भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಏವುದು

ಏನು ಮಾಡುವುದು (ಪೋ ಬಿಡು ಕಟಿಸೂತ್ರಮಂ ತೊಡೆಯ ಬಿಣ್ಪು ಪದಾಂಬುರುಹಕ್ಕೆ ತಿಣ್ಣಂ ಎಂತು ಉಡಿಸುವುದಕ್ಕ ನೂಪುರಮಂ ಈ ತೊಡವು ಏವುದೋ ರೂಪ ಸಾಲದೇ: ಪಂಪಭಾ, ೩. ೪೬); ಏನು ಪ್ರಯೋಜನ (ಭೂವಲಯಮನಯ್ಯನಿತ್ತುದುಮಂ ಆಂ ನಿನಗಿತ್ತೆಂ ಇದೇವುದಣ್ಣ ನೀನೊಲಿದ ಲತಾಂಗಿಗಂ ಧರೆಗಂ ಆಟಿಸಿದಂದು ನೆಗೞ್ತೆ ಮಾಸದೇ: ಆದಿಪು, ೧೪. ೧೩೦); ಯಾವುದು, ಏತಕ್ಕೆ (ಮಾರೀಚಿ ತೊಡರ್ಪುಳಿಂದೆ ಸರದಿಂ ಕಂಪಿಲ್ಲ ಚಿಂತಾಮಣಿಗೇವುದಕ್ಕ ದಳಮಿಲ್ಲ ಈ ಕಕ್ಕರಕ್ಕಿಂತುಟಪ್ಪುದು ಕಳ್ಳಪ್ಪುದು ತಪ್ಪದೆಂದು ಕುಡಿದರ್ ಕಾಮಾಂಗಮಂ ಕಾಂತೆಯರ್: ಪಂಪಭಾ, ೪. ೮೮)

ಏವೆಸಗೊಳ್

ಏನೆಂದು ಕೇಳುವುದು (ಇನ್ನು ಏವೆಸಗೊಳ್ವುದೊ ಕಡುವೇಗದಿಂ ಅಸಕೞದುದು ಮನಮುಮಂ ತುರಂಗಮರತ್ನಂ: ಆದಿಪು, ೧೩. ೩೯)

ಏವೇೞ್

ಏನು ಹೇಳು, ಏನೆಂದು ವರ್ಣಿಸು (ಏವೇೞ್ವೆನವನ ಚಾಗದ ಪೆಂಪಂ: ಶಬ್ದಮದ, ಪ್ರ, ೪)

ಏವೇೞ್ಪುದು

ಏನು ಬೇಕೋ ಅದು (ಪೂಜಿಸಿದವರ್ಗೆ ಏವೇೞ್ಪುದಂ ಆ ಜನ್ಮದೊಳೀವ ದೆಯ್ವಮುಳ್ಳೊಡೆ ಬೞಯಂ ರಾಜಾಶ್ರಯಂ ಏವುದೋ: ಸಮಯಪ, ೯. ೯೦)

ಏವೈಸು

ದುಃಖಪಡು (ಕೌರಬಲಪ್ರಧಾನನಾಯಕನಪ್ಪ ಚಿತ್ರಸೇನಂ ಕೃತವರ್ಮನ ಕೆಯ್ಯೊಳ್ ಅತೀತನಾದುದರ್ಕೆ ಏವೈಸಿ: ಪಂಪಭಾ, ೧೨. ೬೧ ವ)

ಏಷಣಾಸಮಿತಿ

[ಜೈನ] ಸಾಧಕನು ರತ್ನತ್ರಯಭಾವನೆಯಿಂದ ಪ್ರಾಸುಕಾಹಾರವನ್ನು ತೊರೆದು ಸಮಚಿತ್ತದಿಂದ ಊಟಮಾಡುವುದು (ಭಟಾರರೃಷಿದೆ ಕಿತ್ತಯ್ಯಂಗಳ್ಗೆ ಏಷಣಾಸಮಿತಿ ಮೊದಾಗೊಡೆಯ ಬ್ರತಂಗಳಂ ಮತ್ತಂ ಸಂಕ್ಷೇಪದಿಂ ಪೇೞ್ದು: ವಡ್ಡಾರಾ, ಪು, ೭೯, ಸಾ. ೨೬)

ಏಸಾಡು

ಬಾಣ ಪ್ರಯೋಗಮಾಡು (ಅನಿತುಂ ಬಲಮಂ ಮುತ್ತಿ ಚಿಳಾತಾವರ್ತರ್ ಸುತ್ತಲುಂ ಏಸಾಡಿ ಪಿರಿದು ತಿಣಿಕಂ ತಂದರ್: ಆದಿಪು, ೧೪. ೭೦)

ಏಸು

ಎಷ್ಟು (ಒಲ್ದವರೊಳ್ ನವಭೋಗದುಜ್ಜುಗಂ ಮೊಳೆತುವು ಕಾಮಂ ಏಸು ಗುಱಗಂಡುದು ತಂಡದೆ ನಿಂದ ನಂದನಂ ತಳೆದುದು: ಗಿರಿಜಾಕ, ೭. ೩೯); ಬಾಣಪ್ರಯೋಗದ ಹೊಡೆತ (ಒಂದೆ ಕೆಲ್ಲಂಬಿನಿಂ ಮೆಲ್ಲಗೆ ಪಾರ್ದು ಆರ್ದು ಎಚ್ಚಂ ಏಸಿಂ ತಲೆ ಪಱದು ಸಿಡಿಲ್ದತ್ತ ಬೀೞ್ವನ್ನಮಾಗಳ್: ಪಂಪಭಾ, ೧೨. ೧೮)

