भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಏಕದಂಡಿ

ಒಂದು ದಂಡ ಧರಿಸಿದ ಸನ್ಯಾಸಿ (ಗುಣವಿಲ್ಲದ ಪಾರ್ವನುಂ ಏಕಂಡಿಯುಂ ಗೊರವನುಂ ಎಂತು ಪೂಜ್ಯರೊ; ಸಮಯಪ, ೧೧. ೧೩೯)

ಏಕದಂತ

ವಿಘ್ನೇಶ್ವರ (ಜಗದೊಳ್ ಪತಿಹಿತದೆಡೆಯೊಳ್ ನೆಗೞ್ದ ಇನಜನಿಂ ಏಕದಂತನಿಂ ಪವನಜನಿಂ ಖಗರಾಜನಿಂ ದುರ್ಗಂ ದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ: ಪಂಚತಂತ್ರ, ೫೫)

ಏಕಪದಿ

ದಾರಿ, ಮಾರ್ಗ (ಅಯನಂ ಮಾರ್ಗಂ ಸೃತಿ ಸರಣಿ ಅಧ್ವಂ ಏಕಪದಿ: ಅಭಿಧಾವ, ೧. ೧೦. ೨)

ಏಕಪಾದ

ಒಂಟಿ ಕಾಲಲ್ಲಿ ನಿಂತು ಮಾಡುವ ತಪಸ್ಸು (ತೊಡರ್ದು ಏಕಪಾದದೊಳ್ ಬಲಿದುಪವಾಸದೊಳ್ ನಮೆದು ನೋಂಪಿಗಳೊಳ್ ನಿಯಮಕ್ರಮಂಗಳಂ ಸಲಿಸಿದರಿಂತು ನೋನದೆ ಗುಣಾರ್ಣವನಂ ಪಡೆಯಲ್ಕೆ ತೀರ್ಗುಮೇ: ಪಂಪಭಾ, ೧. ೧೩೬)

ಏಕಪಾದತಪ

ಒಂಟಿಕಾಲಲ್ಲಿ ನಿಂತು ಮಾಡುವ ತಪಸ್ಸು (ಏಕಪಾದತಪದೊಳ್ ನಿಲೆ ಗೀರ್ವಾಣನಾಥಾತ್ಮಜನಲ್ಲಿಗೆ ಗುಹನಂ ಅಹಿಭೂಷಣನ ಅಂಬಂ ಬೇಡಿ ಅಟ್ಟಿದೊಡೆ: ಪಂಪಭಾ, ೮. ೧೬ ವ)

ಏಕಪಾದವ್ರತಸ್ಥ

ಒಂದೆ ಕಾಲ ಮೇಲೆ ನಿಂತು ತಪಸ್ಸು ಮಾಡುವವನು (ಸಂಸಾರಸಾಗರಮನೀಯಂದದಿಂ ದಾಂಟುವುದೆಂದು ತೋಱುವಂದದಿಂದೊಂದೆ ಕಾಲೊಳ್ ನಿಂದಿರ್ದೇಕಪಾದ ವ್ರತಸ್ಥರುಮಂ: ಪಂಚತಂತ್ರ, ೧೯೦ ವ)

ಏಕಭುಕ್ತ

ಒಂದೇ ಹೊತ್ತು ಊಟ ಮಾಡುವ ವ್ರತ (ದೇಹದೊಳ್ ಲಮಂ ಅನಾರತಂ ತಳೆದು ಉಪವಾಸಕವಾಸದೊಳ್ ಏಕಭುಕ್ತಮಂ ಸಲಿಸುವ ಘೋರವೀರತಪಂ: ಸುಕುಮಾಚ, ೩. ೨೯)

ಏಕಮತ

ಒಂದೇ ಅಭಿಪ್ರಾಯ (ತ್ರಿಜಗದೇಕಮತಂ .. .. ತ್ರಿಜಗದೀಶನುತಂ ಕಥೆ ಶಾಂತಿನಾಥನಾ: ಶಾಂತಿಪು, ೧೨. ೫೫)

