भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

lackey

ಕ್ರಿಯಾಪದ

  • ಆಜೂಜುವಾರಿ ಮಾಡು; ಮರ್ಜಿ ಹಿಡಿ; ದಾಸಾನುದಾಸನಾಗಿ ವರ್ತಿಸು; ಅತಿ ದೈನ್ಯದಿಂದ ವರ್ತಿಸು.
  • ಹಾಜರಾಳಾಗಿರು; ಹಾಜರು ಸೇವಕನಾಗಿರು.

lackey moth

ನಾಮವಾಚಕ

ದಾಸ ಚಿಟ್ಟೆ (ಇದರ ಮರಿ ಹುಳುವಿನ ಮೈಮೇಲಿನ ಪಟ್ಟೆಗಳು ಸೇವಕನ ಪೋಷಾಕನ್ನು ಹೋಲುತ್ತವೆ).

lacking

ಗುಣವಾಚಕ

  • ಇಲ್ಲದ; ಇಲ್ಲವಾದ; ಅಭಾವದ; ರಹಿತ; ನ್ಯೂನ; ಕೊರತೆಯ: he was found lacking in stamina ಆತನಿಗೆ (ತಡೆದುಕೊಳ್ಳುವ) ತಾಕತ್ತಿಲ್ಲವೆಂದು ಕಂಡುಬಂತು. money was lacking ದುಡ್ಡಿರಲಿಲ್ಲ. is lacking in determination ದೃಢಸಂಕಲ್ಪ ಇಲ್ಲ.
  • (ಆಡುಮಾತು) ಬುದ್ಧಿಯಿಲ್ಲದ; ಬೌದ್ಧಿಕ ಕೊರತೆಯಿರುವ; ಬೌದ್ಧಿಕವಾಗಿ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಿರುವ.

lacking

ಉಪಸರ್ಗ

ಹೊರತು; ಇಲ್ಲದೆ; ರಹಿತವಾಗಿ; ಅಭಾವದಿಂದ: lacking equipment we would not continue climbing the mountain ಸಾಧನ ಸಲಕರಣೆಗಳಿಲ್ಲದ್ದರಿಂದ ನಾವು ಪರ್ವತಾರೋಹಣ ಮುಂದುವರಿಸಲಾಗಲಿಲ್ಲ.

lackland

ನಾಮವಾಚಕ

ಭೂರಹಿತ; ಭೂಮಿ ಇಲ್ಲದವನು.

lackland

ಗುಣವಾಚಕ

ಭೂರಹಿತ; ಜಮೀನಿಲ್ಲದ; ಭೂಮಿಯಿಲ್ಲದ.

lacklustre

ಗುಣವಾಚಕ

(ಅಮೆರಿಕನ್‍ ಪ್ರಯೋಗ lackluster).

  • (ಕಣ್ಣು ಮೊದಲಾದವುಗಳ ವಿಷಯದಲ್ಲಿ) ಕಳೆಯಿಲ್ಲದ; ಮಂಕಾದ; ಕಾಂತಿರಹಿತ; ನಿಸ್ತೇಜ: lacklustre eyes ಕಾಂತಿಯಿಲ್ಲದ ಕಣ್ಣುಗಳು.
  • ನೀರಸ; ನಿಸ್ಸತ್ತ್ವ; ನಿರ್ಜೀವ: lacklustre performance ನೀರಸ ಪ್ರದರ್ಶನ.

Laconian

ನಾಮವಾಚಕ

  • (ಗ್ರೀಸಿನ) ಲಕೋನಿಯದವನು; ಸ್ಪಾರ್ಟ್‍ ದೇಶದವನು.
  • ಅವರ ಭಾಷೆ.

