भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಎಕ್ಕಸಕ್ಕಂಗೆಡೆ

ಅಸಂಬದ್ಧವಾಗಿ ಮಾತಾಡು (ತಮ್ಮಾಯುಂ ದಲ್ ತಮ್ಮ ಭವಿಷ್ಯಂ ಕುಂದಲುಂ ಅಂದಾಗಳ್ ಎಕ್ಕಸಕ್ಕಂಗೆಡೆವರ್: ಸಮಯಪ, ೧೩. ೪೦)

ಎಕ್ಕಸಕ್ಕತನ

ನಿಂದೆ ಪರಿಹಾಸ (ಎಂಬುದುಂ ದ್ರೋಣಾಚಾರ್‍ಯಂ ಮುಗುಳ್ನಗೆ ನಕ್ಕು ವಿಕ್ರಮಾರ್ಜುನಂ ಇಳಿಸಿ ನುಡಿವ ನಿನ್ನ ಏಣಗೋಣಂಗಳುಂ ಎಕ್ಕಸಕ್ಕತನಂಗಳುಂ ಎತ್ತವೋದುವು: ಪಂಪಭಾ, ೧೧. ೧೩೮)

ಎಕ್ಕಸರ

ಒಂಟಿ ಎಳೆಯ ಸರ (ಸುರಪನ ವಜ್ರಮುಂ ಹರಿಯ ಕೌಸ್ತುಭಮುಂ ಹರನಿಂದುಲೇಖೆಯುಂ ವರುಣನ ಮುತ್ತಿನ ಎಕ್ಕಸರಮುಂ .. .. ಬೆಲೆಗೆ ಬಿಣ್ಣಿದುವಲ್ಲಂ: ಪಂಪರಾ, ೧. ೧೨೧); ಒಂದೇ ಬಾಣ (ಎಕ್ಕಕ್ಕೆ: ಏಕಶರಂ

ಎಕ್ಕಸರಂ ಏಕಪತ್ರಂ

ಎಕ್ಕವತ್ತಂ: ಶಬ್ದಮದ, ೩೦೫ ಪ್ರ)

ಎಕ್ಕಸಿರ್ಕ

ರೋಷ, ಉದ್ರೇಕ (ಕಲ್ಮಿಷಿಕವಾಗಿ ತನ್ನೊಕ್ಕಳ್ಮಕ್ಕಳ್ ಎಕ್ಕಸಿರ್ಕಮಾದೊಡೆ ಪಾರ್ವಂ ಮಲ್ಮಲನೆ ಮಱುಗಿ ಕೂಡೆಯೊಡಲ್ಮಸಿಯಪ್ಪಿನೆಗಂ ಎಯ್ದೆ ಬೆದವೆದ ಬೆಂದಂ: ಸುಕುಮಾಚ, ೨. ೧೦)

ಎಕ್ಕಳವಟ್ಟ

ಏಕವಸ್ತ್ರ, ಉಡುವ ಹೊದೆವ ಒಂದೇ ಬಟ್ಟೆ (ಎಕ್ಕಳವಟ್ಟದಿಂದಱಯೆ ಬರ್ಪರ್ ಪೋಪರ್: ಶಾಂತಿಪು, ೮. ೭೫)

ಎಕ್ಕಾವಳಿ

ಏಕಾವಳಿ, ಒಂದೆಳೆಯ ಸರ (ತನ್ನೊಳ್ನೆರೆಯಲಿದು ಜಯಶ್ರೀಯ ಮುಂದಟ್ಟಿದ ಎಕ್ಕಾವಳಿಯೆಂಬತಿರ್ದುದು: ಆದಿಪು, ೧. ೭೬)

ಎಕ್ಕು

ಹಿಂಜು, ಬಿಡಿಸು, ಬೇರ್ಪಡಿಸು (ತನು ಪಂಜಿಯವೊಲ್ ಬೆಳತಿರ್ಪೆನೆಗಂ ಹಿಮಮೆಕ್ಕಿದ ಎರಲೆವೋಲ್ ಪುದಿದಿರೆಯುಂ: ಆದಿಪು, ೬. ೩೩); ಭೇದಿಯಾಗು (ವಿಭಜನೇ ಪ್ರವಾಹಿಕಾಯಾಂ ಚ: ಶಬ್ದಮದ, ಧಾ, ೧೨)

