भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567Next >

ಘಟ

ಗಡಿಗೆ (ಆ ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮಜ್ಜನಕೆ ಎಂದೆತ್ತಿದ ಚಂದ್ರಕಾಂತ ಘಟದೊಳ್ ತಂದು ಅೞಯಿಂ ಪುಷ್ಪವಾಸನೆಗೆಂದಿಕ್ಕಿದ ನೀಳನೀರರುಹಮಂ ಪೋಲ್ದತ್ತು ಕೞಂದುವಾ: ಪಂಪಭಾ ಪರಿಷತ್ತು, ೪. ೫೧)

ಘಟಚೇಟಿಕೆ

ನೀರು ತರುವ ದಾಸಿ (ಕಮಳೆಯಂ ಅಶ್ವತ್ಥಾಮಂ ಮುಂದಿಟ್ಟು ಕುರುಕುಟುಂಬ ಘಟಚೇಟಿಕೆಯಂ ತರ್ಪಂತೆ ತಂದು.. ..ಕೌರವೇಶ್ವರನಂ ಎಯ್ದೆ ಪೋಗಿ: ಪಂಪಭಾ, ೧೩. ೧೦೨ ವ)

ಘಟಜಾತ

ಗಡಿಗೆಯಲ್ಲಿ ಹುಟ್ಟಿದ ಅಗಸ್ತ್ಯ (ದಿಟದಿಂ ಪಯೋಧಿಯಂ ತಳತಟಮಂ ಸಾರ್ವಿನಂ ಅಮರಕುಳ ಕರಕಳಿತಂ ಘಟಜಾತಂ ಪೀರ್ದೊಡದು ಘಟಜಾತಂ ಪೀರ್ದನೆಂದು ನುಡಿವರ್: ಚಂದ್ರಪ್ರಪು, ೧೨. ೧೨೨)

ಘಟಪ್ರೋದ್ಭೂತ

ದ್ರೋಣ (ಶರಶಯ್ಯಾಗ್ರದೊಳ್ ಇಂತು ನೀಮಿರೆ ಘಟಪ್ರೋದ್ಭೂತಂ ಅಂತಾಗೆ ವಾಸರನಾಥಾತ್ಮಜಂ ಅಂತು ಸಾಯೆ: ಪಂಪಭಾ, ೧೩. ೬೯)

ಘಟಸಂಭವ

ದ್ರೋಣ (ಈ ಅೞವು ಇನ್ನೆನಗೆ ಆಜಿರಂಗದೊಳ್ ಗೞಯಿಸುಗೆ ಎಂಬಿದಂ ನುಡಿಯುತುಂ ಘಟಸಂಭವನೊಳ್ ಸುಯೋಧನಂ: ಪಂಪಭಾ, ೧೧. ೧೦೯)

ಘಟಸಂಭೂತ

ದ್ರೋಣ ಘಟಸಂಭೂತಂಗೆ ಕರ್ಣಂಗೆ ಅಸಾಧ್ಯನೊಳ್ ಆ ಗಾಂಡಿವಿಯೊಳ್ ಕಱುತ್ತಿಱವರಾರ್: ಪಂಪಭಾ, ೧೩. ೯)

ಘಟಸರ್ಪ

ಮಡಕೆಯಲ್ಲಿರುವ ನಾಗರಹಾವು (ತುಡುಕಿದ ದೋಷಿಯನಲ್ಲದೆ ಪಿಡಿಯದು ಘಟಸರ್ಪಂ: ಜಗನ್ನಾವಿ, ೧. ೧೨)

ಘಟಾಘಟಿತ

ಆನೆಯ ಸಮೂಹದಿಂದ ಕೂಡಿದ (ನಾಳೆ ವಿರೋಧಿಸಾಧನ ಘಟಾಘಟಿತ ಆಹವದಲ್ಲಿ ನಿನ್ನ ಕಟ್ಟಾಳಿರೆ ಮುಂಚಿ ತಾಗದೊಡಂ ಅಳ್ಕುಱೆ ತಾಗಿ ವಿರೋಧಿಸೈನ್ಯಭೂಪಾಳರಂ ಒಂದೆ ಪೊಯ್ಯದೊಡಂ: ಪಂಪಭಾ, ೧೦. ೩೯)

ಘಂಟಾಜಾಲ

ಗಂಟಗಳ ಸಮೂಹ (ಕನಕರಜತಮಣಿಮಯ ಘಂಟಾಜಾಲಪ್ರದೀಪಮಾಲೆಗಳಂ ನಿರ್ವರ್ತಿಸಿಯುಂ: ಅಜಿತಪು, ೧೨. ೪ ವ)

ಘಟಾಂತಿಕೆ

ಜೈನಯಕ್ಷಿ (ಸರ್ವ ಕಳಾವಿದೆ ಶೌಚ ಘಟಾಂತಿಕೆ ದಾನವಿನೋದೆಯೆಂಬ ಬಿರುದಿಂ ನೆಗೞ್ದಳ್: ಸಮಯಪ, ೧. ೪೦)

