भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಅಂದಗಾತಿ

ಚೆಲುವೆ.

ಅಂದಗೆಡಿಸು

ರೂಪುಗೆಡಿಸು.

ಅಂದಣ

1. ಮೇನೆ.

2. ಕಣ್ಣಿನ ಪೊರೆ.

ಅಂದವಿಡು

1. ಚೆನ್ನಾಗಿ ಇಡು.

2. ಸಮಾಧಾನಗೊಳಿಸು.

ಅಂದಳ(ಲ)

ಮೇನೆ.

ಅಂದಾಜು

1. ಊಹೆ.

2. ಒಂದು ವಸ್ತುವಿಗಾಗುವ ಬೆಲೆ

ಕೆಲಸಕ್ಕಾಗಿ ತಗುಲುವ ವೆಚ್ಚ ಮುಂತಾದುವುಗಳ ಬಗೆಗೆ ಮಾಡುವ ಊಹೆ.

ಅಂದಾಜುಪಟ್ಟಿ

ಲೆಕ್ಕದ ಅಂದಾಜನ್ನು ತಿಳಿಸುವ ಪಟ್ಟಿ.

ಅಂದಾಜುಪತ್ರ

ಅಂದಾಜುಪಟ್ಟಿ.

ಅಂದಿಗ

ಆ ರೀತಿಯಾದವನು.

ಅಂದಿಸು

ಎಟುಕಿಸು.

ಅಂದು

1. ಎಟುಕಿಸಿಕೊಳ್ಳು.

2. ಎಟುಕು.

ಅಂದು

ಆ ಪಕ್ಷದಲ್ಲಿ.

ಅಂದು

ಆ ದಿನ.

ಅಂದು(ದಿ)ಗೆ

ಅಂದುಕ.

ಅಂದುಕ

1. ಸರಪಳಿ.

2. ಆನೆಯ ಕಾಲಿನ ಸರಪಳಿ.

3. ಕಾಲಂದುಗೆ.

ಅಂದೇಶ

ಕೇಡಾಗುವುದೆಂಬಭಯ – ಶಂಕೆ.

ಅಂದೋಜಿ

ನಿಷೇಕಪ್ರಸ್ತದ ಮನೆಯಲ್ಲಿ ವಧೂವರರ ಉಪಯೋಗಕ್ಕಾಗಿ ಓರಣವಾಗಿ ಜೋಡಿಸಿಟ್ಟಿರುವ ಹಣ್ಣು ತಿಂಡಿ ಮುಂತಾದ ಸಾಮಗ್ರಿ.

ಅಂಧ

1. ಕಣ್ಣು ಕಾಣದವನು.

2. ಕತ್ತಲೆ.

3. ಒಬ್ಬ ರಾಕ್ಷಸನ ಹೆಸರು.

ಅಂಧಕ

1. ಅಂಧ.

2. ಯದುವಂಶದಲ್ಲಿ ಹುಟ್ಟಿದ ಒಬ್ಬ ಕ್ಷತ್ರಿಯ.

3. ಧೃತರಾಷ್ಟ್ರ.

4. ಒಂದು ದೇಶದ ಹೆಸರು.

ಅಂಧಕಾರ

ದಟ್ಟವಾದ ಕತ್ತಲೆ.

Search Dictionaries

Loading Results

Follow Us :   
  Download Bharatavani App
  Bharatavani Windows App