भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಎೞವು

ನೇವರಿಸು (ಪರೆದಿರ್ದ ಕುರುಳ್ಗಳಂ ಓಸರಿಸಿ ಕದಂಪುಗಳಂ ಒಯ್ಯನೆ ಎೞವುತ್ತ ಅಂದು ಆಳ್ ಅರಸೆಂಬ ಭೇದಂ ಎಮ್ಮಿರ್ಬರೊಳಂ ಪಲ್ಲಿಟಿಸಿತು: ಕಾದಂಸಂ, ೪. ೪೧)

ಎೞಸು

ಎಚ್ಚರಗೊಳಿಸು (ಎರಡರ್ಥಕ್ಕೆ: ಎೞಸಿದನೆಂದು ನಿದ್ರೆತಿಳಿತಿಳಿಯಿಸಿದನುಂ ಎತ್ತಿ ಕಳೆದನುಮಕ್ಕುಂ: ಶಬ್ದಮದ, ೩೩ ವೃತ್ತಿ, ೧೩೭)

ಎೞೆ

ಬರಸೆಳೆದುಕೊ. ನೂಲು (ಒಂದರ್ಥಕ್ಕೆ: ಎೞೆಯೆಂದು ನೂಲೆೞೆಯೊಳಂ ಬರಸೆಳೆವುದಱೊಳ್ ಱೞಂ; ಭೂಮ್ಯರ್ಥದೊಳ್ ಕುಳಂ: ಶಬ್ದಮದ, ೩೩, ವೃತ್ತಿ, ೧೩೫)

ಎೞೆಕುಳಿಗೊಳ್

ಆಕರ್ಷಿಸು (ಪೆಱೆನೊಸಲ ರೋಚನಾ ತಿಲಕದ ಚೆಲ್ವು ಎೞೆಕುಳಿಗೊಳೆ: ಪಂಪರಾ, ೫. ೬೧)

ಎೞೆಗೋಣ

[ಬಲಿಗಾಗಿ] ಎಳೆದು ತಂದ ಕೋಣದ ಸಾವು (ಅಂತು ದ್ರೋಣಂ ಎೞೆಗೋಣಸಾವಂ ಸಾವುದುಂ ಭೋರ್ಗರೆದಾರ್ದ ಪಾಂಡವ ಪತಾಕಿನಿಯುಮಂ ಒಂದು ತಲೆಯಾಗೋಡುವ ಕೌರವ್ಯಧ್ವಜಿನಿಯುಮಂ ಬೇಱೊಂದು ಮೊನೆಯೊಳ್ ಕಾದುತಿರ್ದ ಅಶ್ವತ್ಥಾಮಂ ಕಂಡು: ಪಂಪಭಾ, ೧೨. ೩೦ ವ ಎೞೆಗೋಣಸಾವು ಎಂಬುದು ಡಿ.ಎಲ್. ಎಂ ಸ್ವೀಕರಿಸಿರುವ ಪಾಠ, ದೀಪಿಕೆ ೪೪೬)

ಎೞೆದಿಕ್ಕು

ತಂತಿಯನ್ನು ಎಳೆ (ಪದಕೊರಲ್ ಇಂಪಂ ಅಪ್ಪುಕೆಯೆ ಕೊಂಕು ನಯಂ ಗಮಕಂಗಳಿಂ ಪೊಡರ್ ಕೊದಳ್ ಎೞೆದಿಕ್ಕಿದಂತೆ ಸುತಿಯೊಳ್ ಸಮವಾಗಿರೆ .. ..ಮೇನಕೆ ಸರಸ್ವತಿ ಬಾಯ್ದೆಱೆದಂತೆ ಪಾಡಿದಳ್: ಪಂಪಭಾ, ೭. ೮೮)

ಎೞೆದುಕೊಳ್

ಸೆಳೆದುಕೋ (ರಾಜರಾಜನ ಪಡೆ ಚೆಲ್ವನೇನೆೞೆದುಕೊಂಡುದೋ ಬಂದ ಬಸಂತರಾಜನಾ: ಆದಿಪು, ೧೩. ೬)

