भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಚ್ಚವಿಗ್ರಹ

ಘೋರಯುದ್ಧ (ತಮ್ಮ ಬಲಮನೊಂದು ಮಾಡಿ ಕೂಡಿಕೊಂಡು ಚಕ್ರವರ್ತಿಯೊಳ್ ಉಚ್ಚವಿಗ್ರಹಂಗೆಯ್ಯಲ್: ಆದಿಪು, ೧೩. ೫೬ ವ)

ಉಚ್ಚಸ್ತನಿ

ತೋರ ಮೊಲೆಯವಳು (ನೋಡುವೆನೆನ್ನೆಚ್ಚೆಯೊಳೀ ಮುನಿಯ ವರದ ಮಹಿಮೆಯಂ ಎನುತ ಅಂದು ಉಚ್ಚಸ್ತನಿ ಗಂಗೆಗೆ ಶಫರ ಉಚ್ಚಳಿತ ತರತ್ತರಂಗೆಗೆ ಒರ್ವಳೆ ಬಂದಳ್: ಪಂಪಭಾ, ೧. ೯೦)

ಉಚ್ಚಸ್ಥಾನ

ಮಗು ಹುಟ್ಟುವ ಕ್ಷಣದಲ್ಲಿ ಗ್ರಹಗಳು ಇರುವ ಶ್ರೇಷ್ಠ ಸ್ಥಾನ (ಗ್ರಹಂಗಳೆಲ್ಲಂ ತಂತಮ್ಮ ಉಚ್ಚಸ್ಥಾನಂಗಳೊಳಿರ್ದು ಷಡ್ವರ್ಗಸಿದ್ಧಿಯನುಂಟುಮಾಡೆ ಶುಭಲಗ್ನೋದಯದೊಳ್: ಪಂಪಭಾ, ೧. ೧೪೪ ವ)

ಉಚ್ಚಳತ್

ಮೇಲೆ ಚಿಮ್ಮುವ (ಮತ್ತದ್ವಿಪೇಂದ್ರಾವಳಿಹಸ್ತಾಗ್ರ ಉಚ್ಚಳತ್ ಶೀಕರಸಮುದಯಂ: ಆದಿಪು, ೧೩. ೮)

ಉಚ್ಚಳಿತ

ಮೇಲೆ ಚಿಮ್ಮಿದ (ಪುಚ್ಚವಣಂ ನೋಡುವೆನೆನ್ನೆಚ್ಚೆಯೊಳೀ ಮುನಿಯ ವರದ ಮಹಿಮೆಯಂ ಎನುತ ಅಂದು ಉಚ್ಚಸ್ತನಿ ಗಂಗೆಗೆ ಶಫರ ಉಚ್ಚಳಿತ ತರತ್ತರಂಗೆಗೆ ಒರ್ವಳೆ ಬಂದಳ್: ಪಂಪಭಾ, ೧. ೯೦)

ಉಚ್ಚಳಿಸು

ಮೇಲಕ್ಕೆ ಚಿಮ್ಮು (ಪಲತೆಱದ ವಚನಂಗಳಂ ಉಚ್ಚರಿಸುತ್ತುಂ ಉಚ್ಚಳಿಪ ವಿಳೋಚನಜಳಂಗಳಿಂ: ಆಚವರ್ಧ, ೨. ೬೦ ವ); ಎಲ್ಲೆ ಮೀರು (ಎಚ್ಚೊಡೆ ತಪೋಮರೀಚಿಯನುಚ್ಚಳಿಸಲ್ಕಾಱದಿತ್ತ ತುರುಗಿದ ಶರಮಂ ಚೆಚ್ಚರದೀಕ್ಷಿಸಿ ಛಲದಿಂದೆಚ್ಚಂ ಪಂಚೇಷು ಮದನಶರದಿಂದಾಗಳ್: ಗಿರಿಜಾಕ, ೮. ೧೮)

ಉಚ್ಚಾಟಿತ

ಎಸೆಯಲ್ಪಟ್ಟ (ವಾಜಿಖರಾಹತಿಸ್ಥಪುಟಿತ ಗ್ರಾವಸ್ಥಳಂ ಸೈನ್ಯದಂತಿಕರೋಚ್ಚಾಟಿತ ಸಲ್ಲಕೀಕಿಸಲಯಂ: ಆದಿಪು, ೧೩. ೫೫)

ಉಚ್ಚಾಟಿಸು

ಓಡಿಸು (ಬೇಳ್ವೆಗಳ್ಗೆ ಉಪದ್ರವಂಗೆಯ್ವ ನಿಶಾಟಕೋಟಿಯಂ ನಿಶಿತಶರಕೋಟಿಯಿಂದಂ ಉಚ್ಚಾಟಿಸಿ ಕೆಲವು ದಿವಸಮಿರ್ದು: ಪಂಪಭಾ, ೪. ೧೫ ವ)

ಉಚ್ಚಾರ್‍ಯಮಾಣ

ಉಚ್ಚರಿಸುತ್ತಿರುವ (ಪುರೋಹಿತ ಉಚ್ಚಾರ್‍ಯಮಾಣ ಪುಣ್ಯಾಶೀರ್ವಚನನಿರ್ಘೋಷದತ್ತಕರ್ಣನುಂ ಆಗಿರ್ದಾಗಳ್: ಆದಿಪು, ೧೧. ೧೦ ವ)