ಏಕವರ್ಣ

ಒಂದೇ ಬಣ್ಣ ಅಥವಾ ವರ್ಣ (ಜಗಜ್ಜನಕನೊಟ್ಟಿದ ಪೊನ್ನ ರಾಶಿಗಳಂ ಜಗಜ್ಜನಕಿತ್ತು ತತ್ಕನಕವರ್ಣದಿಂ ಏಕವರ್ಣಮೆ ಮಾಡಿದಂ ಜಗಮೆಲ್ಲಮಂ: ಆದಿಪು, ೮. ೬೫)

ಏಕವಿಂಶತಿ

ಇಪ್ಪತ್ತೊಂದು (ಕ್ಷಿತಿಯೊಳಗುಳ್ಳ ಭೂಭುಜರ ಬಿತ್ತು ಮೊದಲ್ಗಿಡೆ ಮುನ್ನಂ ಏಕವಿಂಶತಿ ಪರಿಸಂಖ್ಯೆಯಿಂ ತವಿಸಿ: ಪಂಪಭಾ, ೨. ೪೫)

ಏಕವಿಹಾರಿ

[ಜೈನ] ಒಂಟಿಯಾಗಿ ಸಂಚರಿಸುವುದು (ಪನ್ನೆರಡು ತಪದೊಳ್ ನೆಱೆದಿರ್ಪತ್ತೆರಡು ಪರೀಷಹಂಗಳಂ ಗೆಲ್ದು ಗಣಧರಗಣಮಂ ಬಿಟ್ಟು ಏಕವಿಹಾರಿಯಾಗಿ: ಆದಿಪು, ೬. ೩೩ ವ)

ಏಕವೃತ್ತಿ

ಏಕಪ್ರಾಕಾರ (ಅವಱ ಬಳಸಿಯುಂ ಯಥೋಚಿತಪ್ರದೇಶಂಗಳೊಳ್ ಏಕವೃತ್ತಿಪರಿವೃತಂಗಳುಂ: ಆದಿಪು, ೮. ೬೩ ವ)

ಏಕಸಂಧಿ

ಒಂದು ಬಾರಿ ಕೇಳಿ ನೆನಪಿನಲ್ಲಿರಿಸಿಕೊಳ್ಳಬಲ್ಲವನು (ಇವಂ ಕಪಿಲನೆಂಬೊಂ ಏಕಸಂಧಿಯಪ್ಪುದಱಂ ನಾನುಂ ಮತ್ತಿನ ಮತ್ತನಯರ್ಕಳಂ ಓದಿಸೆ ಮತ್ತಿವಂ ಅಕ್ಲೇಶದಿಂ ಶ್ರುತಿ ಸ್ಮೃತಿ ಶಾಸ್ತ್ರೋಪಾತ್ರಮುಖನಾಗೆ: ಶಾಂತಿಪು, ೬. ೬೨ ವ ಮತ್ತು ೬೩)

ಏಕಸಱ

ಅಖಂಡಶಿಲೆ (ಇತ್ತ ಭದ್ರಬಾಹು ಭಟ್ಟಾರರ್ ಕೞ್ಬಪ್ಪು ನಾಡ ಅಡವಿಯ ಬೆಟ್ಟದ ಮೇಗಣ ಏಕಸಱಯ ಮೇಗಿರ್ದು.. ..ಸಂನ್ಯಸನಂಗೆಯ್ದರ್: ವಡ್ಡಾರಾ, ಪು ೮೮, ಸಾ ೨೭)

ಏಕಸ್ಥ

ಒಟ್ಟಾಗಿ, ಒಂದಾಗಿ (ಪನ್ನೆರಡು ಮಾಸದೊಳಾದ ದಿಗ್ವಿಜಯಪ್ರಪಂಚಮುಮಂ ಸುಭದ್ರಾಹರಣಮುಮಂ ಪುರುಷೋತ್ತಮನ ಪರಮಮಿತ್ರತ್ವಮುಂ ಅಱದು: ಪಂಪಭಾ, ೫. ೨೩ ವ)

