भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಭರ್ತೃನಿಂದಕ

ಒಡೆಯನನ್ನು ದೂಷಿಸು ವವನು.

ಭರ್ಮ

1. ಬೆಂಬಲ.

2. ವೇತನ.

3. ಬಂಗಾರ.

ಭರ್ಮಹಮ್ರ್ಯ

ಚಿನ್ನದ ಉಪ್ಪರಿಗೆ ಮನೆ.

ಭಲ(ಲೆ)

ಮೆಚ್ಚುಗೆಯನ್ನು ಸೂಚಿಸುವ ಒಂದು ಭಾವಸೂಚಕಾವ್ಯಯ.

ಭಲರೆ

ಭಲ.

ಭಲ್ಲ

1. ಅರ್ಧಚಂದ್ರಾಕಾರವಾದ ತುದಿಯುಳ್ಳ ಒಂದು ಬಗೆಯ ಬಾಣ.

2. ಈಟಿ.

3. ಕರಡಿ.

ಭಲ್ಲಾತಕ

ಗೇರುಮರ ಮತ್ತು ಅದರ ಬೀಜ.

ಭಲ್ಲಾಸನ

ಬಿಲ್ಲು.

ಭಲ್ಲೂಕ

ಒಂದು ಬಗೆಯ ಕಾಡುಪ್ರಾಣಿ.

ಭಲ್ಲೆ

1. ಈಟಿ.

2. ಜೋಳದ ದಂಟು,- ಕಾಂಡ.

ಭಲ್ಲೆಯ

ಒಂದು ಬಗೆಯ ಆಯುಧ.

ಭವ

1. ಇರುವಿಕೆ.

2. ಹುಟ್ಟು.

3. ಹುಟ್ಟಿನಿಂದ ಸಾವಿನವರೆಗಿರುವ ಅವಧಿ.

4. ಸಂಸಾರ.

5. ಶಿವ.

6. ಮರುಹುಟ್ಟು.

7. ಜಿನ.

8. ಗುರುವಿನ ಸಂಕೇತ.

ಭವಕ್ಷಯ

ಸಂಸಾರವನ್ನು ನಿವಾರಿಸುವವನು.

ಭವಗೆಡು

1. ಸಂಸಾರಬಂಧನದಿಂದ ಮುಕ್ತವಾಗು.

2. ಸಾಂಸಾರಿಕ ಕ್ಲೇಶಗಳಿಂದ ತಲ್ಲಣಿಸು.

ಭವಂತಿ

ಮನೆಯ ನಡುವೆ ಇರುವ ಅಂಗಳ.

ಭವತಿ

ಗೌರವಾನ್ವಿತಳಾದ ಮಹಿಳೆ.

ಭವದೂರ

1. ಸಂಸಾರದಿಂದ ದೂರ ವಾಗಿರುವವನು.

2. ಶಿವ.

ಭವನ

1. ಇರುವಿಕೆ.

2. ಹುಟ್ಟು.

3. ವಾಸಿಸುವ ಸ್ಥಳ.

4. ಸ್ಥಳ.

ಭವನಿಕೆ

ಅರಮನೆ.

ಭವಪಾಶ

ಸಂಸಾರ ಬಂಧನ.

Search Dictionaries

Loading Results

Follow Us :   
  Download Bharatavani App
  Bharatavani Windows App