भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

cyanosis

ನಾಮವಾಚಕ

(ರೋಗಶಾಸ್ತ್ರ) ಸಯನೋಸಿಸ್‍; ನೀಲಿಗಟ್ಟುವಿಕೆ ಯಾ ಹಸುರುಗಟ್ಟುವಿಕೆ; ನೀಲಿಮೆ; ರಕ್ತಕ್ಕೆ ಆಕ್ಸಿಜನ್‍ ಕೊರತೆಯಾದ ಕಾರಣ ಚರ್ಮ ನೀಲವರ್ಣಕ್ಕೆ ತಿರುಗುವುದು.

cybernation

ನಾಮವಾಚಕ

ಯಂತ್ರೀಕರಣ; ಯಂತ್ರನಿಯಂತ್ರಣ; ಕೆಲಸ ಮೊದಲಾದವನ್ನು ಯಂತ್ರಗಳಿಂದ ಮಾಡಿಸುವ, ನಿಯಂತ್ರಿಸುವ ಸಿದ್ಧಾಂತ, ಪದ್ಧತಿ.

cybernetic

ಗುಣವಾಚಕ

ಸೈಬರ್ನೆಟಿಕ್ಸ್‍ಗೆ ಸಂಬಂಧಿಸಿದ.

cybernetics

ನಾಮವಾಚಕ

(ಬಹುವಚನ)(ಸಾಮಾನ್ಯವಾಗಿ ಏಕವಚನವಾಗಿ ಬಳಕೆ) ಸೈಬರ್ನೆಟಿಕ್ಸ್‍; ಮಿದುಳು, ನರಮಂಡಲ, ಕಂಪ್ಯೂಟರ್‍ನಂಥ ಯಂತ್ರಗಳ ಸ್ವನಿಯಂತ್ರಣ ವ್ಯವಸ್ಥೆ ಮತ್ತು ಸಾಮ್ಯಗಳನ್ನು ಕುರಿತ ಶಾಸ್ತ್ರವಿಭಾಗ.

cycad

ನಾಮವಾಚಕ

(ಸಸ್ಯವಿಜ್ಞಾನ) ಸೈಕಡ್‍; ಸೈಕಡೇಸಿ ವಂಶಕ್ಕೆ ಸೇರಿದ, ಮುಖ್ಯವಾಗಿ ಸೈಕಸ್‍ ಕುಲಕ್ಕೆ ಸೇರಿದ, ಈಚಲು ಮರದಂಥ, ಯಾವುದೇ ಗಿಡ.

Cycladic

ಗುಣವಾಚಕ

ಏಜಿಯನ್‍ ಸಮುದ್ರದ ವರ್ತುಲ ದ್ವೀಪಸಮೂಹವಾದ ಸೈಕ್ಲಡೀಸ್‍ನ ಯಾ ಅದಕ್ಕೆ ಸೇರಿದ; ಮುಖ್ಯವಾಗಿ ಅಲ್ಲಿದ್ದ ಪ್ರಾಗೈತಿಹಾಸಿಕ ನಾಗರಿಕತೆಗೆ ಸಂಬಂಧಿಸಿದ.

cyclamate

ನಾಮವಾಚಕ

ಸೈಕ್ಲಮೇಟ್‍; ಸಿಹಿಮೂತ್ರ ರೋಗಿಗಳು ಹಿಂದೆ ಸಕ್ಕರೆಗೆ ಬದಲು ಉಪಯೋಗಿಸುತ್ತಿದ್ದ ಸಿಹಿಕಾರಕ ಸಂಯುಕ್ತ, ಸೈಕ್ಲೊಹೆಕ್ಸೈಲ್‍ ಸಲಮೇಟ್‍ (${\rm C}_6{\rm H}_{ 11}{\rm NHSO}_3{\rm Na}$) ಎಂಬುದರ ಸಂಕ್ಷಿಪ್ತ.

cyclamen

ನಾಮವಾಚಕ

ಸಿಕ್ಲಮನ್‍; ಹೂಗಳಿಗಾಗಿ ಸಾಮಾನ್ಯವಾಗಿ ಕುಂಡಗಳಲ್ಲಿ ಬೆಳೆಸುವ ಹಿಂಬಾಗಿದ ದಳಗಳಿರುವ ಒಂದು ಸಸ್ಯಕುಲ ಯಾ ಈ ಕುಲದ ಗಿಡ.