ಎೞೆಯಿಸು

ಎಳೆಯುವ ಹಾಗೆ ಮಾಡು (ಆತನನಟ್ಟಿ ಕಳೆಯಿಂ ಎಂದಟ್ಟಿದನೆಂದು ಪೇೞ್ದು ಪಡಿಯಱನಿಂದಂ ಎೞೆಯಿಸಿ ಪೆಡತಲೆಯಂ ಪಿಡಿದು ನೂಂಕುತ್ತಂ: ವಡ್ಡಾರಾ, ಪು. ೧೮೬. ಸಾ. ೨)

ಎೞೆಸು

ಎೞೆಯಿಸು (ಲುಱಯಂ ಕೊಲ್ವಂತಿರೆ ಕೊಂದು ಪೊಲೆಯರಿಂ ಚಚ್ಚರಂ ಎೞಸುವರ್ ಅಟ್ಟಿ ದೂಱುವರ್ ಪೆರ್ವಡಿಯೊಳ್: ಧರ್ಮಾಮೃ, ೬. ೯೨)

ಎೞ್ಚತ್ತಿರು

ಎಚ್ಚರಿಕೆಯಿಂದಿರು (ದೇವರ ಮುಂದೆ ಆನಱಯೆಂ ಪಿರಿದುಂ ಗೞಪಲ್ ಮಱಸೊಂದಿದನಿಲ್ಲಂ ಅಹಿತಂ ಎೞ್ಚತ್ತಿರ್ದಂ: ಪಂಪಭಾ, ೭. ೪೪)

ಎೞ್ಚಱಸು

ಎಬ್ಬಿಸು, ಎಚ್ಚರಗೊಳಿಸು (ಇಱಯೆಂ ಬಿೞ್ದನನೆಂಬೀ ಬಿಱುಬಿಂದಂ ಬೀಸೆ ಗದೆಯ ಗಾಳಿಯ ಕೋಳೆೞ್ಚಱಸಿದುದು ಭೀಮನಂ: ಗದಾಯು, ೮. ೩೨)

ಎೞ್ಚಱುಗೆಡು

ಎಚ್ಚರ ತಪ್ಪು, ಮೂರ್ಚೆ ಹೋಗು (ಪಟದ ಪೆಣ್ಣಂ ನೋಡಿ ಸೋಲ್ತು ಅಂಗದೆೞ್ಚಱುಗೆಟ್ಟಂ ಗಡ ದೇವ: ಕುಸುಮಾಕಾ, ೯. ೮೨)

ಎೞ್ಚಱ್

ಎಚ್ಚರಗೊಳ್ಳು (ಬಣ್ಣವುರಂ ತೀವಿದ ಮಾೞ್ಕೆಯಾಯ್ತು ನವಿಲಿಂ ಕುಂದಂಗಳಿಂದ ಇಂದ್ರಗೋಪ ವಿಳಾಸಂಗಳಿಂ ಆಲಿಕಲ್ಲ ಪರಲಿಂ ಕಾರೊಳ್ ಮಹೀಮಂಡಲಂ: ಪಂಪಭಾ, ೭. ೨೪); ಜಾಗರೂಕತೆಯಿಂದಿರು (ಪರಿಜನ ಸಂಬ್ರಮಕೃತ ಹಿಮಕರಣದನೆೞ್ಚಱುತುಂ ಅಕಟ ಇದೇನಂ ನೆಗೞ್ದೈ: ಆಚವರ್ಧ, ೯. ೬೨); ನಿದ್ರೆ ತಿಳಿದೇಳು ರೋಗದಿಂದ ಚೇತರಿಸಿಕೊಳ್ಳು ಹಾಗೂ ನೆನಪಿಸಿಕೊ (ಮೂರರ್ಥಕ್ಕೆ: ಎೞ್ಚತ್ತನೆಂದು ನಿದ್ರೆತಿಳಿದನುಂ ಕುತ್ತಮೋಸರಿದಿದನುಂ ಮಱವೆ ಪಿಂಗಿದನುಮಕ್ಕುಂ: ಶಬ್ದಮದ, ೩೩ ವೃತ್ತಿ ೧೬೪)

