भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಚ್ಛೇದ್ಯಶತ್ರು

ನಾಶಮಾಡಬಹುದಾದ ಶತ್ರು (ಇಂತೀ ಬಲಂಗಳೊಳೊಂದುಮಿಲ್ಲದ ಕಾರಣದಿಂ ನಿಮ್ಮಡಿಗುತ್ಸಾಹಶಕ್ತಿ ಸಾಧಾರಣಂ, ಅದಱಂ ನಾವುಂ ಉಚ್ಛೇದ್ಯಶತ್ರುಗಳಾಗಿರ್ದೆವೆಂದು ನುಡಿದ ಚಿರಂಜೀವಿಯ ಮಾತಂ ಮೇಘವರ್ಣಂ ಕೇಳ್ದು: ಪಂಚತಂತ್ರ, ೨೯೭ ವ)

ಉಚ್ಛ್ರಿತ

ಮೇಲೆತ್ತಿದ (ಉಚ್ಛ್ರಿತಾತಪತ್ರ ಚಿತ್ರಾತಪತ್ರಧೋಧೂಯಮಾನ ಧವಳಚಾಮರ ಸಹಸ್ರಸಂಛಾದಿತ: ಆದಿಪು, ೧೧. ೧೪ ವ)

ಉಚ್ಛ್ವಸಿತ

ಉಬ್ಬಿದ (ಆ ದುಶ್ಶಾಸನ ಉರಃಸ್ಥಲ ಉಚ್ಛ್ವಸಿತ ಅಸೃಕ್ ಜಲಪಾನಮಂ ಬಯಸಿ ಬಾಯ್ ತೇರೈಸೆ ಸೈತಿರ್ಪೆನೇ: ಪಂಪಭಾ, ೭. ೫೮)

ಉಚ್ಛ್ವಾಸ

ಉಸಿರನ್ನು ಹೊರಕ್ಕೆ ಬಿಡು (ವಿಷಣ್ಣಾನನೆಯಂ ಮಾರ್ಗಾವಲಗ್ನನೇತ್ರೆಯಂಉಚ್ಛ್ವಾಸನಿತಪ್ತಾಧರರುಚಿಯಂ .. .. ಕಂಡು: ಯಶೋಧಚ, ೨. ೩೫); ಮರಣ; [ಜೈನ] ಕಾಲವನ್ನು ಅಳೆಯುವ ಒಂದು ಪ್ರಮಾಣ (ಸಮಯಾವಳಿಕ ಉಚ್ಛ್ವಾಸಸ್ತೋಕನಿಮೇಷನಾಳಿಕಾಮುಹೂರ್ತದಿವಸ .. .. ಸಂವತ್ಸರಾದಿ ಗಣನಾಕ್ರಮದಿಂ: ಆದಿಪು, ೬.. ೪೮ ವ)

ಉಚ್ಛ್ವಾಸಭರತ್

ಉಸಿರಾಟದ ವೇಗದಿಂದಾದ (ವಿಷಮ ಕಠೋರ ಕೂರ್ಮ ಘರ್ಮನಿರ್ಭರೋಚ್ಛಾಸ ಭರದ್ವೈಧೀಭವದಂಭಃಪ್ರಕಟಿತ ಅಗಾಧ ರಂಧ್ರಾವರ್ತಮಾನ ಜಳಚರ ಸಂಚರಣ ವಿಸ್ಮಯನೀಯ ಭಯಾನಕೆಯುಂ: ಆದಿಪು, ೫. ೮೭ ವ)

ಉಚ್ಛ್ವಾಸಭಿನ್ನಶ್ರಮ

ಉಸಿರಾಟದ ತೊಂದರೆ (ಬಾಷ್ಪಮಂ ಸೋಲ್ತ ಸಿಗ್ಗಿಂ ಪೂರಂಬಾಯ್ವ ಬಾಷ್ಪಂಗಳೊಳ್ ಅಸಮಶರಂ ಮಾಡಿದ ಉಚ್ಛ್ವಾಸಭಿನ್ನಶ್ರಮಂ ಪ್ರೋಡ್ಡೀನ ದೀನಶ್ರಮದೊಳ್ .. .. ಬೆರಸಿದಳ್: ನೇಮಿನಾಪು, ೩. ೨೨)