cycle

ನಾಮವಾಚಕ

 • ಸುತ್ತು; ಚಕ್ರ; ಆವೃತ್ತಿ; ಆವರ್ತ; ಘಟನೆ, ವಿದ್ಯಮಾನ ಮೊದಲಾದವುಗಳ ಪುನರಾವರ್ತನೆಯ ಅವಧಿ: Lunar or Metonic cycle ಚಾಂದ್ರಮಾನ ಚಕ್ರ; ಪುನರುತ್ಥಾನದ ದಿನವನ್ನು ಕಂಡುಹಿಡಿಯಲು ಉಪಯೋಗಿಸುವ ಹತ್ತೊಂಬತ್ತು ವರ್ಷಗಳ ಅವಧಿಯ ಚಕ್ರ.
 • (ವಸ್ತುವಿನ) ಪೂರ್ಣಾವಧಿ; ಜೀವನಚಕ್ರ; ಯಾವುದರದೇ ಹುಟ್ಟು, ಬೆಳವಣಿಗೆ, ಅವನತಿಗಳನ್ನೊಳಗೊಂಡ ಪೂರ್ತಿಕಾಲ.
 • (ನಿಷ್ಕ್ರಷ್ಟವಾಗಿ ಹೇಳದ) ದೀರ್ಘಕಾಲ; ಯುಗ.
 • ಸಂಪೂರ್ಣ ಶ್ರೇಣಿ ಯಾ ವರ್ಗ.
 • ಕಾವ್ಯಮಾಲೆ; ಗೇತ–ಶ್ರೇಣಿ, ಮಾಲೆ, ಚಕ್ರ; ಗೀತಾವಳಿ; ಒಂದು ವಿಷಯ ಯಾ ಘಟನೆಯ ಸುತ್ತ ಹೆಣೆದಿರುವ ಹಾಡು ಯಾ ಕವನಗಳು.
 • ಸೈಕಲ್ಲು; ಇಗ್ಗಾಲಿ (ಬೈಸಿಕಲ್‍), ಮೂಗಾಲಿ (ಟ್ರೈಸಿಕಲ್‍), ಮೋಟಾರ್‍ ಸೈಕಲ್‍ ಮೊದಲಾದವು.
 • (ವೈದ್ಯಶಾಸ್ತ್ರ) ಚಿಕಿತ್ಸಾವಧಿ; ಔಷಧೋಪಚಾರದ ಒಂದು ಅವಧಿ.
 • (ಸಸ್ಯವಿಜ್ಞಾನ) ದಳಾವರ್ತ; ಪತ್ರವಿನ್ಯಾಸದಲ್ಲಿ ಪೂರ್ತಿಯಾದ ಒಂದು ತಿರುವು ಯಾ ಸುತ್ತು.
 • (ಖಗೋಳ ವಿಜ್ಞಾನ) ಖಗೋಳವೃತ್ತ; ಪರಿಧಿ; ಖಗೋಳದ ಕಾಲ್ಪನಿಕ ವೃತ್ತ ಯಾ ಅಕ್ಷ.
 • (ಭೌತವಿಜ್ಞಾನ) ಚಕ್ರ; ಆವರ್ತ; ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಯಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೇ ಬರುವುದು.
 • (ಜೀವವಿಜ್ಞಾನ) ಚಕ್ರ; ಆವರ್ತ; ಅನೇಕ ಘಟನೆಗಳ ಒಂದು ಶ್ರೇಣಿ ಪುನಃಪುನಃ ಅದೇ ಅನುಕ್ರಮದಲ್ಲಿ ನಡೆಯುವುದು: life cycle of the frog ಕಪ್ಪೆಯ ಜೀವನಚಕ್ರ.
 • (ರಸಾಯನವಿಜ್ಞಾನ) ಚಕ್ರ; ಪರಿವರ್ತನಶ್ರೇಣಿ; ನಿಸರ್ಗದಲ್ಲಿ ಯಾವುದೋ ಒಂದು ಪದಾರ್ಥ ಅನೇಕ ಬದಲಾವಣೆಗಳನ್ನು ಹೊಂದಿ ಪುನಃ ಮೂಲರೂಪಕ್ಕೆ ಬರುವುದು: the nitrogen cycle in nature ನಿಸರ್ಗದ ನೈಟ್ರೊಜನ್‍ ಚಕ್ರ.
 • (ಭೌತವಿಜ್ಞಾನ) ಆವರ್ತನ; ಆವರ್ತಚಲನೆ; ವಿದ್ಯುತ್ಪ್ರವಾಹದ ಬದಲಾವಣೆ, ವಿದ್ಯುತ್‍ ಕ್ಷೇತ್ರದ ಬದಲಾವಣೆ ಮೊದಲಾದವುಗಳ ಒಂದು ಸಂಪೂರ್ಣ ಆವರ್ತ: alternating current of fifty cycles ಐವತ್ತು ಆವರ್ತನಗಳ ಪರ್ಯಾಯ ವಿದ್ಯುತ್ಪ್ರವಾಹ.
 • (ವಿದ್ಯುದ್ವಿಜ್ಞಾನ) ಹರ್ಟ್‍’; ಸೆಕಂಡಿಗೆ ಒಂದು ಆವರ್ತ.
 • ಚಕ್ರ; ಸುತ್ತು; ಆವರ್ತ; ಪುನರಾವರ್ತನೆಯಾಗುವ ಕ್ರಿಯೆ ಯಾ ಸ್ಥಿತಿಗಳ ಶ್ರೇಣಿ.

