भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಏಡು

ಕೊಳೆ (ಮೆಯ್ಯೊಳ್ ಆವೆಡೆಯೊಳಂ ಏಡು ಕೂಡೆ: ಕರ್ಣನೇಮಿ, ೩. ೧೧೨)

ಏಣ

ಜಿಂಕೆ (ಏಣ ಶಾಬತತಿ ನೀರುಣೆ ಕಣ್ಗೊಳಿಪ ಆಳವಾಳಮಂಡಳದಿಂ ಅದೊಂದು ಮುಂದೆಸೆದು ತೋಱದುದು ಆಗಳ್ ಅಶೋಕಭೂರುಹಂ: ಕಾದಂಸಂ, ೧. ೭೩)

ಏಣಗೋಣ

ಗರ್ವ, ವಕ್ರತೆ (ಎಂಬುದುಂ ದ್ರೋಣಾಚಾರ್‍ಯಂ ಮುಗುಳ್ನಗೆ ನಕ್ಕು ವಿಕ್ರಮಾರ್ಜುನಂ ಇಳಿಸಿ ನುಡಿವ ನಿನ್ನ ಏಣಗೋಣಂಗಳುಂ ಎಕ್ಕಸಕ್ಕತನಂಗಳುಂ ಎತ್ತವೋದುವು: ಪಂಪಭಾ, ೧೧. ೧೩೮ ವ); ಕೊಂಕು ಮಾತುಗಾರ (ಏಣಗೋಣಂ ಮೂರ್ಖಂ ಸತವಱಯನೆನಿಪ್ಪಂ ಜಿನಮತಮಂ ಕೇಳ್ವಾಗಳ್ ಅನಘನಕ್ಕುಂ ಅಭವ್ಯಂ: ಸಮಯಪ, ೩. ೫೪)

ಏಣಗೋಣತನ

ಕೊಂಕುತನ (ಏಣಗೋಣತನದಿಂ ಮಾತಾಡುತುಂ ರಾಗದಿಂ ಸುೞವುತ್ತಿರ್ಪವರ್: ಸಮಯಪ, ೬. ೩೯)

ಏಣಗೋಣಸಾವು

ದುರ್ಮರಣ (ಅಂತು ದ್ರೋಣಂ ಏಣಗೋಣಸಾವಂ ಸಾವುದುಂ: ಪಂಪಭಾ, ೧೨. ೩೦ ವ) [ಏಣಗೋಣ ಎಂಬುದರ ಬದಲು ಡಿಎಲ್‌ಎನ್ ಎೞೆಗೋಣ ಎಂದು ಪಾಠವನ್ನು ಪರಿಷ್ಕರಿಸಿ {ಬಲಿಯಾಗಿ} ಎಳೆದು ತಂದ ಕೋಣನ ಸಾವು ಎಂದು ಅರ್ಥ ನೀಡುತ್ತಾರೆ ದೀಪಿಕೆ, ಪು, ೪೪೬]

ಏಣವಾಹನ

ಜಿಂಕೆಯ ವಾಹನದವನು, ವಾಯು (ಅಂತು ಬಂದು ಅಭಿಮುಖದೊಳಿರ್ದ ಏಣವಾಹನನಂ ಮನಂಗೊಂಡು: ಜಗನ್ನಾವಿ, ೭. ೩ ವ)

ಏಣಾಂಕ

ಜಿಂಕೆಯ ಗುರುತುಳ್ಳವನು, ಚಂದ್ರ (ಅಂಗಕಾಂತಿಯಂ ತಾಂ ಕುಡುಕಿಕ್ಕುವಂ ಯುವತೀನೇತ್ರಚಕೋರಚಯಕ್ಕೆ ಭೋಂಕನೆ ಏಣಾಂಕನ ಕೆಯ್ತದಿಂ .. .. ನರೇಂದ್ರಚಂದ್ರಮಂ: ನೇಮಿನಾಪು, ೪. ೧೩೬)

