भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

sacerdotalist

ನಾಮವಾಚಕ

ಪೌರೋಹಿತ್ಯವಾದಿ; ಪುರೋಹಿತವಾದದ – ಪ್ರತಿಪಾದಕ ಯಾ ಸಮರ್ಥಕ.

sacerdotalize

ಸಕರ್ಮಕ ಕ್ರಿಯಾಪದ

ಪೌರೋಹಿತ್ಯಕ್ಕೆ ಒಳಪಡಿಸು; ಪುರೋಹಿತರಿಗೆ ಅಧೀನವಾಗಿಸು.

sacerdotally

ಕ್ರಿಯಾವಿಶೇಷಣ

ಪೌರೋಹಿತ್ಯವಾಗಿ; ಪುರೋಹಿತ ರೀತಿಯಲ್ಲಿ.

sachem

ನಾಮವಾಚಕ

  • ಕೆಲವು ಅಮೆರಿಕನ್‍ ಇಂಡಿಯನ್‍ ಬಣಗಳ ಪರಮೋಚ್ಚ ನಾಯಕ.
  • ಪ್ರತಿಷ್ಠಿತ ವ್ಯಕ್ತಿ; ದೊಡ್ಡ ಮನುಷ್ಯ.
  • (ಅಮೆರಿಕನ್‍ ಪ್ರಯೋಗ) ರಾಜಕೀಯ ಮುಖಂಡ ಯಾ ನಾಯಕ.

sachet

ನಾಮವಾಚಕ

  • ಸಣ್ಣ ಚೀಲ, ಸಂಚಿ ಯಾ ಪೊಟ್ಟಣ; ಯಾವುದೇ ವಸ್ತುವಿನ, ಮುಖ್ಯವಾಗಿ ಷ್ಯಾಂಪೂವಿನ ಸ್ವಲ್ಪ ಭಾಗವನ್ನು ಇಡುವಂತಿರುವ, ಸಣ್ಣ ಚೀಲ.
  • ಚಿಕ್ಕ ಸುಗಂಧ ಚೀಲ, ಸಂಚಿ.
  • ಸುಗಂಧ; ಉಡುಪು ಮೊದಲಾದವುಗಳಲ್ಲಿಡಲು ಪೊಟ್ಟಣವಾಗಿ ಕಟ್ಟಿರುವ, ಪುಡಿಯಾದ ಪರಿಮಳ ಯಾ ಸುಗಂಧ ದ್ರವ್ಯ.
  • ಸುಗಂಧ (ದ್ರವ್ಯದ) ಪೊಟ್ಟಣ.

sack

ನಾಮವಾಚಕ

ಪದಗುಚ್ಛ

hit the sack ಮಲಗು.

