भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123Next >

ಊಟ

ಆಹಾರ ತಿನ್ನುವುದು (ಘೃತಮಿಲ್ಲದ ಊಟಮೇನೊಪ್ಪುಗುಮೇ: ಅಜಿತಪು, ೬. ೯೩)

ಊಡು

ಫಲ ನೀಡು (ಮುನ್ನೆರಪಿದುಭಯಕರ್ಮಂ ತನ್ನಂ ಪಿಡಿದೂಡುತಿರ್ಕುಂ ಇಂ ಜೋಯಿಸವೇಕೆ: ಸಮಯಪ, ೪. ೮); ತಿನ್ನಿಸು (ಮುನ್ನಿನ ದಿವಸದೊಳಗಣ ಪರಿಜನಮೆಲ್ಲಮಂ ಪಾರ್ವರಂ ಊಡುವ ನೆವದೊಳೆ ಪೊಱಮಡಿಸಿ: ಪಂಪಭಾ, ೩. ೪ ವ); ಲೇಪಿಸು (ಆ ನೃಪರೂಪಚಂದ್ರನಂತರದೊಳೆ ಮಾಡಿ ಕೇಸಡಿಗಳಂ ಹರಿಚಂದನದಿಂದಂ ಊಡಿ ಕೇಸರದ ತುಱುಂಬನಿಕ್ಕಿ: ಕಾದಂಸಂ, ೮. ೫೨); ಆಧಾರ (ಭೋಜನಕ್ರಿಯಾಯಾಂ ಆಧಾರೇಚ (ಶಬ್ದಮದ, ಧಾ, ೨೭೮)

ಊಡುಗೊಳ್

ಮರೆಮಾಚು (ನೀಡುಂ ಊಡುಗೊಂಡೋಡಿ ತತ್ ಪಿತೃವನಾಭ್ಯಂತರದೊಳಿರ್ದ ಭೂರುಹಮನೇಱ: ಕರ್ಣನೇಮಿ, ೩. ೧೬೧ ವ)

ಊಣ

ಊನ, ಕೊರತೆ (ಜಡಮತಿಯೊಳೆನ್ನೊಳ್ ಆವುದಮೂಣಂ ನೋಡದೆ: ಪುಷ್ಪದಂಪು, ೫. ೧೦೩)

ಊದು

ಬಾಯಿಂದ ಗಾಳಿ ಹೊರಬೀಳಿಸು, ಗಾಳಿ ಬೀಸು (ಸೊಡರ್ಗುಡಿ ಒಯ್ಯನಾಗೆ ಪೊಸಮಲ್ಲಿಗೆ ಕಂಪುನಾಱೆ ತಣ್ಪಿಡಿದ ಎಲರ್ ಊದೆ ಗಾವರದ ಮೆಲ್ಲುಲಿ ತುಂಬಿಯ ಗಾವರಂಂಗಳ ಗೆಡೆಗೊಳೆ: ಪಂಪಭಾ, ೪. ೧೧೦)

ಊನ

ಕೊರತೆ (ತನಗಿನಿತು ಊನಮಾಗೆ ಮೆಱೆದಾ ಭುಜವೀರ್ಯಮನಾಂತು ಮಾಣ್ದುದೇಂ: ಪಂಪಭಾ, ೧೨. ೧೯೭)

ಊನತ್ವ

ನ್ಯೂನತೆ, ಕೊರತೆ (ಸಾಹಸದ ನಿಮ್ಮಯ್ವರುಂ ಮಕ್ಕಳಾಗಿರೆಯುಂ ನಿಚ್ಚಲುಂ ಇಂದ್ರನೋಲಗದೊಳ್ ಅಂತಾ ಪಾಂಡುರಾಜಂಗೆ ನಿರ್ನೆರಮಪ್ಪ ಒಂದಪಮಾನದಿಂದಂ ಇನಿತೊಂದು ಊನತ್ವಮಪ್ಪಂತುಟೇ: ಪಂಪಭಾ, ೬. ೧೭)

ಊರೞುವು

ಊರಿನ ನಾಶ, ಊರಿಗೆ ಊರೇ ಸೂರೆಗೊಳ್ಳುವುದು (ತುಱುಗೋಳೊಳ್ ಪೆಣ್ಬುಯ್ಯಲೊಳ್ ಎಱೆವೆಸದೊಳ್ ನಂಟನ ಎಡಱೊಳ್ ಊರೞುವಿನೊಳಂ ತಱಸಂದು ಗಂಡುತನಮನೆ ನೆಱುಪದವಂ ಗಂಡನಲ್ಲಂ ಎಂತುಂ ಷಂಡಂ: ಗದಾಯು, ೨. ೨೪)

ಊರಾವು

ಊರಿನ ಹಸು (ಕಾೞ್ವಲಸುಂ ಊರ ಪಲಸುಂ ಕಡಾವುಂ ಊರಾವುಂ: ಧರ್ಮಾಮೃ, ೯. ೪೧ ವ)

