भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಏನಾನುಮಂ

ಏನಾದರೂ ಅದನ್ನು (ನನೆಯಂಬಂ ತೆಗೆದೆಚ್ಚಂ ಅಂಗಜನ ತಪ್ಪು ಏನಾನುಮಂ ತೋಱೆ ಕಾಣ್ಬನಿತಂ ಮಾಡದೆ ಪದ್ಮಜಂ ಮದನನಂ ಬೈದಂತುಟೇ: ಪಂಪಭಾ, ೪. ೬೯)

ಏನುಂ ಮಾಣದೆ

ಸ್ವಲ್ವವೂ ತಡಮಾಡದೆ (ಅಂತು ತನ್ನ ಬಲಮೆಲ್ಲಮಂ ಜವನಂತೆ ಒಕ್ಕಲಿಕ್ಕಿ ಕೊಲ್ವ ಕಳಶಕೇತನನಂ ಯಜ್ಞಸೇನಂ ಏನುಂ ಮಾಣದೆ ಆತನ ಮೇಲೆ ಬಟ್ಟಿನಂಬಿನ ಬೆಳ್ಸರಿಯುಮಂ ಕೆಲ್ಲಂಬಿನ ತಂದಲುಮಂ ಪಾರೆಯಂಬಿನ ಸೋನೆಯುಮಂ ಸುರಿಯೆ: ಪಂಪಭಾ, ೧೨. ೨೧ ವ)

ಏನೋಜೀವ

ಪಾಪ ಮಾಡಿದ ಜೀವ (ಅನಂತಕಾಲಮುಂ ನಮೆವ ಏನೋಜೀವಂಗಳ್ ಅರುಹಪದವಿಮುಖಂಗಳ್: ಸಮಯಪ, ೧೫. ೭೩)

ಏನೋದಾವಂ

ಪಾಪವೆಂಬ ಕಾಳ್ಗಿಚ್ಚು (ಆಚಾರ್‍ಯರ್ ಇನ್ನೆಮ್ಮಂ ಏನೋದಾವಂ ತಳ್ತೞ್ವದಂತೆ ಓಸರಿಸಿ ಕಳೆಗೆ ಸಮಸಾರಕಾಂತಾರದಿಂದಂ: ಆದಿಪು, ೧. ೩)

ಏನೋವಶ

ಪಾಪವಶ (ಏನೋವಶದಿಂದ ಆತ್ಮಂ ತಾನೆಂತಪ್ಪಲ್ಲಿ ಪುಟ್ಟಿದೊಡಮ ಅಮಳನೆ ಸುಜ್ಞಾನಿಯೆ: ಸಮಯಪ, ೧೧. ೧೩೯)

ಏನೋಹೀನಂ

ಪಾಪರಹಿತವಾದ (ಏನೋಹೀನಂ ನಿರ್ಮಳವಾನಂದಾವಹಮಿದೆನಿಸಿ ಕೇಳ್ವಂ: ಸಮಯಪ, ೩. ೧೧)

ಏಪಚ್ಚು

ಏನು ವಿಭಾಗ, ಪಾಲು (ಆಪೋಶನಮಂ ಪಿಡಿದಿರ್ದು ಓಪಳಂ ಬೇಡಿ ಕುಡಲೆವೇೞ್ಕುಂ ಪಾರ್ವಂ ಏಪಚ್ಚೋ ಕುಡುದೊಡಾಗಳ್ ಪೋಪಂ ನರಕಕ್ಕೆ: ಸಮಯಪ, ೧೧. ೯೬)

ಏಪೊತ್ತುಂ

ಎಲ್ಲ ವೇಳೆಯಲ್ಲೂ (ನಿಕ್ಷೇಪದ ಪೊನ್ನಂ ಕೈಕೊಂಡು ಏಪೊತ್ತುಂ ನೋಡುತಿರ್ಪ ಪಾವಿನ ತೆಱದಿಂ: ಧರ್ಮಾಮೃ, ೨. ೭೩)

ಏಬಾರ್ತೆ

ಏನು ಪ್ರಯೋಜನ (ಭವವಿಷಾವೇಶವಿಧ್ವಂಸನಂಗೆಯ್ದುವೆ ಮೋಹಧ್ವಾಂತಮಂ ತೂಳ್ದಿದುವೆ ಬಗೆವೊಡೆ ಏ ಬಾರ್ತೆ ಪಾಷಾಣರೂಪಂ: ಮಲ್ಲಿನಾಪು, ೧. ೬); ಏನು ಗತಿ (ಈತನಿಲ್ಲದೆ ಪೇೞ್ ಮಾನಸವಾೞ ಮೋಹಮೆನಗಿನ್ನು ಏಬಾರ್ತೆ ಎಂದುಗ್ರಶೋಕದಿನಾಕ್ರಂದಿಸಿದೆಂ: ಆದಿಪು, ೩. ೫೨)

ಏರಂಡ

ಔಡಲ ಗಿಡ (ಆಗಳ್ ಆ ವಿಷಮ ಕೋದಂಡಮಂ ಏರಂಡ ಕಾಂಡಮಂ ಬಗೆವಂತೆ ಬಗೆದು: ಪಂಪರಾ, ೫. ೮೬ ವ)

