भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456Next >

ಪ್ರೀತಿಸು (ಧರಾಭರಮನಶೇಷಮಂ ನಿಜತನೂಭರ್ಗೆ ಓವದೆ ಪಚ್ಚುಕೊಟ್ಟು: ೯. ೭೫); ಓ ಎಂದು ಉತ್ತರಿಸು; ಸಲಹು (ಆವ ಅಲರುಂ ಪಣ್ಣುಂ ಬೀತು ಓವುವು ಗಡ ಬೀಯವಲ್ಲಿ ಮಲ್ಲಿಗೆಗಳುಂ ಇಮ್ಮಾವುಗಳುಂ ಎಂದೊಡೆ ಇಂ ಪೆಱತಾವುದು ಸಂಸಾರಸಾರಸರ್ವಸ್ವಫಲಂ: ಪಂಪಭಾ, ೧. ೫೫); ಉಪಚರಿಸು (ವಿಕ್ರಾಂತತುಂಗಂ ಇರ್ಪನ್ನೆಗಂ ಇತ್ತಲ್ ಎರಡುಂ ಪಡೆಯ ನಾಯಕರ್ ಅೞಯೆ ನೊಂದ ತಮ್ಮ ಅಣುಗಾಳ್ಗಳ ಕೊಂಡಾಟದಾನೆಗಳ ನಚ್ಚಿನ ಕುದುರೆಗಳ ಪುಣ್ಗಳಂ ಉಡಿಯಲುಂ ಓವಲುಂ ಮರ್ದುಬೆಜ್ಜರುಮಂ ಅಟ್ಟುತ್ತುಂ: ಪಂಪಭಾ, ೧೧. ೨ ವ)

ಓ ಓ

ಕಾಪಾಡಿ ಕಾಪಾಡಿ (ಆವರಿಸಿತ್ತೊ ನಭೋಂತರ್ಭೂವಿವರಮಂ ಅಮರ್ದಿನೆಸಕಂ ಎನೆ ಬಿರಯಿಗಳ್ ಓ ಓ ಇದು ಮದನನ ಸೋದನದೀವಿಗೆಯೆನೆ ತೊಳಗಿ ಬೆಳಗಿದುದು ತುಹಿನಕರಂ: ಪಂಪಭಾ, ೪. ೫೨)

ಓಕ

ಆಶ್ರಯ, ಮನೆ (ಎಲೆ ವಿದ್ಯಾಧರನಾಥ ದೇವಿ ಪಡೆದಳ್ ಭೂಭಾನುವಂ ಸೂನುವಂ ಲಲಿತಾಗಣ್ಯವರೇಣ್ಯ ಲಕ್ಷಣಮಣಿವ್ರಾತ ಓಕನಂ ತೋಕನಂ: ಶಾಂತೀಶ್ವಪು, ೪. ೪೪); ಸ್ಥಾನ (ಓಕಂ ಸ್ಥಾನಮುಂ ಆಗರಮುಂ ತಾನಕ್ಕುಂ: ಅಭಿಧಾವ, ೩. ೧. ೨೦)

ಓಕಃಪ್ರಾಂಗಣ

ಮನೆಯ ಅಂಗಳ (ಮಣಿಹರ್ಮ್ಯಶ್ರೇಣಿ ಕೇಳೀವನವಿಳಸಿತ ಮಾನವ್ಯಪುಷ್ಪೋಹಾರೋಲ್ಬಣ ಓಕಃಪ್ರಾಂಗಣಂ ಸಸ್ಮಿತ ಸರಸಿಜ ಕಾಸಾರಂ: ಶಾಂತೀಶ್ವಪು, ೧೩. ೧೬೧)

ಓಕರಿಸು

ಕಾರು, ವಾಂತಿಮಾಡು (ಓ ಎಂದು ಓಕಱಸಿ ನರೇಂದ್ರನ ಮೇಲೆ ಕಾಱದನಾಗಳ್: ಧರ್ಮಾಮೃ, ೪. ೧೦೦)

ಓಂಕಾರ

ಪ್ರಣವಾಕ್ಷರ (ಕಾಲಾಂತಕಂ ಶಂಕರನೋಂಕಾರಂ: ರಾಜಶೇವಿ, ೧೪. ೧೫೩): ಆರಂಭಮಂಗಳ ಮತ್ತು ಅಂತ್ಯಸೂಚಕ (ಆರಂಭಮಂಗಳಾದಿಯೊಳ್ ಓರಂತೆ ಓಂಕಾರಂ: ಅಭಿಧಾವ, ೩. ೧. ೧೧೨)