  • (ಸೆಬಉ, ಕಾಗದ ಯಾ ಪ್ಲಾಸ್ಟಿಕ್‍ನಿಂದ ಮಾಡಿದ, ಸಾಮಾನುಗಳನ್ನು ಶೇಖರಿಸಿಡಲು ಯಾ ಒಯ್ಯಲು ಬಳಸುವ, ಗಟ್ಟಿಯಾದ) ದೊಡ್ಡಚೀಲ; ಗೋಣಿಚೀಲ.
  • (ಪದಾರ್ಥಗಳನ್ನು ತುಂಬಿರುವ) ಚೀಲ; ಮೂಟೆ: a sack of potatoes ಆಲೂಗೆಡ್ಡೆಗಳ ಮೂಟೆ.
  • (ಧಾನ್ಯ ಮೊದಲಾದವುಗಳ ಅಳತೆಯಾಗಿ) ಚೀಲ; ಮೂಟೆ; ಒಂದು ಚೀಲದಲ್ಲಿ ಹಾಕುವಷ್ಟು ಪ್ರಮಾಣ: at 10 rupees a sack ಒಂದು ಮೂಟೆಗೆ 10 ರೂಪಾಯಿಗಳಂತೆ.
  • (ಆಡುಮಾತು) ವಜಾ; ಕೆಲಸದಿಂದ ತೆಗೆದುಹಾಕುವುದು.
  • (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಹಾಸಿಗೆ.
  • (ಉಡುಪಿನ ವಿಷಯದಲ್ಲಿ)
    1. ಹೆಂಗಸಿನ ಸಡಿಲವಾದ ಮೋಟು ದಗಲೆ ಯಾ ಕವುದಿ.
    2. (ಪ್ರಾಚೀನ ಪ್ರಯೋಗ ಯಾ ಚರಿತ್ರೆ) ತೊಂಗುವಸ್ತ್ರ; ನೆಲದ ಮೇಲೆ ಬಿದ್ದು ಹರಿಯುವಂತೆ ಉಡುಪಿನ ಭುಜಗಳಿಗೆ ಲಗತ್ತಿಸಿರುವ ನಿರಿಮಡಿಕೆಯ ರೇಷ್ಮೆ ಬಟ್ಟೆ.
  • (ಹೆಂಗಸಿನ ಯಾ ಗಂಡಸಿನ) ದಗಲೆ ಅಂಗಿ; ಕಪನಿ(ಣಿ); ಬೆನ್ನಿಗೆ ಸರಿಯಾಗಿ ಕೂರದ, ಸಡಿಲವಾಗಿ ತೊಂಗುವ ಅಂಗಿ.
  • ಯಾವುದೇ ಬಗೆಯ ಚೀಲ, ಮೂಟೆ.

sack

ಸಕರ್ಮಕ ಕ್ರಿಯಾಪದ

  • ಚೀಲಕ್ಕೆ ಯಾ ಚೀಲಗಳಿಗೆ – ತುಂಬಉ, ಭರ್ತಿಮಾಡು.
  • (ಆಡುಮಾತು) ಕೆಲಸದಿಂದ ತೆಗೆದುಹಾಕು, ವಜಾ ಮಾಡು.

sack

ಸಕರ್ಮಕ ಕ್ರಿಯಾಪದ

  • (ಗೆದ್ದ ಸೈನ್ಯ ಯಾ ಅದರ ಸೇನಾಪತಿಯ ವಿಷಯದಲ್ಲಿಪಟ್ಟಣ ಮೊದಲಾದವನ್ನು)
    1. ಕೊಳ್ಳೆ ಹೊಡೆ; ಸೂರೆ ಮಾಡು; ಲೂಟಿ ಹೊಡೆ; ಸುಲಿಗೆ ಮಾಡು.
    2. ಕೊಳ್ಳೆಗೆ ಈಡುಮಾಡು; ಸುಲಿಗೆಗೆ ಒಪ್ಪಿಸು.
  • (ಕಳ್ಳರು ಮೊದಲಾದವರ ವಿಷಯದಲ್ಲಿ) ದೋಚು; ದೋಚಿಕೊಂಡು ಹೋಗು; ಇದ್ದದ್ದನ್ನೆಲ್ಲಾ ಹೊತ್ತುಕೊಂಡು ಹೋಗು ಯಾ ಸಾಗಿಸು.

sack

ನಾಮವಾಚಕ

(ಪಟ್ಟಣ, ಸ್ಥಳ, ಮೊದಲಾದವುಗಳ) ಕೊಳ್ಳೆ; ಲೂಟಿ; ಸುಲಿಗೆ (ಮಾಡುವುದು).

sack

ನಾಮವಾಚಕ

ಬಿಳಿ ದ್ರಾಕ್ಷಾಮದ್ಯ; ಮೊದಲಲ್ಲಿ ಸ್ಪೇನ್‍ ದೇಶ ಮತ್ತು ಕನೇರಿ ದ್ವೀಪಗಳಿಂದ ಬ್ರಿಟನ್ನಿಗೆ ಆಮದು ಮಾಡಿಕೊಳ್ಳುತ್ತಿದ್ದ, ಹಲವು ಬಗೆಯ ಬಿಳಿ ದ್ರಾಕ್ಷಾಮದ್ಯ.