ಎಕ್ಕೆ

ಒಟ್ಟಿಗೆ, ಸಂಗಡ (ನಿರುಪಮದೇಹದೀಪ್ತಿಗಳೊಳ್ ಎಕ್ಕೆಯಿನೆಯ್ದೆ ಪಳಂಚಿ ಮಿಂಚುವಾಭರಣದ ಮಿಂಚು: ಆದಿಪು, ೨. ೫); ರಾಶಿ (ಮುದಮಂ ಜಪಾಪ್ರಸವ ರಕ್ತಾಶೋಕಬಂಧೂಕಶೋಣ ಮಣಿಜ್ಯೋತಿಗಳ್ ಎಕ್ಕೆಯಿಂ ಕುಡೆ: ಆದಿಪು, ೧೬. ೩); ಒಂದು ಜಾತಿಯ ಗಿಡ, ಎಕ್ಕೆ ಗಿಡ, ಅರ್ಕ (ಪುಲುಗಿಲುಂ ಉತ್ತರಣೆಯುಮಂ ಅಂತೆ ಲೊಕ್ಕಿಯುಂ ಮತ್ತೆ ಮುತ್ತಂ ಆ ಎಕ್ಕೆಯುಮಂ ಕೊಲೆಯುಂ ಬನ್ನಿಯ ಮರನಂ ಕುಲದೆಯ್ವಮಿದೆಂದು ಕೊಂಡುಕೊನೆವರ್ ಮೂಢರ್: ಸಮಯಪ, ೯. ೫೭); ಮಂಚದ ಚೌಕಟ್ಟು (ಒಂದು ಮಂಚದೆಕ್ಕೆಯಂ ಕೊಂಡು ಬರುತ್ತಿರೆ ಕಂಡು ಆ ತಗರಂ ಕೊಟ್ಟು ಮಂಚದೆಕ್ಕೆಯಂ ಕೊಂಡು: ಜೀವಸಂ, ೧೧. ೨೮ ವ); ಮನೆ

ಎಕ್ಕೆಕ್ಕೆ

ಮೇಲೆ ಮೇಲೆ (ದೀವಿಗೆಗಳ್ ಜಲಕ್ಕನೆ ಎಕ್ಕೆಕ್ಕೆಯಿನಿಟ್ಟಳಂ ಬೆಳಗುತಿರ್ದುವು: ಪಂಪಭಾ, ೧೨. ೫), ಒಟ್ಟಾಗಿ (ಅತ್ತ ಲಕ್ಷ್ಮೀಮಹಾದೇವಿಯುಂ ಎಕ್ಕೆಕ್ಕೆಯೊಳೆ ಮಂಡಳಿಕ ಮಹಾಸಾಮಂತ ಮಂತ್ರಿಮಂಡಳ ಅಂತಃಪುರಾಂಗನಾನಿಕರಕ್ಕೆ: ಆದಿಪು, ೪. ೩೪ ವ); ಅಧಿಕ ಸಾಮರ್ಥ್ಯ (ಎಕ್ಕೆಕ್ಕೆಯಿಂ ನಭಮಂ ದಿಕ್ಕುಮಂ ಒಕ್ಕಲಿಕ್ಕಿ ಪೊಣರ್ದರ್ ಚಾಣೂರಚಕ್ರಾಯುಧರ್: ನೇಮಿನಾಪು, ೮. ೯೨)

ಎಕ್ಕೆಗುಟ್ಟು

ಗೊಣಗುಟ್ಟಿಕೊ (ತಂದೆಯ ಕಾಯ್ಪಿನೊಳ್ ಎಕ್ಕೆಗುಟ್ಟುವ ಅಕ್ಕನ ಪಡಪೆತ್ತಿ ಬಯ್ವ ಕಿಱುದಂಗೆಯ: ಶಾಂತಿಪು, ೮. ೧೦೫)

ಎಕ್ಕೆವಾಱು

ಒಂದೇ ಹಾರು (ಎರಡುಂ ಬಲದ ಕಡಿತಲೆಯ ನಾಯಕರ್ ಕೆಯ್ಕೊಂಡು ಬಳ್ಳುಗೆಡೆದು ಎಕ್ಕೆವಾಱುವಾಱ ಪಲಗೆವಾಱ ಗೂಳಿಸೊರ್ಕಿ ಮಾರ್ಕೊಂಡು ಕಾದೆ: ಪಂಪಭಾ, ೧೦. ೮೦ ವ); ಒಂದೇ ಸಮನೆ ಮಿಡಿಯುತ್ತಿರು (ಬೆಳ್ಳೇಱ ಬಾನಲ್ಗೊಂಡ ವದನಮಂಡಲಮುಂ ಎಕ್ಕೆಪಾಱು ಅಳ್ಳೆರ್ದೆಯುಂ: ಕುಸುಮಾಕಾ, ೧೩. ೪೬ ವ)