ಏರಣಿಗ

ಅಕ್ಕಸಾಲೆ, ಚಿನಿವಾರ (ವಾಸವದಿಕ್ತಟಂ ಸಮೆದ ಮೂಷೆ ತಮಂ ಸುರಿದಿರ್ದಲಬ್ಜಸಂವಾಸಿ ಸಮೀರಂ ಏರಣಿಗನಾಗೆ: ಅಜಿತಪು, ೬. ೭೦)

ಏರ್

ನೊಗ ಎತ್ತುಗಳನ್ನು ಕಟ್ಟಿದ ನೇಗಿಲು (ಕುರುಧರೆಯಂ ನೀಜೋಗ್ರದೆಯೇರ್ಗಳಿಂ ಉತ್ತು ಉಗಿಯುತ್ತೆ: ಗದಾಯು, ೧೦. ೪)

ಏರ್ಪೆಱು

ಗಾಯಗೊಳ್ಳು (ಏರ್ಪೆತ್ತರ್ ಏರ್ಪೆತ್ತರಂ ಪದುಳಂ ಮಾೞ್ಪುದು ಚಿತ್ರಂ: ಶಬ್ದಮದ, ೭೬ ಪ್ರ, ೯)

ಏರ್ವಡೆ

ಏರ್ಪೆಱು (ಬಡವೊಡಲಂತೆ ಜೋಲದು ಏರ್ವಡೆದ ಪಂದೆಯಂತೆ ತಲ್ಲಣಿಸಿ: ಧರ್ಮಾಮೃ, ೧. ೧೨೯ ವ)

ಏರ್ವೆಸನ

ಯುದ್ಧಕಾರ್ಯ, ಯುದ್ಧ ಪ್ರಯತ್ನ (ಎಸೆವುಗ್ರರಣಾನಕ ರೌದ್ರಘೋಷಂ ಏರ್ವೆಸನಮಂ ಉಂಟುಮಾಡಿದುದು ಪಂದೆಗಮಂದಿನ ವೀರಗೋಷ್ಠಿಯೊಳ್: ಆದಿಪು, ೧೪. ೯೦)

ಏಱ

ಏರಿ, ಕಟ್ಟೆ (ಪ್ರಸ್ತಾವದೊಳ್ ಸೀತಾದೇವಿ ತದಗ್ನಿಕುಂಡದ ಏಱಯಂ ಮೆಟ್ಟಿ .. .. ನುಡಿದಳ್: ಪಂಪರಾ, ೧೬. ೨೫ ವ ಮತ್ತು ೨೬)

ಏಱನೂಂಕು

ಮೇಲಕ್ಕೆ ನೂಕು (ಕರಾಂಭೋಜದಿಂದ ಏಱನೂಂಕುತ್ತ ಒಡನೆ ಉತ್ತುಂಗಸ್ತನಾಗ್ರಕ್ಕಿಳಿವ ಮುಡಿಯನೌಂಕುತಂ: ರಾಜಶೇವಿ, ೩. ೫೪)

ಏಱಲಿಕ್ಕು

ಪೀಠ ನೀಡು (ಅಪರಾಜಿತ ಮಹಾದೇವಿ ಕಂಡು ಇದಿರೆೞ್ದು ಏಱಲಿಕ್ಕಿ ಬೞಯಂ ಇಚ್ಛಾಕಾರಂಗೆಯ್ವುದುಂ: ಪಂಪರಾ, ೧೫. ೧೩ ವ)

ಏಱಲ್ ತರಿಸು

[ಏರಲು] ಕುಳಿತುಕೊಳ್ಳಲು ಪೀಠ ತರಿಸು (ತಾಪಸಾಶ್ರಮದೊಳ್ ಸತ್ಯಂತಪರೆಂಬ ದಿವ್ಯಜ್ಞಾನಿಗಳಂ ಕಂಡು ಪೊಡೆವಟ್ಟ ಇರ್ವರುಮಂ ಪರಸಿ ನಿನಗೆ ಮುನ್ನಂ ಏಱಲ್ ತರಿಸಿದೊಡೆ: ಪಂಪಭಾ, ೯. ೬೬ ವ)

ಏಱಸು

ಮೇಲಕ್ಕೆ ಹತ್ತಿಸು; ಹೆದೆಯೇರಿಸು; ಹೆಚ್ಚು ಮಾಡು; ಸ್ವೀಕರಿಸು (ನಿಶ್ಶಂಕಾದ್ಯಷ್ಟಗುಣಂಗಳಿಂ ಕೂಡಿದ ಶುದ್ಧಮಪ್ಪ ಸಮ್ಯಕ್ತ್ವಪೂರ್ವಕಮಪ್ಪ ವ್ರತಂಗಂ ಏಱಸಿಕೊಂಡು: ವಡ್ಡಾರಾ, ಪು ೧೨೮, ಸಾ ೨)

Search Dictionaries

Loading Results

Follow Us :   
  Download Bharatavani App
  Bharatavani Windows App