भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

cyclostome

ನಾಮವಾಚಕ

ಸೈಕ್ಲಸ್ಟೋಮ್‍; ಲ್ಯಾಂಹ್ರಿ, ಹಾವುಮೀನು ಮೊದಲಾದವನ್ನೊಳಗೊಂಡ, ಹೀರಿಕೊಳ್ಳುವಂಥ ದೊಡ್ಡಬಾಯುಳ್ಳ, ಕಶೇರಕ ಪ್ರಾಣಿವರ್ಗದಲ್ಲೊಂದು.

cyclostyle

ನಾಮವಾಚಕ

ಪ್ರತಿಲೇಖ; ನಕಲಚ್ಚು; ಸೈಕ್ಲೊಸ್ಟೈಲು; ಸ್ಟೆನ್ಸಿಲ್‍ ಹಾಳೆಯ ಮೇಲೆ ಬರೆದು ಇಲ್ಲವೆ ಬೆರಳಚ್ಚು ಮಾಡಿ, ನಕಲು ತಯಾರಿಸುವ ಯಂತ್ರ.

cyclostyle

ಸಕರ್ಮಕ ಕ್ರಿಯಾಪದ

ಪ್ರತಿಲೇಖಿಸು; ನಕಲಚ್ಚು ತೆಗೆ; ಪ್ರತಿಲೇಖಿಯ ಸಹಾಯದಿಂದ ನಕಲುಮಾಡು ಯಾ ಮುದ್ರಿಸು.

cyclothemic

ಗುಣವಾಚಕ

ಚಕ್ರವಿಕ್ಷಿಪ್ತಿಯ; ಉಲ್ಲಾಸದಿಂದ ಖಿನ್ನತೆಗೆ ಪದೇ ಪದೇ ಬದಲಾಗುವ.

cyclothymia

ನಾಮವಾಚಕ

(ಮನಶ್ಶಾಸ್ತ್ರ) ಚಕ್ರವಿಕ್ಷಿಪ್ತಿ; ಉಲ್ಲಾಸದಿಂದ ಖಿನ್ನತೆಗೆ ಪದೇಪದೇ ಬದಲಾಗುವ, ಹುಚ್ಚಿನ ಪೂರ್ವಸೂಚನೆಯಾದ ಮನೋವಿಕಾರ.

cyclotron

ನಾಮವಾಚಕ

(ಭೌತವಿಜ್ಞಾನ) ಸೈಕ್ಲೊಟ್ರಾನು; ಸ್ಥಿರ ಕಾಂತಕ್ಷೇತ್ರದಲ್ಲಿ ಪರ್ಯಾಯ ವಿದ್ಯುತ್‍ ಕ್ಷೇತ್ರ ಉಂಟುಮಾಡಿ ಪ್ರೋಟಾನ್‍, ಡ್ಯೂಟರಾನ್‍ ಮುಂತಾದ ಅಯಾನುಗಳ ವೇಗ ಹೆಚ್ಚಿಸುವ ಉಪಕರಣ.

cyder

ನಾಮವಾಚಕ

= cider.

cygnet

ನಾಮವಾಚಕ

ಮರಿಹಂಸ; ಹಂಸದ ಮರಿ.

cylinder

ನಾಮವಾಚಕ

ಸಿಲಿಂಡರು; ಹೊರಳು; ಉರುಳೆ; ದಿಂಡು:

  • (ಗಣಿತ) ಒಂದು ಸರಳರೇಖೆಗೆ ಸಮಾಂತರವಾಗಿ ಇನ್ನೊಂದು ಸರಳರೇಖೆ ಚಲಿಸುತ್ತಾ ಯಾವುದೇ ನಿರ್ದಿಷ್ಟ ವಕ್ರವನ್ನು (ಸಾಮಾನ್ಯವಾಗಿ ವರ್ತುಲವನ್ನು) ಆ ರೇಖೆಯ ತುದಿಗಳು ರೂಪಿಸಿದಾಗ ರೂಪುಗೊಳ್ಳುವ ಘನಾಕೃತಿ.
  • ಉರುಳೆಯಾಕಾರದ ಯಾವುದೇ ಟೊಳ್ಳು ಯಾ ಗಟ್ಟಿ ಕಾಯ.
  • ಬ್ಯಾಬಿಲೋನಿಯ, ಅಸ್ಸೀರಿಯಗಳ ದೇವಸ್ಥಾನಗಳ ಕೆಳಗೆ ಹೂತಿಟ್ಟಿರುವ, ಬೆಣೆ ಲಿಪಿ ಕೆತ್ತಿದ, ಬೆಂದ ಜೇಡಿಯ ಪೀಪಾಯಿಯಾಕಾರದ ವಸ್ತು.
  • ಉರುಳೆಯಾಕಾರದ ಯಾವುದೇ ಯಂತ್ರಭಾಗ; ಮುಖ್ಯವಾಗಿ ಹಬೆ ಯಾ ದ್ರವದ ಕ್ರಿಯೆಯಿಂದ ಪಿಸ್ಟನ್‍ ಮೊದಲಾದವು ಹಿಂದಕ್ಕೂ ಮುಂದಕ್ಕೂ ಆಡುವ ಕೋಷ್ಠ.
  • ಮುದ್ರಣಯಂತ್ರದ ಸಿಲಿಂಡರು; ಮುದ್ರಣದಲ್ಲಿ ಬಳಸುವ ಲೋಹದ ಉರುಳೆ.
  • ದ್ರವೀಕೃತ ಅನಿಲ ಮೊದಲಾದವನ್ನು ಹಾಕಿಡುವ ಉರುಳೆಪಾತ್ರೆ.
  • ಪ್ರಾಚೀನ ಕಾಲದಲ್ಲಿ ಮುದ್ರೆಯಾಗಿ ಯಾ ಮೊಹರಾಗಿ ಬಳಸುತ್ತಿದ್ದ, ಉರುಳೆಯಾಕಾರದ ಚಿಕ್ಕಕಲ್ಲು.
  • ಬೀಗದಲ್ಲಿರುವ ತಿರುಗುವ ಉರುಳೆ.

