भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

cyclo-

ಸಮಾಸ ಪೂರ್ವಪದ

ಚಕ್ರ, ಚಕ್ರೀಯ, ಆವರ್ತ, ವೃತ್ತ, ಎಂಬರ್ಥದ ಪೂರ್ವಪ್ರತ್ಯಯ.

cyclo-cross

ನಾಮವಾಚಕ

ರಸ್ತೆಗಳನ್ನು ಬಿಟ್ಟು ಇತರ ಪ್ರದೇಶಗಳ ಮೇಲೆ ನಡೆಸುವ ಬೈಸಿಕಲ್‍ ಸವಾರಿ ಪಂದ್ಯ.

cycloalkane

ನಾಮವಾಚಕ

(ರಸಾಯನವಿಜ್ಞಾನ) ಸೈಕ್ಲೋಆಲ್ಕೇನು; ಚಕ್ರೀಯ ಆಲ್ಕೇನು; ಕಾರ್ಬನ್‍ ಪರಮಾಣುಗಳ ಚಕ್ರವಿರುವ ಪರ್ಯಾಪ್ತ ಹೈಡ್ರೋಕಾರ್ಬನ್ನು.

cyclograph

ನಾಮವಾಚಕ

(ಜ್ಯಾಮಿತಿ) ವೃತ್ತ ರೇಖಕ; ಚಾಪರೇಖಕ; ವೃತ್ತಖಂಡಗಳನ್ನು ರೇಖಿಸುವ ಸಲಕರಣೆ.

cycloid

ನಾಮವಾಚಕ

(ಗಣಿತ) ಚಕ್ರಜ; ಒಂದು ವೃತ್ತವು ಸರಳರೇಖೆಯ ಮೇಲೆ ಉರುಳುವಾಗ ಆ ಚಕ್ರದ ಪರಿಧಿಯ ಮೇಲಿನ ಯಾವುದೇ ಒಂದು ಬಿಂದು ರಚಿಸುವ ಆಕೃತಿ.

cycloidal

ಗುಣವಾಚಕ

(ಗಣಿತ) ಚಕ್ರಜದ, ಅದಕ್ಕೆ ಸಂಬಂಧಿಸಿದ ಯಾ ಅದನ್ನು ಹೋಲುವ.

cyclometer

ನಾಮವಾಚಕ

  • ವೃತ್ತಖಂಡ ಮಾಪಕ; ವೃತ್ತಖಂಡಗಳನ್ನು ಅಳೆಯುವ ಸಾಧನ.
  • ಚಕ್ರಾವರ್ತಮಾಪಕ; ಬೈಸಿಕಲ್‍ ಮೊದಲಾದವುಗಳು ಚಲಿಸಿದ ದೂರವನ್ನು ಯಾ ಅವುಗಳ ಗಾಲಿಯ ಸುತ್ತುವಿಕೆಯನ್ನು ಅಳೆಯುವ ಸಲಕರಣೆ.

cyclone

ನಾಮವಾಚಕ

  • (ಪವನಶಾಸ್ತ್ರ) ಚಕ್ರವಾತ; ಸುಳಿಗಾಳಿ; ಸುಂಟರಗಾಳಿ; ಚಂಡಮಾರುತ: ವಾಯು ಒತ್ತಡ ಕಡಮೆಯಿರುವ ಕೇಂದ್ರದ ಸುತ್ತ, ದಕ್ಷಿಣಾರ್ಧಗೋಳದಲ್ಲಿ ಪ್ರದಕ್ಷಿಣಾಕಾರದಲ್ಲಿಯೂ ಉತ್ತರಾರ್ಧಗೋಳದಲ್ಲಿ ಅಪ್ರದಕ್ಷಿಣಾಕಾರದಲ್ಲಿಯೂ ಬಿರುಗಾಳಿ ಬೀಸಿ ಹೆಚ್ಚಿನ ಮಳೆ ಬೀಳುವಿಕೆ.
  • (ಪವನಶಾಸ್ತ್ರ)(ಸೀಮಿತ ವ್ಯಾಸವಿರುವ) ಭಾರಿ ಚಂಡಮರುತ; ಉಗ್ರ ಸುಂಟರಗಾಳಿ; ತೀವ್ರ ಬಿರುಗಾಳಿ.
  • ಕೇಂದ್ರಾಪಬಲಯಂತ್ರ; ದ್ರವ ಯಾ ಅನಿಲದ ಹರಿವನ್ನು ಬಳಸಿ ಘನವಸ್ತುಗಳನ್ನು ಬೇರ್ಪಡಿಸುವ, ಕೇಂದ್ರಾಪಬಲದ ಮೇಲೆ ಕೆಲಸ ಮಾಡುವ ಯಂತ್ರ.

cyclonic

ಗುಣವಾಚಕ

ಸುಂಟರಗಾಳಿಯಂಥ; ಬಿರುಗಾಳಿಯನ್ನು ಹೋಲುವ; ಮುಖ್ಯವಾಗಿ ಉಗ್ರತೆ ಮೊದಲಾದವುಗಳಲ್ಲಿ ಚಂಡಮಾರುತದ ಲಕ್ಷಣವುಳ್ಳ (ರೂಪಕವಾಗಿ ಸಹ).

cyclopaedia

ನಾಮವಾಚಕ

= encyclopaedia.

cyclopaedic

ಗುಣವಾಚಕ

ವಿಶ್ವಕೋಶದಂಥ: ವಿಷಯಪೂರ್ಣ; ವ್ಯಾಪಕವಾದ.

