भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

lab

ನಾಮವಾಚಕ

(ಆಡುಮಾತು) = laboratory.

Lab.

ಸಂಕ್ಷಿಪ್ತ

  • Labour.
  • Labrador.

labarum

ನಾಮವಾಚಕ

  • ಸಾಂಕೇತಿಕ – ಧ್ವಜ, ಬಾವುಟ, ನಿಶಾನೆ.
  • (ರೋಮನ್‍ ಸೈನಿಕ ಲಾಂಛನಗಳೊಂದಿಗೆ ಕ್ರಿಶ್ಚಿಯನ್‍ ಲಾಂಛನಗಳನ್ನು ಸೇರಿಸಿದ, ಕಾನ್‍ಸ್ಟಂಟೈನ್‍ ದಿ ಗ್ರೇಟ್‍ ಎಂಬ ರೋಮನ್‍ ಚಕ್ರವರ್ತಿಯ) ಸಾಮ್ರಾಜ್ಯ – ಧ್ವಜ, ಬಾವುಟ, ನಿಶಾನೆ.

labdanum

ನಾಮವಾಚಕ

= ladanum.

labefaction

ನಾಮವಾಚಕ

(ಸಾಹಿತ್ಯಕ)

  • ನಡುಕ; ಅಲುಗಾಟ; ಅಳ್ಳಾಟ.
  • ಶಕ್ತಿಗುಂದು(ವಿಕೆ); ಶಕ್ತಿಹ್ರಾಸ; ಬಲಗುಂದುವಿಕೆ.
  • ಅಧಃಪತನ.

label

ನಾಮವಾಚಕ

  • ಲೇಬಲ್ಲು; ಹೆಸರು ಪಟ್ಟಿ; ಗುರುತು – ಪಟ್ಟಿ, ಚೀಟಿ; ಒಂದು ವಸ್ತುವಿನ ಸ್ವರೂಪ, ಗುಣ, ಮಾಲಿಕ, ಹೆಸರು, ವಿಳಾಸ, ರವಾನೆ ಸ್ಥಳ, ಮೊದಲಾದವನ್ನು ಬರೆದು ಆ ವಸ್ತುವಿಗೆ ಕಟ್ಟುವ, ಅಂಟಿಸುವ ಕಾಗದ, ಲೋಹ, ಮೊದಲಾದವುಗಳ – ಬಿಲ್ಲೆ, ಪಟ್ಟಿ.
  • (ಮುಖ್ಯವಾಗಿ ಹೀನಾರ್ಥಕ ಪ್ರಯೋಗ) ತಲೆಬರಹ; ತಲೆಚೀಟಿ; ವ್ಯಕ್ತಿ, ಕಲಾಕೃತಿ, ಮೊದಲಾದವನ್ನು ವರ್ಗೀಕರಿಸುವ ಸಣ್ಣ ವಿಶೇಷಣ, ಯಾ ಪದಗುಚ್ಛ.
  • ಚೀಟಿ; ಲೇಬಲ್ಲು:
    1. ಉಡುಪಿಗೆ ಹೊಲಿದ, ತಯಾರಕರ ಹೆಸರನ್ನುಳ್ಳ ಸಣ್ಣ ಬಟ್ಟೆ.
    2. ಹ್ಯಾಷನ್‍ ಯಾ ರೆಕಾರ್ಡಿಂಗ್‍ ಕಂಪೆನಿಯ ಹೆಸರು, ಲೋಗೋ ಯಾ ಟ್ರೇಡ್‍ ಮಾರ್ಕು: brought it out under his own label ಅವನದೇ ಹೆಸರಿನಲ್ಲಿ (ಟ್ರೇಡ್‍ಮಾರ್ಕಿನಲ್ಲಿ) ಅದನ್ನು ಹೊರತಂದ.
    3. ಗ್ರಾಮಹೋನ್‍ ತಟ್ಟೆಯ ಮಧ್ಯದಲ್ಲಿ ಅದರ ವಿವರಗಳನ್ನು ಅಂಟಿಸಿದ ಕಾಗದದ ಚೂರು.
  • ಸ್ಟಾಂಪು; ಪಾರ್ಸಲ್‍ ಮೊದಲಾದವುಗಳ ಮೇಲೆ ಇರುವ ತಲೆಚೀಟಿ, ಅಂಟು ಚೀಟಿ.
  • ಲೇಬಲ್ಲು; ನಿಘಂಟಿನಲ್ಲಿ ಪದದ ಅರ್ಥ ವಿವರಿಸುವಾಗ, ಅದರ ವಿಷಯ, ದಾಖಲೆ, ರಾಷ್ಟ್ರೀಯತೆ, ಮೊದಲಾದವನ್ನು ತಿಳಿಸುವ ಪದ.
  • (ವಾಸ್ತುಶಿಲ್ಪ) (ಮಳೆಯ ನೀರು ಕೆಳಗಿನ ಭಾಗಕ್ಕೆ ಬೀಳದಂತೆ ತಡೆಯುವ) ಚೆಜ್ಜ; ಸಜ್ಜ; ಮುಂಸೂರು; ಮುಂಚಾಚು.
  • (ವಂಶಲಾಂಛನ ವಿದ್ಯೆ) ಸಾಮಾನ್ಯವಾಗಿ ಮೂರು ಕೆಳ ಮುಖವಾದ ಚಾಚಿಕೆಗಳಿರುವ ಅಡ್ಡಲಾದ ಪಟ್ಟಿ, ಗೆರೆ ಯಾ ಕಂಬಿಗಳಿರುವ, ಜ್ಯೇಷ್ಠಪುತ್ರನ ಲಾಂಛನ.

