भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

cymbalon

ನಾಮವಾಚಕ

= cymbalo.

cymbidium

ನಾಮವಾಚಕ

  • ಸಿಂಬಿಡಿಯಮ್‍; ದೋಣಿಜರಿ ಕುಲ; ಮನೆಗಳಲ್ಲಿ ಬೆಳೆಸುವ, ಉಷ್ಣವಲಯದ ಸೀತಾಳಗೆಡ್ಡೆ ಗಿಡಗಳ ಕುಲ.
  • ಈ ಕುಲುದ ಜರಿಗಿಡ.

cymbiform

ಗುಣವಾಚಕ

(ಅಂಗರಚನಾಶಾಸ್ತ್ರ, ಸಸ್ಯವಿಜ್ಞಾನ) ದೋಣಿಯಾಕಾರದ; ದೋಣಿರೂಪದ; ನೌಕಾಕಾರದ.

cymbocephalic

ಗುಣವಾಚಕ

(ತಲೆ ಯಾ ತಲೆಬುರುಡೆಯ ವಿಷಯದಲ್ಲಿ) ದೋಣಿಕಪಾಲಿ; ಹಣೆ ಹಿಂದಕ್ಕಿದ್ದು, ತಲೆಯ ಹಿಂಭಾಗ ಹಿಂದಕ್ಕೆ ಉದ್ದವಾಗಿ ಚಾಚಿ ದೋಣಿಯಂತೆ ಕಾಣುವ.

cyme

ನಾಮವಾಚಕ

(ಸಸ್ಯವಿಜ್ಞಾನ) ಸೈಮು; ಪ್ರಧಾನ ಕಾಂಡದ ತುದಿಯಲ್ಲಿ ಮೊದಲು ಒಂದು ಹೂ ಅರಳಿ ತರುವಾಯ ಉಪಕಾಂಡಗಳ ತುದಿಯಲ್ಲಿ ಒಂದೊಂದು ಹೂ ಅರಳುತ್ತಾ ಹೋಗುವ ಸಂಯುಕ್ತಪುಷ್ಪ, ಗೊಂಚಲುಹೂ.

cymoscope

ನಾಮವಾಚಕ

ವಿದ್ಯುತ್ತರಂಗ ದರ್ಶಕ; ರೇಡಿಯೋ ವಾರ್ತಾಪ್ರಸರಣದಲ್ಲಿ ತರಂಗಗಳನ್ನು ಕಂಡುಹಿಡಿಯಲು ಉಪಯೋಗಿಸುವ ಸಲಕರಣೆ.

cymose

ಗುಣವಾಚಕ

(ರಸಾಯನವಿಜ್ಞಾನ) ಸೈಮ್‍ ಉಳ್ಳ; ಸೈಮಿನಂಥ; ಸೈಮ್‍ ಪುಷ್ಪಗಳನ್ನು ಬಿಡುವ, ಯಾ ಅವುಗಳಂತಿರುವ.

Cymric

ಗುಣವಾಚಕ

  • ವೇಲ್‍’ನ ಜನರ.
  • ವೆಲ್ಷ್‍ ಭಾಷೆಯ.

cynghanedd

ನಾಮವಾಚಕ

ವೆಲ್ಷ್‍ ಭಾಷೆಯ ಕಾವ್ಯದಲ್ಲಿ ಆದಿ ಅಂತ್ಯ ಪ್ರಾಸಗಳ ಜಟಿಲ ಮಿಶ್ರಣ.

cynic

ನಾಮವಾಚಕ

  • (Cynic) ಸಿನಿಕ್‍ ಪಂಥಿ; ಭೋಗ, ಕಲೆ, ವಿಜ್ಞಾನ, ಇವೆಲ್ಲವನ್ನೂ ತುಚ್ಛೀಕರಿಸಿ ನೋಡುವ, ಮತ್ತು ಸದಾಚಾರವೊಂದೇ ಉತ್ತಮವಾದುದೆಂದು ನಂಬುವ, ಗ್ರೀಕ್‍ ತತ್ತ್ವಜ್ಞ ಆಂಟಿಸ್ಥಿನಿಸ್‍ ಸ್ಥಾಪಿಸಿದ ತಾತ್ತ್ವಿಕ ಪಂಥದ ಅನುಯಾಯಿ.
  • ಸಿನಿಕ; ಜರೆಗ; ಸರ್ವತಿರಸ್ಕಾರಿ; ದೋಷದರ್ಶಿ; ಎಲ್ಲವನ್ನೂ ಜರೆಯುವವ; ಪ್ರಪಂಚದಲ್ಲಿ ಜನರ ಸದ್ಭಾವನೆ ಸದ್ವರ್ತನೆಗಳು ಬರಿ ಕಪಟವೆಂದು ನಂಬಿ ಅದನ್ನು ಅಲ್ಲಗಳೆಯುವವನು.