ಎಗ್ಗ

ಮೂಢ, ಗಾಂಪ (ಆ ಸುದತಿಯ ರೂಪನಿಂ ಪೆಱತನೆಂದೊಡೆ ಚಿಃ ಕರಂ ಎಗ್ಗನಾಗೆನೇ: ಆದಿಪು, ೨. ೭೪)

ಎಗ್ಗತನ

ಹೆಡ್ಡತನ (ಕಪಟಹೃದಯನಂ ಧೂರ್ತನಂ ತೊಱೆಯದುದು ಎಗ್ಗತನಮಲ್ತೇ: ರಾಜಶೇವಿ, ೧೧. ೯೨)

ಎಗ್ಗಿಕೆ

ಹೆಡ್ಡತನ (ಸಂಸಾರಮಂ ನಂಬಿ ದರ್ಶನಮುಮಂ ವ್ರತಮುಮಂ ಕೆಡಿಸುಉದ ಎಗ್ಗಿಕೆಯೆಂದು: ಧರ್ಮಾಮೃ, ೩. ೯೩ ವ)

ಎಗ್ಗು

ದಡ್ಡತನ (ಕಾಂತಾನೀಕದ ಮರುಳ್ವುದಂ ಮದನಾಕುಳತೆಯಂ ಉಂತೆ ಪೇೞ್ವುದೊಂದು ಎಗ್ಗಲ್ತೇ: ಆದಿಪು, ೮. ೫೨); ಬಿಕ್ಕಳಿಸು (ಎಗ್ಗುವೊಡೆ ತಿರಿಗಿ ಕೆಡೆವೊಡೆ ಮೆಯ್ ಝೋಪಿಸುವೊಡೆ .. .. ಮಿಗೆ ರಾಸ್ನಾದಿತೋಯಮಮ ಕುಡೆ ತೀರ್ಗುಂ: ಲೋಕೋಪಕಾ, ೯. ೨೩೯); ನಾಚಿಕೆ (ಕಡುಚೆಲ್ವಿಂ ರತಿಗೆಗ್ಗಂ ಪಡೆದು ವಿಲಾಸಕ್ಕೆ ದೇಸಿವಡೆದವನೆನಿಪನೊಳ್ ಪಡೆದು ಪಿರಿಯರಸಿತನಮಂ ಪಡೆದಳ್ ತನಯರಂ ಅನಂತರಥ ದಶರಥರಂ: ಪಂಪರಾ, ೨. ೭೨)

ಎಚ್ಚ

ಹಕ್ಕಿಗಳ ಹಿಚಿಕೆ (ವಾಯಸಂ ಎಚ್ಚಮನಿಕ್ಕಿದೊಡೆ ವಾರ್ಧಿಗಕ್ಕುಮೆ ಭಂಗಂ: ಸಮಯಪ, ೧೩. ೫೧)

ಎಚ್ಚನುಂ

[ಬಾಣದಿಂದ] ಹೊಡೆಯುವವನು (ಆ ಸರಲ್ಗಳಿಂದಾತನ ಮನೆಯ ಮುಂದೆ ನಭದೊಳ್ ನಲಿನಲಿದಾಡುವ ಜಂತ್ರದ ಮೀನೆಚ್ಚನುಮಾಕೆಗೆ ಗಂಡನಕ್ಕುಂ: ಪಂಪಭಾ, ೩. ೩೨ ವ)

ಎಚ್ಚು

ಬಳಿ, ಲೇಪಿಸು (ಕಡಕುಂ ಪರಲ್ಗಳುಂ ಮೆಲ್ಲಡಿಗಳನೆಡೆಯುಡುಗದೊತ್ತಿದೆಡೆಯಿಂ ನೆತ್ತರ್ ಬಿಡದೆಚ್ಚು ಪಾಯೆ ಸಂಯಮಿ ನಡೆದು ಮಹಾಕಾಳದೊಳಗನಾಗಳ್ ಪೊಕ್ಕಂ: ಸುಕುಮಾಚ, ೧೨. ೧೮)

ಎಚ್ಚುಪಾಯ್

ಚಿಮ್ಮಿ ಹರಿ (ಉಣ್ಮಿಪೊಣ್ಮಿ ಕಣ್ಮಲರ್ಗಳಿಂ ಎಚ್ಚುಪಾಯ್ದುವು ಅರಲಂಬುಗಳಂತೆ ವಿಲೋಚನಾಂಬುಗಳ್: ಪಂಪಭಾ, ೪. ೧೦೮)

Search Dictionaries

Loading Results

Follow Us :   
  Download Bharatavani App
  Bharatavani Windows App