label

ಸಕರ್ಮಕ ಕ್ರಿಯಾಪದ

  • ಲೇಬಲ್‍ ಹಚ್ಚು; ಗುರುತು ಪಟ್ಟಿ, ತಲೆಚೀಟಿ ಮೊದಲಾದವನ್ನು – ಅಂಟಿಸು, ಹಚ್ಚು, ಕಟ್ಟು.
  • ( ಅಕರ್ಮಕ ಕ್ರಿಯಾಪದ ಸಹ) ವರ್ಗೀಕರಿಸು; ತಲೆಚೀಟಿ ಹಚ್ಚು; ಪಟ್ಟಿಮಾಡು; ಒಂದು ವರ್ಗಕ್ಕೆ ಸೇರಿಸು: the bottle was labelled poison ಆ ಸೀಸೆಯನ್ನು ವಿಷವೆಂದು ವರ್ಗೀಕರಿಸಲಾಯಿತು. labelled them as irresponsible ಅವರನ್ನು ಬೇಜವಾಬ್ದಾರಿ ಎಂದು ಪಟ್ಟಿ ಮಾಡಲಾಯಿತು.
  • ಲೇಬಲಿಸು; ಪದಾರ್ಥದಲ್ಲಿನ ಅಣುಗಳನ್ನು ಗುರುತಿಸುವುದಕ್ಕಾಗಿ ಅಣುವಿನಲ್ಲಿರುವ ಪರಮಾಣು ಅಥವಾ ಪರಮಾಣುಗಳನ್ನು ಗುರುತಿಸಬಹುದಾದ (ಸಾಮಾನ್ಯವಾಗಿ ವಿಕಿರಣಪಟು) ಪರಮಾಣುವಿನಿಂದ ಪಲ್ಲಟಿಸು.

labelled

ಗುಣವಾಚಕ

  • ಲೇಬಲ್‍ ಮಾಡಿದ; ಪಟ್ಟಿ ಮಾಡಿದ; ತಲೆಚೀಟಿ ಹಚ್ಚಿದ; ಲೇಬಲ್‍ ಹಚ್ಚಿ ಗುರುತಿಸಿದ.
  • ಲೇಬಲಿತ; ಲೇಬಲಿಸಿದ; ಅಣುಗಳನ್ನು ಗುರುತಿಸಲಿಕ್ಕಾಗಿ ಅದರಲ್ಲಿನ ಪರಮಾಣು ಅಥವಾ ಪರಮಾಣುಗಳನ್ನು ಗುರುತಿಸಬಹುದಾದ (ಸಾಮಾನ್ಯವಾಗಿ ವಿಕಿರಣಶೀಲ) ಪರಮಾಣುವಿನಿಂದ ಪಲ್ಲಟಿಸಿದ.

labeller

ನಾಮವಾಚಕ

ಲೇಬಲರ್‍; ಲೇಬಲ್‍ ಹಚ್ಚುಗ; ಯಂತ್ರದ ಸಹಾಯದಿಂದ ಯಾ ಕೈಯಿಂದ ಲೇಬಲ್ಲನ್ನು, ಚೀಟಿಯನ್ನು ಅಂಟಿಸುವವ.

labia

ನಾಮವಾಚಕ

labiumನ ಬಹುವಚನ.

labia majora

ನಾಮವಾಚಕ

ಯೋನಿಯ ಹೊರತುಟಿ; ಭಗದ ಬಾಹ್ಯೋಷ್ಠ; ಯೋನಿಯ ಬಾಯಿಯ ಹೊರಮಡಿಕೆ.

labia minora

ನಾಮವಾಚಕ

ಯೋನಿಯ ಒಳತುಟಿ; ಭಗದ ಅಂತರೋಷ್ಠ; ಯೋನಿಯ ಬಾಯಿಯ ಒಳಮಡಿಕೆಗಳು.

