भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

lacrimation

ನಾಮವಾಚಕ

lachrymation ಪದದ ರೂಪಾಂತರ.

lacrosse

ನಾಮವಾಚಕ

ಲಕ್ರಾಸ್‍; ಬಲೆಯುಳ್ಳ ದಾಂಡಿನಿಂದ ಆಡುವ, ಹಾಕಿ ಆಟದಂಥ ಚೆಂಡಾಟ.

lacrymal

ಗುಣವಾಚಕ

1lachrymalನ ರೂಪಾಂತರ.

lacrymal

ನಾಮವಾಚಕ

2lachrymalನ ರೂಪಾಂತರ.

lacrymation

ನಾಮವಾಚಕ

lachrymationನ ರೂಪಾಂತರ.

lactase

ನಾಮವಾಚಕ

(ಜೀವರಸಾಯನ ವಿಜ್ಞಾನ) ಲ್ಯಾಕ್ಟೇಸ್‍; ಹಾಲಿನಂಥ, ಬೀಟ ಗೆಲಾಕ್ಟೊಸೈಡ್‍ಗಳನ್ನು ಜಲವಿಭಜಿಸುವ ಎನ್‍ಸೆಮು.

lactate

ಅಕರ್ಮಕ ಕ್ರಿಯಾಪದ

(ಸಸ್ತನಿಗಳ ವಿಷಯದಲ್ಲಿ) ಹಾಲು ಕೊಡು; ಹಾಲನ್ನು ಸ್ರವಿಸು, ಉತ್ಪತ್ತಿ ಮಾಡು.

lactate

ನಾಮವಾಚಕ

(ರಸಾಯನವಿಜ್ಞಾನ) ಲ್ಯಾಕ್ಟೇಟ್‍; ಲ್ಯಾಕ್ಟಿಕ್‍ ಆಮ್ಲದ ಯಾವುದೇ ಲವಣ ಯಾ ಎಸ್ಟರು.

lactation

ನಾಮವಾಚಕ

  • ಹಾಲೂಡಿಕೆ; ಮೊಲೆಯೂಡಿಸುವುದು; ಸ್ತನ್ಯ ಕೊಡುವುದು; ಸ್ತನ್ಯದಾನ.
  • ಹಾಲೂರಿಕೆ; ಕ್ಷೀರೋತ್ಪತ್ತಿ; ಹಾಲೊಸರುವಿಕೆ; ಮೊಲೆಹಾಲು ಒಸರುವುದು; ಮೊಲೆಯಲ್ಲಿ ಹಾಲು ತುಂಬುವುದು.

lacteal

ಗುಣವಾಚಕ

  • ಹಾಲಿನ; ಕ್ಷೀರದ.
  • ಅನ್ನರಸನಾಳದ; ಅನ್ನಕ್ಷೀರ (ಯಾ ಇತರ ಕ್ಷೀರದ್ರವ) ವಾಹಕದ.

lacteal

ನಾಮವಾಚಕ

(ಬಹುವಚನದಲ್ಲಿ) ಅನ್ನಕ್ಷೀರ ವಾಹಕ (ನಾಳಗಳು); ಅನ್ನರಸನಾಳ(ಗಳು).

lactescence

ನಾಮವಾಚಕ

  • ಕ್ಷೀರಾಭತೆ; ಹಾಲಿನಂತಿರುವುದು; ಹಾಲಿನಂತೆ ಕಾಣುವಿಕೆ.
  • ಹಾಲು; ಕ್ಷೀರ; ಹಾಲಿನಂಥ ರಸ, ದ್ರವ.

lactescent

ಗುಣವಾಚಕ

  • ಹಾಲಿನಂಥ; ಕ್ಷೀರಾಭ; ಹಾಲಿನಂತಿರುವ; ಹಾಲಿನಂತೆ ಕಾಣುವ.
  • ಕ್ಷೀರಿ; ಕ್ಷೀರಸ್ರವಿ; ಕ್ಷೀರದಾಯಿ; ಹಾಲಿನಂತಹ ರಸ ಸ್ರವಿಸುವ, ನೀಡುವ.

lactic

ಗುಣವಾಚಕ

(ರಸಾಯನವಿಜ್ಞಾನ)

  • ಹಾಲಿನ ಯಾ ಹಾಲಿಗೆ ಸಂಬಂಧಿಸಿದ; ಕ್ಷೀರದ.
  • ಹಾಲಿನಿಂದ ಪಡೆದ; ಕ್ಷೀರ.

lactic acid

ನಾಮವಾಚಕ

(ರಸಾಯನವಿಜ್ಞಾನ) ಲ್ಯಾಕ್ಟಿಕ್‍ ಆಮ್ಲ; ದುಗ್ಧಾಮ್ಲ; ಕ್ಷೀರಾಮ್ಲ; ಹಾಲು ಹುಳಿಯಾದಾಗ ಅದರಲ್ಲಿ ರೂಪುಗೊಳ್ಳುವ ಕಾರ್ಬನಿಕ ಆಮ್ಲ, ${\rm CH}_3. {\rm CH(OH)}. {\rm COOH}$.

lactiferous

ಗುಣವಾಚಕ

ಕ್ಷೀರೋತ್ಪಾದಕ; ಕ್ಷೀರದಾಯಿ; ಹಾಲು ಯಾ ಹಾಲಿನಂಥ ದ್ರವವನ್ನು – ಕೊಡುವ, ಒಸರುವ, ಸ್ರವಿಸುವ.

lacto-

ಸಮಾಸ ಪೂರ್ವಪದ

ಕ್ಷೀರ-, ಹಾಲಿನ, ಹಾಲಿಗೆ ಸಂಬಂಧಿಸಿದ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ

lactobacillus

ನಾಮವಾಚಕ

(ಬಹುವಚನ lactobacilli ಲ್ಯಾಕ್ಟೋಬಸಿಲೈ). (ಜೀವವಿಜ್ಞಾನ) ಲ್ಯಾಕ್ಟೋಬ್ಯಾಸಿಲಸ್‍; ಲ್ಯಾಕ್ಟಿಕ್‍ ಆಮ್ಲವನ್ನು ಉತ್ಪತ್ತಿ ಮಾಡುವ ಬ್ಯಾಸಿಲಸ್‍.

lactometer

ನಾಮವಾಚಕ

ಕ್ಷೀರಮಾಪಕ; ಹಾಲಿನ ಸಾಂದ್ರತೆಯನ್ನು ಪರೀಕ್ಷಿಸುವ ಉಪಕರಣ.

lactone

ನಾಮವಾಚಕ

(ರಸಾಯನವಿಜ್ಞಾನ) ಲ್ಯಾಕ್ಟೋನ್‍; ಯಾವುದೇ ಹೈಡ್ರಾಕ್ಸಿ ಆಮ್ಲದಲ್ಲಿರುವ ಕಾರ್ಬಾಕ್ಸಿಲ್‍ ಗುಂಪು ಅದೇ ಅಣುವಿನಲ್ಲಿರುವ ಹೈಡ್ರಾಕ್ಸಿಲ್‍ ಗುಂಪಿನೊಂದಿಗೆ ವರ್ತಿಸಿ ಉತ್ಪತ್ತಿಮಾಡುವ ಆಂತರಿಕ ಎಸ್ಟರ್‍.

Search Dictionaries

Loading Results

Follow Us :   
  Download Bharatavani App
  Bharatavani Windows App