ಉಚ್ಚಾವಚ

ಮೇಲು ಮತ್ತು ಕೀಳು, ವಿವಿಧ (ಉಚ್ಚಾವಚನಾದದಿಂ ಆದಂ ತೀವಿದ ಕುಪ್ಪಿಗೆವೊಲಾದುದು ಅಬ್ಜಭವಾಂಡಂ: ಜಗನ್ನಾವಿ, ೧೨. ೯)

ಉಚ್ಚಾಸನ

ಉನ್ನತ ಪೀಠ (ಬೇಗಂ ಉಚ್ಚಾಸನದಿಂದ ಇದರೇೞಂ ಪೇೞವಲದೇಂ ಕರಂ ತೀರ್ಥಕರನ ಪುಣ್ಯಂ ಪಿರಿದೋ: ಆದಿಪು, ೭. ೪೦)

ಉಚ್ಚಿತ್ತಿ

ಕತ್ತರಿಸುವುದು (ಮೂಲೋತ್ತರಾದಿಭೇದ ಭಿನ್ನಕರ್ಮಪ್ರಕೃತಿಗಳ ನಿರ್ಮೂಳ ಉಚ್ಛಿತ್ತಿ ಮೋಕ್ಷಮೆಂಬುದು: ಆದಿಪು, ೧೦. ೬೩ ವ)

ಉಚ್ಚಿಷ್ಟ

ಎಂಜಲು (ಪುಣ್ಯಸ್ತ್ರೀಯರ ಉಚ್ಚಿಷ್ಟದಾಗರಮಪ್ಪಾ ಪಡಿಗಕ್ಕೆ .. .. ಸಾಮ್ಯಸ್ಥಾನಮೆಂದಿಂತು ಕೊಕ್ಕರಿಪಂ: ಸಮಯಪ, ೫. ೬೯)

ಉಚ್ಚಿಷ್ಟಪಕ್ವ

ತಿಂದು ಬಿಟ್ಟ ಹಣ್ಣು (ಮೆಲ್ದು ಉಗುೞ್ದ ಸಹಕಾರೋಚ್ಚಿಷ್ಟಪಕ್ವಂಗಳಂ: ಸುಕುಮಾಚ, ೪. ೫೭)

ಉಚ್ಚು

ನಿಮಿರಿ ನಿಲ್ಲು (ಇಳೆಯಂ ಸಾಸಿರ ಯೋಜನಂಬರೆಗಂ ಆನುಚ್ಚಿರ್ದೆನಿರ್ದುಂ ಮಹೀತಳ ಮಧ್ಯಸ್ಥನನೆಂತುಮಲ್ಲದೆಯು ಇಂದ್ರಾವಾಸಮಂ ಮುಟ್ಟಿದೆಂ ಬೆಳಗುತ್ತಿರ್ಪ್ಪವು: ಸುಕುಮಾಚ, ೧. ೬೫)

ಉಚ್ಚುಂಬ್ಯಮಾನ

ಚುಂಬಿತವಾದ (ಕರಿಸೇನಾಸಾರಿನದ್ಧ ಉತ್ತರಳಕದಳಿಕಾ ಕಾನನೋಚ್ಚುಂಬ್ಯಮಾನಾಂಬರಚಕ್ರಂ: ಆದಿಪು, ೪. ೨೪)

ಉಚ್ಚೈರ್ಧ್ವಾನ

ಗಟ್ಟಿ ಕೂಗು (ಬಹಿರುದ್ಯಾನಾಂತರದೊಳ್ ಸಹಸೋದಿತ ಮತ್ತಕೋಕಿಲ ಉಚ್ಚೈರ್ಧ್ವಾನಂ ಮುಹುರಾಕರ್ಣಿಸೆ: ಕವಿರಾಮಾ, ೧. ೫೫)

ಉಚ್ಚೈಶ್ರವಸ

ಇಂದ್ರನ ಕುದುರೆ (ಉಚ್ಚೈಸ್ರವಸಂ ಅದುವೆ ದಿವಿಜತುರಂಗಂ: ಅಭಿಧಾವ, ೧. ೧. ೩೭)

ಉಚ್ಛೃಂಖಲ

ಸಂಕೋಲೆಗೊಳಪಡದ, ಕಟ್ಟುಪಾಡುಗಳಿಲ್ಲದ (ದೇವ ಬಲಿಬಂಧನ ಉಚ್ಚೃಂಖಲಾಕಾರ ಜಯ ದೇವ: ಜಗನ್ನಾವಿ, ೫. ೧೧೨ ವ)

ಉಚ್ಛೇದನ

ತುಂಡರಿಸುವುದು, ನಾಶ ಮಾಡುವುದು (ಅಂತು ದೀರ್ಣೋಚ್ಛೇದನಮಂ ನಿರಾತಂಕಮಾಗಿ: ಶಾಂತಿಪು, ೧೧. ೪೮ ವ)

Search Dictionaries

Loading Results

Follow Us :   
  Download Bharatavani App
  Bharatavani Windows App