भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಎನಿಸು

ಎನ್ನುವಂತೆ ಮಾಡು, ಅನ್ನಿಸು (ನೆಗೞ್ದಾದಿ ಕ್ಷತ್ರಿಯರೊಳಂ ಇಲ್ಲೆನಿಸುದುದೀ ತ್ರಿಜಗದೊಳ್ ಎಸಗಿದ ಎಸಕಂ ಅರಿಕೇಸರಿಯಾ: ಪಂಪಭಾ, ೧. ೨೧); ಎಷ್ಟು (ಎನಿಸು ಶಕ್ತಿಯುಳ್ಳೊಡಂ ಔಷಧಂ ತಱಂಟುದಲೆಯೊಳ್ ರೋಮಮಂ ಪುಟ್ಟಿಸಲಾರದು: ಧರ್ಮಾಮೃ, ೭. ೩೯ ವ)

ಎನು

ಹೇಳು (ಎಂದು ತನ್ನ ಮನಮನಱದು ಮುಟ್ಟಿ ನುಡಿದ ಕೆಳದಿಯ ನುಡಿಗೆ ಪೆಱತೇನುಮಂ ಎನಲಱಯದೆ: ಪಂಪಭಾ, ೪. ೬೪ ವ)

ಎನೆ

ಎನ್ನಿಸುವಂತೆ, ಎಂದು ತೋರುವಂತೆ (ಪುಸಿ ಎನೆ ರಥಮಂ ಹರಿ ಚೋದಿಸುವಂತೆವೊಲಿರ್ದು ಅದೆಂತು ನರನಂ ಗೆಲಿಪಂ ವಿಸಸನದೊಳ್: ಪಂಪಭಾ, ೧೨. ೯೧)

ಎನೆಯೆನೆ

[ಎನೆ+ಎನೆ] ಎಂದು ಹೇಳಲು (ಎನೆಯೆನೆ ಬಾಷ್ಪವಾರಿ ಪುಳಕಂಬೆರಸು ಒರ್ಮೆಯೆ ಪೊಣ್ಮೆ ಮುನ್ನೆ ನೀವೆನಗಿದನೇಕೆ ಪೇೞರೊ: ಪಂಪಭಾ, ೯. ೬೮)

ಎನ್

ಮಾತಾಡು (ಎನ್ ಭಾಷಣೇ: ಶಬ್ದಮದ, ಧಾ, ೪೩೧); ಆಗಿದ್ದೇನೆ (ಕವಿ ಕೇಶವನೆಂ ಯೋಗಿಪ್ರವರ ಮಲ್ಲಿಕಾರ್ಜುನ ಸುತನೆಂ: ಶಬ್ದಮದ, ೨)

ಎನ್ನ

ಎನ್ನುವೆಯಾ? (ಅರರೀಪುಟಮೆರಡುಂ ಜೀರ್ಗರೆದು ಮರಲ್ದಂದಮೆಂತುಟಾಯ್ತು ಎನ್ನ ಭಯಂಕರ ದಂಡರತ್ನಹತಿಯಿಂ ಗಿರಿ ನೊಂದು ನರಳ್ವ ಮಾೞ್ಕೆಯಂತಾಯ್ತಾಗಳ್: ಆದಿಪು, ೧೩. ೩೭); ನನ್ನ (ಅಸದಾಗ್ರಹಮಂ ಬಿಸುಡುವುದೊರ್ಮೆಗೆ ಮಱೆವುದು ಎನ್ನ ದುರ್ವಿಳಸನಮಂ: ಆದಿಪು, ೧೪. ೧೩೧)

ಎನ್ನಂ

ಎಂತಹುದು (ಪತಿವ್ರತಾಗುಣದಿಂ ಅಗ್ಗಳಮಾವುದುಂಟೆ ಜಾನಕೀದೇವಿಗೆ ರಾವಣಂ ಮುಳಿದು ಮಾೞ್ಪ ಉಪಸರ್ಗಂ ಎನ್ನಮಾದೊಡಂ ಬೇವಸಮಂ ಮನಕ್ಕೆ ತರಲಾಱವೆ: ಪಂಪರಾ, ೧೧. ೧೬೭)

ಎನ್ನ ಗೆಯ್ದ

ನಾನು ಮಾಡಿದ (ಎನ್ನ ಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಮೇಂ ಪಿರಿದಲ್ತು: ಪಂಪಭಾ, ೧. ೧೧೨ ವ)

ಎನ್ನನಾದೊಡಂ

ಎಂತಹವನಾದರೂ (ರಾಜನೀತಿಯಂ ಅಱವಿರಪ್ಪುದಱಂ ಎನ್ನನಾದೊಡಂ ಮನ್ನಿಸವೇೞ್ಪುದು: ಪಂಚತಂತ್ರ, ೮೭ ವ)

ಎನ್ನನ್

ಎಂಥವನು (ಪರಮಾತ್ಮಂ ಎನ್ನನ್ ಎಂದೊಡೆ ಚರಮಾಂಗಪ್ರಮಿತಂ ಅಖಿಲಲೋಕ ಸಮಾನಂ ನಿರವಯವಂ ನಿತ್ಯಂ: ಯಶೋಧಚ, ೪. ೨೯)

