भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

labiate

ನಾಮವಾಚಕ

(ಸಸ್ಯವಿಜ್ಞಾನ) ಓಷ್ಠಿತ(ಸಸ್ಯ); ತುಟಿಗಳಂತೆ ಒಂದು ದಳ ಇನ್ನೊಂದರ ಮೇಲೆ ಚಾಚಿಕೊಂಡಿರುವ, ಇಪ್ಪಾಲಾದ ಪುಷ್ಪಪಾತ್ರೆ ಯಾ ದಳವೃತ್ತ ಉಳ್ಳ ಸಸ್ಯ.

labiate

ಗುಣವಾಚಕ

  • (ಸಸ್ಯವಿಜ್ಞಾನ) ಓಷ್ಠಿತ; ಓಷ್ಠರೂಪಿ; ತುಟಿಯಾಕಾರದ; ಅಧರಾಕೃತಿಯ; ನಳಿಕೆಯಾಕಾರದ ದಳವೃತ್ತ ಯಾ ಪುಷ್ಪಪಾತ್ರೆಯು ಇಪ್ಪಾಲಾಗಿದ್ದು, ಒಂದು ದಳದ ಮೇಲೆ ಇನ್ನೊಂದು ಚಾಚಿಕೊಂಡಿರುವ.
  • (ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ) ಓಷ್ಠಿತ; ಓಷ್ಠಾಕಾರದ; ಅಧರರೂಪಿ; ಅಧರಾಕಾರದ; ತುಟಿಯಂಥ; ತುಟಿಯಾಕಾರದ.

labile

ಗುಣವಾಚಕ

(ರಸಾಯನವಿಜ್ಞಾನ) ಅಸ್ಥಿರ; ಭಂಗುರ; (ಅಣುವಿನಲ್ಲಿರುವ ಪರಮಾಣು ಯಾ ಪರಮಾಣು ಗುಚ್ಛದ ವಿಷಯದಲ್ಲಿ) ಸುಲಭವಾಗಿ ಬದಲಾಯಿಸುವ ಯಾ ಪಲ್ಲಟಿಸಬಹುದಾದ.

lability

ನಾಮವಾಚಕ

(ರಸಾಯನವಿಜ್ಞಾನ) ಭಂಗುರತೆ; ಅಸ್ಥಿರತೆ; ಸ್ಥಾನಚ್ಯುತಿ ಯಾ ಬದಲಾವಣೆಯನ್ನು ಹೊಂದುವಿಕೆ.

labio-

ಸಮಾಸ ಪೂರ್ವಪದ

ಓಷ್ಠ್ಯ ಯಾ ಸೋಷ್ಠ; “ತುಟಿಗಳ ಯಾ”, “ತುಟಿಗಳು ಮತ್ತು” ಎಂಬ ಅರ್ಥಗಳ ಶಬ್ದಗಳ ರಚನೆಯಲ್ಲಿ ಬಳಸುವ ಸಮಾಸ ಪೂರ್ವಪದ.

labiodental

ಗುಣವಾಚಕ

(ಧ್ವನಿಯ ವಿಷಯದಲ್ಲಿ) ದಂತೋಷ್ಠ್ಯ; ತುಟಿ ಮತ್ತು ಹಲ್ಲುಗಳಿಂದ ಹುಟ್ಟುವ, ಉದಾಹರಣೆಗೆ: f, v.

labiovelar

ಗುಣವಾಚಕ

(ಧ್ವನಿಯ ವಿಷಯದಲ್ಲಿ) ಓಷ್ಠತಾಲವ್ಯ; ತುಟಿಗಳು ಮತ್ತು ತಾಲುವಿನ ಹಿಂಭಾಗದ ಸಹಾಯದಿಂದ ಹುಟ್ಟುವ, ಉದಾಹರಣೆಗೆ w.

labium

ನಾಮವಾಚಕ

(ಬಹುವಚನ labia ಉಚ್ಚಾರಣೆ ಲೇಬಿಅ).

  • (ಸಾಮಾನ್ಯವಾಗಿ ಬಹುವಚನ ದಲ್ಲಿ) (ಅಂಗರಚನಾಶಾಸ್ತ್ರ) ಯೋನಿತುಟಿ(ಗಳು); ಭಗೋಷ್ಠ(ಗಳು); ಯೋನಿಯ ಮುಖದಲ್ಲಿರುವ ತುಟಿಯಂಥ ಮಡಿಕೆ(ಯ ಭಾಗ).
  • ಲೇಬಿಯಮ್‍; ತುಟಿ; ಓಷ್ಠ:
    1. ಕೀಟಗಳ ಮತ್ತು ಚಿಪ್ಪುಜೀವಿಗಳ ಬಾಯಿಯ ತಳ.
    2. ಉದರಪಾದಿಗಳ ಚಿಪ್ಪಿನ ಬಾಯಿಯಲ್ಲಿ ಕಾಣುವ ಒಳತುಟಿಯಂಥ ಬಾಗ.
    3. (ಸಸ್ಯವಿಜ್ಞಾನ) ತುಟಿಗಳಂತಿರುವ ದಳವಲಯದಲ್ಲಿಯ (ಮುಖ್ಯವಾಗಿ ಕೆಳಗಿನ) ತುಟಿ.

