भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456Next >

ಆಕಾಶ (ಸುರಸರಣಿ ವಿಷ್ಣುಪದಂ ಅಂಬರಮ ವಿಯತ್ ಖ ವಿಹಾಯಸಂ ಗಗನಂ ಪುಷ್ಕರಂ ಆಕಾಶಂ ನಭಂ ಅಂತರಿಕ್ಷಂ ಅಂಭೋದಮಾರ್ಗಂ ಅಭ್ರಂ ವ್ಯೋಮಂ: ಅಭಿಧಾವ, ೧. ೧. ೫೭); ಇಂದ್ರಿಯ (ಖಂ ಇಂದ್ರಿಯ ಸ್ಪರ್ಶ ರೂಪ ರಸ ಗಂಧ ಶಬ್ದ ವಿಷಯಪ್ರವರಂ: ಅಭಿಧಾವ, ೧. ೧೨. ೨೩)

ಖಗ

ಆಗಸದಲ್ಲಿ ಚರಿಸುವುದು, ಪಕ್ಷಿ (ಖಗಂ ಅಂಡಜಂ ಪತತ್ರಿ ಪತಂಗಂ ವಿಕಿರಂ ಪಕ್ಷಿ: ಅಭಿಧಾವ, ೧. ೯. ೯); ಬಾಣ (ಶಿಳೀಮುಖ ಕಂಕಪತ್ರ ಮಾರ್ಗಣ ಖಗ ಬಾಣ ಶರೇಷು ಸಂಜ್ಞಮಱಗೆ ಅಂಬು: ಅಭಿಧಾವ, ೧. ೧೪. ೧೮); ಖೇಚರ (ಅಗಸೂದನನೆಚ್ಚ ಮಹೋರಗಶರಮಂ .. .. ಖಗರಚ್ಚರಿವಡೆ ತಱದಂ ಖಗಪತಿ ಖಗದಿಂ ಖಗೇಂದ್ರವಾಹನನೆಡೆಯೊಳ್: ಜಗನ್ನಾವಿ, ೧೩. ೧೦೩); ಸೂರ್ಯ (ರವಿ ಮಾರ್ತಂಡಂ ಪತಂಗಂ ತಪಿ ತಪಂ ಇನಂ ಪೂಷಂ ಸಹಸ್ರಾಂಶು ವಿಪಸ್ವಂತಂ ಖಗಂ ಭಾಸ್ಕರಂ ಅಹಿಮಕರಂ ಸೂರ್ಯಂ: ಅಭಿಧಾವ, ೧. ೧. ೬೮); ನಕ್ಷತ್ರ (ಪೆರ್ಬಳುವಂ ಕಾನನವಹ್ನಿ ನುಂಗೆ ಖಗಮಂ ಚಕ್ರಾಂಶುಗಳ್ ನುಂಗೆ ಕಣ್ಗೊಳಿಪ ಏಣಬ್ರಜಮಂ ಮಾರಕರಾಳೀ ನುಂಗೆ: ತ್ರಿಷಷ್ಟಿಪು, ೧೨. ೭)

ಖಗಕುಳ

ಪಕ್ಷಿಸಮೂಹ (ಭೂತಿಳಕನಂ ಆ ಖಗಕುಳಕಲಂಕೆ ವಿದ್ಯೆಯೊಳೆ ಮಾಡಿದಳ್ ಕುರವಕಮಂ: ಲೀಲಾವತಿ, ೧೪. ೧೧೭)

ಖಗನಗ

[ಜೈನ] ಖೇಚರರು ವಾಸಿಸುವ ಪರ್ವತ, ವಿಜಯಾರ್ಧಪರ್ವತ (ಕಲ್ಲೆನ್ನದೆ ಬೆಳೆದ ಪಸುರ್ವುಲ್ಲೆಂದು ಆಸೆಯೊಳ್ ಸಾರ್ದು ಮರಕತದ ಒಡ್ಡುಂಗಲ್ಲನೆ ಕಾರ್ದು ಮೃಗಂಗಳ್ ಕಲ್ಲನೆ ಕನಲುತ್ತುಮಿರ್ಪುವು ಆ ಖಗನಗದೊಳ್: ಅಜಿತಪು, ೯. ೨೩)

ಖಗಪತಿಖಗ

ಗರುಡಾಸ್ತ್ರ (ಮಹೋರಗಶರಮಂ .. .. ತಱದಂ ಖಗಪತಿಖಗದಿಂ ಖಗೇಂದ್ರವಾಹನನೆಡೆಯೊಳ್: ಜಗನ್ನಾವಿ, ೧೩. ೧೦೩)

ಖಗಬಂಧ

ಹಕ್ಕಿಗಳನ್ನು ಹಿಡಿಯುವ ಬಲೆ (ಜಾಳಂ ಖಗಬಂಧಂ: ಅಭಿಧಾವ, ೧. ೧೦. ೩೫)

ಖಗರಾಜ

ಗರುಡ (ಜಗದೊಳ್ ಪತಿಹಿತದೆಡೆಯೊಳ್ ನೆಗೞ್ದ ಇನಜನಿಂ ಏಕದಂತನಿಂ ಪವನಜನಿಂ ಖಗರಾಜನಿಂ ದುರ್ಗಂ ದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ: ಪಂಚತಂತ್ರ, ೫೫)

ಖಗರಾಜಾಸ್ತ್ರ

ಗರುಡಾಸ್ತ್ರ (ಅತಿವಿಷೋಗ್ರಾಸ್ತ್ರಮಂ ಖಗರಾಜಾಸ್ತ್ರನಿಪಾತದಿಂ ಕಿಡಿಸಿ: ಪಂಪರಾ, ೧೪. ೨೦)

