ್ಯ ಸ್ವರಾಜ್ಯ ಚಕ್ರಲಾಭ .. .. ಎಂಬ ಅಯ್ವತ್ತುಮೂಱು .. .. ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಚಕ್ರವರ್ತಿತ್ವ

ಚಕ್ರವರ್ತಿ ಪದವಿ (ಚಕ್ರವರ್ತಿತ್ವಲಕ್ಷ್ಮಿಯಂ ಕಸವಿದು ಎನುತುಂ ಎಂಬಂ ಭವ್ಯಂ: ಸಮಯಪ, ೪. ೨೧)

ಚಕ್ರವಾಕ

ಸದಾ ಜೊತೆಯಾಗಿರುವ [ರಾತ್ರಿಯಲ್ಲಿ ಬೇರೆಯಾಗಿ ವಿರಹ ಅನುಭವಿಸುವ] ಕಲ್ಪನೆಯ ಜೋಡಿಹಕ್ಕಿ (ಚೆಲ್ವುವಿತ್ತಿದುದಯಮಂದು ಪದ್ಮಿನೀಚಕ್ರವಾಳ ಚಕ್ರವಾಕಚಕ್ರ ಚಕ್ರವರ್ತಿಯಾ: ಆದಿಪು, ೧೨. ೫೫)

ಚಕ್ರವಾಕಚಕ್ರವರ್ತಿ

ಚಕ್ರವಾಕಗಳ ದೊರೆ, ಸೂರ್ಯ (ಚೆಲ್ವುವೆತ್ತುದುದಯಮಂದು ಪದ್ಮಿನೀಚಕ್ರವಾಳ ಚಕ್ರವಾಕಚಕ್ರವರ್ತಿಯಾ: ಆದಿಪು, ೧೨. ೫೫)

ಚಕ್ರವಾಕವಧು

ಹೆಣ್ಣು ಚಕ್ರವಾಕ (ಕೊಡೆಯೆಲೆಗಳ ತಿಂತಿಣಿಯಿಟ್ಟೆಡೆಗಳ ಕೞ್ತಲೆಯನಿರುಳೆ ಗೆತ್ತು ಆತ್ಮೇಶಂ ತಡೆದೊಡೆ ನರೇಂದ್ರ ನೋಡೀ ನಡುವಗಲೊಳ್ ಚಕ್ರವಾಕವಧು ವಿರಹಿಸುವಳ್: ಆದಿಪು, ೧೧. ೬೩)

ಚಕ್ರವಾಲ

ಮಂಡಲ (ರಾಘವಂ ಪೋಗೆ ಕಣ್ಗಂ ಬಗೆಗಂ ಇೞಕೆಯಾದತ್ತಾ ಸಭಾ ಚಕ್ರವಾಲಂ: ಪಂಪರಾ, ೬. ೧೫೬)

ಚಕ್ರವಾಳ

ಮಂಡಲ, ಸುತ್ತುವಲಯ (ಚೆಲ್ವುವೆತ್ತುದುದಯಮಂದು ಪದ್ಮಿನೀಚಕ್ರವಾಳ ಚಕ್ರವಾಕಚಕ್ರವರ್ತಿಯಾ: ಆದಿಪು, ೧೨. ೫೫;

ಚಕ್ರವಾಳ

ಮಂಡಲಾಕೃತಿ (ದಿಕ್ ಚಕ್ರವಾಳಾಂತರಮಂ ನೋಡಲ್ಕೆ ನೀಳ್ದಂತಿರೆ ಬೆಳೆದ ಮಹಾಶಾಖೆಗಳ್: ಕಾದಂಸಂ, ೧. ೩೮); ಪರ್ವತಪಂಕ್ತಿ (ಚೆಲ್ವುವೆತ್ತುದುದಯಮಂದು ಪದ್ಮಿನೀ ಚಕ್ರವಾಳ ಚಕ್ರವಾಕ ಚಕ್ರವರ್ತಿಯಾ: ಆದಿಪು, ೧೨. ೫೫)

