भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous12345678910Next >

1. ಕನ್ನಡ ವರ್ಣಮಾಲೆಯ ಇಪ್ಪತ್ತೇಳನೆಯ ಅಕ್ಷರ.

2. ಮೂರು ಎಂಬ ಸಂಖ್ಯೆಯ ಸಂಕೇತ.

ಡಂಕ

ಒಂದು ಬಗೆಯ ಚರ್ಮವಾದ್ಯ.

ಡಂಕಣ

ಡಂಕ.

ಡಕಾಯಿತ

ಕೊಳ್ಳೆ ಹೊಡೆಯುವವನು.

ಡಕಾಯಿತಿ

ಕೊಳ್ಳೆ.

ಡಂಕು

ಸೇಡು.

ಡಂಕುಹಿಡಿ

ಸೇಡನ್ನು ಹೊಂದಿರು.

ಡಂಕೆ

ಗುದಿಗೆ.

ಡಕ್ಕೆ

ಒಚಿದು ಬಗೆಯ ಚರ್ಮವಾದ್ಯ.

ಡಂಗ

1. ಡಂಕೆ.

2. ರಾಜ್ಯದ ಗಡಿ ಪ್ರದೇಶಗಳಲ್ಲಿಯ ಘಾಟಿಮಾರ್ಗಗಳಲ್ಲಿರುವ ಸುಂಕದ ಕಟ್ಟೆ,- ಕಾವಲುಕಟ್ಟೆ.

3. ಕೋಟೆ.

4. ಹಟ.

ಡಗಲೆ

ಸಡಿಲವೂ ಉದ್ದವೂ ಆದ ಅಂಗಿ ಮೊದಲಾದುವು.

ಡಂಗಹಾಕು

1. ಘಾಟಿಮಾರ್ಗದಲ್ಲಿ ಸುಂಕದ ಕಟ್ಟೆಯನ್ನು ಸ್ಥಾಪಿಸು,- ಕಾವಲು ಕಟ್ಟೆ ಯನ್ನೇರ್ಪಡಿಸು.

2. ಕಾದು ಕುಳಿತಿರು.

ಡಂಗು(ಗೂ)ರ

1. ತಮಟೆ, ಡೋಲು ಮೊದಲಾದುವನ್ನು ಬಾರಿಸಿ, ಯಾವುದಾದರೂ ವಿಷಯವನ್ನು ಘೋಷಿಸಿ ಬಹಿರಂಗ ಪಡಿಸುವುದು.

2. ಡಂಗುರ ಸಾರಲು ಬಾರಿಸುವ ತಮಟೆ ಮೊದಲಾದ ವಾದ್ಯ.

ಡಂಗುರಂಬೊಯ್

ತಮಟೆ ಮೊದಲಾದು ವನ್ನು ಬಾರಿಸಿ ವಿಷಯವನ್ನು ಬಹಿರಂಗ ಪಡಿಸು,- ಸಾರು.

ಡಂಗುರಹೊಡೆ

ಡಂಗುರಂಬೊಯ್.

ಡಂಗುರಿಸು

1. ಡಂಗುರಂಬೊಯ್.

2. ಎಲ್ಲರಿಗೂ ತಿಳಿಯುವಂತೆ ಪ್ರಕಟಿಸು,- ಸ್ಪಷ್ಟಪಡಿಸು.

ಡಂಗೆ

1. ಹಟ.

2. ಗುದಿಗೆ.

ಡಗೆ

1. ಸೆಕೆ.

2. ಭಯ.

ಡಗೆವೊಯ್

1. ಸೆಕೆ ತಾಗು,- ಹೆಚ್ಚಾಗು.

2. ಭಯದಿಂದ ತತ್ತರಿಸು,- ನಡುಗು.

ಡಪ್ಪು

ಒಂದು ಬಗೆಯ ಚರ್ಮವಾದ್ಯ.
< previous12345678910Next >

Search Dictionaries

Loading Results

Follow Us :   
  Download Bharatavani App
  Bharatavani Windows App