Laconian

ಗುಣವಾಚಕ

ಲಕೋನಿಯದ; ಸ್ಪಾರ್ಟ್‍ ದೇಶದ.

laconic

ಗುಣವಾಚಕ

  • (ಭಾಷಣ ಶೈಲಿ ಯಾ ಬರಹದ ಶೈಲಿಯ ವಿಷಯದಲ್ಲಿ) ಮಿತಭಾಷೆಯ; ಚುಟುಕಾದ; ಸಂಕ್ಷೇಪವಾದ; ಸೂತ್ರಪ್ರಾಯವಾದ; ಸಂಗ್ರಹವಾಗಿ ಹೇಳುವ.
  • (ವ್ಯಕ್ತಿಯ ವಿಷಯದಲ್ಲಿ) ಮಿತಭಾಷಿ; ಹೆಚ್ಚು ಮಾತುಗಳನ್ನು ಬಳಸದ; ಸೂತ್ರಪ್ರಾಯವಾಗಿ ಮಾತಾಡುವ.

laconically

ಕ್ರಿಯಾವಿಶೇಷಣ

  • ಸಂಕ್ಷೇಪವಾಗಿ; ಸಂಗ್ರಹವಾಗಿ.
  • ಅಡಕ ಮಾತಿನಲ್ಲಿ; ಸಂಕ್ಷಿಪ್ತ ಶೈಲಿಯಲ್ಲಿ; ಕೆಲವೇ ಶಬ್ದಗಳಲ್ಲಿ.

laconicism

ನಾಮವಾಚಕ

  • ಸೂತ್ರೋಕ್ತಿ; ಸೂಕ್ತಿ; ಸಂಕ್ಷಿಪ್ತ ಹೇಳಿಕೆ.
  • ಅಡಕಮಾತು; ಸೂತ್ರಶೈಲಿ’ ಸೂತ್ರಪ್ರಾಯವಾದ ಮಾತು.

laconism

ನಾಮವಾಚಕ

= laconicism.

lacquer

ನಾಮವಾಚಕ

ಲ್ಯಾಕರ್‍:

  • ವಾರ್ನೀಸು; ಮೆರುಗು; (ಮದ್ಯಸಾರದಲ್ಲಿ ಅರಗನ್ನು ಕರಗಿಸಿ ಮಾಡಿದ ಯಾ ಸಂಶ್ಲೇಷಿತ ಪದಾರ್ಥಗಳಿಂದ ಮಾಡಿದ. ಹಿತ್ತಾಳೆ, ಮರ, ಮೊದಲಾದವುಗಳನ್ನು ರಕ್ಷಿಸಲು ಅವಕ್ಕೆ ಬಳಿಯುವ) ಒಂದು ಬಗೆಯ ಬಣ್ಣದ ದ್ರವ.
  • ತಲೆಗೂದಲನ್ನು ಒಂದು ಶೈಲಿಯಲ್ಲಿಡಲು ಅದಕ್ಕೆ ತುಂತುರಿಸುವ ಒಂದು ರಾಸಾಯನಿಕ ವಸ್ತು.
  • ಲ್ಯಾಕರ್‍ ಮರದ ಜೀವರಸ.
  • ಮೆರುಗೆಣ್ಣೆ; ಸಾಮಾನುಗಳಿಗೆ ಮೆರುಗು ಕೊಡಲು ಬಳಸುವ, ಜಪಾನಿನ ಒಂದು ಬಗೆಯ ಮರದಿಂದ ದೊರಕುವ ರಾಳ.
  • ಮೆರುಗು ಸಾಮಾನು; ಮೆರುಗೆಣ್ಣೆ ಬಳಿದ ಸಾಮಾನು.

lacquer

ಅಕರ್ಮಕ ಕ್ರಿಯಾಪದ

ವಾರ್ನೀಸು ಬಳಿ; ಮೆರುಗೆಣ್ಣೆ – ಬಳಿ, ಹಚ್ಚು, ಲೇಪಿಸು.

lacquer-tree

ನಾಮವಾಚಕ

ಲ್ಯಾಕರ್‍ ಮರ; ಮರಗಳಿಗೆ ಮೆರುಗು ಕೊಡಲು ಬಳಸುವ ಸಸ್ಯರಸವನ್ನು ಹೊಂದಿರುವ, ಪೂರ್ವ ಏಷ್ಯದ ಒಂದು ಮರ.

lacquey

ನಾಮವಾಚಕ

1lackeyನ ರೂಪಾಂತರ.

lacquey

ಕ್ರಿಯಾಪದ

2lackeyನ ರೂಪಾಂತರ.

lacrimal

ಗುಣವಾಚಕ

1lachrymalನ ರೂಪಾಂತರ.

lacrimal

ನಾಮವಾಚಕ

2lachrymalನ ರೂಪಾಂತರ.

Search Dictionaries

Loading Results

Follow Us :   
  Download Bharatavani App
  Bharatavani Windows App