ಓಕುಳಿ

ಬಣ್ಣದ ನೀರು (ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇೞಯೊಳ್ ಒಂದಿ ಸಾಂದಿನೊಳ್ ಕತ್ತುರಿಯೊಂದು ಕೋೞ್ಗೆಸಱೊಳ್ ಓಕುಳಿ ಚಂದನ ಗಂಧವಾರಿಯೊಳ್ ಸುತ್ತಲುಂ ಅೞ್ಕಱಂ ಪಡೆವ ಗೇಯದ ಪೆಂಪಿನ ಅಲಂಪಂ ಆರ್ಗಂ ಆರ್ತಿತ್ತುದು ಪಟ್ಟಬಂಧ ಮಹೋತ್ಸವಂ ಆ ಪಡೆಮೆಚ್ಚೆ ಗಂಡನಾ: ಪಂಪಭಾ, ೧೪. ೨೦)

ಓಗಡಿಸು

ಹಾಳಾಗು (ಮೂರ್ಖಜಡಜನಾರಣ್ಯದೊಳ್ ಇಂಪು ಓಗಡಿಸಿದ ಕವಿಶಬ್ದಮದು ಏಗೆಯ್ದುದು ಅರಣ್ಯರುದಿತಂ ಬಗೆವಾಗಳ್: ಆದಿಪು, ೧. ೨೩); ಬೇಸರ ತೋರು (ಪೂಮಾಲೆಯಂ ಓಗಡಿಸದೆ ಕುಡುವಮರಿ ಕಲ್ಪಲತೆಯಂ ಪೀಲ್ತಳ್: ಆದಿಪು, ೭. ೧೧); ಹಿಂಜರಿ (ನಡೆಯೆ ಚಟುಳತೆಗೆ ಕಣೆಯಂ ಸಡಿಲ್ದೊಡೆ ಅದಂ ಎಡದ ಕೆಯ್ಯೊಳ್ ಓಸರಿಸುತ್ತುಂ ನಡೆದು ಗವಾಕ್ಷಂಬರಂ ಓಗಡಿಸದೆ ನವವರನಂ ಅಬಲೆ ನೋಡಿದಳೊರ್ವಳ್: ಶಾಂತಿಪು, ೬. ೯); ಅಸಹ್ಯಪಡು (ಬಿಡದೆ ಅೞಲ್ವ ಬಂಧುಜನದ ಒೞ್ಕುಡಿಯದ ಕಣ್ಣೀರ ಪೂರಂ ಆ ಪ್ರೇತಮಂ ಓಗಡಿಸದೆ ಸುಡುವುದು ಗಡಂ ಇನ್ನುಡುಗುವುದೀ ಶೋಕಮಂ ಸರೋಜದಳಾಯತಾಕ್ಷೀ: ಪಂಪಭಾ, ೨. ೨೮)

ಓಗಂಬಾಡು

ಸುಪ್ರಭಾತ ಹಾಡು (ನಿನಗೆ ಓಗಂಬಾಡುವ ಯುವತಿನಿಕಾಯದ ದನಿಗೆ ಸೆಣಸುವಂತೆವೊಲ್ .. .. ಮೊರೆವುವಳಿಗಳ ಬಳಗಂ: ಆದಿಪು, ೧೨. ೫೦)

ಓಗರ

ಅನ್ನ (ನೀಮಿಂದು ಬಂದೊಡೆ ಅವು ನೆಱೆಯವಾಗಿ ಮುತ್ತಿನೋಗರದ ಅಕ್ಕಿಯಂ ಬೆರಸಿ ಬಾಗಿದ ಕಾರಣದಿಂ .. ..ಪುಷ್ಪವಾಸನೆಯಕ್ಕಿಯಯ ಕೂೞನುಣ್ಗುಂ ಉೞದಕ್ಕಿಯ ಕೂೞಂ ಉಗುಳುತಿರ್ಕ್ಕುಂ: ಸುಕುಮಾಚ, ೧೧. ೩೫ ವ)

ಓಗರಗಂಪು

ಬೆರಕೆ ಗಂಧ, ಸಮ್ಮಿಶ್ರಗಂಧ (ಅಗರುವ ಮೆಚ್ಚು ಅಚ್ಚ ಸಿರಿಕಂಡದೊಳ್ ಅಗ್ಗಲಿಸಿತ್ತು ಸೂಡುಶಯ್ಯೆಗಳ ಬಯಕ್ಕೆ ಜೊಂಪಲರ್ದವು ಪಾಸುಗಳೊಳ್ ನೆಲಸಿತ್ತು ಪೂತ ಗೊಜ್ಜಗೆಗಳ ಸಿಂದುರಂಗಳೊಳಗೆ ಓಗರಗಂಪನೆ ಬೀಱುತ; ಪಂಪಭಾ, ೫. ೩೦)

ಓಗರವೂ

ಬೆರಕೆ ಹೂ (ಓಗರವೂಗಳ ಬಂಡಂ ಎಯ್ದೆ ಪೀರುತ್ತ ಒಡವಂದುವು ಇಂದ್ರವನದಿಂ ಮಱದುಂಬಿಗಳ್; ಪಂಪಭಾ, ೧೧. ೮೧)

