भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gall-mite

ನಾಮವಾಚಕ

ಗಾಲ್‍ ಜೇಡ; ಓಕ್‍ ಮರದಲ್ಲಿ ಗಂಟುಂಟುಮಾಡುವ ಒಂದು ಬಗೆಯ ಜೇಡ.

gall-wasp

ನಾಮವಾಚಕ

ಗಂಟುಕಣಜ; ಓಕ್‍ ಮರದಲ್ಲಿ ಗಂಟುಂಟುಮಾಡುವ ಒಂದು ಬಗೆಯ ಕಣಜ.

gall.

ಸಂಕ್ಷಿಪ್ತ

gallon(s).

Galla

ಗುಣವಾಚಕ

(ಆಹ್ರಿಕಾದ) ಇಥಿಯೋಪಿಯ ಮತ್ತು ಕೀನ್ಯಾಗಳ ಅಲೆಮಾರಿ ಜನಾಂಗದವರ.

Galla

ನಾಮವಾಚಕ

ಗ್ಯಾಲ:

 • (ಆಹ್ರಿಕಾದ) ಇಥಿಯೋಪಿಯ ಹಾಗೂ ಕೀನ್ಯಾಗಳ ಅಲೆಮಾರಿ ಜನಾಂಗದವನು.
 • ಇವರ ಭಾಷೆ.

gallant

ಗುಣವಾಚಕ

 • (ಪ್ರಾಚೀನ ಪ್ರಯೋಗ) ಬೆಡಗುಡುಪಿನ; ಆಡಂಬರದ, ಡೌಲಿನ, ಠೀಕು – ಉಡುಪಿನ.
 • (ಹಡಗು, ಕುದುರೆ, ಮೊದಲಾದವುಗಳ ವಿಷಯದಲ್ಲಿ) ವೈಭವದ; ಘನವಾದ; ಮಹಾ; ಉತ್ಕೃಷ್ಟವಾದ; ಗಂಭೀರವಾದ; ಠೀವಿಯಿಂದ ಕೂಡಿದ.
 • ಧೀರ; ವೀರ; ವಿಕ್ರಮ; ಪ್ರತಾಪಶಾಲಿ.
 • ವೀರಧರ್ಮಿ; ದಯಾವೀರ; ದುರ್ಬಲರ ಯಾ ಸ್ತ್ರೀಯರ ಪರವಾಗಿ ಅನುಕಂಪದಿಂದ ಮತ್ತು ಶೌರ್ಯದಿಂದ ವರ್ತಿಸುವ.
 • ಪಾರ್ಲಿಮೆಂಟಿನಲ್ಲಿ ಸೇನೆಯ ಯಾ ನೌಕಾಬಲದ ಸದಸ್ಯನ ಸಾಂಪ್ರದಾಯಿಕ ವಿಶೇಷಣ, ಬಿರುದು: the honourable and gallant member ಗೌರವಾನ್ವಿತ ಹಾಗೂ ಧೀರ ಸದಸ್ಯ.
 • ಸ್ತ್ರೀ ಭಕ್ತಿಯ; ಹೆಂಗಸರ ಬಗ್ಗೆ ವಿಶೇಷ ಗೌರವ, ಒಲವು ತೋರುವ.
 • ಸ್ತ್ರೀ ಪರಾಯಣ; ರಸಿಕ; ಪ್ರಣಯಶೀಲ; ಕಾಮಾಸಕ್ತ.

gallant

ನಾಮವಾಚಕ

 • (ಪ್ರಾಚೀನ ಪ್ರಯೋಗ) ನೀಟುಗಾರ; ಶಿಸ್ತುಗಾರ; ಸೊಗಸುಗಾರ; ಷೋಕಿಲಾಲ.
 • ಸ್ತ್ರೀಮೋಹಿ; ಸ್ತ್ರೀಪರಾಯಣ; ಹೆಂಗಸರಲ್ಲಿ ಆಸಕ್ತ.
 • ಸ್ತ್ರೀಭಕ್ತ; ಹೆಂಗಸರ ಬಗ್ಗೆ ವಿಶೇಷ ಗೌರವಾದರ ಉಳ್ಳವನು, ತೋರುವವನು.
 • ನಲ್ಲ; ಕಾದಲ.
 • ಉಪಪತಿ; ವಿಟ; ಮಿಂಡ.
 • ಸಜ್ಜನ; ಒಳ್ಳೆಯ ವ್ಯಕ್ತಿ.