ಉಜ್ಜವಣೆ

[ಉದ್ಯಾಪನಾ] ವ್ರತಸಮಾಪ್ತಿ (ಒಂದಕ್ಷೆಹಿಣಿಬಲಂ ಎರಡುಂ ದೆಸೆಯೊಳಂ ಉೞದುವು ಅಂತೆ ಭಾರತಂ ಎಮಗೆ ಇಂದು ಉಜ್ಜವಣೆ ದಲ್ ಎಂದು ಅದಟೊಂದುತ್ತರಮಾಗೆ ಕಾದಿದರ್ ಕಟ್ಟಾಳ್ಗಳ್: ಪಂಪಭಾ, ೧೩. ೩೬); ನೆರವೇರುವಿಕೆ (ಬಲದೇವಂ ಬಲದೇವನುಜ್ಜವಣೆಯೊಳ್ ಮುಂದಾದರಂ ಕೊಂದ ಮೆಯ್ಗಲಿ ತಮ್ಮಂ ಸಯೆ: ಶಾಂತಿಪು, ೮. ೧೦೮)

ಉಜ್ಜವಣೆವಡೆ

ಮುಗಿಸು, ಪೂರ್ಣಗೊಳಿಸು (ಆವಳ್ ವನಿತಾನಿಷ್ಪಾದನಕ್ಕೆ ಉಜ್ಜವಣೆವಡೆದಳೋ ಪದ್ಮಜಂಗೆ: ಲೀಲಾವತಿ, ೪. ೬೧)

ಉಜ್ಜಳ

[ಉಜ್ಜ್ವಲ] ಪ್ರಕಾಶಿಸುವ (ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತ ರಸಪ್ರಸಾದಂ ಉಜ್ಜಳಜಸಂ ಅಗಸಂಗತ ಲಸತ್ ಭಸಿತಂ ಪ್ರಭುಶಕ್ತಿ ಶಕ್ತಿ ನಿರ್ಮಳಮಣಿಭೂಷಣಂ ಫಣಿಭೂಷಣಂ ಆಗೆ ನೆಗೞ್ತೆಯಂ ಪುದುಂಗೊಳಿಸಿದಂ ಈಶ್ವರಂ ನೆಗೞ್ದ ಉದಾರಮಹೇಶ್ವರಂ ಈಗೆ ಭೋಗಮಂ: ಪಂಪಭಾ, ೧. ೨)

ಉಜ್ಜಳಿಕೆ

ಪ್ರಕಾಶ (ಅದೇಂ ಬೞಕೆ ಬಿಂಬದ ಉಜ್ಜಳಿಕೆಯೋ ಸುಧಾಸೂತಿಯಾ: ಆದಿಪು, ೧೨. ೭)

ಉಜ್ಜಳಿಸು

ಪ್ರಕಾಶಿಸು (ಪೊಸದಳಿರುಟ್ಟುದು ಉಜ್ಜಳಿಸೆ .. .. ಒಸೆದಾಡುವರಾ ಮೃಗಾಕ್ಷಿಯರ್: ಲೀಲಾವತಿ, ೧೧. ೩)

ಉಜ್ಜುಗ

[ಉದ್ಯೋಗ] ಪ್ರಯತ್ನ (ಎಂದು ಪರಿಚ್ಛೇದಿಸಿ ಮನದೊಳ್ ಉಳ್ಳ ಉಜ್ಜುಗದಿಂ ಅಂಂಜುತ್ತಿರ್ದೊಂದು ದೆವಸಂ: ಹರಿವಂಶ, ೧೩. ೧೮ ವ); ಉದ್ದೇಶ (ಗುಣಾರ್ಣವಂಗೆ ಕುಡು ಗೆಲ್ಲಮಂ ಇಂತಿದೆ ಕಜ್ಜದ ಉಜ್ಜುಗಂ: ಪಂಪಭಾ, ೫. ೧೦೨)