cynic

ಗುಣವಾಚಕ

  • ಸಿನಿಕ್‍ ತತ್ತ್ವಾನುಯಾಯಿಯ ಯಾ ಅವನ ಲಕ್ಷಣವುಳ್ಳ.
  • = cynical.

cynical

ಗುಣವಾಚಕ

  • ಸಿನಿಕ; ಜರೆಯುವ; ನಿಂದಾಶೀಲ; ತಪ್ಪು ಹುಡುಕುವ; ವ್ಯಂಗ್ಯದಿಂದ, ತಿರಸ್ಕಾರದಿಂದ–ನೋಡುವ.
  • ಮನುಷ್ಯ ಸ್ವಭಾವದಲ್ಲಿ ಒಳ್ಳೆಯದನ್ನು ಕಾಣದ, ನಂಬದ.

cynically

ಕ್ರಿಯಾವಿಶೇಷಣ

ಸಿನಿಕತನದಿಂದ; ಜರೆದು; ತಿರಸ್ಕಾರದಿಂದ; ವ್ಯಂಗ್ಯವಾಗಿ; ನಿಂದಿಸುತ್ತ; ತಪ್ಪುಹುಡುಕಿ.

cynicism

ನಾಮವಾಚಕ

  • ಸಿನಿಕತನ; ಸಿನಿಕತೆ.
  • ಸಿನಿಕತನವನ್ನು ತೋರಿಸುವ ಟೀಕೆ ಯಾ ಉದ್ಗಾರ.
  • ಸಿನಿಕತತ್ತ್ವಾನುಯಾಯಿಗಳ ಸಿದ್ಧಾಂತ ಯಾ ಆಚಾರ.

cyno-

ಸಮಾಸ ಪೂರ್ವಪದ

ಶ್ವಾನ, ನಾಯಿ ಎಂಬರ್ಥದ ಗ್ರೀಕ್‍ ಸಮಾಸ ಪೂರ್ವಪದ.

cynocephalus

ನಾಮವಾಚಕ

  • (ಪ್ರಾಣಿವಿಜ್ಞಾನ) = baboon.
  • (ಗ್ರೀಕ್‍ ಪುರಾಣ) ಶ್ವಾನಶಿರ; ಪೌರಾಣಿಕ ಕಥೆಗಳಲ್ಲಿ ಬರುವ ನಾಯಿತಲೆಯ ಮನುಷ್ಯ.

cynoglossum

ನಾಮವಾಚಕ

(ಸಸ್ಯವಿಜ್ಞಾನ)

  • ಸೈನಗ್ಲಾಸಮ್‍; ನಾಲಿಗೆಯೆಲೆ ಗಿಡ; ಜಿಹ್ವಾಪತ್ರೆ ಗಿಡ; ನಾಲಿಗೆಯಾಕಾರದ ಎಲೆಗಳನ್ನು ಬಿಡುವ, ಎತ್ತರವಾದ ಗಿಡಗಳ ಕುಲ.
  • ಈ ಕುಲದ ಗಿಡ.

cynophobia

ನಾಮವಾಚಕ

ನಾಯಿಭಯ; ಶ್ವಾನಭೀತಿ; ನಾಯಿಗಳನ್ನು ಕಂಡರೆ ಅತಿಯಾದ ಹೆದರಿಕೆ; ನಾಯಂಜಿಕೆ.

cynosure

ನಾಮವಾಚಕ

  • ಲಘು ಸಪ್ತರ್ಷಿಮಂಡಲ; ಧ್ರುವನಕ್ಷತ್ರವಿರುವ ನಕ್ಷತ್ರಪುಂಜ.
  • ಧ್ರುವನಕ್ಷತ್ರ.
  • ಮಾರ್ಗದರ್ಶಕ; ದಾರಿದೀಪ; ದಿಕ್ಕು ಯಾ ದಾರಿ ತೋರಿಸುವ ಯಾವುದೇ ವಸ್ತು ಮೊದಲಾದವು.
  • ಆಕರ್ಷಕ, ಮೋಹಕ, ಮನಸೆಳೆಯುವ ಯಾ ಮೆಚ್ಚಿಗೆಗೆ ಪಾತ್ರವಾಗುವ–ವಸ್ತು, ವಿಷಯ ಮೊದಲಾದವು.

cypher

ನಾಮವಾಚಕ

= 1cipher.

Search Dictionaries

Loading Results

Follow Us :   
  Download Bharatavani App
  Bharatavani Windows App