ಏಸುವೆಱು

ಬಾಣದಿಂದ ಗಾಯಗೊಳ್ಳು (ಪಲಕಾಲಕ್ಕೇಸುವೆತ್ತಂ ದಶಮುಖಂ ಎನುತುಂ ಮನ್ಮಥಂ ಮಾನದೆಚ್ಚಂ: ಪಂಪರಾ, ೯. ೮೩)

ಏಸುವೆಸ

ಬಾಣಪ್ರಯೋಗ (ವಿವಿಧ ವಿಚಿತ್ರದ ಏಸುವೆಸದೊಳ್ ಪಿರಿದುಂ ಪರಿಭಾವಿಸಲ್ಕೆ: ಕುಸುಮಾಕಾ, ೭. ೬೫)

ಏಸುವೆಸನ

ಬಾಣಪ್ರಯೋಗ (ನೂಪುರೋಲ್ಲಪನ ವ್ಯಾಜದಿಂ ಆಗಳೇಸುವೆಸನಂ ಕಾಮಂಗೆ ಪೇೞ್ವಂದದಿಂ: ಚಂದ್ರಪ್ರಪು, ೫. ೧೧೪)

ಏಹಿ

ಹೋಗು (ಮನದೊಳ್ ನಿಷ್ಕಾರಣಂ ಕಾಯ್ವರೇಂ ಪರಚಿಂತಾಕರ ಏಹಿ ಎಂಬ ನುಡಿಯಂ ಮುಂ ಕೇಳ್ದೆನಿಲ್ಲಾಗದೇ: ಪಂಪಭಾ, ೭. ೩೫)

ಏಳಕ

ಟಗರು (ಅವಿ ಮೇಷ ಉರಭ್ರಂ ಮೇಂಡವದೇಳಕ: ಅಭಿಧಾವ, ೧. ೧೫. ೧೧)

ಏಳಾ

ಏಲಕ್ಕಿ (ನೆಗೞ ಕರ್ಪೂರ ಕಾಳಾಗರು ಮಳಯಮಹೀಜಂಗಳ್ ಏಳಾಲತಾಳೀ ಸ್ಥಗಿತಂಗಳ್ ಕಣ್ಗೆವಂದಿರ್ದುವಂ ಇವನೆ ವಲಂ ಕೊಂಬುಗೊಂಡ ಅಂಗಜಂ .. .. ಎಚ್ಚು ಮೆಚ್ಚಂ ಸಲಿಸುವಂ: ಪಂಪಭಾ, ೪. ೨೩)

ಏಳಾಗಂಧ

ಏಲಕ್ಕಿಯ ವಾಸನೆ ಮುನ್ನಿನ ಸಪ್ತಚ್ಛದಗಂಧದಿಂ ಏಳಾಗಂಧದಿಂ ಎಸೆವುದು ದೇವ: ಪುಷ್ಪದಂಪು, ೫. ೬೩)

ಏಳಾವನ

ಏಲಕ್ಕಿ ತೋಟ ಚೂತ ಸಪ್ತಚ್ಧದ ಏಳಾವನಸುರಭಿ .. .. ಆಶಾಚಕ್ರಂ ಗಂದೇಭಚಕ್ರಂ: ಆದಿಪು, ೧೧. ೩೦)

ಏಳಿದ

ತಿರಸ್ಕಾರ ಹುಟ್ಟಿಸುವ (ಕುಲಜನುಂ ಅಲ್ಲಂ ನಣ್ಪಿನ ಬಲಮುಂ ತನಗಿಲ್ಲ ಕಣ್ಗಂ ಏಳಿದಂ: ಕವಿರಾಮಾ, ೩. ೧೭೨); ಅವಮಾನ (ದೂತರಂ ಅಟ್ಟಿದೊಡೆ ಏಳಿದವಾತಂಗೆ: ಜಗನ್ನಾವಿ, ೯. ೧೮); ನಿಕೃಷ್ಟ (ಪಾದಮಾರ್ಗದಿಂ ಜಾನಕಿಯುಂ ಬಲಾಚ್ಯುತರುಂ ಏಳಿದರಂದದೆ ಬರ್ಪದಾವುದೋ: ಪಂಪರಾ, ೬. ೧೭೯)

ಏಳಿದಂಗೆಯ್

ತಿರಸ್ಕಾರ ಮಾಡು (ಏೞದಂಗೆಯ್ದು ನುಡಿದ ಕಪರ್ದಿಯ ಕಟೂಕ್ತಿಯಂ ಕೇಳ್ದು: ಶಬರಶಂ, ೪. ೩೦ ವ)

ಏಳಿದಂಬಗೆ

ತಿರಸ್ಕಾರದಿಂದ ಕಾಣು (ಶಲ್ಯನಂ ಅಂದು ಅಶಲ್ಯನಂ ಬಗೆವವೊಲ್ ಏಳಿದಂಬಗೆದು ದಂತಿಯಂ ಆಗಡೆ ತೋಱಕೊಟ್ಟು ತೊಟ್ಟಗೆ ರಥಮಂ ಪಡಲ್ವಡಿಸಿ ಪೂೞ್ದಂ ಅರಾತಿಯಂ ಅಸ್ತ್ರಕೋಟಿಯಿಂ: ಪಂಪಭಾ ಪರಿಷತ್ತು, ೧೦. ೧೧೧)

ಏಳಿದಂಮಾಡು

ಏಳಿದಂಗೆಯ್ (ಎನ್ನನೇಳಿದಂ ಮಾಡಿ ಮೂಗನರಿದು ಕನ್ನಡಿಯಂ ತೋಱುವಂತೆ: ಧರ್ಮಾಮೃ, ೯. ೧೪೦ ವ)

Search Dictionaries

Loading Results

Follow Us :   
  Download Bharatavani App
  Bharatavani Windows App