ಓಘ

ಗುಂಪು (ಬಂದಿಸುವೆಂ ಪ್ರೀತಮನಂ ನಿಖಿಲ ಗಣಧರ ಓಘ ಉತ್ತಮನಂ: ಆಚವರ್ಧ, ೧. ೯); ಪ್ರವಾಹ (ಅಂಬುಪ್ರವಾಹಮುಂ ವೃಂದಮುಂ ಅಂತವು ಓಘಂ: ಅಭಿಧಾವ, ೩. ೧. ೪೬)

ಓಘಪ್ರತೀತ

ಪರಂಪರೆಯಲ್ಲಿ ಪ್ರಸಿದ್ಧವಾದ (ಅತನುರಸೋಪೇತ ವಿಳಂಬಿತ ಮಧ್ಯ ದ್ರುತಲಯಂಗಳೊಳ್ ಲಕ್ಷಣಸಂಯುತ ತತ್ತ್ವಾನುಗತೌಘಪ್ರತೀತವಾದ್ಯಂಗಳೆಸೆದುವು: ಆದಿಪು, ೯. ೨೩)

ಓಘಮೇಘಮಾಗು

ಧಾರಾಕಾರ ಮಳೆ ಸುರಿ (ಮೇಘಮುಖರೆನಿಸಿ ಸಂದುರಗೌಘದಿನಂದು ಓಘಮೇಘಮಾದೊಡೆ ಮೞೆ: ಆದಿಪು, ೧೪. ೭೧)

ಓಜ

ಒವಜ [ಉಪಾಧ್ಯಾಯ] ಗುರು (ಮತ್ತುೞದ ವಿದ್ಯೆಗಳ್ ಓಜರೆ ಚಟ್ಟರ್ ಎಂಬಿನಂ ನೆರೆದುವು ಗಳ ತನ್ನೊಳಾರ್ ದೊರೆ ಗುಣಾರ್ಣವನಂತು ಕುಶಾಗ್ರಬುದ್ಧಿಗಳ್: ಪಂಪಭಾ, ೨. ೩೪); ಪರಾಕ್ರಮ (ನೇಜೆಯದಿಂದಿಱದೆತ್ತಿ ನಿಜ ಓಜಮನೆ ಬಿಡೌಜಸರ್ಗೆ ತೋರ್ಪಂತೆ: ರಾಜಶೇವಿ, ೬. ೬೫)

ಓಜನ ಸಾಲೆ

ವಾಜರಶಾಲೆ, ಕಮ್ಮಾರನ ಸಾಲೆ (ಆಗಳ್ ಆಱುಂ ಋತುಗಳ ಪೂಗಳಂ ಒಂದುಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದ ಓಜನ ಸಾಲೆಯಿರ್ಪಂತಿರ್ಪ ಪೂವಿನ ಸಂತೆಯೊಳ್: ಪಂಪಭಾ, ೪. ೮೦ ವ)

ಓಜಾಯಿತ

ಶ್ರೇಷ್ಠ ಶಿಲ್ಪಿ (ಓಜಾಯಿತರೋಜೆಯೊವಱದ ಭೂಮನಕ್ಕಂ ಸಕ್ಕಸಮನಾಗಿ ತೂಗಿದಂತೆ: ಅನಂತಪು, ೨. ೩೦ ವ)

ಓಜಾಯಿಲ

ಬಡಗಿ (ಮರನುಮಂ ಓಜಾಯಿಲನಾಗಿ ಪೊಸೆಯೆ ಕಿರ್ಚಕ್ಕುಂ: ಧರ್ಮಾಮೃ, ೮೨ ವ); ಹೊಂಚುಹಾಕುವವನು (ಪುಲಿಯಂತೆ ಓಜಾಯಿಲನುಂ ಅತ್ತಿಯ ಪಣ್ಗಳಂತೆ ಒಳಗಶುದ್ಧನುಂ: ಧರ್ಮಾಮೃ, ೬. ೩೮ ವ)

ಓಜೆ

ಕ್ರಮ (ಯಥಾ ರಾಜಾ ತಥಾ ಪ್ರಜಾ ಎಂಬವೊಲ್ ಓಜೆಗೊಂಡು ಧರ್ಮಪ್ರಿಯರಾದರ್ ಪ್ರಜೆಗಳುಂ: ಆದಿಪು, ೧೬. ೪೦); ಧಾಟಿ (ತಂದೆಯ ಚೆಲ್ವೆ ತಂದೆಯೊಂದಂದಮೆ ತಂದೆಯೊಂದು ನಿಡಿಯ ಓಜೆಯೆ ತನ್ನೊಳಮರ್ಕೆವೆತ್ತುದು: ಆದಿಪು, ೮. ೪೩); ತಾಳ, ಲಯ (ಪೊಲೆಯರ್ಬಡಿವ ಪಱೆಯೋಜೆಗಾಡುವ ಪಗರಣಗರಂ ಕಂಡರ್ ನಗುವರಲ್ಲದೆ ವರಾಟಕ್ಕೆ ಲಕ್ಷಣಮಂ ನೋಡರ್: ಧರ್ಮಾಮೃ, ೫. ೬೭ ವ)
< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App