sack race

ನಾಮವಾಚಕ

ಗೋಣಿ ಪಂದ್ಯ; ಚೀಲದ ಪಂದ್ಯ; ಕುತ್ತಿಗೆಯವರೆಗೆ ಯಾ ನಡುವಿನವರೆಗೆ ಗೋಣಿಯ ಚೀಲದಲ್ಲಿ ನಿಂತು, ಚೀಲದ ಬಾಯನ್ನು ಹಿಡಿದುಕೊಂಡು ಕುಪ್ಪಳಿಸುತ್ತ ಓಡುವ ಪಂದ್ಯ.

sackbut

ನಾಮವಾಚಕ

(ಹಳೆಯ ಮಾದರಿಯ) ತುತೂರಿ.

sackcloth

ನಾಮವಾಚಕ

ಪದಗುಚ್ಛ

  • ಗೋಣಿ ಪಟ್ಟೆ ಯಾ ತಟ್ಟು .
  • (ರೂಪಕವಾಗಿ) (ಗೋಣಿಯಿಂದ ಮಾಡಿದ)
    1. ಶೋಕವಸ್ತ್ರ; ದುಃಖಸೂಚಕ ಉಡುಪು.
    2. ಪಶ್ಚಾತ್ತಾಪ ವಸ್ತ್ರ; ಪಶ್ಚಾತ್ತಾಪಸೂಚಕ ಉಡುಪು.

sackful

ನಾಮವಾಚಕ

ಚೀಲಭರ್ತಿ; ಮೂಟೆ ತುಂಬಉವಷ್ಟು ಪ್ರಮಾಣ.

sacking

ನಾಮವಾಚಕ

ಗೋಣಿಬಟ್ಟೆ; ಗೋಣಿಚೀಲಗಳನ್ನು ಮಾಡುವ ಬಟ್ಟೆ.

sackless

ಗುಣವಾಚಕ

(ಪ್ರಾಚೀನ ಪ್ರಯೋಗ) (ಸ್ಕಾಟ್ಲೆಂಡ್‍ ಮತ್ತು ಉತ್ತರ ಇಂಗ್ಲೆಂಡಿನ ಪ್ರಯೋಗ)

  • ನಿರಪರಾಧಿಯಾದ.
  • ನಿರಪಾಯಕರ; ಕೆಡುಕು ಮಾಡದ; ಅಪಾಯಕರವಲ್ಲದ.
  • ದುರ್ಬಲ ಮನಸ್ಸಿನ.
  • ದುರುದ್ದೇಶವರಿಯದ; ಕಪಟವಿಲ್ಲದ; ಮುಗ್ಧ.
  • ನಿರುತ್ಸಾಹದ; ನಿರಾಸಕ್ತ.
  • ಸತ್ತ್ವರಹಿತವಾದ; ದುರ್ಬಲ.

sacklike

ಗುಣವಾಚಕ

ಗೋಣಿಚೀಲದಂಥ; ಸಂಚಿಯಂಥ.

sacque

ನಾಮವಾಚಕ

= 1sack\((6)\).

sacra

ನಾಮವಾಚಕ

sacrum ಪದದ ಬಹುವಚನ.

sacral

ಗುಣವಾಚಕ

  • (ಅಂಗರಚನಾಶಾಸ್ತ್ರ) ಸೇಕ್ರಮ್‍ ಯಾ ತ್ರಿಕಾಸ್ಥಿಯ, ಅದಕ್ಕೆ ಸಂಬಂಧಿಸಿದ.
  • (ಮಾನವಶಾಸ್ತ್ರ) ಧಾರ್ಮಿಕ ಆಚರಣೆಗಳ; ಪವಿತ್ರ ಕರ್ಮಗಳ; ಧಾರ್ಮಿಕ ಆಚರಣೆಗಳಿಗೆ, ಪವಿತ್ರ ಕರ್ಮಗಳಿಗೆ ಸಂಬಂಧಿಸಿದ.

Search Dictionaries

Loading Results

Follow Us :   
  Download Bharatavani App
  Bharatavani Windows App