भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Lyraid

ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ ಪ್ರಯೋಗ) (ಸುಮಾರು ಏಪ್ರಿಲ್‍ 20ನೆಯ ತಾರೀಖಿನಲ್ಲಿ) ಅಭಿಜಿತ್‍ ನಕ್ಷತ್ರಪುಂಜದಿಂದ ಹೊರಡುವುದೆಂದು ನಂಬಲಾಗಿದ್ದ ಉಲ್ಕೆಗಳು.

lyrate

ಗುಣವಾಚಕ

(ಪ್ರಕೃತಿ ಚರಿತ್ರೆ) ಲೈರ್‍ ಆಕಾರದ.

lyre

ನಾಮವಾಚಕ

ಲೈರ್‍ ವಾದ್ಯ; ಹಾಡುಗಾರಿಕೆಯ ಜೊತೆಯಲ್ಲಿ ನುಡಿಸುವ (ಹಳೆಯ ಗ್ರೀಕರ ಕಾಲದ) ಒಂದು ತಂತಿ ವಾದ್ಯ.

lyre-bird

ನಾಮವಾಚಕ

ಲೈರ್‍ ಹಕ್ಕಿ; ಲೈರ್‍ ವಾದ್ಯದ ಆಕಾರದ ಪುಕ್ಕವುಳ್ಳ, ಆಸ್ಟ್ರೇಲಿಯಾದ ಒಂದು ಹಕ್ಕಿ.

lyre-flower

ನಾಮವಾಚಕ

= bleeding heart(1).

lyric

ಗುಣವಾಚಕ

ಪದಗುಚ್ಛ

lyric drama ಸಂಗೀತನಾಟಕ; ಗೇಯ ನಾಟಕ.

  • ಲೈರ್‍ ವಾದ್ಯದ; ಲೈರ್‍ ವಾದ್ಯಕ್ಕೆ ತಕ್ಕ.
  • ಹಾಡುವ; ಗೇಯ; ಹಾಡಿನಂಥ; ಹಾಡಲು ತಕ್ಕ; ಗೀತಪ್ರಧಾನವಾದ.
  • (ಕವಿತೆ, ಪದ್ಯದ ವಿಷಯದಲ್ಲಿ)
    1. ವ್ಯಕ್ತಿನಿಷ್ಠ; ವ್ಯಕ್ತ್ಯಭಿವ್ಯಂಜಕ; ವೈಯಕ್ತಿಕಾಭಿವ್ಯಕ್ತಿಯ; ಕವಿಯ ಸ್ವಂತಭಾವಗಳನ್ನು ಅಭಿವ್ಯಕ್ತಗೊಳಿಸುವ.
    2. (ಸಾಮಾನ್ಯವಾಗಿ) ದೀರ್ಘವಲ್ಲದ ಗೀತರೂಪದ; ಭಾವಗೀತಾತ್ಮಕ.
    3. (ಕವಿಯ ವಿಷಯದಲ್ಲಿ) ಭಾವಗೀತೆ ಬರೆಯುವ.

lyric

ನಾಮವಾಚಕ

  • ಭಾವಗೀತೆ.
  • (ಬಹುವಚನದಲ್ಲಿ) ಭಾವಗೀತಾತ್ಮಕ ಕವನಗಳು.
  • (ಸಾಮಾನ್ಯವಾಗಿ ಬಹುವಚನದಲ್ಲಿ) ಒಂದು ಹಾಡಿನ – ಪದಗಳು, ಶಬ್ದಗಳು, ಸಾಹಿತ್ಯ.

lyrical

ಗುಣವಾಚಕ

  • (ವಿರಳ ಪ್ರಯೋಗ) = 1lyric.
  • ಭಾವಗೀತೆಯಂಥ; ಭಾವಗೀತಾತ್ಮಕವಾದ; ಭಾವಗೀತೆಗೆ ತಕ್ಕ ಭಾಷೆ, ಶೈಲಿ, ಮೊದಲಾದವುಗಳಲ್ಲಿ ರಚಿತವಾದ; ಭಾವಗೀತಯೋಗ್ಯವಾದ.
  • (ಆಡುಮಾತು) ಅತ್ಯುತ್ಸಾಹಪೂರ್ಣ; ತುಂಬ ಹುಮ್ಮಸ್ಸಿನ: wax lyrical about ತುಂಬ ಹುಮ್ಮಸ್ಸು ತಾಳು.

lyrically

ಕ್ರಿಯಾವಿಶೇಷಣ

  • ಭಾವಗೀತಾತ್ಮಕವಾಗಿ; ಭಾವಗೀತೆಯ ಗುಣಗಳಿಂದ ಕೂಡಿ.
  • ಹುಮ್ಮಸ್ಸಿನಿಂದ; ಉತ್ಸಾಹಪೂರ್ಣವಾಗಿ.