gallant

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಚೆಲ್ಲಾಟವಾಡು; ಹೆಂಗಸರೊಡನೆ ಸರಸವಾಡು: spent his evenings gallanting with ladies ಹೆಂಗಸರೊಡನೆ ಚೆಲ್ಲಾಟವಾಡುತ್ತಾ ಸಂಜೆಗಳನ್ನು ಕಳೆದ.

 • (ಹೆಂಗಸಿನೊಡನೆ) ಪ್ರಣಯವಾಡು; ಸರಸವಾಡು; ಪ್ರಣಯಚೇಷ್ಟೆ, ಪ್ರಣಯವಿಲಾಸ – ನಡೆಸು.
 • (ಮಹಿಳೆಯ) ರಕ್ಷಕನಾಗಿ, ಬೆಂಗಾವಲಾಗಿ – ಜೊತೆಯಲ್ಲಿ ಹೋಗು.

gallantly

ಕ್ರಿಯಾವಿಶೇಷಣ

 • ಆಡಂಬರದಿಂದ; ಠೀಕಾಗಿ; ಬೆಡಗಿನಿಂದ.
 • ವೈಭವದಿಂದ; ಘನವಾಗಿ; ಗಂಭೀರವಾಗಿ; ಠೀವಿಯಿಂದ ಕೂಡಿ.
 • ಸ್ತ್ರೀಭಕ್ತಿಯಿಂದ; ಸ್ತ್ರೀಗೌರವದಿಂದ; ಮಹಿಳಾ ಮರ್ಯಾದೆಯಿಂದ.
 • ರಸಿಕನಂತೆ; ಪ್ರಣಯಶೀಲನಾಗಿ; ಕಾಮಾಸಕ್ತನಂತೆ; ಸ್ತ್ರೀಪರಾಯಣನಾಗಿ; ಮಹಿಳಾಸಕ್ತನಂತೆ.

gallantry

ನಾಮವಾಚಕ

 • ಧೈರ್ಯ; ಶೌರ್ಯ; ಕೆಚ್ಚು; ಪೌರುಷ; ಸಾಹಸ; ಎದೆಗಾರಿಕೆ; ಛಾತಿ.
 • ಶಿಷ್ಟಾಚಾರ; ಸಭ್ಯ ನಡವಳಿಕೆ.
 • ಸ್ತ್ರೀಭಕ್ತಿ; ಮಹಿಳಾ ಮರ್ಯಾದೆ; ಸ್ತ್ರೀಯರಲ್ಲಿ ವಿಶೇಷ ಒಲವು, ಗೌರವ.
 • ವಿನಯ ವರ್ತನೆ ಯಾ ವಿನಯವಾದ ಮಾತು.
 • ಪ್ರಣಯ ವರ್ತನೆ.
 • ಪ್ರಣಯ ಭಾಷಣ; ಪ್ರೇಮದ ಮಾತು.
 • ಕಾಮುಕ ನಡತೆ; ಪ್ರಣಯ ಸಂಧಾನ; ಪ್ರಣಯ ಸಂಬಂಧ.
 • ವ್ಯಭಿಚಾರ.

galleon

ನಾಮವಾಚಕ

 • (ಚರಿತ್ರೆ) ಗ್ಯಾಲಿಯನ್‍; ಹಡಗಿಗಿಂತ ಕಡಿಮೆ ಉದ್ದವಿರುವ, ಆದರೆ ಹೆಚ್ಚು ಎತ್ತರವಿರುವ ಹಡಗು.
 • (ಸಾಮಾನ್ಯವಾಗಿ ಸ್ಪೇನ್‍ ದೇಶದ) ಯುದ್ಧದ ಹಡಗು.
 • (ಅಮೆರಿಕದೊಡನೆ ವ್ಯಾಪಾರ ನಡೆಸುವ) ಸ್ಪೇನ್‍ ದೇಶದ ದೊಡ್ಡ ಹಡಗು, ವ್ಯಾಪಾರನೌಕೆ.