ಖಗರಾಜೇಂದ್ರ

ಖೇಚರರ ಒಡೆಯ (ಖಗರಾಜೇಂದ್ರ ರುಂದ್ರ ಘಟೆಗಂದೆಚ್ಚಂಬುಗಳ್: ಶಾಂತಿಪು, ೪. ೨೧)

ಖಗಾದ್ರಿ

ಖಗನಗ (ನೆಗೞ್ದಮರನಗೇಂದ್ರನಾದಿಗಿಭೇಂದ್ರಂ ಪೊರ್ದಿದಲ್ಲಿ ಸುರತೂರ್‍ಯರವಂ ನೆಗೞನೆಗಂ ಕನಕಾದ್ರಿಗೆ ಖಗಾದ್ರಿ ಸಂತಸದೆ ಬಿರ್ದುವಂದಂತಿರ್ಕುಂ: ಅಜಿತಪು, ೪. ೨೬)

ಖಗೇಂದ್ರವಾಹನ

ಗರುಡನನ್ನು ವಾಹನವನ್ನಾಗಿ ಉಳ್ಳವನು, ವಿಷ್ಣು (ಖಗರಚ್ಚರಿವಡೆ ತಱದಂ ಖಗದಿಂ ಖಗೇಂದ್ರವಾಹನನೆಡೆಯೊಳ್: ಜಗನ್ನಾವಿ, ೧೩. ೧೦೩)

ಖಚರ

ಖೇಚರ (ಅವಯವಮೆ ನಾದಜೂದೆನೆ ದಿವಿಜೋರಗ ಖಚರವಧುಗಳಂ ಗೆಲ್ದೊಡೆ ಅವರರ್ಕಿವುಗೆಲ್ಲದ ರೇಖೆಗಳೆನೆ ಕುವಲಯನೇತ್ರೆಯ ವಳಿತ್ರಯಂ ಸೊಗಯಿಸುಗುಂ: ಮಲ್ಲಿನಾಪು, ೩. ೪೯)

ಖಚರಿ

ದೇವಾಂಗನೆ (ಲಸತ್ ಜಲಕಣಮಂ ಅಮಳಮುಕ್ತಾಫಳಮೆಂದು ಉಱೆ ಮುಗ್ಧ ಖಚರಿಯರ್ ಕೈಯಿಡುವರ್: ರಾಜಶೇವಿ, ೧. ೯೩)

ಖಚಿಯಿಸು

ಕುಂದಣಿಸು (ಮುಖಾಗ್ರಪ್ರಚುರ ಶ್ರೀಬಿಸಲತೆಯನೆ ಖಚಿಯಿಸಿದವೊಲಿಕ್ಕೆ ಹಾರಮೆಸೆದುದು ಕೊರಲೊಳ್: ಪುಷ್ಪದಂಪು, ೮. ೫೭)

ಖಂಜ

ಕುಂಟ (ಪ್ರವೃತ್ತ ಖಂಜ ಮೂಕ ಕುಬ್ಜ ವಾಮನ ಕಿರಾತಜನಪುರಸ್ಸರಮುಂ .. .. ಎನಿಸಿದ ರಾಜಪರಿವಾರಮುಂ .. .. ಬರೆವರೆ (ಕಾದಂಬ, ೨. ೧೧೫ ವ)

ಖಜಕ

ಕಡೆಗೋಲು (ಮಂಥಣಿ ಗರ್ಗರಿ ಕಡೆಗೋಲ್ ಮಂಥಾನ ಮಂತು ಅವಂತೆಲ್ಲಂ ಖಜಕಂ: ಅಭಿಧಾವ, ೧. ೧೦. ೩೧)

ಖಂಜನ

ಗೀಜುಗ ಪಕ್ಷಿ (ಸಲಕ್ಷಣಸಂದರ್ಯಸ್ತ್ರೀಜನ ನೇತ್ರಚಾಂಚಲ್ಯೋಪಮೆಗೆ ಬಣ್ಣಿಸಲ್ ಯೋಗ್ಯಮಪ್ಪ ಖಂಜನಪುಂಜಮುಂ: ಪಂಚತಂತ್ರ, ೩೨೦ ವ)

ಖಜಿಕಾ[ಕೆ]

ಸೌಟು (ತದ್ರು ತಾಂ ದರ್ವಿ ದಾರುಹಸ್ತಕಮೆನಿಪ್ಪುದದು ಖಜಿಕಾಖ್ಯಂ: ಅಭಿಧಾವ, ೧. ೧೦. ೩೩)

ಖಜ್ಜಯ

ಕಜ್ಜಾಯ (ತಿಂಬರ್ ಖಜ್ಜಯಮಂ ಶೀತಾಂಬುಗಳಂ ಕುಡಿವರ್ ಅಱತಮಿಲ್ಲದ ಶೈವರ್: ಸಮಯಪ, ೧೪. ೯)

ಖಟ್ವಾಂಗ

ತುದಿಯಲ್ಲಿ ತಲೆಯುಳ್ಳ ಶಿವನ ಆಯುಧ (ಖಟ್ವಾಂಗ ಭಯಂಕರಶೂಲ ಶಕ್ತಿ ಡಮರುಗ ರುದ್ರಾಕ್ಷ .. .. ಉಳ್ಳವಂ ಸದಾಶಿವನಲ್ಲಂ: ಸಮಯಪ, ೮. ೨೨); ಶಿಂಶು ಎಂಬ ಮರ (ಶಿಂಶುವಾಭಿಖ್ಯಂ ಖಟ್ವಾಂಗಂ: ಅಭಿಧಾವ, ೧. ೧. ೮. ೧೭)
< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App