ಎೞ್ತರ

ಆಧಿಕ್ಯ (ಕೞವಿಂ ಪೊಲ್ಲಮೆ ಪೆಱತೊಳವೆ ಪಾಪದ ಎೞ್ತರಮಲ್ತೇ: ಧರ್ಮಾಮೃ, ೧೨. ೧೪೮); ಏಳಿಗೆ, ಅಗ್ಗಳಿಕೆಕೀರ್ತಿಲಕ್ಷ್ಮಿ ಬಿಡುಗುಂ ಕೆಡುಗುಂ ಕಡುಪೆಂಪಿನೆೞ್ತರಂ: ಪುಷ್ಪದಂಪು, ೭. ೬೮)

ಎೞ್ತರಂ

ಅಭ್ಯುದಯ (ಆಗುಳಿಸುವ ಬಾಯ ಕೆಂಪಂ ಉದಯಂಗೆಯೆ ಪೊಣ್ಮುವ ಕೆಂಪು ಪೋಲ್ವಿನಂ ತಳರೆ ಬೆಡಂಗಿನೊಳ್ ಪುದಿದು ಎೞ್ತರಂ ಉದ್ಗತಚಂದ್ರಸಿಂಹದಾ: ಆದಿಪು, ೧೨. ೫)

ಎೞ್ತರವು

ಬರುವಿಕೆ (ಈ ಮದದಂತಿಯ ಎೞ್ತರವುಂಈತನ ಶೌರ್ಯಮಿಂ ಈ ಮಹೋಗ್ರಸಂಗ್ರಾಮದೊಳ್ ಎನ್ನುಮಂ ಚಳಿಯಿಸಲ್ ಬಗೆದಪುದು: ಪಂಪಭಾ, ೧೨. ೮೪)

ಎೞ್ತರ್

ಸಮೀಪಿಸು, ಬರು (ಆಂ ಎೞ್ತಂದ ಬೞಕ್ಕೆ ಚಿತ್ರರಥರಾಜಾವಾಸದೊಳ್ ವಾರ್ತೆಯೇಂ ನೀರೇಜದಳಾಕ್ಷಿ: ಕಾದಂಸಂ, ೫. ೮೩)

ಎೞ್ತು

ಎತ್ತು, ಗೂಳಿ (ಪಲಂಬರ್ ಪರದರ್ ಸತ್ತರ್ ಉೞದರೆಲ್ಲರುಂ ಕೆಟ್ಟೋಡೆ ಬಂಡಮುಂ ಎೞ್ತುಗಳುಂ ಮೊದಲಾಗೆಲಮ್ಲಂ ಕಳ್ಳರ್ ಕಳ್ಳರ್ ಕೊಂಡು ಪೋದರ್ರ್‍ಅ; ವಡ್ಡಾರಾ, ಪು ೭೬, ಸಾ ೧೪); ಮಂಚದ ಹಗ್ಗ (ಮೂರರ್ಥಕ್ಕೆ : ಎೞ್ತೆಂದು ಗೂಳಿಯುಂ ಅನಡ್ವನುಂ ಹೊರಸಿನ ನೆಯ್ಗೆಯ ಊಕೆಯ ನುಲಿಯುಮಕ್ಕುಂ: ಶಬ್ದಮದ, ೩೩ ವೃತ್ತಿ ೧೬೫)

ಎೞ್ದಾಡು

ಎದ್ದು ನರ್ತಿಸು (ಕರಿಯ ಸೀಳ್ದು ಈಡಾಡುವನೆ ಬಿರ್ಚಿ ಜೆಡೆಯಂ ಎೞ್ದಾಡುವನೇ: ಸಮಯಪ, ೮. ೬೯)

ಎೞ್ಪತ್ತಿರ್ಛಾಸಿರ

ಎಪ್ಪತ್ತೆರಡು ಸಾವಿರ (ಎೞ್ಪತ್ತಿರ್ಛಾಸಿರ ಪೊೞಲ್ಗಳುಂ ತೊಂಬತ್ತಾರು ಕೋಟಿ ಗ್ರಾಮಂಗಳುಂ: ಆದಿಪು, ೧೫. ೩ ವ)

Search Dictionaries

Loading Results

Follow Us :   
  Download Bharatavani App
  Bharatavani Windows App