cycle

ಅಕರ್ಮಕ ಕ್ರಿಯಾಪದ

 • ಚಕ್ರಗತಿಯಲ್ಲಿ ಚಲಿಸು; ಆವರ್ತವಾಗು; ಸುತ್ತಿಬರು; ಸುತ್ತು.
 • ಸೈಕಲ್‍ ಸವಾರಿಮಾಡು.

cycle-car

ನಾಮವಾಚಕ

ಸೈಕಲ್‍ಕಾರು; ಚಾವಣಿಯಿಲ್ಲದ, ಮೂರು ಯಾ ನಾಲ್ಕು ಚಕ್ರಗಳ ಹಗುರವಾದ ಮೋಟಾರು ಕಾರು.

cycle-track

ನಾಮವಾಚಕ

ಸೈಕಲ್‍–ಹಾದಿ, ಪಥ; ಸೈಕಲ್‍ಟ್ರ್ಯಾಕು; ಸೈಕಲ್‍ ಪಂದ್ಯಕ್ಕಾಗಿ ಮಾಡಿದ ರಸ್ತೆ.

cycleway

ನಾಮವಾಚಕ

= cycle-track.

cyclic

ಗುಣವಾಚಕ

 • (ಸಸ್ಯವಿಜ್ಞಾನ) (ಹೂವಿನ ವಿಷಯದಲ್ಲಿ) ಸುತ್ತುದಳದ; ಸುತ್ತೆಸಳಿನ; ದಳಗಳು ಸುತ್ತುಸುತ್ತಾಗಿರುವ.
 • (ರಸಾಯನವಿಜ್ಞಾನ) ಚಕ್ರೀಯ; ಮುಚ್ಚಿದ ಸರಣಿಯ; ಅಣುವಿನಲ್ಲಿ (ಮುಖ್ಯವಾಗಿ ಕಾರ್ಬನ್ನಿನ) ಪರಮಾಣುಗಳು ಒಂದರೊಡನೊಂದು ಸೇರಿಕೊಂಡು ಉಂಗುರಗಳಾಗಿರುವ.
 • (ಗಣಿತ) ವೃತ್ತದ, ಆವರ್ತನದ ಯಾ ಇವುಗಳಿಗೆ ಸಂಬಂಧಿಸಿದ.
 • ಆವರ್ತ; ಚಕ್ರಗತಿಯ; ಚಕ್ರ, ಸುತ್ತು, ಆವರ್ತಗಳಲ್ಲಿ–ಆಗುವ, ಉಂಟಾಗುವ, ಸಂಭವಿಸುವ.
 • ಕಾಲಚಕ್ರದ ಯಾವುದೇ ಕಾಲಗಣನ ಚಕ್ರಕ್ಕೆ ಸೇರಿದ ಯಾ ಅದನ್ನೊಳಗೊಂಡ.
 • ಗೀತಮಾಲೆಯ; ಕಾವ್ಯಚಕ್ರದ; ಒಂದು ವಿಷಯವನ್ನು ಕುರಿತು ಹೆಣೆದಿರುವ ಕವನ ಯಾ ಹಾಡುಗಳಿಗೆ ಸಂಬಂಧಿಸಿದ.

cyclic chorus

ನಾಮವಾಚಕ

(ಪ್ರಾಚೀನ ಗ್ರೀಸಿನಲ್ಲಿ ಬಲಿ ಪೀಠದ ಸುತ್ತಲೂ ಕುಣಿದು ಹಾಡುತ್ತಿದ್ದ) ಚಕ್ರಮೇಳ.

cyclic poets

ನಾಮವಾಚಕ

(ಬಹುವಚನ)

 • ಚಕ್ರಕಾವ್ಯ ಕವಿಗಳು; ಒಂದೇ ವಿಷಯವನ್ನು ಕುರಿತು ಬರೆದಿರುವ ಕವಿಗಳು.
 • ಟ್ರಾಯ್‍ ಚಕ್ರಕಾವ್ಯಕವಿಗಳು; ಹೋಮರನನ್ನು ಅನುಸರಿಸಿ ಟ್ರೋಜನ್‍ ಯುದ್ಧ ಹಾಗೂ ಅದರ ನಾಯಕರ ಮೇಲೆ ಕಾವ್ಯಗಳನ್ನು ರಚಿಸಿರುವ ಕವಿಗಳು.

cyclical

ಗುಣವಾಚಕ

= cyclic.

cyclically

ಕ್ರಿಯಾವಿಶೇಷಣ

ಚಕ್ರೀಯವಾಗಿ; ಆವರ್ತಿಸುವಂತೆ.

cyclist

ನಾಮವಾಚಕ

ಸೈಕಲ್‍ ಸವಾರ.

cyclization

ನಾಮವಾಚಕ

(ರಸಾಯನವಿಜ್ಞಾನ) ಚಕ್ರೀಕರಣ; ತೆರೆದ ಸರಣಿಯ ಸಾವಯವ ಸಂಯುಕ್ತಗಳು ಚಕ್ರೀಯ ಸಂಯುಕ್ತಗಳಾಗುವುದು.

Search Dictionaries

Loading Results

Follow Us :   
  Download Bharatavani App
  Bharatavani Windows App