ಎನ್ನರುಂ

ಎಂತಹವರೂ (ಎನ್ನರುಂ ತೀವಿ ತಳ್ತಿವಳೀ ಕುಚಂಗಳಂ ಅೞ್ಕಱಂದ ಅಮರ್ದಪ್ಪಿ ಪೋಗು ಆವ ಉಪಾಯದೊಳಾದೊಡಂ ನೆರೆದಲ್ಲದಿನ್ನಿರೆನೀಕೆಯೊಳ್: ಪಂಪಭಾ, ೮. ೬೩); ಯಾರೂ (ನಿನ್ನ ಉತ್ಪತ್ತಿಯಂ ಇಂತೆಂದು ಎನ್ನರುಂ ಅಣಂ ಅಱಯರ್ ಅಱವೆನಾಂ ಸಹದೇವಂ ಪನ್ನಗಕೇತು ದಿನೇಶಂ ನಿನ್ನಂಬಿಕೆ ಕೊಂತಿ ಇಂತಿವರ್ ನೆಱೆ ಬಲ್ಲರ್: ಪಂಪಭಾ, ೯. ೬೬)

ಎನ್ನರೊಳಂ

ಎಂಥವರಲ್ಲೂ (ಸವಿಯೊಳ್ ನಿನ್ನಂ ಮೆಚ್ಚಿಪೆಂ ಎಡಱದೊಡೆ ಎನ್ನರೊಳಂ ಮಲ್ಲಂ ಒರ್ವ ವಲ್ಲಲನೆಂಬೊಂ: ಪಂಪಭಾ, ೮. ೫೪)

ಎನ್ನರ್

ನನ್ನವರು (ಅಱದೆಂ ಸೋದರರೆಂದು ಪಾಂಡವರಂ ಇನ್ನೆಂತು ಎನ್ನರಂ ಕೊಲ್ವೆಂ: ಪಂಪಭಾ, ೯. ೭೧)

ಎನ್ನಿರ್ಪ

ನಾನಿರುವ (ನಿನ್ನೆಂದಂತುಟೆ ಮೋಕ್ಷಕ್ಕೆ ಎನ್ನಿರ್ಪಿರವು ಅಘಟಮಾನವೈಹಿಕದ ತೊಡರ್ಪು ಎನ್ನಿರವಿನೊಳುಂಟು: ಪಂಪಭಾ. ೮. ೪)

ಎನ್ನೆಗಂ

ಎಲ್ಲಿಯವರೆಗೆ (ಇದು ಸಹಜಂ, ಅನ್ನೆಗಂ ಎಯ್ದುಗುಂ ಎನ್ನೆಗಮುದಾತ್ತಮುಕ್ತಿಶ್ರೀಯಂ: ಆದಿಪು, ೯. ೫೨)

ಎನ್ನೆವರಂ

ಎನ್ನೆಗಂ (ಗಕಾರ ಲೋಪಕ್ಕೆ: ಎನ್ನೆವರಂ ಸಿರಿ ತಮಗುಂಟನ್ನೆವರಂಸೇವ್ಯರಲ್ತೆ ಖಳರುಂ: ಶಬ್ದಮದ, ೨೫೯, ಪ್ರ, ೧)

ಎನ್ನೊಂದಿಗರ್

ನನ್ನಂಥವರು (ಆತಂ ಕೇಳ್ದಪಂ ನನ್ನ ಸದ್ಭಾವಂಬೆತ್ತು ಉಪದೇಶಮಂ ಕೆಳೆಯ ಪೇೞ್ ಎನ್ನೊಂದಿಗಂ ಕೇಳ್ವನೇ: ಕಾದಂಸಂ, ೪. ೬೬)

ಎಂಬ

ಎನ್ನುವೆಯಾ? (ಉದಗ್ರ ಮೃಗರಾಜನುಮಂ ಮದವದ್ವಿರೋಧಿ ಭೇದನಕರಮಪ್ಪ ಶೌರ್ಯಮದದೆನ್ನುಮಂ ಒಂದೊಡಲ್ ಎಂಬ ಸಂಜಯಾ: ಪಂಪಭಾ, ೧೩. ೫೧)

ಎಂಬ ಮಾಹಿತಿಯನ್ನು ಡಿಎಲ್‌ಎನ್ ಕೊಡುತ್ತಾರೆ

ದೀಪಿಕೆ: ಪು. ೪೯೦]

ಎಂಬಿವರ್

ಇತ್ಯಾದಿ, ಮುಂತಾದುವು (ಬಗ್ಗಿಸುವ ಕೋಗಿಲೆ ಕೋಗಿಲೆಯಿರ್ಕೆದಾಣದೊಳ್ ಜಿನುಗುವ ತುಂಬಿ ತುಂಬಿಯೊಳ್ ಅರಲ್ದ ಅರಲ್ ಎಂಬಿವಱಂ: ಆದಿಪು, ೧. ೬೫)

Search Dictionaries

Loading Results

Follow Us :   
  Download Bharatavani App
  Bharatavani Windows App