galleried

ಗುಣವಾಚಕ

ಚಾವಣಿ ಹಾದಿ ರಚಿಸಿರುವ ಯಾ ಚಾವಣಿ ಹಾದಿಯಿಂದ ಅಲಂಕರಿಸಿರುವ; ಪಕ್ಕಗಳಲ್ಲಿ ಅರೆತೆರೆಯ ಮೇಲೆ ಚಾವಣಿ ಹಾಕಿ ನಡೆದಾಡಲು ಹಾದಿ ಮಾಡಿರುವ.

gallery

ನಾಮವಾಚಕ

ನುಡಿಗಟ್ಟು

play to the gallery ಪಾಮರ ರಂಜನೆಮಾಡು; ಕೆಳದರ್ಜೆಯವರನ್ನು ಮೆಚ್ಚಿಸಲು, ಒಲಿಸಿಕೊಳ್ಳಲು ಪ್ರಯತ್ನಿಸು.

 • ಛನ್ನಪಥ; ಚಾವಣಿಹಾದಿ; ಪಕ್ಕಗಳಲ್ಲಿ ಅರೆ ತೆರೆದಿರುವ, ಮೇಲೆ ಚಾವಣಿಯುಳ್ಳ, ನಡೆದಾಡಲು ಮಾಡಿದ ಹಾದಿ.
 • ದ್ವಾರಮಂಟಪ; ಮುಖಮಂಟಪ.
 • ಕಂಬಹಾದಿ; ಸ್ತಂಭಪಥ; ಕಂಬಸಾಲುಳ್ಳ ಹಾದಿ.
 • (ಕಟ್ಟಡಗಳ ಒಳಭಾಗಕ್ಕೆ ಹೋಗಲು ಹೆಚ್ಚು ಮಂದದ, ದಪ್ಪದ ಗೋಡೆಗಳ ನಡುವೆ ಮಾಡಿದ ಯಾ ಚಾಚು ಊರೆಗಳ ಆಧಾರದ ಮೇಲೆ ಕಟ್ಟಿದ) ಉದ್ದನೆಯ ಕಿರುಹಾದಿ ಯಾ ಓಣಿ.
 • ಗ್ಯಾಲರಿ; ಉಪ್ಪರಿಗೆಯ ಕೈಸಾಲೆ.
 • ಚರ್ಚು, ಸಭಾಮಂದಿರ, ಮೊದಲಾದವುಗಳಲ್ಲಿ ಒಳಗೋಡೆಯಿಂದ ಸಭಾಂಗಣದ ಕಡೆಗೆ ಚಾಚಿಕೊಂಡು ಹೆಚ್ಚು ಸಭಿಕರಿಗೆ ಸ್ಥಳ ಒದಗಿಸುವ ಯಾ ಗಾಯಕರು, ವರದಿಗಾರರು, ಆಗಂತುಕರು, ಮೊದಲಾದವರಿಗೆ ಈಸಲಾಗಿಟ್ಟಿರುವ ವೇದಿಕೆ: minstrels’ gallery ಹಾಡು ಕವಿಗಳ ಗ್ಯಾಲರಿ.
 • (ನಾಟಕಶಾಲೆಯಲ್ಲಿ)
  1. ಗ್ಯಾಲರಿ; ಉಪ್ಪರಿಗೆಯ ಮೆಟ್ಟಿಲು ಪೀಠ; ಸೋಪಾನ ಪೀಠ; ಅತ್ಯಂತ ಮೇಲ್ಭಾಗದಲ್ಲಿನ ಕೈಸಾಲೆ, ವೇದಿಕೆ.
  2. ಗ್ಯಾಲರಿಯಲ್ಲಿ ಕುಳಿತವರು.
  3. ಗ್ಯಾಲರಿ ಪ್ರಭುಗಳು; ಗ್ಯಾಲರಿ ಮಂದಿ; ಗ್ಯಾಲರಿ ಜನ; ಪಾಮರ ಪ್ರೇಕ್ಷಕರು; ಅಸಂಸ್ಕೃತ ಪ್ರೇಕ್ಷಕ ಯಾ ಶ್ರೋತೃ ವರ್ಗ; ಕೆಳದರ್ಜೆಯವರು.
 • ಕಿರಿಯಗಲದ ನಿಡುಕೋಣೆ.
 • ಒಳಹಾದಿ; ನಡವೆ; ಹಜಾರ.
 • ಕಲಾ – ಚಿತ್ರಶಾಲೆ, ಚಿತ್ರಮಂದಿರ; ಕಲಾವಸ್ತುಗಳ ಪ್ರದರ್ಶನ ಮಂದಿರ.
 • (ದೀಪದ ಮೇಲಿನ) ಚಿಮಣಿಯ ಹಿಡಿಕೆ.
 • (ಸೈನ್ಯ, ಗಣಿಗಾರಿಕೆ) (ನೇರವಾಗಿ ಸಮತಲದಲ್ಲಿ ಹೋಗುವ) ಸುರಂಗಮಾರ್ಗ.
 • (ಗಾಲ್‍ ಪಂದ್ಯ ಮೊದಲಾದವುಗಳಲ್ಲಿನ) ಪ್ರೇಕ್ಷಕರು; ಪ್ರೇಕ್ಷಕತಂಡ.

