भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

ಔಂಕು

ಅಮುಕು (ಚಕ್ರರತ್ನಮಂ ಮುಂದಿಟ್ಟು ಮಧ್ಯಮಖಂಡಮುಮಂ ಔಂಕಿ ಪೂೞೆ ಪೊಕ್ಕವಷ್ಟಂಭಿಸಿ ನಿಂದಾಗಳ್: ಆದಿಪು, ೧೩. ೫೬ ವ)

ಔಘ

ಗುಂಪು (ನೀರಂ ಕುಡಿದು ಪದ್ಮಪತ್ರೌಘಂಗಳಿಂ ತಮ್ಮಣ್ಣಂಗೆ ನೀರಂ ತೀವಿಕೊಂಡು ಸರೋವರದಿಂದ ಪೊಱಮಟ್ಟು: ಪಂಪಭಾ, ೮. ೩೯ ವ)

ಔಡು

ತುಟಿ (ಕರ್ಚಿದ ಓಡು ಉರ್ಚಿದ ಬಾಳ್ ಇಱಯಲನುಗೆಯ್ದ ಕೈ: ಗದಾಯು, ೪. ೨೭)

ಔಂಡುಗರ್ಚು

ಔಡು ಕಚ್ಚು, ತುಟಿ ಕಚ್ಚು (ಹುಂಕೃತಿಯಂ ಮಾಡುತುಂ ಔಂಡುಗರ್ಚಿ ಕಿಸುಗಣ್ಬಿಟ್ಟಚ್ಯುತಂ ರಂಜಿಕುಂ: ಜಗನ್ನಾವಿ, ೩. ೬೧)

ಔಡೊತ್ತು

ತುಟಿ ಕಚ್ಚು, ಹಲ್ಲುಮಡಿ ಕಚ್ಚು (ಸಂಗರಸಮುತ್ಸಾಹ ಫಲಮಂ ಆಸ್ವಾದಿಪಂತಿರೆ ಓಡೊತ್ತುವ ನಾಳೆ ಕಾಳೆಗದೊಳ್ ಎಮ್ಮ ಕಲಿತನಕ್ಕೆ ನೀನೆ ಸಕ್ಕಿ: ಆಚವರ್ಧ, ೭. ೪೧ ವ)

ಔದಲೆಗಾಣ್

ಅಡಗು, ಗುಪ್ತವಾಗು (ಕೂರಿಸಿ ಕೂರ್ತ ನಿನ್ನ ಮೆಯ್ ಕಸವರಂ ಎನ್ನಂ ಇನ್ನುಸಿರದೆ ಓದಲೆಗಾಣ್ಬಿನಂ: ಕಾವ್ಯಾವಲೋ, ೩೦೪)

ಔದಾರಿಕತನು

ಮನುಷ್ಯ ಮತ್ತು ತಿರ್ಯಕ್ ಶರೀರವೇ ತನು (ಔದಾರಿಕತನು ನೆೞಲಂತಿರೆ ನೆಲಕೆ ವಂದುದು ಅಘಟನವಿಘಟನದಿಂ: ಶಾಂತಿಪು, ೧೨. ೩೩)

ಔದಾರಿಕವಪು

ಸ್ಥೂಲದೇಹ (ಸಹಜಸುರಭಿಗಂಧಬಂಧುರ ಔದಾರಿಕವಪುವಂ: ಆದಿಪು, ೭. ೧೦೬ ವ)

ಔದಾರಿಕಶರೀರ

ಔದಾರಿಕವಪು (ಪಂಚಾಷ್ಟಧನುಃಪರಿಮಿತ ಉತ್ಸೇಧಮುಂ ದಶಶಾಳಲಕ್ಷಣೋಪಜೀವಿತಮುಂ.. ..ಔದಾರಿಕ ಶರೀರಮಂ ತಳೆದು ಶಾಂತಿಕುಮಾರಂ: ಶಾಂತೀಶ್ವಪು, ೧೫. ೧೭ ವ)

ಔದುಂಬರ

ಉದುಂಬರ ಮರದಿಂದ ಹುಟ್ಟಿದ್ದು; ಅತ್ತಿಯ ಮರ (ಪಾಲಾಶ ಅಶ್ವತ್ಥ ಅರ್ಕ ಔದುಂಬರ ನ್ಯಗ್ರೋಧ ಶಮಿ ಅಪಾಮಾರ್ಗ ಖದಿರ ಆದಿ ಶುಷ್ಕಸಮಿತ್ತುಗಳುಮಂ ಕುಶ ಅಶ್ವಲಾಯನ ವಿಶ್ವಾಮಿತ್ರಾದಿ ದೂರ್ವಾಂಕುರ ಪವಿತ್ರವಸ್ತುಗಳುಮಂ ಕೊಂಡು: ಪಂಚತಂತ್ರ, ೧೯೦ ವ)

ಔದುಂಬರಕುಷ್ಠ

ಮೈ ಹುಳಬೀಳುವ ಕುಷ್ಠರೋಗದ ಬಗೆ (ಔದುಂಬರಕುಷ್ಠಂ ನೆಗೆದೌದಾರ್ಯಕಳೇವರಂ ಪಳಾಳಂಬಿತಮಾದ ಔದುಂಬರಮೆನಿಪಂತೆವೊಲಾ ದೊರೆಯಂಗಾಯ್ತು ಖಳಕಳಂಕಾತಂಕಂ: ಸುಕುಮಾಚ, ೫. ೧೧)