lyricalness

ನಾಮವಾಚಕ

ಭಾವಗೀತಾತ್ಮಕತೆ; ಭಾವಗೀತೆಯ ಗುಣಗಳಿಂದ ಕೂಡಿರುವಿಕೆ.

lyricism

ನಾಮವಾಚಕ

  • ಭಾವಗೀತಾತ್ಮಕತೆ; ಭಾವಗೀತ ಲಕ್ಷಣ.
  • ಭಾವಗೀತ ಶೈಲಿ.
  • ಆಡಂಬರದ ಶೈಲಿಯಲ್ಲಿ ರೂಪಿತವಾದ ಭಾವಗಳು.

lyricist

ನಾಮವಾಚಕ

  • ಗೀತಕಾರ; ವಾಗ್ಗೇಯಕಾರ; ಹಾಡಿಗೆ ಪದಗಳನ್ನು ಒದಗಿಸುವವನು, ರಚಿಸುವವನು.
  • ಭಾವಗೀತಕಾರ.

lyrico-

ಸಮಾಸ ಪೂರ್ವಪದ

‘ಭಾವಗೀತಾತ್ಮಕ ಮತ್ತು’ ಎಂಬರ್ಥದ ಸಮಾಸ ಪೂರ್ವಪದ, ಉದಾಹರಣೆಗೆ lyrico-dramatic ಭಾವಗೀತಾತ್ಮಕ ಹಾಗೂ ನಾಟಕ ರೂಪದ.

Lyrid

ನಾಮವಾಚಕ

= Lyraid.

lyrist

ನಾಮವಾಚಕ

  • ಲೈರ್‍ ವಾದಕ; ಲೈರ್‍ ವಾದ್ಯ ನುಡಿಸುವವನು.
  • (ಉಚ್ಚಾರಣೆ, ಲಿರಿಸ್ಟ್‍). ಭಾವಗೀತೆ (ರಚಿಸುವ) ಕವಿ.

lyse

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಜೀವಕೋಶಗಳನ್ನು – ಛಿದ್ರ ಮಾಡು, ಒಡೆ, ಲಯಗೊಳಿಸು. (ಜೀವಕೋಶಗಳು) ಲಯವಾಗು; ಒಡೆದುಹೋಗು; ಛಿದ್ರವಾಗು.

lysergic acid

ನಾಮವಾಚಕ

ಲೈಸರ್ಜಿಕ್‍ ಆಮ್ಲ; ಎರ್ಗಟ್‍ನಿಂದ ತಯಾರಿಸುವ ಯಾ ಸಂಶ್ಲೇಷಿಸಿ ತಯಾರಿಸುವ ನೈಟ್ರೋಜನ್‍ಯುಕ್ತ ಕಾರ್ಬನಿಕ ಆಮ್ಲ, ${\rm C}_{ 16}{\rm H}_{ 16}{\rm N}_2{\rm O}_2$.

lysergic acid diethylamide

ನಾಮವಾಚಕ

ಲೈಸರ್ಜಿಕ್‍ ಆಮ್ಲದ ಡೈ ಎಥೈಲಮೈಡ್‍; ಎಲ್‍ಎಸ್‍ಡಿ; ಲೈಸರ್ಜಿಕ್‍ ಆಮ್ಲದ ಜನ್ಯಸಂಯುಕ್ತವಾದ, ಪ್ರಬಲ ಭ್ರಮಾಜನಕ ಮದ್ದು. ${\rm C}_{ 20}{\rm H}_{ 25}{\rm N}_3{\rm O}$.

lysin

ನಾಮವಾಚಕ

(ರಸಾಯನವಿಜ್ಞಾನ) ಲೈಸಿನ್‍; ರಕ್ತದಲ್ಲಿರುವ, ಕಾಯಿಲೆಯ ಪ್ರಕ್ರಿಯೆಯನ್ನು ಕ್ರಮೇಣ ಇಳಿಮುಖ ಮಾಡಬಲ್ಲ ಪ್ರತಿಕಾಯದಂಥ ಪ್ರೋಟೀನು.

lysine

ನಾಮವಾಚಕ

(ರಸಾಯನವಿಜ್ಞಾನ) ಲೈಸೀನ್‍; ಪ್ರೋಟೀನಿನ ಜಲವಿಭಜನೆಯಿಂದ ದೊರಕುವ, ಪ್ರಾಣಿಗಳ ಪೌಷ್ಟಿಕತೆಗೆ ಅತ್ಯಗತ್ಯವಾದ ಒಂದು ಅಮೀನೋ ಆಮ್ಲ, ${\rm C}_6{\rm H}_{ 14}{\rm N}_2{\rm O}_2$.

Search Dictionaries

Loading Results

Follow Us :   
  Download Bharatavani App
  Bharatavani Windows App