ಉಜ್ಜುಗಿಸು

ಪ್ರಯತ್ನಸು (ಭೂಭುಜ ಭೂನುತನಾಗಳ್ ಉಜ್ಜುಗಿಸೆತದ್ವಿಜಯಾವರಜಂ ಪ್ರತಾಪಪಂಚಾನನಂ ಇಂತು ಬಿನ್ನವಿಸಿದಂ: ಆಚವರ್ಧ, ೩. ೩೭)

ಉಜ್ಜೃಂಭಿತ

ತೀವ್ರವಾದ (ಅರುಣ ಉಜ್ಜೃಂಭಿತ ಚರ್ಮ ಅಸ್ತಿ ಶಕಲಂ ವಾಲಂ ವಿಷಾಣಂ: ತ್ರಿಷಷ್ಟಿಪು, ೨೭. ೩೩)

ಉಜ್ಜೃಂಭಿಸು

ಏಳೆಗೆಹೊಂದು (ಪಾರಾವಾರದೊಳ್ ಬಂದಂ ವೀಚಿಕಾವ್ರಜಂ ಉಜ್ಜ್ಜೃಂಭಿಸೆ ಬಂದಂ ವಿಹಂಗಾಧಿಪಂ: ಜಗನ್ನಾವಿ, ೧೩. ೩೭)

ಉಜ್ಜ್ವಲ

ಹೊಳೆಯುವ, ಉರಿಯುವ (ಸಂಮಾರ್ಜಿತ ಉಜ್ಜ್ವಲದಶನನಿಚಯ ತಾಂಬೂಲಚರ್ವಣಭರಿತ ಕಪೋಲರುಂ ಗೋನಿಯೋಗ ದಂಢಧಾರರುಂ ಆಗಿ: ಜಗನ್ನಾವಿ, ೪. ೮೦ ವ)

ಉಜ್ಜ್ವಲಬಾಣ

ಪ್ರಕಾಮಾನವಾದ ಬಾಣ[ವುಳ್ಳವನು] (ಉಗ್ರವೈರಿ ಮದವನ್ಮಾತಂಗಕುಂಭ ಆರ್ದ್ರ ಮೌಕ್ತಿಕ ಲಗ್ನೋಜ್ಜ್ವಲಬಾಣನಂ ಪ್ರವಿಲಸತ್ ಗೀರ್ವಾಣ ದಾತವ್ಯ ಸಾಯಕ ಸಂಪೂರ್ಣಕಳಾಪ್ರವೀಣನಂ ಇಳಾಭಾರಕ್ಷಮ ಅಕ್ಷೂಣನಂ: ಪಂಪಭಾ, ೧. ೧೩೪)

ಉಜ್ಜ್ವಲಿಸು

ಹೊಳೆ, ಪ್ರಕಾಶಿಸು (ಉಜ್ಜ್ವಲಿಸಿ ಬೆಳೆವ ಮಣಿದೀಪದವೋಲ್: ಅಜಿತಪು, ೭. ೧೯)

ಉಜ್ಝಿತಲಕ್ಷ್ಮ

ಕಳಂಕವಿಲ್ಲದ (ಅತಿಶುದ್ಧಮಾಯ್ತು ಸತಿಯಾಕೃತಿ ದಿವ್ಯದ್ರವ್ಯ ಗರ್ಭಶೋಧನದಿಂದ ಉಜ್ಝಿತಲಕ್ಷ್ಮಮೆನಿಸಿ: ಚಂದ್ರಪ್ರಪು, ೧೧. ೧೪೮)

ಉಜ್ವಳಂ ಮಾಡು

ಶುಚಿಗೊಳಿಸು (ನಿಪುಣಿಕೆಯಂ ಜಿನಜನನಿಯ ಸೆಜ್ಜೆಯಂ ಉಜ್ವಳಂ ಮಾಡಲುಂ: ಆದಿಪು, ೭. ೨೧ ವ)

Search Dictionaries

Loading Results

Follow Us :   
  Download Bharatavani App
  Bharatavani Windows App