ಚಕ್ರವಾಳಗದ್ಯ

ಒಂದು ವಿಶಿಷ್ಟ ಬಗೆಯ ಗದ್ಯರಚನೆ (ಮುಕ್ತಪದಗ್ರಹಣ ಚಕ್ರವಾಳಗದ್ಯಂ: ಜಗನ್ನಾವಿ, ೧೨. ೫೭ ವ)

ಚಕ್ರವಾಳರುಚಿ

ಸಮೂಹ ಕಾಂತಿ (ಸಂಚಾರಿತಮೇಚಕಾಚಳ ಚಕ್ರವಾಳರುಚಿ ಹರಿಕರಟಿಘಟಾಪ್ರಪಂಚರಾಗಕೇತನ ಚಂಚಳಾಂಚಳನಿಚಯದಿಂದಂ: ಆದಿಪು, ೧೩. ೭೭ ವ)

ಚಕ್ರವ್ಯೂಹ

ಒಂದು ಬಗೆಯ ಸೇನಾವ್ಯೂಹ (ಇದು ಚಕ್ರವ್ಯೂಹಂ ಈ ವ್ಯೂಹಮಂ ಒಡೆವ ಅದಟಂ ಪಾರ್ಥನಂತೆ ಆತನುಂ ಗೆಂಟಿದಂ ಎಮ್ಮೀ ನಾಲ್ವರುಂ ಭೇದಿಸಲಱಯೆವು ಇದಂ: ಪಂಪಭಾ, ೧೧. ೮೭)

ಚಕ್ರಸಹಾಯ

ಚಕ್ರದ ಸಹಾಯ ಪಡೆದಿರುವವನು, ವಿಷ್ಣು (ಚಕ್ರಸಹಾಯನಾಕ್ರಮಿಸಿದಂ ಭೂಚಕ್ರಮಂ ಪಾದದಿಂ: ಪುಷ್ಪದಂಪು, ೮. ೨೩)

ಚಕ್ರಾಂಕ

ಚಕ್ರವಾಕಪಕ್ಷಿ (ಕೋಡಿ ಹಿಮದಿಂ ಚಕ್ರಾಂಕಮಳ್ಕಿರ್ದುವು: ಪುಷ್ಪದಂಪು, ೩. ೪೦)

ಚಕ್ರಾನಿಲ

ಸುಂಟರಗಾಳಿ (ಸರಭಸಂ ಪರಿತಂದು ಚಕ್ರಾನಿಲವಲೆದೊಲೆದು ಎತ್ತಿದ ಅರಲ ಪರಾಗಪಟಲಂ ಮೇಲೆ ಪರಿಕಲಿಸಿ ಪರ್ಬಿ: ಶಬರಶಂ, ೨. ೪೨ ವ)

ಚಕ್ರಾಭಿಷೇಕ

[ಜೈನ] ಐವತ್ತಮೂರು ಗರ್ಭಾನ್ವಯಕ್ರಿಯೆಗಳಲ್ಲಿ ಒಂದು (ಗೃಹತ್ಯಾಗ ದೀಕ್ಷಾಜಿನರೂಪ ಮೌನಾಧ್ಯಯನ .. .. ಯೌವರಾಜ್ಯ ಸ್ವರಾಜ್ಯ ಚಕ್ರಲಾಭದಿಗ್ವಿಜಯ ಚಕ್ರಾಭಿಷೇಕ .. .. ಎಂಬ ಅಯ್ವತ್ತುಮೂಱು .. .. ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಚಕ್ರಾಹ್ವ

ಚಕ್ರವಾಕಗಳ ಜೋಡಿ (ಇಂದ್ರಿಯಸುಖಾರ್ಥಿ ಸಂಸಾರಗುಹಾಗಹ್ವರದೊಳಗೆ ಇರುಳಿನ ಚಕ್ರಾಹ್ವದವೊಲ್ ಮಱಗದೇಂ ಸುಖಂಬಡೆದಪನೇ: ಆದಿಪು, ೩. ೬೮)