gallery

ಸಕರ್ಮಕ ಕ್ರಿಯಾಪದ

 • ಗ್ಯಾಲರಿ(ಗಳನ್ನು) – ಒದಗಿಸು, ಅಳವಡಿಸು; ಸೋಪಾನಪೀಠ ಒದಗಿಸು.
 • (ಸೈನ್ಯ) ಸುರಂಗಮಾರ್ಗ ರಚಿಸು; ಸುರಂಗಹಾದಿ ಮಾಡು.

gallery hit

ನಾಮವಾಚಕ

 • (ನಾಟಕದ ವಿಷಯದಲ್ಲಿ)(ಪಾಮರ) ಜನರಂಜನೆಯ ಅಭಿನಯ; ಕೆಳದರ್ಜೆಯ ಪ್ರೇಕ್ಷಕರನ್ನು ಮೆಚ್ಚಿಸಲು ಮಾಡುವ ಅಭಿನಯ.

gallery shot

ನಾಮವಾಚಕ

= gallery hit(1).

gallery stroke

ನಾಮವಾಚಕ

= gallery hit(1).

gallery tray

ನಾಮವಾಚಕ

ಗ್ಯಾಲರಿ – ತಟ್ಟೆ, ಟ್ರೇ; ಲೋಟಗಳು ಮೊದಲಾದವನ್ನು ಇಟ್ಟುಕೊಂಡು ಹೋಗಲು ಬಳಸುವ, ಎತ್ತರದ ಏಣುಳ್ಳ ಬೆಳ್ಳಿಯ ತಟ್ಟೆ, ಹರಿವಾಣ.

galleryful

ನಾಮವಾಚಕ

ಗ್ಯಾಲರಿ ಭರ್ತಿ, ತುಂಬುವಷ್ಟು, ಹಿಡಿಯುವಷ್ಟು ಜನ, ಪ್ರೇಕ್ಷಕರು, ಮೊದಲಾದವರು.

galleryite

ನಾಮವಾಚಕ

ಗ್ಯಾಲರಿಗ; ಗ್ಯಾಲರಿ ಪ್ರೇಕ್ಷಕ; ಗ್ಯಾಲರಿ ಸೀಟಿನಲ್ಲಿ ಕುಳಿತಿರುವವ.

Search Dictionaries

Loading Results

Follow Us :   
  Download Bharatavani App
  Bharatavani Windows App