cycloparaffin

ನಾಮವಾಚಕ

= cycloalkane.

cyclopean

ಗುಣವಾಚಕ

  • (ಗ್ರೀಕ್‍ ಪುರಾಣ) ಸೈಕ್ಲಾಪ್ಸ್‍ ಎಂಬ ಒಕ್ಕಣ್ಣರಾಕ್ಷಸನ ಯಾ ಅವನಂಥ.
  • ಬಹಳ ಭಾರಿ; ಅತಿದೊಡ್ಡ; ವಿಪರೀತ ದೊಡ್ಡ; ಬೃಹದಾಕಾರದ; ದೈತ್ಯ(ಗಾತ್ರದ); ರಾಕ್ಷಸಾಕಾರದ.
  • (ಮುಖ್ಯವಾಗಿ ಪ್ರಾಚೀನ ಕಟ್ಟಡಗಳ ವಿಷಯದಲ್ಲಿ) ಅಸಮವಾದ ದೊಡ್ಡ ದೊಡ್ಡ ಕಲ್ಲುಬಂಡೆಗಳಿಂದ ಕಟ್ಟಿರುವ.

cyclopean masonry

ನಾಮವಾಚಕ

ದೈತ್ಯಕಟ್ಟಡ; ಅಸಮವಾದ ಭಾರಿ ಕಲ್ಲು ಗುಂಡುಗಳಿಂದ ಕಟ್ಟಿದ ಪೂರ್ವಕಾಲದ ಭಾರಿ ಕಟ್ಟಡ.

cyclopedia

ನಾಮವಾಚಕ

= cyclopaedia.

cyclopedic

ಗುಣವಾಚಕ

= cyclopaedic.

cyclopian

ಗುಣವಾಚಕ

= cyclopean.

Cyclops

ನಾಮವಾಚಕ

(ಬಹುವಚನ ಅದೇ ಯಾ cyclopses, ಯಾ Cyclopes ಉಚ್ಚಾರಣೆ ಸೈಕ್ಲೋಪೀಸ್‍).

  • (ಗ್ರೀಕ್‍ ಪುರಾಣ) ಸೈಕ್ಲಾಪ್ಸ್‍; ಏಕಾಕ್ಷದೈತ್ಯ; ಒಕ್ಕಣ್ಣರಾಕ್ಷಸ; ಗ್ರೀಕ್‍ ಪುರಾಣದಲ್ಲಿ ಬರುವ, ಹಣೆಯ ಮೇಲೆ ದೊಡ್ಡದಾದ ಒಂದೇ ಕಣ್ಣುಳ್ಳ ರಾಕ್ಷಸರಲ್ಲಿ ಒಬ್ಬ.
  • (cyclops) ಒಕ್ಕಣ್ಣ; ಏಕಾಕ್ಷ.
  • (cyclops) (ಬಹುವಚನ ಅದೇ ಯಾ cyclopes). ಸೈಕ್ಲಾಪ್ಸ್‍; ತಲೆಯ ಮುಂಭಾಗದಲ್ಲಿ ಒಂದೇ ಕಣ್ಣಿರುವ, ಸಿಹಿನೀರಿನಲ್ಲಿರುವ, ಗಿನಿವರ್ಮ್‍ ಕಾಯಿಲೆ ತರುವ, ಚಿಪ್ಪುಜೀವಿಗಳ ಕುಲ ಯಾ ಈ ಕುಲಕ್ಕೆ ಸೇರಿದ ಚಿಪ್ಪುಜೀವಿ.

cyclorama

ನಾಮವಾಚಕ

  • ಸೈಕ್ಲರಾಮ; ವರ್ತುಲದೃಶ್ಯ; ಸುತ್ತುನೋಟ; ಪ್ರಕೃತಿದೃಶ್ಯ, ಯುದ್ಧ, ಮೊದಲಾದವುಗಳ ಚಿತ್ರವು, ವರ್ತುಲಾಕಾರದ ಕೊಠಡಿ ಯಾ ಹಾಲಿನ ಒಳಗೋಡೆಯ ಮೇಲೆ ಅಳವಡಿಸಿರುವುದನ್ನು ಪ್ರೇಕ್ಷಕನು ಒಳಗಡೆ ಮಧ್ಯದಲ್ಲಿ ನಿಂತು ನೋಡುವ ದೃಶ್ಯ.
  • (ನಾಟಕರಂಗ) ಸೈಕ್ಲರಾಮ; ರಂಗಸ್ಥಳದ ಹಿಂಭಾಗದಲ್ಲಿ ವರ್ತುಲಾಕಾರದ ಗೋಡೆ ಯಾ ಬಟ್ಟೆಯ ಮೇಲೆ ಅಳವಡಿಸಿರುವ ಪ್ರಕೃತಿದೃಶ್ಯ, ಮುಖ್ಯವಾಗಿ ಆಕಾಶದೃಶ್ಯ.

cyclostomatous

ಗುಣವಾಚಕ

  • ದುಂಡುಬಾಯಿಯ; ದುಂಡುಬಾಯುಳ್ಳ.
  • ಸೈಕ್ಲಸ್ಟೋಮ್‍ ಕಶೇರುಕವರ್ಗಕ್ಕೆ ಸೇರಿದ.

Search Dictionaries

Loading Results

Follow Us :   
  Download Bharatavani App
  Bharatavani Windows App