labial

ಗುಣವಾಚಕ

  • ತುಟಿಗಳ; ಓಷ್ಠ್ಯ.
  • (ಪ್ರಾಣಿವಿಜ್ಞಾನ, ಅಂಗರಚನಾಶಾಸ್ತ್ರ)
    1. ತುಟಿಯ; ಓಷ್ಠ್ಯ.
    2. ಓಷ್ಠಸದೃಶ; ತುಟಿಯಂಥ; ತುಟಿಯಂತಿರುವ; ತುಟಿಯಂತೆ ಕೆಲಸಮಾಡುವ.
  • (ದಂತವೈದ್ಯ) ಓಷ್ಠ್ಯ; ತುಟಿಗೆ ಸೇರಿಕೊಂಡಿರುವ, ತುಟಿಯ ಪಕ್ಕದಲ್ಲಿರುವ ಹಲ್ಲಿನ ಭಾಗದ.
  • (ಧ್ವನಿವಿಜ್ಞಾನ) (ಧ್ವನಿಯ ವಿಷಯದಲ್ಲಿ) ಓಷ್ಠ್ಯ; ತುಟಿಗಳನ್ನು ಮುಚ್ಚಿ ಯಾ ಹತ್ತಿರ ತಂದು ಉಚ್ಚರಿಸುವ.

labial

ನಾಮವಾಚಕ

  • (ಧ್ವನಿವಿಜ್ಞಾನ) ಓಷ್ಠ್ಯ (ಧ್ವನಿ); ಓಷ್ಠಜ(ಧ್ವನಿ); ತುಟಿಗಳನ್ನು ಮುಚ್ಚಿ ಯಾ ಹತ್ತಿರ ತಂದು ಉಚ್ಚರಿಸುವ (ಉದಾಹರಣೆಗೆ p, b, f, v, m, w, ಪ, ಬ, ಮ, ವ) ವ್ಯಂಜನಗಳು ಮತ್ತು ತುಟಿಗಳನ್ನು ದುಂಡಗೆ ಮಾಡಿ ಉಚ್ಚರಿಸುವ (ಉದಾಹರಣೆಗೆ ಉ, ಊ, ಓ) ಸ್ವರಗಳು.
  • ತುಟಿ(ಯಂಥ ಭಾಗ).

labial pipe

ನಾಮವಾಚಕ

(ಸಂಗೀತ) ತುಟಿಕೊಳಲು; ಮುಖಮುರಲಿ; ಆರ್ಗನ್‍ ವಾದ್ಯದಲ್ಲಿ ತುಟಿಗಳಿರುವ ಕೊಳಲು.

labialise

ಸಕರ್ಮಕ ಕ್ರಿಯಾಪದ

= labialize.

labialism

ನಾಮವಾಚಕ

ಓಷ್ಠ್ಯೋಚ್ಚಾರ; ಓಷ್ಠ್ಯಧ್ವನಿ ಬರುವಂತೆ ಉಚ್ಚರಿಸುವ ಅಭ್ಯಾಸ (ಉದಾಹರಣೆಗೆ ಲವಣ ಪದದ ಲಕಾರವನ್ನು ವಕಾರದಂತೆ ಉಚ್ಚರಿಸುವುದು).

labialization

ನಾಮವಾಚಕ

ಓಷ್ಠ್ಯೀಕರಣ ಯಾ ಓಷ್ಠ್ಯೀಭವನ; ಓಷ್ಠ್ಯಧ್ವನಿ ಬರುವಂತೆ ಯಾ ಆಗುವಂತೆ ಮಾಡುವುದು; ತುಟಿಗಳನ್ನು ತಾಗಿಸಿ ಯಾ ದುಂಡು ತಿರುವಿ ಉಚ್ಚಾರ ಮಾಡುವುದು.

labialize

ಸಕರ್ಮಕ ಕ್ರಿಯಾಪದ

ಓಷ್ಠ್ಯೀಕರಿಸು:

  • ತುಟಿ ತಾಗಿಸಿ ಯಾ ದುಂಡಾಗಿಸಿ ಉಚ್ಚಾರ ಮಾಡು.
  • ಓಷ್ಠ್ಯಧ್ವನಿ ಆಗುವಂತೆ ಮಾಡು.

labially

ಕ್ರಿಯಾವಿಶೇಷಣ

ಓಷ್ಠ್ಯವಾಗಿ; ತುಟಿಯಿಂದ – ಆಗುವಂತೆ ಯಾ ಆದಂತೆ.

Search Dictionaries

Loading Results

Follow Us :   
  Download Bharatavani App
  Bharatavani Windows App