ಏಣಾಕ್ಷಿ

ಜಿಂಕೆಯಂತಹ ಚಂಚಲ ಕಣ್ಣುಳ್ಳವಳು (ಪೊರ್ದಿದೊಡೆ ಏಣಾಕ್ಷಿಯರಂ ಸರಾಗಮಾಗದುದುಂಏ: ಪುಷ್ಪದಂಪು, ೭. ೨೮)

ಏಣಿ

ಹೆಣ್ಣು ಜಿಂಕೆ (ರೂಪಂ ಲತೆಗೆ ವಿರುತಮಂ ಕೋಕಿಲಶ್ರೇಣಿಗೆ ಆಲೋಕಿತಮಂ ಕೊಟ್ಟು ಏಣಿಗೆ: ಲೀಲಾವತಿ, ೧೪. ೭೧); ನಿಚ್ಚಣಿಕೆ

ಏತ

ಮೇಲೇರುವುದು (ಱು, ದು ಎಂಬ ಅಂತ್ಯಾಕ್ಷರ ಲೋಪಕ್ಕೆ: ಏಱುತಕ್ಕೇತಂ, ಓದಿಂಗೋತಂ: ಶಬ್ದಮದ, ೨೨ ಪ್ರ); ನೀರೆತ್ತುವ ಸಾಧನ (ಜಳಜಾತದ್ವಯಂ ಏತಂ ಎತ್ತಿದಪುವು ಅಂಭೋಜಾಳಿಗೆಂಬಂಥೆ: ಅನಂತಪು, ೭. ೩೬)

ಏತರ್ಕೆ ಬಾರ್ತೆ

ಯಾವ ಪ್ರಯೋಜನಕ್ಕೆ [ಬರುವವನು] (ಅದಟಂ ಕೊಂಡಾಡದೆ ಬೇಡಿದರ್ಗೀಯದೆ ಮಱೆಗೆ ವಂದರಂ ಕಾಯದೆ ನೀಳ್ದೊದವಿದ ಜಸಮನುಪಾರ್ಜಿಸದ ಅಧಮಂ ಅದೇತರ್ಕೆ ಬಾರ್ತೆ ಜೀವನ್ಮೃತಕಂ: ಆದಿಪು, ೧೨. ೯೭)

ಏತಱೊಳಂ

ಯಾವುದರಲ್ಲಿಯೂ (ಈಶ್ವರಂ ನೀನುದಾರ ಮಹೇಶ್ವರನಪ್ಪುದಱಂ ನಿನಗಂ ಎನಗಂ ಏತಱೊಳಂ ವಿಕಲ್ಪಮುಂ ವಿಚ್ಛಿನ್ನಮುಂ ಇಲ್ಲ ಎಂದಂ: ಪಂಪಭಾ, ೫. ೧೦೩ ವ

ಏತಱ್

ಏನು, ಏಕೆ (ವೇದಂ ಇನ್ನೇತಱ್ ಕಾೞಚ್ಚಿಂಗೆ ಗಾಳಿ ನೆರವೆನೆ ಮೆಚ್ಚಿದ ತೆಱದಿಂದೆ ಜಗಮನುರಿಪರೆ ಪಾರ್ವರ್: ಸಮಯಪ, ೧೪. ೧೨೧)

ಏತೊದಳ್

ಯಾವ ಸುಳ್ಳು (ನೀಂ ಇನಿಸು ಕಾಲ ಇರ್ದೆಯಪ್ಪೊಡೆ ಏ ತೊದಳೊ ಸರೋವರಾಂಬುವನಿತಂ ತವೆ ತುಳ್ಕಿ ರಸಾತಳಂಬರಂ ಬೆದಕಿಯುಂ ಎಂತುಂ ಅಪ್ಪಳಿಸಿ ಕೊಂದಪೆಂ: ಪಂಪಭಾ, ೧೩. ೮೦); ತಡವರಿಸಲೇಕೆ (ಭೂಭುಜನ ಆಜ್ಞೆಗೆ ಮಾಣ್ದೆಂ ಅಲ್ಲದಂದು ಏ ತೊದಳ್ ಈ ತ್ರಿಇಕೂಟ ಕುಧರಂಬೆರಸು ಅಂಬಿಕೆ ನಿಮ್ಮನುಯ್ಯೆನೇ: ಪಂಪರಾ, ೧೧. ೧೧೨)