cylinder saw

ನಾಮವಾಚಕ

crown saw.

cylindrical

ಗುಣವಾಚಕ

ಸಿಲಿಂಡರಾಕಾರದ; ಸಿಲಿಂಡರೀಯ; ಉರುಳೆಯಂಥ.

cylindrical projection

ನಾಮವಾಚಕ

ಸಿಲಿಂಡರೀಯ ಪ್ರಕ್ಷೇಪ; ಭೂಮಿಯ ಯಾವುದೇ ಭಾಗವನ್ನು ಸಮಾಂತರ ರೇಖೆಗಳ ನೆರವಿನಿಂದ ಸಿಲಿಂಡರಿನ ಮೇಲೆ ಪ್ರಕ್ಷೇಪಿಸಿ, ಅನಂತರ ಸುರುಳಿ ಬಿಚ್ಚಿ ಸಮತಲವಾಗಿ ಮಾಡಿರುವ ಭೂಪಟ.

cylindrically

ಕ್ರಿಯಾವಿಶೇಷಣ

ಸಿಲಿಂಡರಾಕಾರದಲ್ಲಿ; ಉರುಳೆಯಂತೆ; ಸಿಲಿಂಡರೀಯವಾಗಿ.

cylindroid

ನಾಮವಾಚಕ

ಸಿಲಿಂಡ್ರಾಯ್ಡ್‍; ದೀರ್ಘವೃತ್ತಾಕಾರದ ಅಡ್ಡಕೊಯ್ತ ಉಳ್ಳ ಸಿಲಿಂಡರು.

cylindroid

ಗುಣವಾಚಕ

ಸಿಲಿಂಡರಿನಂಥ; ಉರುಳೆಯನ್ನು ಹೋಲುವ.

cyma

ನಾಮವಾಚಕ

  • (ವಾಸ್ತುಶಿಲ್ಪ) ಸೈಮ; ಗೋಡೆಯ ಮೇಲಿನ ಕಾರ್ನೀಸಿನಲ್ಲಿ ಬಳಸುವ, ಅಲೆಯ ಮಾದರಿ (ಭಾಗಶಃ ಉಬ್ಬು, ಭಾಗಶಃ ತಗ್ಗು ಇರುವ) ಅಡ್ಡಕೊಯ್ತವಿರುವ ಚಾಚು ಅಲಂಕಾರ: cyma recta ಸರಿಸೈಮ; ಮೇಲ್ಭಾಗ ಉಬ್ಬು ಕೆಳಭಾಗ ಟೊಳ್ಳು ಇರುವ ಸೈಮ. cyma reversa ತಿರುಗು ಸೈಮ; ಮೇಲ್ಭಾಗ ಟೊಳ್ಳು, ಕೆಳಭಾಗ ಉಬ್ಬು ಉಳ್ಳ ಸೈಮ.
  • = cyme.

cymar

ನಾಮವಾಚಕ

(ಹೆಂಗಸಿನ) ಹಗುರ ಉಡುಗೆ ಮುಖ್ಯವಾಗಿ ಒಳ ಉಡುಗೆ.

cymbal

ನಾಮವಾಚಕ

(ಕಂಚಿನ ಯಾ ಹಿತ್ತಾಳೆಯ) ತಾಳ; ಝಲ್ಲರಿ; ಒಂದನ್ನು ಇನ್ನೊಂದಕ್ಕೆ ಯಾ ಕೋಲಿನಿಂದ ಬಡಿದರೆ ಅನುರಣನ ಧ್ವನಿಯುಂಟು ಮಾಡುವ, ಹಿತ್ತಾಳೆಯ ಯಾ ಕಂಚಿನ ತಟ್ಟೆ.

cymbalist

ನಾಮವಾಚಕ

ತಾಳವಾದಕ; ಝಲ್ಲರಿ ವಾದಕ.

cymbalo

ನಾಮವಾಚಕ

= dulcimer.

Search Dictionaries

Loading Results

Follow Us :   
  Download Bharatavani App
  Bharatavani Windows App