ಊರಿಚ

ದಡ್ಡ, ಅಸಂಸ್ಕೃತ (ಇದೇಕೆ ಬಿಕ್ಕಿ ಬಿರಿದು ಅೞ್ತಪೆ ಎಂದಂ ಅದೊರ್ವಂ ಊರಿಚಂ: ಲೀಲಾವತಿ, ೨. ೧೧೯)

ಊರು

ತೊಡೆ (ತೋಡುವೆಂ ಒರ್ವನ ಒಳ್ಗರುಳಂ ಉರ್ವಿಗೆ ನೆತ್ತರನೆತ್ತಿ ಪೀರ್ದು ವಿರ್ದಾಡುವೆಂ ಒರ್ವನ ಊರುಗಳಂ ಎನ್ನ ಗದಾಶನಿಘಾತದಿಂದೆ ನುರ್ಗಾಡುವೆಂ: ಪಂಪಭಾ, ೯. ೨೪)

ಊರುಕ್ಷತ

ತೊಡೆಯ ಗಾಯ (ಅತಿವಿಶದವಿಶಾಲ ಊರುಕ್ಷತದಿಂದೊಱೆದನಿತು ಜಡೆಯುಮಂ ನಾಂದಿ ಮನಃಕ್ಷತದೊಡನೆ ಎೞ್ಚರಿಸಿದುದು ಉತ್ಥಿತಮಾ ವಂದಸ್ರಮಿಶ್ರಗಂಧಂ ಮುನಿಯಂ: ಪಂಪಭಾ, ೧. ೧೦೫)

ಊರುದಘ್ನ

ತೊಡೆ ಮುಳುಗುವಷ್ಟು ಮಟ್ಟ (ಪೆಣ್ಬಡೆ ನಿಂದುದು ಜಾನುದಘ್ನ ಊರುದರ್ಘನ ಕಟಿದಘ್ನ ನಾಭಿದಘ್ನ ಸ್ಥಳದೊಳ್: ಜಗನ್ನಾವಿ, ೧೪. ೯೫)

ಊರುದ್ವಯನ

ತೊಡೆ ಮುಳುಗುವಷ್ಟು ಮಟ್ಟ (ಲಾವಣ್ಯರಸಂ ತೆಕ್ಕನೆ ತೀವಿದ ತಿಳಿಗೊಳನ ಪಯಸಂ ಊರುದ್ವಯನಂ: ಅನಂತಪು, ೭. ೩೫)

ಊರುಬ್ಬೆ

ಊರಿಗೆ ಬಂದ ತೊಂದರೆ (ಊರುಬ್ಬೆಯಾದ ತಮ್ಮನ ಅಗುರ್ವಿನ ಅಗುರ್ವಿಂಗೆ ಉಬ್ಬೆಗಂಬಟ್ಟು .. .. ಮೆಲ್ಲನಿಂತೆಂದಂ: ನೇಮಿನಾಪು, ೫. ೨ ವ)

ಊರುಭಂಗ

ತೊಡೆ ಮುರಿಯುವಿಕೆ (ಕೃಷ್ಣೆಗಿಂದು ಧಮ್ಮಿಲ್ಲಮಂ ಇಂಬಿನಿಂ ಮುಡಿಸಿ ಕೌರವನಾಯಕನ ಊರುಭಂಗಮೊಂದಲ್ಲದೆ ಎಲ್ಲಮಂ ನೆಱೆಪಿದೆಂ ಗಡಂ ಓಳಿಯೆ ಕೇಳಿಂ ಎಲ್ಲರುಂ: ಪಂಪಭಾ, ೧೨. ೧೬೧)

ಊರುಯುಗ

ಊರುದ್ವಯ, ಎರಡು ತೊಡೆಗಳು (ಭವತ್ ಊರುಯುಗಂಗಳಂ ಆಜಿರಂಗದೊಳ್ ಗಿಜಿಬಿಜಿಮಾಡಲೆಂದು ಅವನ ಪೂಣ್ದುದು ನಿಕ್ಕುವಂ ಆಗದಿರ್ಕುಮೇ: ಪಂಪಭಾ, ೯. ೫೨)

ಊರುಯುಗ್ಮ

ಎರಡು ತೊಡೆಗಳು (ವ್ಯೂಢವಕ್ಷಸ್ಸ್ಥಳಂ ಆಜಾನುಪ್ರಲಂಬ ಪಬಲಭುಜಯುಗಂ ಚಾರುವೃತ್ತೋರು ಯುಗ್ಮಂ: ಆದಿಪು, ೮. ೫೧)

ಊರೆಳ್ಳು

ಬೇಸಾಯದಿಂದ ಬೆಳೆದ ಎಳ್ಳು (ಕಾಡೆಳ್ಳುಂ ಊರೆಳ್ಳುಂ ಎಂತು ಲೋಕದೊಳ್ ಒಳವು: ಧರ್ಮಾಮೃ, ೯. ೪೧ ವ)

ಊರೇಱು

ಬೇರೆ ಊರಿಗೆ ವಲಸೆ ಹೋಗು (ಊರೇಱಲ್ ಮನೆ ಮಾಡಲ್ಕೆ ಆರಂಬಂಗೆಯ್ಯಲ್ಕೆೞ್ತು: ಕಾವ್ಯಾವಲೋ, ೨೧೫)
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App