ಘಂಟಾಪಥ

(ಗಂಟೆ ಕಟ್ಟಿದ ಆನೆ ಮುಂತಾದವು ಸಾಗುವ) ಹೆದ್ದಾರಿ (ನೀಳ್ದು ಪರ್ಬಿದ ಘಂಟಾಪಥಂಗಳೊಳ್ ಅಲ್ಲಿಗಲ್ಲಿಗೆ ಪಾಂಥಜನದ ಜೀವನಕ್ಕೆ ಜೀವನವೆನಿಪ್ಪ ಪಾನೀಯಮಂಡಪದೊಳ್: ತ್ರಿಷಷ್ಟಿಪು, ೨. ೪೧ ವ)

ಘಂಟಾರವ

ಗಂಟೆಯ ಸದ್ದು (ದೇವಲೋಕದೊಳ್ ಶಂಖಪಟಹಕಂಠೀರವ ಘಂಟಾರವಂಗಳ್ ಒರ್ಮೊದಲೆಸೆವುದುಂ: ಶಾಂತಿಪು, ೧೦. ೧ ವ)

ಘಂಟಾರುತಿ

ಘಂಟಾರವ (ಕಂಠೀರವಸ್ವರ ಘಂಟಾರುತಿಗಳ್ ಯಥಾಕ್ರಮದಿನತ್ಯಾಶ್ಚರ್ಯಮೆಂಬನ್ನೆಗಂ: ಪುಷ್ಪದಂಪು, ೧೦. ೧೩)

ಘಟಾವಣೆ

ಹೊಂದಿಕೆ (ಯಕ್ಷರಾಕ್ಷಸರ ಕೈಯ ಘಟಾವಣೆ ದಿವ್ಯಯಾತ್ರೆಯೊಳ್ ಕೂಡೆ ಮಹೋತ್ಸವಂಬಡೆದುದಂದು ಸಹೇತುಕ ನಂದನಂಬರಂ: ಅನಂತಪು, ೯. ೬೭)

ಘಟಾಳಿ

ಆನೆಗಳ ಸಾಲು (ರಣದೊಳರಾತಿ ವಾರಣ ಘಟಾಳಿಯನೊರ್ವನೆ ಗೆಲ್ದಂ: ಗದಾಯು, ೧. ೧೭)

ಘಂಟಿಕಾಜಾಲ

ಕಿರುಗಂಟೆಗಳ ಸಮೂಹ (ಆಲಂಬಿತ ಘಂಟಿಕಾಜಾಲ ಕುಸುಮದಾಮ ಚಾಮರೋದ್ದಾಮ ಚೀನಾಂಬರಾಚ್ಛಾದಿತಂಗಳ್: ಚಂದ್ರಪ್ರಪು, ೮. ೪೫ ವ)

ಘಟಿಕಾಭೇರಿ

ಸಮಯವನ್ನು ಸೂಚಿಸಲು ಬಾರಿಸುವ ಭೇರಿ (ಉಣ್ಮಿತು ಮಧ್ಯಂದಿನಸೂಚ್ಯಮಪ್ಪ ಘಟಿಕಾಭೇರೀ ಗಭೀರಸ್ವರಂ: ಕುಸುಮಾಕಾ, ೧೦. ೧೦೪)

ಘಟಿಕಾಸ್ಥಾನ

ಧಾರ್ಮಿಕ ವಿಷಯಗಳ್ರುಚ್ಚ ಶಿಕ್ಷಣ ಕೇಂದ್ರ; ಸಿದ್ಧಿಕ್ಷೇತ್ರ (ಇವು ಘಟಿಕಾಸ್ಥಾನಂ ಮತ್ತಿವು ತೀರ್ಥಸ್ಥಾನಮೆಂಬ ರೂಢಿಯ ರೂಢೀಯ ಭಗವದ್ಭವನಕ್ಕೆ ಅಲಂಘ್ಯಮೞಲುಂ ತವೆ ಮುಕ್ಕೊಡೆಯನೆತ್ತಿ ಬಿಟ್ಟನಾ ವಸುಷೇಣಂ: ಅನಂತಪು, ೧೨. ೩೧)

ಘಟಿತ

ಕೂಡಿದ, ಸೇರಿಸಿದ (ಜಟಮಟಿಸಿಕೊಂಡು ನಿಮ್ಮೀ ಘಟಿಯಿಸುವ ಈ ಸಂಧಿ ಕೌರವರ್ಕಳೊಳ್ ಎನ್ನಿಂ ಘಟಿತ ಜರಾಸಂಧ ಉರಸ್ತಟ ಸಂಧಿವೊಲ್ ಒಂದೆ ಪೊೞ್ತಱೊಳ್ ವಿಘಟಿಸದೇ: ಪಂಪಭಾ, ೯. ೨೩)

ಘಟಿಯಿಸು

ಉಂಟಾಗಲಿರುವ (ಜಟಮಟಿಸಿಕೊಂಡು ನಿಮ್ಮೀ ಘಟಿಯಿಸುವ ಈ ಸಂಧಿ ಕೌರವರ್ಕಳೊಳ್ ಎನ್ನಿಂ ಘಟಿತ ಜರಾಸಂಧ ಉರಸ್ತಟ ಸಂಧಿವೊಲ್ ಒಂದೆ ಪೊೞ್ತಱೊಳ್ ವಿಘಟಿಸದೇ: ಪಂಪಭಾ, ೯. ೨೩);
< previous1234567Next >

Search Dictionaries

Loading Results

Follow Us :   
  Download Bharatavani App
  Bharatavani Windows App