ಚಕ್ರಿ

ಚಕ್ರವನ್ನು ಹೊಂದಿದವನು, ವಿಷ್ಣು, ಕೃಷ್ಣ (ಮಂಗಳತೂರ್ಯನಾದಂ ಎಸೆಯುತ್ತಿರ್ಪನ್ನೆಗಂ ಚಕ್ರಿ ರಾಗಿಸಿ ಕೆಯ್ನೀರ್ ಎಱೆದಂ ಗುಣಾರ್ಣವ ಮಹೀಪಾಲಂಗಂ ಆ ಕನ್ನೆಯಂ: ಪಂಪಭಾ, ೫. ೨೫); ಹಾವು (ಉರಗಂ ಭೋಗಿ ಸರೀಸೃಪಂ ಫಣಿ ಭುಜಂಗಂ ಚಕ್ರಿ ದರ್ವೀಕರಂ ಹರಿಯುಂ ಕುಂಡಲಿ ಕಾದ್ರವೇಯಂ ಅಹಿ ನಾಗಂ ವ್ಯಾಳಮ ಆಶೀವಿಷಂ ಪುರುಪೃಷ್ಠಂ ಫಣಭೃತ್ಪೃದಾಕು ಭುಜಗಂ ಕುಂಭೀನಸಂ ಪನ್ನಗಂ ಮರುದಾಶಂ ಶನಿ ಗೂಡಪಾತ್ ವಿಷಧರಂ ಸರ್ಪಂ ದ್ವಿಜಿಹ್ವಾಹ್ವಯಂ: ಅಭಿಧಾವ, ೧. ೩. ೭); ಕುಂಬಾರ (ಕುಲಾಲಾಖ್ಯಂ ಚಕ್ರಿ ಕುಂಭಕಾರಂ: ಅಭಿಧಾವ, ೧. ೧೧. ೭೪); ಚಕ್ರವರ್ತಿ (ಜಗದ ಬಡತನಮನೊರ್ಮೆಯೆ ಬಗೆದಂತಿರೆ ಕಿಡಿಪ ಚಕ್ರಿ ತನ್ನಿರ್ದೆಡೆಯೊಳ್ ನೆಗೞ್ದ ಬಡತನಮನದೇಕೆ ಗಡಂ ಸೈರಿಸುವನೆನೆ ಪೊದಳ್ದುದು ಮಧ್ಯಂ: ಆದಿಪು, ೮. ೩೧)

ಚಕ್ರಿಕಾವರ್ತಿ

ಚಕ್ರದಂತೆ ಸುತ್ತುವ ಶೀಲವುಳ್ಳವನು, ಕೃತ್ರಿಮೋಪಾಯವುಳ್ಳವನು (ಚಕ್ರಿ ಚಕ್ರಿಕಾವರ್ತಿಯಪ್ಪುದಱಂದ ಆ ವನಾಂತರಾಳಕ್ಕೆ ಒರ್ವನೆ ಬಂದು ಮಾಧವೀಮಂಟಪಮಂ ಪೊಕ್ಕು ಅವರಿರ್ವರ ನಾಣುಮಂ ನಡುಕಮಂ ಪತ್ತುವಿಟ್ಟು ನುಡಿದು: ಪಂಪಭಾ, ೫. ೧೯ ವ)

ಚಕ್ರೀವ

ಕತ್ತೆ (ಖರತಾ ಚಕ್ರೀವ ಜೀವಾಹತಂ ಭಯಲೋಭಾರ್ಜುನಭಂಜನಂ .. .. ಜಯಮಂ ತಾಳ್ದಿದಂ: ನೇಮಿನಾಪು, ೭. ೯೩)

Search Dictionaries

Loading Results

Follow Us :   
  Download Bharatavani App
  Bharatavani Windows App