ಔಪರಿಷ್ಟಕ

ಮೇಲ್ಭಾಗ (ಚಳದಳಿಕಾಳಿ ನಿನ್ನ ವದನಾಂಬುಜಮಂ ನಡೆ ನೋಡಲೀಯದೆ ಅವ್ವಳಿಸುವ ಔಪರಿಷ್ಟದೊಳೆನ್ನನಿವು: ಆದಿಪು, ೪. ೧೨); ಒಂದು ಬಗೆಯ ರತಿಕ್ರೀಡೆ (ಮಧುರಸೀತ ತನಾದದೊಳುಣ್ಮಿ ಪೊಣ್ಮಿಚೂಷಿಕಮಂ ಔಪರಿಷ್ಟಕರತಂಗಳ ಭೇದದೊಳೊಂದಿದ ಆಮ್ರ ಚೂಷಿಕನಾಮಪಕ್ವಫಲದೊಳ್: ಆದಿಪು, ೧೧. ೯೯)

ಔಮೀನ

ಅಗಸೆ ಹೊಲ (ಏನೆಸೆವುವೊ ಕೌದ್ರವೀಣದ ಔಮೀನದ ತೈಳಿನದ ಮಾಷೀಣದ ಮೌದ್ಗೀನದ ಬಹುಪಾಳ ಸಸ್ಯಸಕಳ ಫಳಂಗಳ್: ಪುಷ್ಪದಂಪು, ೨. ೧೨)

ಔಮ್ಯ

ಅಗಸೆ ಹೊಲ ಪರಿಪಾಲಿಸಿದುವು ಕಣ್ಗೆ ನಾಡೆ ಮೌದ್ಗಂ ಮಾಷ್ಯಂ ಶಾಲೇಯಂ ವ್ರೈಹೇಯಂತೈಲೀನಂ ಕೌದ್ರವೀಣಂ ಔಮ್ಯಂ ಯವ್ಯಂ: ಚಂದ್ರಪ್ರಪು, ೧. ೯೧)

ಔರಸತನುಜ

ಸ್ವಂತ ಮಗ (ತನಗೆ ಗುಣವಂತಂ ಔರಸತನುಜಂ ಪುಟ್ಟಿದೊಡೆ .. .. ಸಗ್ಗಕ್ಕೊಯ್ವನೆಂದುಂ ಊಳ್ವರ್ ಪಾರ್ವರ್: ಸಮಯಪ, ೧೧. ೩೨)

ಔರ್ವ

ಬಡಬಾಗ್ನಿ (ಮಹಾಭಂಗಮಂ ತಾಳ್ದೆನೆಂದು ಒಳಗೆ ಅಂಭೋರಾಶಿ ಚಿಂತಾಗ್ನಿಯನೆ ತಳೆದವೊಳ್ ಔರ್ವಣಂತಸ್ಥಮಿರ್ಕುಂ: ರಾಜಶೇವಿ, ೧. ೧೦೨)

ಔರ್ವಜ್ವಲನ

ಸಮುದ್ರದ ಬೆಂಕಿ, ಬಡಬಾಗ್ನಿ (ಔರ್ವಜ್ವಲನ ಜ್ವಾಳಾಕಳಾಪೋದ್ಗಮಮನನುಗುಣಂ ಮಾಡುತುಂ .. .. ಬೆಳಗಿದುದು ದಿಶಾಚಕ್ರಮಂ ಚಕ್ರರತ್ನಂ: ಆದಿಪು, ೧೧. ೨)

ಔರ್ವವಹ್ನಿ

ಬಡಬಾನಲ (ಕೌರವಬಲದ ಉರ್ಕನೊಂದಿನಿಸು ಮಾಣಿಸಿ ಪೋಪಂ ಇಳೇಶನಲ್ಲಿಗೆ ಎಂದು ಅವನತವೈರಿ ವೈರಿಬಲವಾರಿಧಿಯಂ ವಿಶಿಖ ಔರ್ವವಹ್ನಿಯಿಂ ತವಿಸಿ: ಪಂಪಭಾ, ೧೨. ೧೨೧)

ಔರ್ವಾಗ್ನಿ

ಬಡಬಾಗ್ನಿ (ಕಾನನದುರ್ಗಕ್ಕೆ ಮಹಾದವಾಗ್ನಿ ಜಲದುರ್ಗಕ್ಕೆ ಉರ್ವಿದ ಔರ್ವಾಗ್ನಿ: ಪುಷ್ಪದಂಪು, ೫. ೫೦)

ಔರ್ವಾನಲ

ಬಡಬಾಗ್ನಿ (ದ್ವಿಷದುರ್ವೀಪಾಲ ಸೈನ್ಯಾಂಬುಧಿದಹನಕರ ಔರ್ವಾನಲ ಉಗ್ರಪ್ರತಾಪಂ: ಸುಕುಮಾಚ, ೯. ೭೬)
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App