ಏಕಾಂಗವಿಜಯ

ಒಬ್ಬನೇ ಯುದ್ಧಮಾಡಿ ಪಡೆಯುವ ಗೆಲವು (ಗೋಗ್ರಹಣದ ಕಲಹದೊಳ್ ಏಕಾಂಗವಿಜಯನಾದಂ ವಿಜಯಂ: ಗದಾಯು, ೨. ೩೯)

ಏಕಾಗ್ರಚಿತ್ತ

ಒಂದೇ ವಿಷಯದ ಮೇಲೆ ಗಮನವಿರುವವನು (ಮನದಿಂ ತನುವಿಂ ವಚನದಿಂ ಏಕಾಗ್ರಚಿತ್ತನಾಗಿ ಪೊಡವಟ್ಟಂ: ಶಾಂತಿಪು, ೧೦. ೫೬)

ಏಕಾಂತ

ಒಬ್ಬನೇ ಇರುವುದು (ತನ್ನಲ್ಲಿಒಗೆ ವಂದೊಳಂ ಏಕಾಂತಂ ಸಮನಿಸಿದೊಡೆ: ವಡ್ಡಾರಾ, ಪು. ೧೭. ಸಾ. ೧೩); ಒಬ್ಬನೇ ಇರುವ ಜಾಗ (ಅಂತು ಏಕಾಂತದೊಳ್ ತಮ್ಮ ತಂದೆಯ ಮನೋಗ್ಲಾನಿಯಂ ಪಱಪಡೆ ನುಡಿದು: ಸುಕುಮಾಚ, ೭. ೯ ವ)

ಏಕಾಂತಮಂದಿರ

ಗುಪ್ತ ಸಮಾಲೋಚನೆಯ ಕೋಣೆ (ಒಪ್ಪುವುವಲ್ಲಿ ಶಸ್ತ್ರಕುಟಿ ಕೋಶಾಗಾರಂ ಏಕಾಂತಮಂದಿರಂ ಅಭ್ಯಾಸನಿಕೇತನಂ ಪಚನಧಾಮಂ ಸ್ನಾನಸದ್ಮಂ ಮನೋಹರ ಶಯ್ಯಾವಸಥಂ ವಿಭೂಷಣಗೃಹಂ ದೇವಾರ್ಚನಾವಾಸಂ ಅಂಬರವೇಶ್ಮಂ ವರ ಭೋಜನೌಕಂ ಅವರೋಧಸ್ತ್ರೀನಿವಾಸಾಸ್ಪದಂ: ಶಾಂತೀಶ್ವಪು, ೧. ೧೩೭)

ಏಕಾದಶನಿಳಯ

ಶ್ರಾವಕರ ಹನ್ನೊಂದು ನೆಲೆಗಳು: ಸಮ್ಯಗ್ದರ್ಶನ, ಅಣುವ್ರತ, ಸಮತ್ವೀಭಾವ, ಪ್ರೋಷಧೋಪವಾಸ, ಹಸಿಯ ಹಣ್ಣು ಹೂ ಮುಂತಾದವನ್ನು ಸ್ವೀಕರಿಸದಿರುವುದು [ಸಚಿತ್ತವಸ್ತುತ್ಯಾಗ], ಹಗಲು ಸ್ತ್ರೀಸಂಗವರ್ಜನೆ, ಬ್ರಹ್ಮಚರ್ಯ, ಆರಂಭತ್ಯಾಗ, ಪರಿಗ್ರಹತ್ಯಾಗ, ಅನುಮತಿತ್ಯಾಗ ಮತ್ತು ಉದಯತ್ಯಾಗ [ಉದ್ದಿಷ್ಟತ್ಯಾಗ] (ಭೂಭುವನದೊಳಂ ಪರೆದ ಏಕಾದಶನಿಳಯಂ ಅರಸಂ ಅನುಕ್ರಮದಿನಿನಿತುಮಂ ಕೈಕೊಂಡಂ: ಆದಿಪು, ೬. ೧೧)

Search Dictionaries

Loading Results

Follow Us :   
  Download Bharatavani App
  Bharatavani Windows App