labor

ನಾಮವಾಚಕ

(ಅಮೆರಿಕನ್‍ ಪ್ರಯೋಗ, ಆಸ್ಟ್ರೇಲಿಯ) = 1labour.

labor

ಕ್ರಿಯಾಪದ

(ಅಮೆರಿಕನ್‍ ಪ್ರಯೋಗ, ಆಸ್ಟ್ರೇಲಿಯ) = 2labour.

laboratorial

ಗುಣವಾಚಕ

ಲಬಾರಟರಿಯ; ಲ್ಯಾಬರಟರಿಯ; ಪ್ರಯೋಗಶಾಲೆಯ:

  • ಪ್ರಯೋಗಶಾಲೆಯಂಥ.
  • ಪ್ರಯೋಗಶಾಲೆಯನ್ನು ಬಳಸಿಕೊಳ್ಳುವ.

laboratory

ನಾಮವಾಚಕ

ಲಬಾರಟರಿ; ಲ್ಯಾಬರಟರಿ; ಪ್ರಯೋಗಶಾಲೆ; ಪ್ರಯೋಗಾಲಯ; ಪ್ರಯೋಗ ಮಂದಿರ; ವೈಜ್ಞಾನಿಕ ಪ್ರಯೋಗಗಳನ್ನು, ಮುಖ್ಯವಾಗಿ ರಾಸಾಯನಿಕ ಪ್ರಯೋಗಗಳನ್ನು ನಡೆಸಲು, ಬೋಧನೆಗೆ ಯಾ ಔಷಧಗಳು ಮತ್ತು ರಾಸಾಯನಿಕಗಳನ್ನು ತಯಾರಿಸುವುದಕ್ಕೆ ಸಿದ್ಧಪಡಿಸಿರುವ ಕೊಠಡಿ ಯಾ ಕಟ್ಟಡ (ರೂಪಕವಾಗಿ ಸಹ): laboratory of the mind ಮನಸ್ಸಿನ ಪ್ರಯೋಗಶಾಲೆ; ಮಿದುಳು. laboratory of ideas ಕಲ್ಪನೆ ಕಮ್ಮಟ; ವಿಚಾರಾಲಯ; ಭಾವನೆಗಳ, ಕಲ್ಪನೆಗಳ, ಅಭಿಪ್ರಾಯಗಳ, ವಿಚಾರಗಳ – ಆಕರ, ಮೂಲಸ್ಥಾನ, ಜನ್ಮಸ್ಥಾನ.

laboratory animal

ನಾಮವಾಚಕ

(ಮುಖ್ಯವಾಗಿ ಪ್ರಯೋಗಶಾಲೆಗಳ ಪ್ರಯೋಗಗಳಲ್ಲಿ ಬಳಸುವ) ಪ್ರಾಯೋಗಿಕ ಪ್ರಾಣಿ, ಉದಾಹರಣೆಗೆ ಇಲಿ, ಮೊಲ, ಮೊದಲಾದವು.

laborer

ನಾಮವಾಚಕ

(ಅಮೆರಿಕನ್‍ ಪ್ರಯೋಗ) = labourer.

laborious

ಗುಣವಾಚಕ

  • ದುಡಿಮೆಯ; ಪ್ರಯಾಸದ; ಶ್ರಮದ; ಶ್ರಮಸಾಧ್ಯ.
  • (ಮುಖ್ಯವಾಗಿ ಸಾಹಿತ್ಯ ಶೈಲಿಯ ವಿಷಯದಲ್ಲಿ) ತಿಣುಕಿ ಬರೆದ; ಕಷ್ಟಪಟ್ಟು ಬರೆದಂತಿರುವ; ಸರಾಗವಿಲ್ಲದೆ, ಓಟವಿಲ್ಲದೆ, ಬಹುಶ್ರಮದಿಂದ ಯಾ ಪ್ರಯಾಸದಿಂದ – ರಚಿಸಿದಂತೆ ಕಾಣುವ.
  • ಶ್ರಮಶೀಲ; ಕಷ್ಟಪಟ್ಟು ಕೆಲಸ ಮಾಡುವ.

laboriously

ಕ್ರಿಯಾವಿಶೇಷಣ

  • ಬಹು ಶ್ರಮದಿಂದ; ಕಷ್ಟಪಟ್ಟು, ಪ್ರಯಾಸದಿಂದ – ದುಡಿದು.
  • (ಶೈಲಿ ಮೊದಲಾದವುಗಳ ವಿಷಯದಲ್ಲಿ) ಪ್ರಯಾಸದಿಂದ ಬರೆದಂತೆ.