ಏದೊರೆತು

ಯಾವ ಬಗೆಯದು, ಎಂತಹುದು (ಎಮ್ಮನ್ವಯಕ್ಷ್ಮಾಪರ್ ಆವ ವಿಳಾಸಂಗೊಳ್ ಇರ್ಪರ್ ಏದೊರೆತು ತಾಂ ಎಮ್ಮಯ್ಯನೈಶ್ವರ್ಯಂ ಇಂತು ಇವನೆಲ್ಲಂ ತಿಳಿವಂತುಟಾಗಿ ಬೆಸಸಿಂ ಪಂಕೇಜಗರ್ಭಾತ್ಮಜಾ: ಪಂಪಭಾ, ೬. ೧೫)

ಏದೊರೆಯಂ

ಯಾರು ಸಮರ್ಥ (ಪೆಱರಾತಿತೀರ್ಥಕರನಂ ನಿಱಸಲ್ಕೆ ಏದೊರೆಯರ್: ಆದಿಪು, ೧೦. ೧); ಎಂಥವನು (ಏದೊರೆಯಂ ಯಮನಂದನಂ ಏದೊರೆಯಂ ಭೀಮಸೇನಂ ಏದೊರೆಯಂ ಕಂಜೋದರನ ಮೈದುನಂ ತಾಮೇ ದೊರೆಯರ್ ಅಮಳ್ಗಳ್: ಪಂಪಭಾ, ೭. ೧೭)

ಏದೊರೆಯದು

ಎಂಥದ್ದು (ಬರಿಸಿದ ಕಾರಣಮಾವುದೊ ತರುಣಿ ಮುನೀಶ್ವರನ ಮಂತ್ರಮೇದೊರೆಯೆಂದಾಂ ಮರುಳಿಯೆನೆ ಅಱದುಮಱಯದೆ ಬರಿಸಿದೆನಿನ್ನೇೞಂ ಎಂದೊಡಾಗದು ಪೋಗಲ್: ಪಂಪಭಾ, ೧. ೯೩)

ಏನ

ಪಾಪ (ತಾನಂದುವರೆಗಂ ಒವಿಸಿದ ಏನಂಗಳ್ಗೆ ಅಳ್ಕಿ .. .. ನರಪಿ ಬೞಕೆ ದೀಕದಷೆಯಂ ಕೈಕೊಂಡಂ: ಯಶೋಧಚ, ೪. ೭೬)

ಏನಂ ತೀರ್ಚುವುದು

ಏನನ್ನು ಬಗೆಹರಿಸಬೇಕು (ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನೇಗೆಯ್ವುದೇನಂ ತೀರ್ಚುವುದೆಂದೊಡೆ ಸತ್ಯವತಿಯಿಂತೆಂದಳ್: ಪಂಪಭಾ, ೧.

ಏನಸ್ಸಂತಾನ

ಪಾಪಸಮೂಹ (ಏನಸ್ಸಂತಾನಂ ಎಂಟುಂ ಕಿಡೆ ನಿಜಗುಣಮೆಂಟುಂ ಮೊಗಂದೋಱೆ .. .. ಸಿದ್ಧರ್ ಆತ್ಯಂತಿಕಸುಖ ಪದವೀಸಿದ್ಧಿಯಂ ಮಾೞ್ಕೆ ನಮ್ಮೊಳ್: ಪಂಪರಾ, ೧. ೨)

Search Dictionaries

Loading Results

Follow Us :   
  Download Bharatavani App
  Bharatavani Windows App