laboriousness

ನಾಮವಾಚಕ

  • ಶ್ರಮಶೀಲತೆ; ಕಷ್ಟಪಟ್ಟು ದುಡಿಯುವಿಕೆ; ಪ್ರಯಾಸಪಟ್ಟು ಕೆಲಸಮಾಡುವ ಗುಣ.
  • ಶ್ರಮಸಾಧ್ಯತೆ.
  • (ಸಾಹಿತ್ಯಶೈಲಿ ಮೊದಲಾದವುಗಳ ವಿಷಯದಲ್ಲಿ) ತಿಣುಕಿದಂತಿರುವಿಕೆ; ಅತಿಪ್ರಯಾಸದ ಲಕ್ಷಣಗಳನ್ನು ತೋರಿಸುವಂತಿರುವಿಕೆ.

labour

ನಾಮವಾಚಕ

ಪದಗುಚ್ಛ

ನುಡಿಗಟ್ಟು

(ಅಮೆರಿಕನ್‍ ಪ್ರಯೋಗಮತ್ತು ಆಸ್ಟ್ರೇಲಿಯ labor). labour of Hercules (ಯಾ Herculean labour) ಭಗೀರಥ ಪ್ರಯತ್ನ; ಅತ್ಯಧಿಕ ಬಲ; ಭೀಮಶ್ರಮ; ಭೀಮಸಾಹಸ; ಬಹಳ ಸಾಮರ್ಥ್ಯ ಸಾಹಸಗಳನ್ನು ಕೋರುವ ಕೆಲಸ, ಸಾಹಸ.

  • ದುಡಿತ; ದುಡಿಮೆ; ಗೆಯ್ಮೆ; ಶ್ರಮದ ಕೆಲಸ; ದೇಹದ ಯಾ ಮನಸ್ಸಿನ ಶ್ರಮ.
  • (ಸಾಮಾಜಿಕ) ದುಡಿಮೆ; ಪರಿಶ್ರಮ; ಸಮಾಜದ ಆವಶ್ಯಕತೆಗಳನ್ನು ಒದಗಿಸಲು ಉಪಯೋಗವಾಗುವ ದುಡಿಮೆ.
  • ಕೆಲಸಗಾರರು; ದುಡಿಮೆಗಾರರು; ಕಾರ್ಮಿಕರು; ಕರ್ಮಚಾರಿಗಳು; ಶ್ರಮಜೀವಿಗಳು.
  • (Labour) ಲೇಬರ್‍ ಪಾರ್ಟಿ; ಕಾರ್ಮಿಕ ಪಕ್ಷ; ರಾಜಕೀಯ ಪಕ್ಷವಾಗಿ ಏರ್ಪಟ್ಟ ಜೀತಗಾರರು, ಕಾರ್ಮಿಕರು.
  • ಕಷ್ಟಕೆಲಸ; ಪ್ರಯಾಸದ ಪ್ರಯತ್ನ; ಅಸಾಧಾರಣ ಶಕ್ತಿ, ಸಾಹಸಗಳನ್ನು ಕೋರುವ ಕೆಲಸ.
  • ಹೆರಿಗೆ ನೋವು; ಪ್ರಸವ – ವೇದನೆ, ಸಂಕಟ; ಹೆರಿಗೆಬೇನೆ; ಪ್ರಸವ ಪ್ರಕ್ರಿಯೆ.

labour

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

(ಅಮೆರಿಕನ್‍ ಪ್ರಯೋಗ ಮತ್ತು ಆಸ್ಟ್ರೇಲಿಯ labor). labour in vain ವ್ಯರ್ಥ ಪ್ರಯತ್ನ ಮಾಡು.

  • (ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ನೆಲವನ್ನು ಉಳು.
  • ಲಂಬಿಸು; ಬೆಳಸು; ಅತಿಯಾಗಿ ವಿಸ್ತರಿಸು; ವಿಸ್ತಾರವಾಗಿ ಪ್ರತಿಪಾದಿಸು; ಬಹಳವಿವರವಾಗಿ, ಕೂಲಂಕಷವಾಗಿ ಹೇಳು, ತಿಳಿಸು; ದೀರ್ಘವಾಗಿ ನಿರೂಪಿಸು: I will not labour the point ಆ ಅಂಶವನ್ನು ನಾನು ಲಂಬಿಸುವುದಿಲ್ಲ.

labour camp

ನಾಮವಾಚಕ

ದುಡಿಮೆ ಪಾಳೆಯ; ಕೈದಿಗಳು ಕಷ್ಟಪಟ್ಟು ದುಡಿಯಬೇಕಾಗಿರುವ ಪಾಳೆಯ, ಬೀಡು.

Search Dictionaries

Loading Results

Follow Us :   
  Download Bharatavani App
  Bharatavani Windows App